Amaran Movie: ಅಮರನ್ ಸಿನಿಮಾದ ಮುಂಗಡ ಬುಕ್ಕಿಂಗ್ ವಿವರ, ಶಿವಕಾರ್ತಿಕೇಯನ್ ಕರಿಯರ್‌ನಲ್ಲಿ ಉತ್ತಮ ಓಪನಿಂಗ್ ಅಂತೆ
Oct 30, 2024 02:44 PM IST
Amaran Movie: ಅಮರನ್ ಸಿನಿಮಾದ ಮುಂಗಡ ಬುಕ್ಕಿಂಗ್ ವಿವರ
- Amaran advance booking: ಶಿವಕಾರ್ತಿಕೇಯನ್ ನಟನೆಯ ತಮಿಳು ಸಿನಿಮಾ ಅಮರನ್ ಅಕ್ಟೋಬರ್ 31ರಂದು ಬಿಡುಗಡೆಯಾಲಿದೆ. ಇದು ಶಿವಕಾರ್ತಿಕೇಯನ್ ಕರಿಯರ್‌ನಲ್ಲೇ ಅತ್ಯುತ್ತಮ ಆರಂಭ ಪಡೆಯುವ ಸಿನಿಮಾ ಎಂದು ಅಮರನ್ ಅಡ್ವಾನ್ಸಡ್ ಬುಕ್ಕಿಂಗ್ ವರದಿಗಳು ತಿಳಿಸಿವೆ.
Amaran advance booking: ಶಿವಕಾರ್ತಿಕೇಯನ್ ನಟನೆಯ ತಮಿಳು ಸಿನಿಮಾ ಅಮರನ್ ಅಕ್ಟೋಬರ್ 31ರಂದು ಬಿಡುಗಡೆಯಾಲಿದೆ. ಇದು ಶಿವಕಾರ್ತಿಕೇಯನ್ ಕರಿಯರ್‌ನಲ್ಲೇ ಅತ್ಯುತ್ತಮ ಆರಂಭ ಪಡೆಯುವ ಸಿನಿಮಾ ಎಂದು ಅಮರನ್ ಅಡ್ವಾನ್ಸಡ್ ಬುಕ್ಕಿಂಗ್ ವರದಿಗಳು ತಿಳಿಸಿವೆ. ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರವನ್ನು ಕಮಲ್ ಹಾಸನ್ ನಿರ್ಮಿಸಿದ್ದಾರೆ. ಇದು ಮೇಜರ್ ಮುಕುಂದ್ ವರದರಾಜನ್ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಸಿನಿಮಾವಾಗಿದೆ.
ದಿವಂಗತ ಮೇಜರ್ ಮುಕುಂದ್ ವ್ರದಾಹರಾಜನ್ 2014 ರಲ್ಲಿ ಕಾಶ್ಮೀರದ ಶೋಪಿಯಾನ್ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದರು. ಅವರ ಶೌರ್ಯಕ್ಕಾಗಿ ಅಶೋಕ ಚಕ್ರವನ್ನು ನೀಡಲಾಗಿದೆ. ಚಿತ್ರದಲ್ಲಿ ನಾಯಕಿಯಾಗಿ ಸಾಯಿ ಪಲ್ಲವಿ ನಟಿಸಿದ್ದಾರೆ. ಸಾಯಿ ಪಲ್ಲವಿ ಮತ್ತು ಶಿವಕಾರ್ತಿಕೇಯನ್ ನಟನೆಯ ಈ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಶಿವಕಾರ್ತಿಕೇಯನ್‌ಗೆ ವೃತ್ತಿಜೀವನದ ಬೆಸ್ಟ್ ಸಿನಿಮಾ ಇದೆಂದು ಹೇಳಲಾಗುತ್ತಿದೆ.
ಇದೇ ಸಮಯದಲ್ಲಿ ಹೊಂಬಾಳೆ ಫಿಲ್ಮ್ಸ್‌ನ ಕನ್ನಡ ಸಿನಿಮಾ ಬಘೀರ ಕೂಡ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. 'ಲಕ್ಕಿ ಭಾಸ್ಕರ್', 'ಬ್ರದರ್' ಮತ್ತು 'ಬ್ಲಡಿ ಬೆಗ್ಗರ್" ಮುಂತಾದ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸೆಣೆಸಲಿವೆ. 'ಲಕ್ಕಿ ಭಾಸ್ಕರ್', 'ಬ್ರದರ್' ಮತ್ತು 'ಬ್ಲಡಿ ಬೆಗ್ಗರ್" ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ನೀಡಿದರೂ ಅಮರನ್ ಸಿನಿಮಾದ ಗಳಿಕೆ ಉತ್ತಮವಾಗಿರಲಿದೆ ಎಂದು ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಹೇಳಿದ್ದಾರೆ.
