logo
ಕನ್ನಡ ಸುದ್ದಿ  /  ಮನರಂಜನೆ  /  ‘ಯಾರೂ ಮಾತನಾಡದಿದ್ದಾಗ, ಇಂಡಸ್ಟ್ರಿಗೆ ಉತ್ತರ ಕೊಟ್ಟಿದ್ದೇನೆ’; ದರ್ಶನ್‌ ಬಗ್ಗೆ ಪ್ರಶ್ನೆ ಕೇಳ್ತಿದ್ದಂತೆ, ಕಿಚ್ಚ ಸುದೀಪ್‌ ಉತ್ತರ ಹೀಗಿತ್ತು

‘ಯಾರೂ ಮಾತನಾಡದಿದ್ದಾಗ, ಇಂಡಸ್ಟ್ರಿಗೆ ಉತ್ತರ ಕೊಟ್ಟಿದ್ದೇನೆ’; ದರ್ಶನ್‌ ಬಗ್ಗೆ ಪ್ರಶ್ನೆ ಕೇಳ್ತಿದ್ದಂತೆ, ಕಿಚ್ಚ ಸುದೀಪ್‌ ಉತ್ತರ ಹೀಗಿತ್ತು

Dec 16, 2024 09:48 AM IST

google News

ರ್ಶನ್‌ ಬಗ್ಗೆ ಪ್ರಶ್ನೆ ಕೇಳ್ತಿದ್ದಂತೆ, ಕಿಚ್ಚ ಸುದೀಪ್‌ ಉತ್ತರ ಹೀಗಿತ್ತು

    • Kichcha Sudeep: ಮ್ಯಾಕ್ಸ್‌ ಸಿನಿಮಾ ಬಗ್ಗೆ ಸರಣಿ ಸಂದರ್ಶನಗಳನ್ನು ನೀಡುತ್ತಿದ್ದಾರೆ ಕಿಚ್ಚ ಸುದೀಪ್.‌ ಈ ನಡುವೆ ನೀಡಿದ ಸಂದರ್ಶನವೊಂದರಲ್ಲಿ ದರ್ಶನ್‌ ಬಗ್ಗೆಯೂ ಪ್ರಶ್ನೆ ಎದುರಾಗಿದೆ. ದರ್ಶನ್‌ ಹೆಸರು ಬರುತ್ತಿದ್ದಂತೆ, ಅದಕ್ಕೆ ಉತ್ತರಿಸದೇ, ನಯವಾಗಿಯೇ ಹಿಂದೆ ಸರಿದಿದ್ದಾರೆ. ಏಕೆ ಈ ಸಮಯದಲ್ಲಿ ಮಾತನಾಡುವುದು ಬೇಡ ಎಂಬುದಕ್ಕೆ ಸೂಕ್ತ ಕಾರಣ ನೀಡಿದ್ದಾರೆ. 
ರ್ಶನ್‌ ಬಗ್ಗೆ ಪ್ರಶ್ನೆ ಕೇಳ್ತಿದ್ದಂತೆ, ಕಿಚ್ಚ ಸುದೀಪ್‌ ಉತ್ತರ ಹೀಗಿತ್ತು
ರ್ಶನ್‌ ಬಗ್ಗೆ ಪ್ರಶ್ನೆ ಕೇಳ್ತಿದ್ದಂತೆ, ಕಿಚ್ಚ ಸುದೀಪ್‌ ಉತ್ತರ ಹೀಗಿತ್ತು

Kichcha Sudeep on Darshan: ಕಿಚ್ಚ ಸುದೀಪ್‌ ಮತ್ತು ದರ್ಶನ್‌ ಒಂದು ಕಾಲದ ಪ್ರಾಣ ಸ್ನೇಹಿತರು. ಸ್ನೇಹದಲ್ಲಿ ಚಂದನವನದ ದಿಗ್ಗಜರು ಎನಿಸಿಕೊಂಡಿದ್ದ ಈ ಜೋಡಿ ಈಗ ಆ ಸ್ನೇಹದ ಸಂಬಂಧದಲ್ಲಿ ಇಲ್ಲದೆ ವರ್ಷಗಳೇ ಕಳೆದಿವೆ. ಆದರೆ, ದರ್ಶನ್‌ಗೆ ಒಂದಷ್ಟು ಸಮಸ್ಯೆಗಳು ಎದುರಾದಾಗ, ದೂರದಿಂದಲೇ ಅವರ ಬೆನ್ನಿಗೆ ನಿಂತಿದ್ದರು ಸುದೀಪ್.‌ ಚಪ್ಪಲಿ ಎಸೆತ ಪ್ರಕರಣ ವಿರೋಧಿಸಿದ್ದಷ್ಟೇ ಅಲ್ಲದೆ, ಕೊಲೆ ಆರೋಪದ ಮೇಲೆ ಜೈಲಿಗೆ ಹೋದಾಗಲೂ ಪ್ರತಿಕ್ರಿಯೆ ನೀಡಿದ್ದರು. ಮತ್ತೆ ಕೆಲವು ಬಾರಿ, ಅವರು ನಮ್ಮ ಬದುಕಿನಲ್ಲಿ ಇಲ್ಲ, ದೂರದಲ್ಲಿದ್ದಾರೆ. ಅಲ್ಲಿಯೂ ಅವರಿಗೆ ನಾನು ಒಳ್ಳೆಯದನ್ನೇ ಬಯಸುವೆ ಎಂದಿದ್ದರು. ಈಗ ಮತ್ತೆ ದರ್ಶನ್‌ ಬಗ್ಗೆಯೇ ಪ್ರಶ್ನೆ ಎದುರಾಗಿದೆ. ಅದಕ್ಕೆ ಸುದೀಪ್‌ ಕೊಟ್ಟ ಉತ್ತರ ಹೀಗಿದೆ.

