logo
ಕನ್ನಡ ಸುದ್ದಿ  /  ಮನರಂಜನೆ  /  Gicchi Gili Gili S3: ಮೂವರು ಜಡ್ಜಸ್‌ ಮುಂದೆ ತುಕಾಲಿ ಸಂತೂನ ಮಾನ ಮೂರು ಕಾಸಿಗೆ ಹರಾಜು ಹಾಕಿದ ಪತ್ನಿ ಮಾನಸ!

Gicchi Gili gili S3: ಮೂವರು ಜಡ್ಜಸ್‌ ಮುಂದೆ ತುಕಾಲಿ ಸಂತೂನ ಮಾನ ಮೂರು ಕಾಸಿಗೆ ಹರಾಜು ಹಾಕಿದ ಪತ್ನಿ ಮಾನಸ!

Feb 19, 2024 06:29 AM IST

google News

Gicchi Gili gili S3: ಮೂವರು ಜಡ್ಜಸ್‌ ಮುಂದೆ ತುಕಾಲಿ ಸಂತೂನ ಮಾನ ಮೂರು ಕಾಸಿಗೆ ಹರಾಜು ಹಾಕಿದ ಪತ್ನಿ ಮಾನಸ!

    • ಗಿಚ್ಚಿ ಗಿಲಿಗಿಲಿ ಶೋನಲ್ಲಿ ಪತಿ ತುಕಾಲಿ ಸಂತೋಷ್‌ಗೆ ಹೈಟೆಕ್‌ ಭಿಕ್ಷುಕ ಎನ್ನುವ ಮೂಲಕ ಕಾಲೆಳೆದಿದ್ದಾರೆ ಮಾನಸಾ. ಈ ಜೋಡಿಯ ಕಾಮಿಡಿಗೆ ತೀರ್ಪುಗಾರರೂ ಸಹ ಹೊಟ್ಟೆ ಹುಣ್ಣಾಗುವಂತೆ ನಗಾಡಿದ್ದಾರೆ. 
Gicchi Gili gili S3: ಮೂವರು ಜಡ್ಜಸ್‌ ಮುಂದೆ ತುಕಾಲಿ ಸಂತೂನ ಮಾನ ಮೂರು ಕಾಸಿಗೆ ಹರಾಜು ಹಾಕಿದ ಪತ್ನಿ ಮಾನಸ!
Gicchi Gili gili S3: ಮೂವರು ಜಡ್ಜಸ್‌ ಮುಂದೆ ತುಕಾಲಿ ಸಂತೂನ ಮಾನ ಮೂರು ಕಾಸಿಗೆ ಹರಾಜು ಹಾಕಿದ ಪತ್ನಿ ಮಾನಸ!

Gicchi Gili gili S3: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಫಿನಾಲೆ ಹಂತಕ್ಕೆ ಬಂದಿದ್ದ ತುಕಾಲಿ ಸಂತೂ, ಬಿಗ್‌ ಮನೆಯಲ್ಲಿದ್ದಷ್ಟು ಹೊತ್ತು ನಗು ಉಕ್ಕಿಸುವ ಕೆಲಸ ಮಾಡಿದ್ದರು. ಇದೀಗ ಅದನ್ನೇ ಮುಂದುವರಿಸಿದ್ದಾರೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಗಿಚ್ಚಿ ಗಿಲಿಗಿಲಿ ಶೋ ಸೀಸನ್‌ 3 ಶುರುವಾಗಿದೆ. ಈ ಶೋನಲ್ಲಿ ತುಕಾಲಿ ಸಂತೋಷ್‌ ಸಹ ಪ್ರಮುಖ ಆಕರ್ಷಣೆ. ಇತರರ ಜತೆ ಸೇರಿ ಹಳೇ ಖಯಾಲಿ ಮುಂದುವರಿಸಿದ್ದಾರೆ ತುಕಾಲಿ. ಇವರಿಗೆ ಪತ್ನಿ ಮಾನಸಾ ಸಹ ಸಾಥ್‌ ನೀಡಿದ್ದಾರೆ.