ದುಲ್ಕರ್ ಸಲ್ಮಾನ್ ಅವರ 'ಲಕ್ಕಿ ಭಾಸ್ಕರ್' ಚಿತ್ರದಂತೆಯೇ 'ಅಮರನ್' ಕೂಡ ಸಾಕಷ್ಟು ನಿರೀಕ್ಷ ಹುಟ್ಟುಹಾಕಿದೆ. ಶಿವಕಾರ್ತಿಕೇಯನ್ ಕಾಲಿವುಡ್‌ನಲ್ಲಿ ದೊಡ್ಡ ಲೀಗ್ ಹಂತದ ನಟನಾಗುವ ಹಂತದಲ್ಲಿದ್ದಾರೆ. ಚಿತ್ರವು ಸೋಲೋ ರಿಲೀಸ್ ಆಗಿದ್ದರೆ ವಿಶ್ವಾದ್ಯಂತ 15 ಕೋಟಿ ರೂಪಾಯಿ ಗಳಿಸುತ್ತಿತ್ತು. ಇತರ ಚಿತ್ರಗಳೊಂದಿಗೆ ತಮಿಳುನಾಡಿನಲ್ಲಿ ಚಿತ್ರವು ಕೇವಲ 10 ಕೋಟಿ ಗಳಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ಶಿವಕಾರ್ತಿಕೇಯನ್ ಅವರು ನಟಿಸಿದ ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ 'ಅಮರನ್' ಭಾರತ ಮತ್ತು ವಿದೇಶದಲ್ಲಿ ಉತ್ತಮ ಪ್ರಚಾರವನ್ನು ಪಡೆದಿದೆ. ತಮಿಳಿನ ಹೊರತಾಗಿ ಈ ಚಲನಚಿತ್ರವು ಹಿಂದಯಲ್ಲ ಉತ್ತಮವಾಗಿ ಗಳಿಕೆ ಮಾಡುವ ಸೂಚನೆಯಿದೆ. ದೆಹಲಿ ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯ ಹಿನ್ನೆಲೆಯಲ್ಲಿ ಶೂಟಿಂಗ್ ಮಾಡಲಾಗಿದೆ. ಚಿತ್ರ ತಂಡವು ದುಬೈ ಮತ್ತು ಮಲೇಷಿಯಾದಲ್ಲಿಯೂ ಸಿನಿಮಾದ ಪ್ರಚಾರ ಮಾಡಿದೆ.
ಸಾಯಿ ಪಲ್ಲವಿಗೂ ಸಾಕಷ್ಟು ಅಭಿಮಾನಿಗಳಿದ್ದಾರೆ. ದೊಡ್ ಪರದೆಯಲ್ಲಿ ಸಾಯ ಪಲ್ಲವಿಯನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಅಭಿಮಾನಿಗಳು ಕಾಯುತ್ತಿದ್ದಾರೆ.
ದೀಪಾವಳಿ ಹಬ್ಬದ ಪ್ರಯುಕ್ತ ಸಾಲುಸಾಲು ಸಿನಿಮಾಗಳು ಬಿಡುಗಡೆಯಾಗಿವೆ. ಇವುಗಳಲ್ಲಿ ಅಮರನ್ ಕೂಡ ಒಂದಾಗಿದೆ. ಮಿಳಿನ ಸಿನಿಮಾ ಅಮರನ್ ಕರ್ನಾಟಕದಲ್ಲಿ ಕನ್ನಡದ ಜತೆಗೆ ತಮಿಳು ಭಾಷೆಯಲ್ಲಿಯೂ ಬಿಡುಗಡೆ ಆಗುತ್ತಿದ್ದು, ಬೆಂಗಳೂರಿನಲ್ಲಿ ಮೂಲ ತಮಿಳು ವರ್ಷನ್ 400ಕ್ಕೂ ಅಧಿಕ ಶೋಗಳನ್ನು ಗಿಟ್ಟಿಸಿಕೊಂಡಿದೆ ಎಂದು ಈಗಾಗಲೇ ಹಿಂದೂಸ್ತಾನ್ ಟೈಮ್ಸ್ ಕನ್ನಡ ವರದಿ ಮಾಡಿದೆ.
ಶಿವಕಾರ್ತಿಕೇಯನ್ ಸಿನಿಮಾಗಳು
ಅಮರನ್‌ಗೆ ಮುನ್ನ ಶಿವಕಾರ್ತಿಕೇಯನ್ ಅವರು ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ - ಗೋಟ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅಯಲನ್, ಮಾವೀರನ್, ಪ್ರಿನ್ಸ್, ಡಾನ್, ಡಾಕ್ಟರ್, ಹೀರೋ, ನಮ್ಮ ವೆಟ್ಟು ಪಿಲ್ಲೈ, ಕೌಶಲ್ಯ ಕೃಷ್ಣಮೂರ್ತಿ, ಮಿಸ್ಟರ್ ಲೋಕಲ್, ಕಾನಾ, ಸೀಮಾರಾಜ, ರೆಮೊ, ರಜಿನಿಮುರುಗನ್, ವಜ್ರಕಾಯ, ಕಾಕಿ ಸತೈ, ಮಾನ್ ಕರಾಟೆ, ಮರಿನಾ ಸೇರಿದಂತೆ ಹಲವು ಸಿನಿಮಾಗಳಲ್ಲ ನಟಿಸಿದ್ದಾರೆ.