ಇನ್ನೇನು ಡಿಸೆಂಬರ್‌ 25ರಂದು ಮ್ಯಾಕ್ಸ್‌ ಸಿನಿಮಾ ಬಿಡುಗಡೆ ಆಗುತ್ತಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸಿದ್ಧವಾಗಿರುವ ಈ ಸಿನಿಮಾ ಈಗಾಗಲೇ ಸ್ನೀಕ್‌ ಪಿಕ್‌, ಹಾಡುಗಳು, ಟೀಸರ್‌ಗಳ ಮೂಲಕ ನೋಡುಗರ ಗಮನ ಸೆಳೆದಿದೆ. ಇಂತಿಪ್ಪ ಈ ಸಿನಿಮಾ ಬಗ್ಗೆಯೇ ಸರಣಿ ಸಂದರ್ಶನಗಳನ್ನೂ ನೀಡುತ್ತಿದ್ದಾರೆ ಸುದೀಪ್.‌ ಈ ನಡುವೆ ನ್ಯೂಸ್‌ 18 ಕನ್ನಡಕ್ಕೂ ನೀಡಿದ ಸಂದರ್ಶನದಲ್ಲಿ ಸುದೀಪ್‌ ಅವರಿಗೆ ದರ್ಶನ್‌ ಬಗ್ಗೆಯೂ ಪ್ರಶ್ನೆ ಎದುರಾಗಿದೆ. ದರ್ಶನ್‌ ಹೆಸರು ಬರುತ್ತಿದ್ದಂತೆ, ಅದಕ್ಕೆ ಉತ್ತರಿಸದೇ, ನಯವಾಗಿಯೇ ಹಿಂದೆ ಸರಿದಿದ್ದಾರೆ. ಅಷ್ಟಕ್ಕೂ ಸುದೀಪ್‌ ಮಾತನಾಡಿದ್ದಾದರೂ ಏನು? ಇಲ್ಲಿದೆ.

ಅಮ್ಮನ ಬಗ್ಗೆ ಕೇಳಿ, ಆದ್ರೆ ಅದು ಬೇಡ..

"ಮ್ಯಾಕ್ಸ್‌ ಬಗ್ಗೆ ಮಾತನಾಡಿ, ಕೆಲವೆಲ್ಲ ಬೇಡ. ಮ್ಯಾಕ್ಸ್‌ ಬಗ್ಗೆ ಮಾತನಾಡೋಣ. ನನ್ನ ಜೀವನದ ಬಗ್ಗೆ ಮಾತನಾಡಿ. ಆ ಬಗ್ಗೆ ಮಾತನಾಡಲ್ಲ ಪ್ಲೀಸ್‌. ನನ್ನ ಜೀವನದ ಬಗ್ಗೆ ಮಾತನಾಡೋಣ" ಎಂದಿದ್ದಾರೆ. ಅಮ್ಮನ ಬಗ್ಗೆ ಹೇಳಿ ಎಂದು ನಿರೂಪಕರು ಕೇಳುತ್ತಿದ್ದಂತೆ, "ಈ ವಿಚಾರ ಮಾತನಾಡಿ. ಅದು ನನ್ನ ಆಸ್ತಿ. ಇದು ನನ್ನ ಆಸ್ತಿ. ಇನ್ನೊಬ್ಬರ ಜೀವನ ನನಗೆ ಬೇಡ. ಕೊಡೋ ಜಾಗದಲ್ಲಿ ಯಾರೂ ಕೊಡದಿದ್ದಾಗ, ಇಂಡಸ್ಟ್ರಿಗೆ ಉತ್ತರ ಕೊಟ್ಟಿದ್ದೇನೆ. ನನ್ನ ತಾಯಿ ಅಂತ ಒಬ್ಬ ಶ್ರೇಷ್ಠ ವ್ಯಕ್ತಿ ನನ್ನ ಜೀವನದಲ್ಲಿ ಇದ್ದಾರೆ. ಆ ಬಗ್ಗೆ ಪ್ರಶ್ನೆ ಕೇಳಿ. ಅದಕ್ಕೆ ಉತ್ತರ ಕೊಡ್ತಿನಿ" ಎಂದಿದ್ದಾರೆ.