ತುಕಾಲಿ ಸಂತೋಷ್‌ ಅವರ ಪತ್ನಿ ಮಾನಸಾ ಸಹ ಒಳ್ಳೆಯ ಹಾಸ್ಯ ಕಲಾವಿದೆ. ಹಲವು ಶೋಗಳಲ್ಲಿ ಕಾಣಿಸಿಕೊಂಡು, ಪತಿಯ ಜತೆ ಸೇರಿ ಕಾಮಿಡಿ ಮಾಡಿದ್ದಾರೆ. ಇದಷ್ಟೇ ಅಲ್ಲ ಬಿಗ್‌ಬಾಸ್‌ ಮನೆಗೂ ತೆರಳಿ, ಒಳ್ಳೆ ಎಂಟರ್‌ಟೈನ್‌ಮೆಂಟ್‌ ನೀಡಿದ್ದರು. ತುಕಾಲಿಯನ್ನು ಹಿಗ್ಗಾಮುಗ್ಗಾ ಥಳಿಸಿ, ಹಾಸ್ಯದ ಹೊನಲನ್ನೇ ಹರಿಸಿತ್ತು ಈ ಜೋಡಿ. ಬಿಗ್‌ ಬಾಸ್‌ ಫಿನಾಲೆ ಸಮಯದಲ್ಲಿ ಸೀಸನ್‌ 11ರಲ್ಲಿ ಮಾನಸಾ ಸಹ ಸ್ಪರ್ಧಿಯಾಗಿ ಬರಬೇಕು, ಒಳ್ಳೆ ಕಾಮಿಡಿ ಮಾಡ್ತಾರೆ ಎಂಬ ಮಾತೂ ಕೇಳಿಬಂದಿತ್ತು.

ಈಗ ಈ ಜೋಡಿ ಗಿಚ್ಚಿ ಗಿಲಿಗಿಲಿ ಸೀಸನ್‌ 3ರಲ್ಲೂ ಕಾಮಿಡಿ ಕಹಳೆ ಊದಿದೆ. ಶನಿವಾರದ ಸಂಚಿಕೆಯಲ್ಲಿ ಪತಿ ತುಕಾಲಿ ಸಂತೂನ ಮಾನವನ್ನು ಮೂವರು ತೀರ್ಪುಗಾರರ ಮುಂದೆ ಮೂರು ಕಾಸಿಗೆ ಹರಾಜು ಹಾಕಿದ್ದಾರೆ. ಸಂತೂಗೆ ಹೈಟೆಕ್‌ ಭಿಕ್ಷುಕ ಎನ್ನುವ ಮೂಲಕ ಎಲ್ಲರ ಮುಂದೆ ಆತನ ಕಾಲೆಳೆದಿದ್ದಾರೆ. ಅಷ್ಟಕ್ಕೂ ಇವರ ಮಾತಿಗೆ ನಿರೂಪಕ ನಿರಂಜನ್‌ ದೇಶಪಾಂಡೆ ಸಹಿತ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ. ಅಷ್ಟಕ್ಕೂ ಅವರ ಮಾತು ಹೀಗಿತ್ತು.

ಪತಿ ಸಂತೂ, ಚಿಲ್ಲರ್‌, ಗೊಬ್ಬರಗಾಲ, ಮಾನಸಾ ಒಟ್ಟಿಗೆ ಸೇರಿ ಸ್ಕಿಟ್‌ ಮಾಡಿದ್ದರು. ಆ ಸ್ಕಿಟ್‌ಗೆ ತೀರ್ಪುಗಾರರಿಂದ ಗೋಲ್ಡನ್‌ ಗಿಲಿಗಿಲಿ ಸಿಕ್ಕಿತ್ತು. ಅದನ್ನು ವಿವರಿಸಿದ್ದ ಮಾನಸಾ, ಗೋಲ್ಡನ್‌ ಗಿಲಿಗಲಿ ಪಡೆಯಲು ಸಂತೂ ತನ್ನ ಕೈಯೇ ಮುರಿದುಕೊಳ್ಳಬೇಕಾಯ್ತು. ಈ ವಿಚಾರ ಮುಂಚೆ ಗೊತ್ತಿದ್ದಿದ್ದರೆ, ಹೋದ ವಾರವೇ ಇನ್ನೊಂದೇನಾದರೂ ಮುರಿದು ಹಾಕ್ತಿದ್ರಿ ಅಲ್ವಾ? ಎಂದು ಮಾನಸಾಗೆ ಹೇಳಿದ್ದಾರೆ ನಿರಂಜನ್. ಸಂತೂನ ಕೈ ಮುರಿಯೋಕೆ ಪ್ರಾಕ್ಟಿಸ್‌ ಮಾಡಿದೆ ಎಂದೂ ಹೇಳಿ ನಗಿಸಿದ್ದಾರೆ ಮಾನಸಾ.

