logo
ಕನ್ನಡ ಸುದ್ದಿ  /  ಮನರಂಜನೆ  /  ಅನುಬಂಧ ಅವಾರ್ಡ್ಸ್‌ ವೇದಿಕೆಯಲ್ಲಿ ಜ್ಯೂನಿಯರ್‌ ಧ್ರುವ ಸರ್ಜಾ; ಯಾರಿದು ಪೊಗರು ಪುಟಾಣಿ?

ಅನುಬಂಧ ಅವಾರ್ಡ್ಸ್‌ ವೇದಿಕೆಯಲ್ಲಿ ಜ್ಯೂನಿಯರ್‌ ಧ್ರುವ ಸರ್ಜಾ; ಯಾರಿದು ಪೊಗರು ಪುಟಾಣಿ?

Rakshitha Sowmya HT Kannada

Sep 25, 2023 01:00 PM IST

google News

ಧ್ರುವ ಸರ್ಜಾ ಪೊಗರು ಗೆಟಪ್‌ನಲ್ಲಿ ಮಾಸ್ಟರ್‌ ಆನಂದ್‌ ಪುತ್ರಿ ವಂಶಿಕಾ

  • ಡ್ಯಾನ್ಸ್‌ ಮುಗಿಯುತ್ತಿದ್ದಂತೆ ವೇದಿಕೆ ಹಿಂಭಾಗದಿಂದ ಜ್ಯೂನಿಯರ್‌ ಧ್ರುವ ಸರ್ಜಾ ಓಡೋಡಿ ಬಂದರು. ಪೊಗರು ಚಿತ್ರದಲ್ಲಿ ಧ್ರುವ ಸರ್ಜಾ ಗೆಟಪ್‌ ಧರಿಸಿ ಬಂದಿದ್ದ ಆ ಪುಟಾಣಿ ಮತ್ತಾರೂ ಅಲ್ಲ, ಮಾಸ್ಟರ್‌ ಆನಂದ್‌ ಹಾಗೂ ಯಶಸ್ವಿನಿ ಪುತ್ರಿ ವಂಶಿಕಾ.

ಧ್ರುವ ಸರ್ಜಾ ಪೊಗರು ಗೆಟಪ್‌ನಲ್ಲಿ ಮಾಸ್ಟರ್‌ ಆನಂದ್‌ ಪುತ್ರಿ ವಂಶಿಕಾ
ಧ್ರುವ ಸರ್ಜಾ ಪೊಗರು ಗೆಟಪ್‌ನಲ್ಲಿ ಮಾಸ್ಟರ್‌ ಆನಂದ್‌ ಪುತ್ರಿ ವಂಶಿಕಾ (PC: Colors Kannada)

ಕಲರ್ಸ್‌ ಕನ್ನಡ ಕಳೆದ 10 ವರ್ಷಗಳಿಂದ ನೀಡುತ್ತಿರುವ ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮ ಮುಕ್ತಾಯಗೊಂಡಿದೆ. ಕಳೆದ ಶುಕ್ರವಾರದಿಂದ ಭಾನುವಾರದವರೆಗೂ ಕಾರ್ಯಕ್ರಮ ಪ್ರಸಾರವಾಗಿತ್ತು. ಕಲರ್ಸ್‌ ಕನ್ನಡ ಬಳಗದ ಎಲ್ಲಾ ಧಾರಾವಾಹಿಗಳ ತಂಡ ಒಂದೊಂದು ಬಣ್ಣದ ಡ್ರೆಸ್‌ ಕೋಡ್‌ ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಪೊಗರು ಟೈಟಲ್‌ ಹಾಡಿಗೆ ಡ್ಯಾನ್ಸ್‌

ಅನುಬಂಧ ಅವಾರ್ಡ್ಸ್‌ 2023 ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ, ಡಾಲಿ ಧನಂಜಯ್‌, ಗಣೇಶ್‌ , ಧ್ರುವ ಸರ್ಜಾ ಸೇರಿದಂತೆ ಅನೇಕ ನಟರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಧಾರಾವಾಹಿ, ರಿಯಾಲಿಟಿ ಶೋ ನಟ ನಟಿಯರು ಡ್ಯಾನ್ಸ್‌ ಮಾಡಿ ನೆರೆದಿದ್ದವರನ್ನು ರಂಜಿಸಿದರು. ತ್ರಿಪುರ ಸುಂದರಿ ಧಾರಾವಾಹಿ ನಾಯಕ ಅಭಿನಯವ್‌ ವಿಶ್ವನಾಥನ್‌, ಕೊರಿಯೋಗ್ರಾಫರ್‌ ಮುರುಗ ಹಾಗೂ ತಂಡ ಧ್ರುವ ಸರ್ಜಾ ನಟನೆಯ ಪೊಗರು ಚಿತ್ರದ ಟೈಟಲ್‌ ಹಾಡಿಗೆ ಹೆಜ್ಜೆ ಹಾಕಿದರು.