ಅದು ನನ್ನ ಜೀವನವೇ ಅಲ್ಲ..

ಮುಂದುವರಿದು, "ವೀಕ್ಷಕರ ಬಗ್ಗೆ ಕೇಳಿ. ಕನ್ನಡದ ಬಗ್ಗೆ ಕೇಳಿ, ಕನ್ನಡ ಜನತೆಯ ಬಗ್ಗೆ ಕೇಳಿ.. ಆದರೆ ಕೆಲವೊಂದು ಬ್ಯಾಡ ಅಂತ ಅಷ್ಟೇ. ಅವುಗಳಿಗೆ ಉತ್ತರ ಕೊಡೋಕೆ ಆಗಲ್ಲ ಅಂತ ನಾನು ಹೇಳಲ್ಲ ಅಂತಲ್ಲ. ಅದು ನನ್ನ ಜೀವನವೇ ಅಲ್ಲ. ಅಲ್ಲಿ ನಾನು ಇಲ್ಲ. ನನಗೆ ಸತ್ಯಗಳೂ ಗೊತ್ತಿಲ್ಲ. ಗೊತ್ತಿಲ್ಲದೇ ಇರೋ ವಿಚಾರ, ಗೊತ್ತಿಲ್ಲದೇ ಇರೋ ವ್ಯಕ್ತಿ, ಆ ಸಂದರ್ಭದ ಬಗ್ಗೆ ಹೇಗೆ ಮಾತನಾಡಲಿ?" ಎಂದು ಉತ್ತರ ನೀಡಿದ್ದಾರೆ ಕಿಚ್ಚ ಸುದೀಪ್.‌

ಮ್ಯಾಕ್ಸ್‌ ಸಿನಿಮಾ ಬಗ್ಗೆ..

ಕಲೈಪುಲಿ ಎಸ್ ದಾನು ಅವರ ವಿ ಕ್ರಿಯೇಷನ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ, ವಿಜಯ್ ಕಾರ್ತಿಕೇಯ ನಿರ್ದೇಶನದಲ್ಲಿ ಮ್ಯಾಕ್ಸ್‌ ಸಿನಿಮಾ ಮೂಡಿಬಂದಿದೆ. ಸದ್ಯಕ್ಕೆ ಕನ್ನಡ, ತೆಲುಗು, ತಮಿಳಿನಲ್ಲಿ ಮಾತ್ರ ಈ ಸಿನಿಮಾ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಅದಾದ ಮೇಲೆ ಇನ್ನುಳಿದ ಭಾಷೆಯಲ್ಲಿ ರಿಲೀಸ್‌ ಆಗಲಿದೆ ಎಂಬ ವಿಚಾರ ಹರಿದಾಡುತ್ತಿದೆ. ಈ ಬಗ್ಗೆ ಇನ್ನಷ್ಟೇ ಚಿತ್ರತಂಡ ಅಧಿಕೃತವಾಗಿ ಘೋಷಣೆ ಆಗಬೇಕಿದೆ. ಸೆನ್ಸಾರ್‌ನಿಂದ ಈ ಚಿತ್ರಕ್ಕೆ ಯು\ಎ ಪ್ರಮಾಣ ಪತ್ರ ಸಿಕ್ಕಿರುವ ವಿಚಾರವೂ ರಿವೀಲ್‌ ಆಗಿದೆ.

ಮ್ಯಾಕ್ಸ್‌ ಚಿತ್ರದಲ್ಲಿ ಸುಧಾ ಬೆಳವಾಡಿ, ಕರಿಸುಬ್ಬು, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೇ, ವಿಜಯ್‍ ಚೆಂಡೂರು, ನಾಗರಾಜ್, ಅನಿರುದ್ದ್, ಪ್ರವೀಣ್ ಸೇರಿ ಹಲವರು ನಟಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ಅಜನೀಶ್‍ ಲೋಕನಾಥ್‍ ಸಂಗೀತ ನೀಡಿದರೆ, ಶೇಖರ್ ಚಂದ್ರ ಛಾಯಾಗ್ರಹಣ ಮಾಡಿದ್ದಾರೆ. ಚೇತನ್‍ ಡಿಸೋಜ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಶಿವಕುಮಾರ್ ಅವರ ಕಲಾ ನಿರ್ದೇಶನ, ಗಣೇಶ್ ಬಾಬು ಸಂಕಲನ ಚಿತ್ರಕ್ಕಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