‘ದುರಹಂಕಾರ ತೋರದ ಅಮಾಯಕ ಪರಭಾಷಿಕರಿಗೆ ಹೀಗೂ ಕನ್ನಡ ಪಾಠ ಹೇಳಬಹುದು’ ಎಂದು ತೋರಿಸಿಕೊಟ್ಟ ಚಿತ್ರ ಸಾಹಿತಿ ಕವಿ ರಾಜ್
Nov 01, 2024 04:12 PM IST
ಪರಭಾಷಿಕರಿಗೆ ಹೀಗೂ ಕನ್ನಡ ಪಾಠ ಹೇಳಬಹುದು ಎಂದು ತೋರಿಸಿಕೊಟ್ಟ ಚಿತ್ರ ಸಾಹಿತಿ ಕವಿ ರಾಜ್
- Karnataka Rajyotsava 2024: ಬೆಂಗಳೂರಿನಲ್ಲಿ ಕನ್ನಡಿಗರಷ್ಟೇ ಅಲ್ಲ ಹತ್ತಾರು ಭಾಷೆ ಮಾತನಾಡುವ ಜನರಿದ್ದಾರೆ. ಆಗಾಗ ಹಿಂದಿ ಭಾಷಿಕರು ಮತ್ತು ಹಿಂದಿ ಹೇರಿಕೆ ವಿಚಾರವೂ ಹೆಚ್ಚು ಸದ್ದು ಮಾಡುತ್ತಿರುತ್ತದೆ. ಇದೀಗ ಪರಭಾಷಿಕ ವ್ಯಕ್ತಿಗೆ ಸೂಕ್ಷ್ಮವಾಗಿ ಮಾತೃಭಾಷೆಯೇ ಮೇಲು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಚಿತ್ರ ಸಾಹಿತಿ ಕವಿರಾಜ್.
Kannada Rajyotsava 2024: ಇಂದು ಕನ್ನಡ ರಾಜ್ಯೋತ್ಸವ. ಈ ನಿಮಿತ್ತ ಸೋಷಿಯಲ್ ಮೀಡಿಯಾದಲ್ಲೀಗ ಕನ್ನಡದ್ದೇ ಡಿಂಡಿಮ. ಹೀಗಿರುವಾಗಲೇ ಚಿತ್ರ ಸಾಹಿತಿ ಕವಿರಾಜ್ ತಮ್ಮದೇ ಶೈಲಿಯಲ್ಲಿ ಕನ್ನಡ ರಾಜ್ಯೋತ್ಸವದ ಈ ಸಂಭ್ರಮದಲ್ಲಿ ವಿಶೇಷ ಬರಹವೊಂದನ್ನು ಹಂಚಿಕೊಂಡಿದ್ದಾರೆ. ಅವರ ಆ ಬರಹ ಕನ್ನಡ ಹಬ್ಬಕ್ಕೂ ತುಂಬ ಹತ್ತಿರ. ಆಸ್ಸಾಮಿ ಭಾಷಿಕ ಕೆಲಸಗಾರ ಮತ್ತು ತಮ್ಮ ನಡುವಿನ ಒಂದು ಸ್ವಾರಸ್ಯಕರ ಮಾತುಕತೆಯನ್ನು ಹಂಚಿಕೊಂಡಿದ್ದಾರೆ.
