Kaatera: ‘ಈ ಥರದ ಕಥೆ ಹೇಗೆ ಹೆಣೆಯುತ್ತಿಯೋ ನಾ ಅರಿಯೇ‘; ದೋಸ್ತನ ‘ಕಾಟೇರ’ ಸಿನಿಮಾ ವಿಮರ್ಶಿಸಿದ ಶರಣ್
ಕನ್ನಡ ಸುದ್ದಿ  /  ಮನರಂಜನೆ  /  Kaatera: ‘ಈ ಥರದ ಕಥೆ ಹೇಗೆ ಹೆಣೆಯುತ್ತಿಯೋ ನಾ ಅರಿಯೇ‘; ದೋಸ್ತನ ‘ಕಾಟೇರ’ ಸಿನಿಮಾ ವಿಮರ್ಶಿಸಿದ ಶರಣ್

Kaatera: ‘ಈ ಥರದ ಕಥೆ ಹೇಗೆ ಹೆಣೆಯುತ್ತಿಯೋ ನಾ ಅರಿಯೇ‘; ದೋಸ್ತನ ‘ಕಾಟೇರ’ ಸಿನಿಮಾ ವಿಮರ್ಶಿಸಿದ ಶರಣ್

ಕಾಟೇರ ಸಿನಿಮಾ ನೋಡಿದ ಪ್ರೇಕ್ಷಕ ಹೊರತುಪಡಿಸಿ, ಸೆಲೆಬ್ರಿಟಿ ವಲಯದಿಂದಲೂ ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ಚಿತ್ರ ನೋಡಿ ಪೋಸ್ಟ್‌ ಹಂಚಿಕೊಳ್ಳುತ್ತಿದ್ದಾರೆ. ಆ ಪೈಕಿ ನಟ ನಟ ಶರಣ್‌, ಕಾಟೇರ ಚಿತ್ರ ಕಣ್ತುಂಬಿಕೊಂಡು, ಗೆಳೆಯ ತರುಣ್‌ ಸುಧೀರ್‌ ಅವರ ನಿರ್ದೇಶನಕ್ಕೆ ಪೂರ್ಣಾಂಕ ಕೊಟ್ಟಿದ್ದಾರೆ.

Kaatera: ‘ಈ ಥರದ ಕಥೆ ಹೇಗೆ ಹೆಣೆಯುತ್ತಿಯೋ ನಾ ಅರಿಯೇ‘; ದೋಸ್ತನ ‘ಕಾಟೇರ’ ಸಿನಿಮಾ ವಿಮರ್ಶಿಸಿದ ಶರಣ್
Kaatera: ‘ಈ ಥರದ ಕಥೆ ಹೇಗೆ ಹೆಣೆಯುತ್ತಿಯೋ ನಾ ಅರಿಯೇ‘; ದೋಸ್ತನ ‘ಕಾಟೇರ’ ಸಿನಿಮಾ ವಿಮರ್ಶಿಸಿದ ಶರಣ್

Kaatera: ಬಾಕ್ಸ್‌ ಆಫೀಸ್‌ನಲ್ಲಿ ಮೊದಲ ದಿನವೇ ಬಂಗಾರದ ಬೆಳೆಯನ್ನೇ ತೆಗೆದಿದ್ದಾನೆ ಕಾಟೇರ. ಕರ್ನಾಟಕದಲ್ಲಷ್ಟೇ ಬಿಡುಗಡೆಯಾದ ಈ ಸಿನಿಮಾ, ಆರಂಭದಿಂದಲೂ ದೊಡ್ಡ ಮಟ್ಟದ ಹೈಪ್‌ ಸೃಷ್ಟಿಸಿತ್ತು. ಆ ಹೈಪ್‌ಗೆ ತಕ್ಕಂತೆ, ಗಳಿಕೆಯಲ್ಲಷ್ಟೇ ಅಲ್ಲದೆ ನೋಡುಗರಿಂದ ಮೆಚ್ಚುಗೆ ಮಾತುಗಳನ್ನೇ ಪಡೆದುಕೊಳ್ಳುತ್ತಿದೆ. ಮುಂಗಡ ಟಿಕೆಟ್‌ ಬುಕಿಂಗ್‌ ವಿಚಾರದಲ್ಲಿ ದಾಖಲೆ ಬರೆದ ಕಾಟೇರ, ಅದಾದ ಬಳಿಕ ವಾರಾಂತ್ಯದಲ್ಲಿ ಬಹುತೇಕ ಎಲ್ಲ ಶೋಗಳು ಹೌಸ್‌ ಫುಲ್‌ ಆಗಿಯೇ ಪ್ರದರ್ಶನ ಕಾಣಲಿವೆ.

