logo
ಕನ್ನಡ ಸುದ್ದಿ  /  ಮನರಂಜನೆ  /  ನಮಗೇ ಗೊತ್ತಿಲ್ಲದಂತೆ ನಮಗೊಂದು ರೇಟ್‌ ಫಿಕ್ಸ್‌ ಮಾಡಿ ಕಮಿಟ್‌ಮೆಂಟ್‌ಗೆ ಕರೆಯುತ್ತಾರೆ; ಕಿರುತೆರೆ ನಟಿ ನಮ್ರತಾ ಗೌಡ ಬೇಸರ

ನಮಗೇ ಗೊತ್ತಿಲ್ಲದಂತೆ ನಮಗೊಂದು ರೇಟ್‌ ಫಿಕ್ಸ್‌ ಮಾಡಿ ಕಮಿಟ್‌ಮೆಂಟ್‌ಗೆ ಕರೆಯುತ್ತಾರೆ; ಕಿರುತೆರೆ ನಟಿ ನಮ್ರತಾ ಗೌಡ ಬೇಸರ

Rakshitha Sowmya HT Kannada

Nov 11, 2024 03:42 PM IST

google News

ಕಾಸ್ಟಿಂಗ್‌ ಕೌಚ್‌ ಬಗ್ಗೆ ಬೇಸರ ವ್ಯಕ್ತಪಡಿಸಿದ ಕಿರುತೆರೆ ನಟಿ ನಮ್ರತಾ ಗೌಡ

  • ಕಿರುತೆರೆ ನಟಿ ನಮ್ರತಾ ಗೌಡ ಕಾಸ್ಟಿಂಗ್‌ ಕೌಚ್‌ ಬಗ್ಗೆ ಮಾತನಾಡಿದ್ದಾರೆ. ನಮ್ಮ ಫೋಟೋಗಳನ್ನು ಕಲೆಕ್ಟ್‌ ಮಾಡಿ ಪ್ರೊಫೈಲ್‌ ಮಾಡಿ, ನಮಗೆ ಗೊತ್ತಿಲ್ಲದೆ ರೇಟ್‌ ಫಿಕ್ಸ್‌ ಮಾಡ್ತಾರೆ. ನಮಗೆ ಕರೆ ಮಾಡಿ ಕಮಿಟ್‌ಮೆಂಟ್‌ಗೆ ಹೋಗಲು ಹೇಳ್ತಾರೆ. ಇದರ ಬಗ್ಗೆ ಕಾನೂನು ಹೋರಾಟ ಮಾಡುವೆ ಎಂದು ನಮ್ರತಾ ರಿಪಬ್ಲಿಕ್‌ ಕನ್ನಡ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 

ಕಾಸ್ಟಿಂಗ್‌ ಕೌಚ್‌ ಬಗ್ಗೆ ಬೇಸರ ವ್ಯಕ್ತಪಡಿಸಿದ ಕಿರುತೆರೆ ನಟಿ ನಮ್ರತಾ ಗೌಡ
ಕಾಸ್ಟಿಂಗ್‌ ಕೌಚ್‌ ಬಗ್ಗೆ ಬೇಸರ ವ್ಯಕ್ತಪಡಿಸಿದ ಕಿರುತೆರೆ ನಟಿ ನಮ್ರತಾ ಗೌಡ (PC: Namratha Gowda Instagram)

ಕನ್ನಡ ಚಿತ್ರರಂಗ ಈಗ ಸಾಕಷ್ಟು ಬದಲಾಗಿದೆ. ಜೊತೆಗೆ ಚಿತ್ರರಂಗದಲ್ಲಿ ವಿವಾದಗಳು ಕೂಡಾ ಹೆಚ್ಚಾಗುತ್ತಿವೆ. ಅದರಲ್ಲಿ ಎಲ್ಲಾ ಕಡೆ ಕೇಳಿ ಬರುತ್ತಿರುವ ಹೆಸರು ಕಾಸ್ಟಿಂಗ್‌ ಕೌಚ್.‌ ಮೊದಲೆಲ್ಲಾ ಪ್ರತಿಭೆಗೆ ಆದ್ಯತೆ ಕೊಡಲಾಗುತ್ತಿತ್ತು. ಅದರೆ ಈಗ ಗ್ಲಾಮರಸ್‌, ಎಕ್ಸ್‌ಪೋಸ್‌ ಜೊತೆಗೆ ಸಂಬಂಧಿಸಿದವರ ಜೊತೆ ಕಮಿಟ್‌ಮೆಂಟ್‌ ಮಾಡಿಕೊಂಡರೆ ಮಾತ್ರ ಸಿನಿಮಾದಲ್ಲಿ ಬೆಳೆಯಲು ಅವಕಾಶ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಾಗಿಣಿ ಖ್ಯಾತಿಯ ನಮ್ರತಾ ಕಾಸ್ಟಿಂಗ್‌ ಕೌಚ್‌ ಅನುಭವ

ಈಗಾಗಲೇ ಎಷ್ಟೋ ನಟಿಯರು ಚಿತ್ರರಂಗದಲ್ಲಿ ತಮಗೆ ಆದ ಕೆಟ್ಟ ಅನುಭವ ಹೇಳಿಕೊಂಡಿದ್ದಾರೆ. ಕೆಲವರು ಮಾತನಾಡಿದರೆ ಸಮಸ್ಯೆ ಆಗಬಹುದು ಎಂಬ ಕಾರಣಕ್ಕೆ ತಮ್ಮ ಮನಸ್ಸಿನ ಬೇಸರವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಕಿರುತೆರೆ ನಟಿ, ನಾಗಿಣಿ ಖ್ಯಾತಿಯ ನಮ್ರತಾ ಕೂಡಾ ತಮಗೆ ಆದ ಅನುಭವವನ್ನು ಹೇಳಿಕೊಂಡಿದ್ದಾರೆ. ರಿಪಬ್ಲಿಕ್‌ ಕನ್ನಡ ವಾಹಿನಿಗೆೆ ನೀಡಿದ ಸಂದರ್ಶನದಲ್ಲಿ ತಮ್ಮ ಜೀವನದಲ್ಲಿ ನಡೆದ ಘಟನೆಯನ್ನು ಹಂಚಿಕೊಂಡಿದ್ದಾರೆ.

