logo
ಕನ್ನಡ ಸುದ್ದಿ  /  ಮನರಂಜನೆ  /  Captain Miller: ‘ಜೈಲರ್‌’ ಬಳಿಕ ಶಿವಣ್ಣನ ಮತ್ತೊಂದು ತಮಿಳು ಸಿನಿಮಾ ಬಿಡುಗಡೆಗೆ ದಿನಾಂಕ ಕನ್ಫರ್ಮ್‌

Captain Miller: ‘ಜೈಲರ್‌’ ಬಳಿಕ ಶಿವಣ್ಣನ ಮತ್ತೊಂದು ತಮಿಳು ಸಿನಿಮಾ ಬಿಡುಗಡೆಗೆ ದಿನಾಂಕ ಕನ್ಫರ್ಮ್‌

Dec 30, 2023 03:32 PM IST

Captain Miller: ‘ಜೈಲರ್‌’ ಬಳಿಕ ಶಿವಣ್ಣನ ಮತ್ತೊಂದು ತಮಿಳು ಸಿನಿಮಾ ಬಿಡುಗಡೆ ದಿನಾಂಕ ಕನ್ಫರ್ಮ್‌

    • ಜೈಲರ್‌ ಬಳಿಕ ಮತ್ತೆ ತಮಿಳು ಸಿನಿಮಾ ಪ್ರೇಕ್ಷಕರ ಮುಂದೆ ಎದುರಾಗಲಿದ್ದಾರೆ ಸ್ಯಾಂಡಲ್‌ವುಡ್‌ ಶಿವರಾಜ್‌ಕುಮಾರ್‌. ಈ ಸಲ ಕ್ಯಾಪ್ಟನ್‌ ಮಿಲ್ಲರ್‌ ಚಿತ್ರದೊಂದಿಗೆ ಮತ್ತೊಂದು ಕ್ರೇಜ್‌ ಸೃಷ್ಟಿಸಲಿದ್ದಾರೆ. ಈ ಚಿತ್ರದ ರಿಲೀಸ್‌ ದಿನಾಂಕ ಇದೀಗ ಬಿಡುಗಡೆ ಆಗಿದೆ. ಫ್ಯಾನ್ಸ್‌ ವಲಯದಲ್ಲಿ ಹಬ್ಬ ಶುರುವಾಗಿದೆ. 
Captain Miller: ‘ಜೈಲರ್‌’ ಬಳಿಕ ಶಿವಣ್ಣನ ಮತ್ತೊಂದು ತಮಿಳು ಸಿನಿಮಾ ಬಿಡುಗಡೆ ದಿನಾಂಕ ಕನ್ಫರ್ಮ್‌
Captain Miller: ‘ಜೈಲರ್‌’ ಬಳಿಕ ಶಿವಣ್ಣನ ಮತ್ತೊಂದು ತಮಿಳು ಸಿನಿಮಾ ಬಿಡುಗಡೆ ದಿನಾಂಕ ಕನ್ಫರ್ಮ್‌

Captain Miller: ಸೂಪರ್‌ಸ್ಟಾರ್‌ ರಜನಿಕಾಂತ್‌ ಜತೆ ತಮಿಳಿನ ಜೈಲರ್‌ ಸಿನಿಮಾದಲ್ಲಿ ಮಿಂಚು ಹರಿಸಿದ್ದ ನಟ ಶಿವರಾಜ್‌ಕುಮಾರ್‌, ಮೆಚ್ಚುಗೆಯ ಮಹಾಪೂರವನ್ನೇ ಪಡೆದಿದ್ದರು. ತಮಿಳು ಮಂದಿ ಶಿವಣ್ಣನ ಹಳೇ ಸಿನಿಮಾಗಳನ್ನೂ ಹುಡುಕಿ ಹುಡುಕಿ ನೋಡಿ ಖುಷಿಕೊಟ್ಟಿದ್ದರು. ಇದೀಗ ಅ ಸುಯೋಗ ಮತ್ತೊಮ್ಮೆ ಒದಗಿ ಬರುತ್ತಿದೆ. ಅದೂ ಕ್ಯಾಪ್ಟನ್‌ ಮಿಲ್ಲರ್‌ ಸಿನಿಮಾ ಮೂಲಕ.