ಬಳಿಕ ಸಂತೂನ ಕೊರಳಲಲ್ಲಿನ ಬಂಗಾರದ ಚೈನ್‌ ಹಿಡಿದುಕೊಂಡ ನಿರಂಜನ್, "ಏನೇ ಹೇಳಿ ಮೇಡಂ, ಇವನ ಬೆಳವಣಿಗೆ ನನಗೆ ತುಂಬ ಖುಷಿಯಾಯ್ತು? ಎಂದಿದ್ದಾರೆ. ಏನದು ಎಂದು ಶ್ರುತಿ ಕೇಳಿದಾಗ, ಸಂತೂ ಒಂದು ರೀತಿ ಹೈಟೆಕ್‌ ಭಿಕ್ಷುಕ ಎಂದು ಪತಿಯ ಕಾಲೆಳೆದರು ಮಾನಸಾ. ಮುಂದುವರಿದು, "ಎಲ್ಲರೂ ಒಂದು ರೂಪಾಯಿ, ಎರಡು ರೂಪಾಯಿ ಕೇಳಿದರೆ, ಅವನು ಚಿನ್ನ ಬೆಳ್ಳಿ ಕೇಳ್ತಾನೆ. ಚಿನ್ನದ ಸರ ಪ್ರಡ್ಯೂಸರ್‌ ಕೊಟ್ಟವ್ರೇ, ಅದರಲ್ಲಿರುವ ಡಾಲರ್‌ ವರ್ತೂರ್‌ ಸಂತೋಷಣ್ಣ ಕೊಟ್ಟವ್ರೇ. ಉಂಗುರವನ್ನೂ ಒಬ್ಬರು ಕೊಟ್ಟವ್ರೇ. ಅದನ್ನ ಬಿಚ್ಚಿಟ್ಟು ಬಂದವ್ರೇ" ಎಂದಿದ್ದಾರೆ.

ಲಾಕೆಟ್‌ ಕೊಟ್ರು, ಅದನ್ನು ಜೇಬಿನಲ್ಲಿ ಇಟ್ಟುಕೊಂಡು ಓಡಾಡ್ತಿದ್ದೆ. ಆಗ ಪ್ರಡ್ಯೂಸರ್‌ ನೋಡಿ, ಕೊರಳಿಗೆ ಹಾಕ್ಕೊಂಡು ಓಡಾಡೋದಲ್ಲ ಎನ್ನುತ್ತ ಎಲ್ಲಿ ಲಾಕೆಟ್‌ ತೋರಿಸಿ ಅಂದ್ರು. ಅಯ್ಯೋ ಬೆಂಡಾಗಿದೆ ಎನ್ನುತ್ತ, ನಿಮ್ಮಿಬ್ಬರ ಸೇವೆಗೆ ನಂದೊಂದು ಅಳಿಲು ಸೇವೆ ಅಂತ ಈ ಚೈನ್‌ ಮಾಡಿಸಿಕೊಟ್ರು ಮೇಡಂ ಅಂದ್ರು ತುಕಾಲಿ. ಮಧ್ಯ ಪ್ರವೇಶಿಸಿದ ನಿರಂಜನ್‌, ನಿಮ್ಮಿಬ್ಬರ ಸ್ನೇಹಕ್ಕೆ ಅವರ್ಯಾಕೆ ಅಳಿಲಾದಾರು? ಎಂದರು.

"ಇತ್ತ ಆ ಲಾಕೆಟ್‌ ಅನ್ನ ಜೇಬಿನಲ್ಲಿ ಇಟ್ಟುಕೊಂಡು ಓಡಾಡೋ ಅವಶ್ಯಕತೆ ಏನಿತ್ತು ಅಲ್ವಾ? ಮನೆಲಿಟ್ಟಿದ್ದರೆ ಆಗ್ತಿತ್ತು. ಆದರೆ, ಯಾರಾದರೂ ಸರ ದಾನ ಮಾಡಿ, ಸರ ದಾನ ಮಾಡಿ ಅಂತ ಎಲ್ಲರಿಗೂ ತೆಗ್ದು ತೋರಿಸ್ತಿದ್ದ ಎಂದು ಮಾನಸಾ ಹೇಳ್ತಿದ್ದಂತೆ, ನೆರೆದಿದ್ದವರೆಲ್ಲ ಎದ್ನೋ ಬಿದ್ನೋ ಅಂತ ನಗಾಡಿದ್ದಾರೆ.

(You are reading this copy on "Hindustan Times Kannada". For latest updates on entertainment, OTT, Web series, Kannada film industry, Kannada serials, Reality shows visit kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