ನಮಗೇ ಗೊತ್ತಿಲ್ಲದಂತೆ ರೇಟ್‌ ಫಿಕ್ಸ್‌ ಮಾಡ್ತಾರೆ

ನಾನು ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದವಳು, ನನಗೆ ಮೊದಲು ನನಗೆ ಇಂಥ ಸಮಸ್ಯೆಗಳು ಇರಲಿಲ್ಲ. ಎಲ್ಲರೂ ಚೆನ್ನಾಗಿದ್ದರು. ಆದರೆ ಒಮ್ಮೆ ಒಬ್ಬರು ಲೇಡಿ ಫೋನ್‌ ಮಾಡಿ ನಾಳೆ ಸಂಜೆಯ ಇವೆಂಟ್‌ಗೆ ನೀವು ಹೋಗುತ್ತಿದ್ದೀರ ಅಂತ ಕೇಳಿದ್ರು, ನನಗೆ ಅದೇನು ಅರ್ಥ ಆಗ್ಲಿಲ್ಲ. ಅವರು ಕಮಿಟ್‌ಮೆಂಟ್‌ಗೆ ಇವೆಂಟ್‌ ಎಂಬ ಪದ ಬಳಸುತ್ತಾರೆ. ನಿಮಗೇ ಏನೂ ಗೊತಿಲ್ವಾ ಅಂತ ಕೇಳಿದ್ರು, ಇಲ್ಲ ಎಂದು ನಾನು ಫೋನ್‌ ಡಿಸ್ಕನೆಕ್ಟ್‌ ಮಾಡಿದೆ. ಆ ಮಹಿಳೆ ಬಗ್ಗೆ ನಾನು ಮಾಹಿತಿ ಹುಡುಕಲು ಹೊರಟಾಗ ಕೆಲವೊಂದು ವಿಚಾರಗಳು ಬಹಿರಂಗ ಆದವು. ಅವರೆಲ್ಲಾ ಸೋಷಿಯಲ್‌ ಮೀಡಿಯಾದಲ್ಲಿ ಹಿರೋಯಿನ್‌ಗಳ ಫೋಟೋಗಳನ್ನು ಕಲೆಕ್ಟ್‌ ಮಾಡಿ ಒದು ಪ್ರೊಫೈಲ್‌ ಕ್ರಿಯೇಟ್‌ ಮಾಡ್ತಾರೆ. ಅದನ್ನು ಕೆಲವರಿಗೆ ತೋರಿಸಿ, ಈ ಹೀರೋಯಿನ್‌ ನಿಮ್ಮ ಬಳಿ ಬರ್ತಾರೆ ಅಂತ ಡೀಲ್‌ ಮಾತನಾಡಿ ನಮಗೇ ಗೊತ್ತಿಲ್ಲದೆ ನಮಗೊಂದು ರೇಟ್‌ ಫಿಕ್ಸ್‌ ಮಾಡಿ, ನಂತರ ಯಾರ ಕೈಗೂ ಸಿಗದೆ ಫೋನ್‌ ಸ್ವಿಚ್‌ ಆಫ್‌ ಮಾಡ್ತಾರೆ.

ಕಾನೂನು ಹೋರಾಟ ಮಾಡುವೆ ಎಂದ ನಮ್ರತಾ

ಈ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡರೆ ನೀನು ಇರೋದೇ ಹೀಗೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅವರಿಗೆ ನಮ್ಮ ಬಗ್ಗೆ ಗೊತ್ತಿರುವುದಿಲ್ಲ. ನಾವು ಎಷ್ಟು ಕಷ್ಟ ಬಂದು ಮೇಲೆ ಬಂದಿರುತ್ತೇವೆ ಎಂದು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ. ನೀನು ಅಡ್ಡದಾರಿ ಹಿಡಿದಿದ್ದೀಯ, ಅದಕ್ಕೆ ಇಷ್ಟೆಲ್ಲಾ ಹಣ ಮಾಡಿರುವೆ ಎನ್ನುತ್ತಾರೆ. ಯಾರ ಬಳಿಯೋ ನನ್ನ ಸಮಸ್ಯೆ ಹೇಳಿಕೊಂಡು ಅವರು ಪರಿಹಾರ ಮಾಡುತ್ತಾರೆ ಅಂತ ಕೂರುವ ಬದಲಿಗೆ ಈ ವಿಚಾರದ ಬಗ್ಗೆ ನಾನೂ ಕಾನೂನು ಹೋರಾಟ ಮಾಡಬೇಕೆಂದುಕೊಂಡಿದ್ದೇನೆ. ನನಗೆ ನನ್ನ ತಂದೆ ತಾಯಿ ಬೆಂಬಲವಿದೆ ಎಂದು ನಮ್ರತಾ ಹೇಳಿಕೊಂಡಿದ್ದಾರೆ.

 

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