"ನಮ್ಮ ಅಪಾರ್ಟ್ಮೆಂಟ್ ಅಲ್ಲಿ ಕಾರ್ ವಾಶ್ ಮಾಡುವ ಅಸ್ಸಾಮೀ ಮೂಲದ ಹುಡುಗನೊಬ್ಬ ಹಿಂದಿಯಲ್ಲಿ ಏನೋ ಹೇಳಲು ಬಂದ ಕನ್ನಡ ಅಥವಾ ಇಂಗ್ಲೀಷ್ ಅಲ್ಲಿ ಹೇಳು ಅಂದೆ . ಕನ್ನಡ ಬರಲ್ಲಾ ಅಂತಾ ಹಿಂದಿಯಲ್ಲೇ ಹೇಳಿದ . ಕರ್ನಾಟಕದಲ್ಲಿ ಕೆಲಸಕ್ಕೆ ಬಂದ ಮೇಲೆ ಕನ್ನಡ ಕಲಿಯಬೇಕಲ್ಲವೇ , ಇಲ್ಲಿ ಬಂದು ಹಿಂದಿ ಮಾತಾಡೋದಲ್ಲ ಅಂತಾ ಹೇಳಿದೆ. ಯಾಕೆ ಮಾತಾಡಬಾರದು ಹಿಂದಿ ನಮ್ಮ ನ್ಯಾಷನಲ್ ಲ್ಯಾಂಗ್ವೇಜ್ ಅಲ್ವಾ ಎಂದು ಹಿಂಜರಿಕೆಯಲ್ಲೇ ಕೇಳಿದ. ಬಹುಶಃ ಬೇರೆ ದಿನವಾದರೆ ಅವನ ಮೇಲೆ ರೇಗುತ್ತಿದೆನೋ ಏನೋ. ಯಾಕೋ ಹೊಟ್ಟೆಪಾಡಿಗೆ ದುಡಿಯಲು ಬಂದ ಅಮಾಯಕನಂತೆ ಕಾಣುತ್ತಿದ್ದ ಅವನ ಮೇಲೆ ರೇಗಲು ಮನಸಾಗಲಿಲ್ಲ. ಹಿಂದಿ ನಮ್ಮ ನ್ಯಾಷನಲ್ ಲ್ಯಾಂಗ್ವೇಜ್ ಅಲ್ಲ, ಅದು ಸುಳ್ಳು. ನಿನ್ನ ಅಸ್ಸಾಮೀ , ನನ್ನ ಕನ್ನಡ ಎಲ್ಲಾ national language ಗಳೇ ಅಂದೇ. ಹುಡುಗ ಕನ್ಫ್ಯೂಸ್ ಆಗಿ ಏನು ಹೇಳದೆ ಹೊರಟ.
ಒಂದು ಗಂಟೆ ನಂತರ ಕೆಲಸಕ್ಕೆ ಹೊರಡಲು ಕಾರಿನ ಬಳಿ ಹೋದೆ. ಅಲ್ಲೇ ಇದ್ದ ಹುಡುಗ "ಸಾಬ್ .. ಹಿಂದಿ ನ್ಯಾಷನಲ್ ಲ್ಯಾಂಗ್ವೇಜ್ ನಹಿ ಹೋತೋ , ಪಡ್ತೆ ವಕ್ತ್ ಕಿತಾಬ್ ಮೇ ವೋಹಿ ಲಿಖಾತಾನಾ, ವೋ ಕೈಸಾ ಜೂಟ್ ಹೊ ಸಕ್ತಾ ಹೇ" ಎಂದು ಗಟ್ಟಿ ಮನಸು ಮಾಡಿ ಕೇಳೇಬಿಟ್ಟ. ಅವನ ಪ್ರಶ್ನೆಯಲ್ಲೊಂದು ಪ್ರಾಮಾಣಿಕತೆಯಿದ್ದಿದ್ದು ಗಮನಕ್ಕೆ ಬಂತು. ಇಂಗ್ಲೀಷ್ ಓದೋಕೆ ಬರುತ್ತಾ ಅಂತಾ ಕೇಳಿದೆ. "ಜ್ಯಾದ ನಹಿ ಪಡಾ ಹೂನ್, ಟೀಕ್ ಸೆ ನಹಿ ಆತಾ, ಧೀರೆ ಧೀರೆ ಪ್ಯಾಡ್ ಸಕ್ತಾ ಹೂನ್" ಅಂದ. ಫೋನ್ ತೆಗೆದು ಗೂಗಲ್‌ಗೆ ಹೋಗಿ Is hindi the national language of India? ಅಂತಾ type ಮಾಡಿ ಅವನಿಗೂ ನಿಧಾನಕ್ಕೆ ಓದಿಸಿ search ಕೊಟ್ಟೆ. ಬಂದ ಉತ್ತರವನ್ನ ಅವನಿಗೆ ಓದಿಸಿದೆ. No.. India does not have a national language.. ಅಂತಾ ಕೂಡಿಸಿ ಕೂಡಿಸಿ ಓದಿದ. ಆಶ್ಚರ್ಯ ಆಗಿತ್ತು ಅವನಿಗೆ.