ಸಿನಿಮಾ ನೋಡಿದ ಪ್ರೇಕ್ಷಕ ಹೊರತುಪಡಿಸಿ, ಸೆಲೆಬ್ರಿಟಿ ವಲಯದಿಂದಲೂ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ಸಿನಿಮಾ ನೋಡಿ ಪೋಸ್ಟ್‌ ಹಂಚಿಕೊಳ್ಳುತ್ತಿದ್ದಾರೆ. ಆ ಪೈಕಿ ನಟ ನಟ ಶರಣ್‌, ಕಾಟೇರ ಚಿತ್ರ ಕಣ್ತುಂಬಿಕೊಂಡು, ಗೆಳೆಯ ತರುಣ್‌ ಸುಧೀರ್‌ ಅವರ ನಿರ್ದೇಶನಕ್ಕೆ ಪೂರ್ಣಾಂಕ ಕೊಟ್ಟಿದ್ದಾರೆ. ದರ್ಶನ್‌ ಅವರ ಮಾಸ್‌ ಅವತಾರಕ್ಕೂ ಜೈ ಎಂದಿದ್ದಾರೆ. ಹೀಗಿದೆ ಶರಣ್‌ ಅವರ ರಿವ್ಯೂವ್.‌

ಶರಣ್‌ ಕಂಡಂತೆ ಕಾಟೇರ..

"ಕಾಟೇರ ಚಿತ್ರಮಂದಿರದಲ್ಲಿ ನೋಡಿ ಬಹಳ ಇಷ್ಟಪಟ್ಟ ನನ್ನ ಈ ವರ್ಷದ ಕೊನೆಯ ಚಿತ್ರ. ಎ ಫರ್ಫೆಕ್ಟ್‌ ಎಂಡ್‌ ಟು ಮೈ 2023. ಎಲ್ಲ ಸಿನಿಪ್ರಿಯರಿಗೂ ಮತ್ತು ಅದರಲ್ಲೂ ದರ್ಶನ್‌ ಸರ್‌ ಅಭಿಮಾನಿಗಳಿಗೂ ಇದೊಂದು ಭರ್ಜರಿ ಸಿನಿಮಾ ಹಬ್ಬವಾಗಲಿದೆ ಎಂದರೆ ತಪ್ಪಾಗಲಾರದು.

ದರ್ಶನ್‌ ಸರ್‌ ಕರ್ಮಷಿಯಲ್‌ ಸಿನಿಮಾಗಳನ್ನೂ ಒಂದು ಹೆಜ್ಜೆ ಮೀರಿದ ನಟನೆ ಮಾಡುವಲ್ಲಿ ಎತ್ತಿದ ಕೈ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕಮರ್ಷಿಯಲ್‌ ಸಿನಿಮಾದಲ್ಲೂ ಒಂದೊಳ್ಳೆ ಸಂದೇಶ ನೀಡುವ ಜವಾಬ್ದಾರಿಯನ್ನು ಅವರು ತುಂಬ ಅಚ್ಚುಕಟ್ಟಾಗಿ ಹಾಗೆಯೇ ತುಂಬಾ ಶ್ರದ್ಧೆಯಿಂದ ನಿರ್ವಹಿಸಿದ್ದಾರೆ. ರಾಕ್‌ಲೈನ್‌ ಪ್ರೊಡಕ್ಷನ್ಸ್‌ ಇಂಥ ಒಂದು ಕಥೆಯನ್ನು ಒಪ್ಪಿಕೊಂಡು ತೆರೆಮೇಲೆ ಮನಮುಟ್ಟುವಂತೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸ ಬಿಗ್‌ ಕಂಗ್ರಾಜುಲೇಷನ್ಸ್‌ ಆನ್‌ ಯುವರ್‌ ವರ್ಸಟ್ಯಾಲಿಟಿ ಇನ್‌ ಮೇಕಿಂಗ್‌ ಗುಡ್‌ ಫಿಲಂಸ್‌ ಬ್ಯಾಕ್‌ ಟು ಬ್ಯಾಕ್.

