Sai Pallavi: ನಾನು ಮಾಂಸದ ತುಂಡಲ್ಲ, ಗ್ಲಾಮರಸ್‌ ಪಾತ್ರ ಮಾಡಲಾರೆ ಎಂದ ಸಹಜ ಸುಂದರಿ ಸಾಯಿ ಪಲ್ಲವಿ
ಕನ್ನಡ ಸುದ್ದಿ  /  ಮನರಂಜನೆ  /  Sai Pallavi: ನಾನು ಮಾಂಸದ ತುಂಡಲ್ಲ, ಗ್ಲಾಮರಸ್‌ ಪಾತ್ರ ಮಾಡಲಾರೆ ಎಂದ ಸಹಜ ಸುಂದರಿ ಸಾಯಿ ಪಲ್ಲವಿ

Sai Pallavi: ನಾನು ಮಾಂಸದ ತುಂಡಲ್ಲ, ಗ್ಲಾಮರಸ್‌ ಪಾತ್ರ ಮಾಡಲಾರೆ ಎಂದ ಸಹಜ ಸುಂದರಿ ಸಾಯಿ ಪಲ್ಲವಿ

Sai Pallavi: ನೀವು ನಿಮ್ಮ ಕುರಿತು ಪ್ರಚಾರ ಮಾಡಲು ಪಿಆರ್‌ ಏಜೆನ್ಸಿ ನೇಮಕ ಮಾಡಿಕೊಳ್ಳುವಿರಾ ಎಂಬ ಸಂದರ್ಶಕರ ಪ್ರಶ್ನೆಗೆ ಸಹಜ ಸುಂದರಿ ಖ್ಯಾತಿಯ ನಟಿ ಸಾಯಿ ಪಲ್ಲವಿ ಉತ್ತರಿಸಿದ್ದಾರೆ. ನಾನು ನನ್ನ ಇಮೇಜ್‌ ಬೂಸ್ಟ್‌ ಮಾಡಲು ಪಿಆರ್‌ ನೇಮಕ ಮಾಡಲಾರೆ. ಗ್ಲಾಮರಸ್‌ ಆಗಿ ಕಾಣಲು ಒಪ್ಪಲಾರೆ ಎಂದಿದ್ದಾರೆ.

ಬಿಹಾಂಡ್‌ವುಡ್ಸ್‌ ಜತೆಗಿನ ಸಂದರ್ಶನದಲ್ಲಿ ನಟಿ ಸಾಯಿ ಪಲ್ಲವಿ  ತಾನು ಆಯ್ಕೆ ಮಾಡಿಕೊಳ್ಳುವ ಪಾತ್ರಗಳ ಕುರಿತು ಮಾತನಾಡಿದ್ದಾರೆ.
ಬಿಹಾಂಡ್‌ವುಡ್ಸ್‌ ಜತೆಗಿನ ಸಂದರ್ಶನದಲ್ಲಿ ನಟಿ ಸಾಯಿ ಪಲ್ಲವಿ ತಾನು ಆಯ್ಕೆ ಮಾಡಿಕೊಳ್ಳುವ ಪಾತ್ರಗಳ ಕುರಿತು ಮಾತನಾಡಿದ್ದಾರೆ.

ನಟಿ ಸಾಯಿ ಪಲ್ಲವಿ ತನ್ನ ಸಿನಿ ಕರಿಯರ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದವರು. ಇವರು ಸಿನಿರಂಗದಲ್ಲಿ ನಿಧಾನವಾಗಿ ಮತ್ತು ಸ್ಥಿರವಾಗಿ ಸಾಗುತ್ತಿದ್ದಾರೆ. ಅವರು ಒಂದು ಬಾರಿ ಒಂದು ಸಿನಿಮಾದಲ್ಲಿ ಮಾತ್ರ ತೊಡಗಿಸಿಕೊಳ್ಳುತ್ತಾರೆ. ಹತ್ತು ಹಲವು ಸಿನಿಮಾಗಳಿಗೆ ಸಹಿ ಹಾಕಿ ಬಿಝಿಯಾಗಿ ಗಜಿಬಿಜಿಯಾಗಿ ಇರಲು ಬಯಸುವುದಿಲ್ಲ. ತನ್ನಿಂದ ಗ್ಲಾಮರಸ್‌ ಬಯಸುವಂತಹ ಪಾತ್ರಗಳನ್ನು ಒಪ್ಪುವುದಿಲ್ಲ. ತನ್ನ ಬಗ್ಗೆ ಪ್ರಚಾರ ಮಾಡಲು ಪಿಆರ್‌ ಏಜೆನ್ಸಿಯ ಸಹಾಯವನ್ನೂ ಪಡೆಯುವುದಿಲ್ಲ. ಇತ್ತೀಚಿಗೆ ಬಿಹಾಂಡ್‌ವುಡ್ಸ್‌ ಜತೆಗಿನ ಸಂದರ್ಶನದಲ್ಲಿ ನಟಿ ಸಾಯಿ ಪಲ್ಲವಿ ಸಾಕಷ್ಟು ವಿಚಾರಗಳ ಕುರಿತು ಮಾತನಾಡಿದ್ದಾರೆ.