"ಏ ಸಛ್ ಹೇ ಕ್ಯಾ ಸಾಬ್" ಅಂದ. ಬೇರೆ ಬೇರೆ ರೀತಿ ಸರ್ಚ್ ಕೊಟ್ಟು ತೋರಿಸಿದೆ. ಎಲ್ಲವೂ ಹಿಂದಿ ನಮ್ಮ ನ್ಯಾಷನಲ್ ಲ್ಯಾಂಗ್ವೇಜ್ ಅಲ್ಲಾ ಅಂತಲೇ ತೋರಿಸುತ್ತಿತ್ತು. ಹೇಗೆ ನಮ್ಮನ್ನೆಲ್ಲ ಯಾಮಾರಿಸಲಾಗಿದೆ ಎಂದು ಬಿಡಿಸಿ ಹೇಳಿದೆ. ಈ ಕುರಿತ ಗುಜರಾತ್ ಹೈಕೋರ್ಟ್ ತೀರ್ಪನ್ನು ತೋರಿಸಿದೆ. ಹುಡುಗ ನಿಬ್ಬೆರಗಾಗಿ ಜ್ಞಾನೋದಯ ಆದಂತಿದ್ದ. "ಸಚ್ ಸಿಕಾನೆ ಕೇಲಿಯೇ ಥ್ಯಾಂಕ್ಸ್ ಭೈಯ್ಯ" ಅಂದವನ ಮಾತಲ್ಲೂ ಪ್ರಾಮಾಣಿಕತೆಯಿತ್ತು. "ಹಮಾರಾ ಅಸ್ಸಾಂ ಮೇ ಬೀ ಹಿಂದಿ ಬಹುತ್ ಹೋ ಚುಕಾ ಹೇ. ಹಮ್ ಸಬ್ ನ್ಯಾಶನಲ್ ಲ್ಯಾಂಗ್ವೇಜ್ ಸಮಜ್ ಕೇ ಮಾನ್ ರಹೇ ತೇ. ಆಜ್ ಕಲ್ ಅಸ್ಸಾಮೀ ಕಮ್ ಸುನ್ ನೇ ಕೋ ಮಿಲ್ ರಹಾ ಹೇ. ಆಜ್ ಸೆ ಮೇ ಕನ್ನಡ ಸೀಕೂಂಗ" ಅಂದ. ನನ್ನ ಫ್ರೆಂಡ್ಸ್ ಗೆಲ್ಲ ನಿಜ ತಿಳಿಸುತ್ತೀನಿ ಹೇಗೆ search ಮಾಡಬೇಕು ಎಂದು ಮತ್ತೆ ಕೇಳಿ ತಿಳಿದುಕೊಂಡ.
ದುರಹಂಕಾರ ತೋರದ ಅಮಾಯಕರಿಗೆ ಕೋಪಕ್ಕಿಂತ ತಾಳ್ಮೆಯಿಂದ ಅರಿವು ಮೂಡಿಸೋದೇ ಹೆಚ್ಚು. ಪರಿಣಾಮಕಾರಿ ಎಂಬ ಪರಮ ಸತ್ಯ ಮತ್ತೊಮ್ಮೆ ರುಜುವಾತಾಗಿ ಒಂಥರಾ ಖುಷಿಯಾಗಿ ಕಾರು ಶುರುಮಾಡಿ ಅವನಿಗೆ ಬೈ ಹೇಳಿ ಹೊರಟೆ.