ಟ್ರೆಂಡಿಂಗ್​ ಸುದ್ದಿ

ಹಿಂದಿ ಚಿತ್ರರಂಗ ಫೇಕ್‌, ನಾನು ಅಲ್ಲಿರಲಾರೆ; ಲೋಕಸಭಾ ಚುನಾವಣೆ ಬಳಿಕ ಬಾಲಿವುಡ್‌ಗೆ ಗುಡ್‌ಬೈ ಹೇಳ್ತಾರಂತೆ ಕಂಗನಾ ರಣಾವತ್‌

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ತಮಿಳು ನಟ ಧನುಷ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಫಸ್ಟ್ ಲುಕ್ ಹಾಗೂ ಟೀಸರ್ ಮೂಲಕ ಬಹಳ ಸದ್ದು ಮಾಡ್ತಿದೆ. ರಜನಿಕಾಂತ್ ಜೈಲರ್‌ನಲ್ಲಿ ನರಸಿಂಹ ಆಗಿ ದರ್ಶನ ಕೊಟ್ಟು ಕ್ರೇಜ್ ಕ್ರಿಯೇಟ್ ಮಾಡಿದ್ದ ಟಗರು ಶಿವನ ಹೊಸ ಅವತಾರ ನೋಡೋದಿಕ್ಕೆ ಫ್ಯಾನ್ಸ್ ಕಾತರರಾಗಿದ್ದಾರೆ. ಅದರಂತೆ ಅಭಿಮಾನಿಗಳಿಗೆ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದೆ ಕ್ಯಾಪ್ಟನ್‌ ಮಿಲ್ಲರ್‌ ಸಿನಿಮಾ ತಂಡ.

ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಪೊಂಗಲ್ ಹಬ್ಬದ ಸ್ಪೆಷಲ್ ಆಗಿ ಧನುಷ್- ಶಿವಣ್ಣ ಸಿನಿಮಾ ತೆರೆಗೆ ಬರಲಿದೆ. 2024, ಜನವರಿ 12ರಂದು 'ಕ್ಯಾಪ್ಟನ್ ಮಿಲ್ಲರ್' ವಿಶ್ವದಾದ್ಯಂತ ತೆರೆ ಕಾಣಲಿದೆ. ಈ ಚಿತ್ರವನ್ನು ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದಾರೆ. ಧನುಷ್ ಜೋಡಿಯಾಗಿ ಪ್ರಿಯಾಂಕಾ ಮೋಹನನ್ ನಟಿಸಿದ್ದಾರೆ. ಇದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ತೆರೆದುಕೊಳ್ಳುವ ಕಥೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ರಿಲೀಸ್ ಆಗಿರೋ ಟೀಸರ್ ಸಿನಿಪ್ರಿಯರಿಗೆ ಕಿಕ್ ಕೊಟ್ಟಿದೆ. ಧನುಷ್ ಉದ್ದ ಕೂದಲು, ಗಡ್ಡ ಮೀಸೆ ಬಿಟ್ಟು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಹಾಗೇ ಶಿವರಾಜ್‌ಕುಮಾರ್ ಕೂಡ ಕುದುರೆ ಏರಿ ಬರುವ ಸನ್ನಿವೇಶ ಅವರ ಅಭಿಮಾನಿಗಳಿಗೆ ಥ್ರಿಲ್ ಹೆಚ್ಚಿಸಿದೆ. ಸದ್ಯ ಈ ಸಿನಿಮಾಗೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಜಿವಿ ಪ್ರಕಾಶ್ ಈ ಸಿನಿಮಾಗೆ ಹಿನ್ನೆಲೆ ಸಂಗೀತ ಹಾಗೂ ಟ್ಯೂನ್‌ಗಳನ್ನು ಕಂಪೋಸ್ ಮಾಡಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