ಸಂದರ್ಶನದಲ್ಲಿ ಸಾಯಿ ಪಲ್ಲವಿ ಹೇಳಿದ್ದಿಷ್ಟು

ಈ ಕುರಿತು ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಇವರು 2015ರಲ್ಲಿ ಮಲಯಾಳಂ ಸಿನಿಮಾ ಪ್ರೇಮಂ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು. ಪರದೆ ಮೇಲೆ ನಿರ್ದಿಷ್ಟ ಬಗೆಯ ಬಟ್ಟೆಗಳನ್ನು ಧರಿಸಬಾರದೆಂದು ಅವರು ನಿರ್ಧರಿಸಿದ್ದರು. "ಬಹಳ ಹಿಂದೆ ನಾನು ಜಾರ್ಜಿಯಾದಲ್ಲಿ ಡ್ಯಾನ್ಸ್‌ ಶೋನಲ್ಲಿ ಭಾಗವಹಿಸಿದ್ದೆ. ಆ ಡ್ಯಾನ್ಸ್‌ಗೆ ಅಗತ್ಯವಿರುವ ಉಡುಗೆ ತೊಟ್ಟಿದ್ದೆ. ಪ್ರೇಮಂ ಸಿನಿಮಾ ರಿಲೀಸ್‌ ಆದಾಗ ಜನರು ನನ್ನ ಹಳೆಯ ವಿಡಿಯೋಗಳನ್ನು, ಫೋಟೋಗಳನ್ನು ಹಂಚಿಕೊಂಡು ಕಾಮೆಂಟ್‌ ಮಾಡುತ್ತಿದ್ದರು. ಆ ವಿಡಿಯೋ ಕುರಿತು ಜನರು ಏನೇನೋ ಮಾತನಾಡಿದರು. ಇದರಿಂದ ಖೇದವಾಯಿತು. ನನ್ನನ್ನು ಮಾಂಸದ ತುಂಡಿನಂತೆ ನೋಡುವ ಪ್ರೇಕ್ಷಕರ ಆಸೆ ಪೂರೈಸಲು ನಾನು ಬಯಸುವುದಿಲ್ಲ" ಎಂದು ನಟಿ ಸಾಯಿ ಪಲ್ಲವಿ ಸಂದರ್ಶನದಲ್ಲಿ ಹೇಳಿದ್ದಾರೆ.

"ಬಾಲಿವುಡ್‌ನ ಯಾರೋ ನನಗೆ ನೀವು ಪಿಆರ್‌ ಏಜೆನ್ಸಿಯನ್ನು ನೇಮಿಸಿಕೊಳ್ಳಲು ಬಯಸುತ್ತೀರ ಎಂದು ಕೇಳಿದ್ದರು. ಇದರಿಂದ ನನ್ನ ಇಮೇಜ್‌ ಹೆಚ್ಚಿಸಿಕೊಳ್ಳಬಹುದು ಎಂದು ಅವರು ಹೇಳಿದರು. ಮೊದಲಿಗೆ ನನಗೆ ಏನೂ ಅರ್ಥವಾಗಲಿಲ್ಲ. ಈ ಏಜೆನ್ಸಿ ಏನು ಮಾಡುತ್ತದೆ ಎಂದು ಕೇಳಿದೆ. ನಾನು ಲೈಮ್‌ಲೈಟ್‌ನಲ್ಲಿ ಇಲ್ಲದೆ ಇರುವಾಗಲೂ ಅವರು ನನ್ನ ಬಗ್ಗೆ ಏನಾದರೂ ಹಾಕುತ್ತಲೇ ಇರುತ್ತಾರೆ ಎಂದು ಅವರು ಹೇಳಿದರು. ನನಗೆ ಅದು ಅಗತ್ಯವಿಲ್ಲ ಎಂದು ಹೇಳಿದೆ. ನನ್ನ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ನಾನು ಸಂದರ್ಶನಗಳನ್ನು ನೀಡುತ್ತೇನೆ. ನನ್ನ ಬಗ್ಗೆ ಜನರು ಮಾತನಾಡುವುದನ್ನು ಮುಂದುವರೆಸಿದರೆ ಬೇಸರದ ಕ್ಷಣವೆಂದು ಭಾವಿಸುವೆ. ನಾನು ಅಂತಹ ಅರ್ಥವಿಲ್ಲದ ಕೆಲಸಗಳನ್ನು ಮಾಡುವುದಿಲ್ಲ" ಎಂದು ಹೇಳಿದ್ದಾರೆ.