ಧ್ರುವ ಸರ್ಜಾ ಪೊಗರು ಗೆಟಪ್‌ನಲ್ಲಿ ವಂಶಿಕಾ

ಡ್ಯಾನ್ಸ್‌ ಮುಗಿಯುತ್ತಿದ್ದಂತೆ ವೇದಿಕೆ ಹಿಂಭಾಗದಿಂದ ಜ್ಯೂನಿಯರ್‌ ಧ್ರುವ ಸರ್ಜಾ ಓಡೋಡಿ ಬಂದರು. ಪೊಗರು ಚಿತ್ರದಲ್ಲಿ ಧ್ರುವ ಸರ್ಜಾ ಗೆಟಪ್‌ ಧರಿಸಿ ಬಂದಿದ್ದ ಆ ಪುಟಾಣಿ ಮತ್ತಾರೂ ಅಲ್ಲ, ಮಾಸ್ಟರ್‌ ಆನಂದ್‌ ಹಾಗೂ ಯಶಸ್ವಿನಿ ಪುತ್ರಿ ವಂಶಿಕಾ. ಈ ಚಿನಕುರಳಿ ಪಟಾಕಿಯನ್ನು ನೋಡಿ ಒಮ್ಮೆ ಧ್ರುವ ಕೂಡಾ ಆಶ್ಚರ್ಯ ವ್ಯಕ್ತಪಡಿಸಿದರು. ತಂದೆ ತಲೆಗೆ ಹೊಡಿತಾರೆ, ತಾಯಿ ಬೆನ್ನಿಗೆ ಹೊಡಿತಾರೆ, ಮೇಡಂ ಕೈಗೆ ಹೊಡಿತಾರೆ, ಮೇಷ್ಟ್ರು ಕಾಲಿಗೆ ಹೊಡಿತಾರೆ, ಬಹದ್ದೂರ್‌ ಎದೆಗೇ ಹೊಡಿಯೋದು ಎಂದು ವಂಶಿಕಾ, ಧ್ರುವ ಸರ್ಜಾ ಅಭಿನಯದ ಬಹದ್ದೂರ್‌ ಚಿತ್ರದ ಡೈಲಾಗ್‌ ಹೇಳಿ ಅಲ್ಲಿದ್ದವರ ಹುಬ್ಬೇರಿಸಿದರು.

ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮಕ್ಕೆ ತೆರೆ

ಕಾರ್ಯಕ್ರಮದಲ್ಲಿ ಜನ ಮೆಚ್ಚಿದ ಮಗಳು, ಜನ ಮೆಚ್ಚಿದ ಶಕುನಿ, ಜನ ಮೆಚ್ಚಿದ ಮಗ, ಜನ ಮೆಚ್ಚಿದ ಸೊಸೆ, ಜನ ಮೆಚ್ಚಿದ ಅತ್ತೆ ಸೇರಿದಂತೆ ಅನೇಕ ವಿಭಾಗಗಳಲ್ಲಿ ಪ್ತಶಸ್ತಿ ನೀಡಲಾಯ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಕಾರ್ಯಕ್ರಮವನ್ನು ಎಂಜಾಯ್‌ ಮಾಡಿದರು. ಕಿರುತೆರೆ ನಟಿಯರು ಸಿಎಂಗೆ ಪ್ರಶ್ನೆಗಳನ್ನು ಕೇಳಿದ್ದು, ಸಿದ್ದರಾಮಯ್ಯ ನೀಡಿದ ಉತ್ತರ ಕೂಡಾ ನೆರೆದಿದ್ದವರನ್ನು ರಂಜಿಸಿತ್ತು. ಒಟ್ಟಿನಲ್ಲಿ ಅನುಬಂಧ ಅವಾರ್ಡ್ಸ್‌ ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ. ಈ ಬಾರಿ ಪ್ರಶಸ್ತಿ ಪಡೆದಿರುವರಿಗೆ ಕಿರುತೆರೆಪ್ರಿಯರು ಅಭಿನಂದಿಸುತ್ತಿದ್ದಾರೆ.

ಧ್ರುವ ಸರ್ಜಾ ಸಿನಿಮಾಗಳ ಬಗ್ಗೆ ಹೇಳುವಾದರೆ ಮಾರ್ಟಿನ್‌ ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ಇದರ ಜೊತೆಗೆ ಕೆಡಿ ಚಿತ್ರದಲ್ಲಿ ಧ್ರುವ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಪ್ರೇಮ್‌ ನಿರ್ದೇಶಿಸುತ್ತಿದ್ದಾರೆ. ಈ ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ, ಸಂಜಯ್‌ ದತ್‌ ಕೂಡಾ ನಟಿಸುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