ನಮ್ಮ ತರುಣ್‌, ನಿನ್ನ ಪ್ರತಿಯೊಂದು ಹೆಜ್ಜೆಯನ್ನು ಬಹಳ ಹತ್ತಿರದಿಂದ ಕಂಡವನು ನಾನು. ಬಹಳ ಚಿಕ್ಕ ವಯಸ್ಸಿನಲ್ಲೇ ಅತ್ಯಂತ ಪ್ರಭಾವಶಾಲಿ ವಿಷಯವನ್ನು ಅಷ್ಟೇ ಪರಿಣಾಮಕಾರಿಯಾಗಿ ಅದು ಹೇಗೆ ಕಥೆಯನ್ನು ಹೆಣೆಯುತ್ತಿಯೋ ನಾ ಅರಿಯೇ. ಹರಿಕೃಷ್ಣ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಅದ್ಬುತವಾಗಿದೆ. ಸುಧಾಕರ್‌ ಅವರ ಚಾತುರ್ಯದ ಛಾಯಾಗ್ರಹಣ, ನಮ್ಮ ಕನ್ನಡದ ಆಸ್ತಿ ಮಾಸ್ತಿಯವರ ಹರಿತವಾದ ಸಂಭಾಷಣೆಗಳು , ಕೆ. ಎಂ ಪ್ರಕಾಶ್‌ ಅವರ ಸಂಕಲನ, ಜಡೇಶ್‌ ಕುಮಾರ್‌ ಹಾಗೂ ಇಡೀ ತಂಡದ ಪರಿಶ್ರಮ ತೆರೆಯ ಮೇಲೆ ಎದ್ದು ಕಾಣಿಸುತ್ತಿದೆ.

ಇನ್ನು ತಾರಾಗಣ ಅನನ್ಯ! ಪ್ರತಿಭಾವಂತರ ಸಮ್ಮಿಲನ. ನಮ್ಮ ಶೃತಿ ಇರಬಹುದು, ಅವಿನಾಶ್‌ ರವರು ಅಚ್ಯುತ್‌ ಅವರು ನೆನಪಿನಲ್ಲಿ ಉಳಿಯುವಂತಹ ಪಾತ್ರಗಳಲ್ಲಿ ಮಿನುಗುತ್ತಾರೆ ಅದರಲ್ಲೂ ನಮ್ಮ ಬಿರಾದಾರ್‌ ಅವರ ಪಾತ್‌ ಬಹಳ ಮೆಚ್ಚುಗೆಯಾಗುವಂಥದ್ದು.

ಇನ್ನೊಂದು ಮನಸ್ಸಿಗೆ ಹತ್ತಿರವಾಗುವಂಥ ಅಂಶವೆಂದರೆ ಬಹಳಷ್ಟು ರಂಗ ಪ್ರತಿಭೆಗಳ ಅನಾವರಣ. ತಮ್ಮ ಪಾತ್ರಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಲಾಸ್ಟ್‌ ಬಟ್‌ ನಾಟ್‌ ದಿ ಲೀಸ್ಟ್‌. ಆರಾಧನಾ ರಾಮ್ ಮೊದಲನೇ ಸಿನಿಮಾದಲ್ಲಿಯೇ ಸ್ಟಾರ್‌ ನಟಿಯಾಗಿ ಹೊರಹೊಮ್ಮಿದ್ದಾರೆ. ನಮ್ಮ ಕನ್ನಡ ಚಿತ್ರರಂಗಕ್ಕೆ ಒಬ್ಬ ಭರವಸೆಯಯುಳ್ಳ ನಾಯಕ ನಟಿ ದೊರಕಿದ್ದಾರೆ. ಕಾಟೇರ ಚಿತ್ರದ ಮೂಲಕ ವೆಲ್‌ಕಮ್‌ ಟು ಸ್ಯಾಂಡಲ್‌ವುಡ್‌.

ಮತ್ತೊಮ್ಮೆ ಇಡೀ ಕಾಟೇರ ಚಿತ್ರ ತಂಡಕ್ಕೆ ಶುಭ ಹಾರೈಸುತ್ತ, ಇಂತಹ ಸದಭಿರುಚಿಯ ಚಿತ್ರ ನೀಡಿದ್ದಕ್ಕಾಗಿ ಧನ್ಯವಾದಗಳು.

Whats_app_banner