ಸಾಯಿ ಪಲ್ಲವಿ ನಟನೆಯ ಮುಂಬರುವ ಸಿನಿಮಾಗಳು

ಸಾಯಿ ಪಲ್ಲವಿ ಕೊನೆಯದಾಗಿ 2022ರ ವಿರಾಟ ಪರ್ವ (ತೆಲುಗು) ಮತ್ತು ಗಾರ್ಗಿ (ತಮಿಳು) ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಜುನೈದ್ ಖಾನ್ ಮತ್ತು ನಿತೇಶ್ ತಿವಾರಿಯವರ ರಾಮಾಯಣ ಚಿತ್ರದ ಮೂಲಕ ಇವರು ಬಾಲಿವುಡ್‌ಗೆ ಎಂಟ್ರಿ ನೀಡಲಿದ್ದಾರೆ. ರಣಬೀರ್‌ ಕಪೂರ್‌ ಜತೆ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಕೆಜಿಎಫ್‌ ಖ್ಯಾತಿಯ ಯಶ್‌ ರಾವಣನಾಗಿ ನಟಿಸುವ ಕುರಿತು ಸುದ್ದಿಯಿದೆ.

ಕಮಲ್ ಹಾಸನ್ ನಿರ್ಮಿಸಿದ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ತಮಿಳು ಚಲನಚಿತ್ರ ಅಮರನ್ ಅಕ್ಟೋಬರ್ 31 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಶಿವಕಾರ್ತಿಕೇಯನ್ ಜತೆ ನಟಿಸಿದ್ದಾರೆ. ಇದು ಮೋಸ್ಟ್ ಫಿಯರ್‌ಲೆಸ್: ಟ್ರೂ ಸ್ಟೋರೀಸ್ ಆಫ್ ಮಾಡರ್ನ್ ಮಿಲಿಟರಿಯ ರೂಪಾಂತರ. ಶಿವಕಾರ್ತಿಕೇಯನ್ ದಿವಂಗತ ಮೇಜರ್ ಮುಕುಂದ್ ವರದರಾಜನ್ ಪಾತ್ರದಲ್ಲಿ ಮತ್ತು ಸಾಯಿ ಪಲ್ಲವಿ ಅವರು ಮೇಜರ್‌ ಪತ್ನಿ ಇಂದು ರೆಬೆಕಾ ವರ್ಗೀಸ್‌ ಪಾತ್ರದಲ್ಲಿ ನಟಿಸಿದ್ದಾರೆ.

ನಾಗ ಚೈತನ್ಯ ಅವರ ಸಹನಟನಾಗಿ ಕಾಣಿಸಿಕೊಳ್ಳಲಿರುವ ಚಂದೂ ಮೊಂಡೇಟಿಯವರ ತಾಂಡೇಲ್ ಚಿತ್ರದ ಚಿತ್ರೀಕರಣವನ್ನೂ ಸಾಯಿ ಪಲ್ಲವಿ ಪೂರ್ಣಗೊಳಿಸಿದ್ದಾರೆ. ಶ್ರೀಕಾಕುಳಂನ ಮೀನುಗಾರರು ತಿಳಿಯದೆ ಪಾಕಿಸ್ತಾನದ ಜಲಪ್ರದೇಶಕ್ಕೆ ನುಗ್ಗಿದ ನೈಜ ಘಟನೆಗಳನ್ನು ಆಧರಿಸಿದ ಚಿತ್ರ ಇದಾಗಿದೆ. ಮೀನುಗಾರರ ಪತ್ನಿಯೊಬ್ಬರು ಅವರನ್ನು ದೇಶಕ್ಕೆ ಕರೆತರಲು ಹೋರಾಡುವ ಕಥೆ ಇದಾಗಿದೆ.

Whats_app_banner