logo
ಕನ್ನಡ ಸುದ್ದಿ  /  ಮನರಂಜನೆ  /  Ramya Krishnan: ಇಷ್ಟವಿಲ್ಲದಿದ್ದರೂ ಕಷ್ಟ ಪಟ್ಟು ನಟಿಸಿದ್ದೆ; ಸೌಂದರ್ಯ ಕೆನ್ನೆ ಮೇಲೆ ಕಾಲಿಟ್ಟ ದೃಶ್ಯದ ಬಗ್ಗೆ ರಮ್ಯಕೃಷ್ಣನ್‌ ಬೇಸರದ ಮಾತು

Ramya Krishnan: ಇಷ್ಟವಿಲ್ಲದಿದ್ದರೂ ಕಷ್ಟ ಪಟ್ಟು ನಟಿಸಿದ್ದೆ; ಸೌಂದರ್ಯ ಕೆನ್ನೆ ಮೇಲೆ ಕಾಲಿಟ್ಟ ದೃಶ್ಯದ ಬಗ್ಗೆ ರಮ್ಯಕೃಷ್ಣನ್‌ ಬೇಸರದ ಮಾತು

Rakshitha Sowmya HT Kannada

Aug 18, 2023 07:30 AM IST

google News

'ಪಡಯಪ್ಪ' ಸಿನಿಮಾದಲ್ಲಿ ಸೌಂದರ್ಯ, ರಮ್ಯಕೃಷ್ಣನ್

  • ಇಷ್ಟವಿಲ್ಲದಿದ್ದರೂ ಆ ಶಾಟ್‌ ಮಾಡಬೇಕಾಯ್ತು. ಎಲ್ಲಾ ದೇವರನ್ನು ಮನಸ್ಸಿನಲ್ಲಿ ನೆನಪಿಸಿಕೊಂಡು ಸೌಂದರ್ಯ ಅವರ ಮೇಲೆ ಕಾಲಿಟ್ಟೆ. ಆ ದೃಶ್ಯದಲ್ಲಿ ನಟಿಸಿದ ಕೆಲವು ದಿನಗಳ ನಂತರ ನಾನು ಅದೇ ಬೇಸರದಲ್ಲಿದ್ದೆ ಎಂದು ರಮ್ಯಕೃಷ್ಣನ್‌ ಹೇಳಿಕೊಂಡಿದ್ದರು. 

'ಪಡಯಪ್ಪ' ಸಿನಿಮಾದಲ್ಲಿ ಸೌಂದರ್ಯ, ರಮ್ಯಕೃಷ್ಣನ್
'ಪಡಯಪ್ಪ' ಸಿನಿಮಾದಲ್ಲಿ ಸೌಂದರ್ಯ, ರಮ್ಯಕೃಷ್ಣನ್ (PC: Shalimar Telugu & Hindi Movies YouTube)

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸೌಂದರ್ಯ ಹಾಗೂ ರಮ್ಯಕೃಷ್ಣನ್‌ ಇಬ್ಬರೂ ಹೆಸರು ಮಾಡಿರುವ ನಟಿಯರು. ಸೌಂದರ್ಯ ಇಂದು ನಮ್ಮೊಂದಿಗೆ ಇಲ್ಲ. ಅವರು ನಟಿಸಿರುವ ಸಿನಿಮಾಗಳು, ಅವರ ಪಾತ್ರವನ್ನು ಅಭಿಮಾನಿಗಳು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಸೌಂದರ್ಯ , ರಮ್ಯಕೃಷ್ಣನ್‌ ಇಬ್ಬರೂ ರಜನಿಕಾಂತ್‌ ಜೊತೆ 'ಪಡಯಪ್ಪ' ಸಿನಿಮಾದಲ್ಲಿ ನಟಿಸಿದ್ದರು.

1999 ರಂದು ತೆರೆ ಕಂಡಿದ್ದ ಪಡಯಪ್ಪ ಸಿನಿಮಾ

ಪಡಯಪ್ಪ ಸಿನಿಮಾ 10 ಏಪ್ರಿಲ್‌ 1999 ರಂದು ತೆರೆ ಕಂಡಿತ್ತು. ಅರುಣಾಚಲ ಸಿನಿಕ್ರಿಯೇಷನ್ಸ್‌ ಬ್ಯಾನರ್‌ ಅಡಿ ಈ ಚಿತ್ರವನ್ನು ಕೆಎಸ್‌ ರವಿಕುಮಾರ್‌ ಕಥೆ ಬರೆದು ನಿರ್ದೇಶಿಸಿದ್ದರು. ಚಿತ್ರದ ಹಾಡುಗಳಿಗೆ ಎಆರ್‌ ರೆಹಮಾನ್‌ ಸಂಗೀತ ನೀಡಿದ್ದರು. ತೆಲುಗಿನಲ್ಲಿ ಈ ಸಿನಿಮಾ ಏಕಕಾಲದಲ್ಲಿ ನರಸಿಂಹ ಹೆಸರಿನಲ್ಲಿ ತೆರೆ ಕಂಡಿತ್ತು. ಶಿವಾಜಿ ಗಣೇಶನ್‌, ಲಕ್ಷ್ಮಿ, ಸಿತಾರಾ, ನಾಸರ್‌, ರಾಧಾ ರವಿ, ಸತ್ಯಪ್ರಿಯ, ಪ್ರಕಾಶ್‌ ರೈ ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದರು.

ನಾಯಕ ಅರುಣ್‌ ಪಡಯಪ್ಪ (ರಜನಿಕಾಂತ್‌)ನನ್ನು ನೀಲಾಂಬರಿ (ರಮ್ಯಕೃಷ್ಣನ್‌) ಪ್ರೀತಿಸುತ್ತಾಳೆ. ಆದರೆ ಪಡಯಪ್ಪನಿಗೆ ಆ ಮನೆಯಲ್ಲಿ ಕೆಲಸ ಮಾಡುವ ವಸುಂಧರ ( ಸೌಂದರ್ಯ) ಮೇಲೆ ಲವ್‌ ಆಗುತ್ತದೆ. ಹಿರಿಯರನ್ನು ಒಪ್ಪಿಸಿ ಪಡಯಪ್ಪ, ವಸುಂಧರಳನ್ನು ಮದುವೆ ಆಗಲು ಒಪ್ಪಿಸುತ್ತಾನೆ. ಆದರೆ ಇದನ್ನು ಸಹಿಸದ ನೀಲಾಂಬರಿ ಪಡಯಪ್ಪ ಹಾಗೂ ವಸುಂಧರ ಮೇಲೆ ಹಗೆ ಸಾಧಿಸುತ್ತಾಳೆ. ವಸುಂಧರಳನ್ನು ಕರೆದು ಕಾಲು ಒತ್ತುವಂತೆ ಹೇಳುವ ನೀಲಾಂಬರಿ ಆಕೆಯ ಗಲ್ಲದ ಮೇಲೆ ಕಾಲಿಡುವ ದೃಶ್ಯವೊಂದು ಈ ಚಿತ್ರದಲ್ಲಿದೆ. ಈ ದೃಶ್ಯದ ಬಗ್ಗೆ ಒಮ್ಮೆ ರಮ್ಯಕೃಷ್ಣನ್‌ ಮಾತನಾಡಿದ್ದರು.

ಬಹಳ ಕಷ್ಟಪಟ್ಟು ಆ ದೃಶ್ಯದಲ್ಲಿ ನಟಿಸಿದ್ದೆ

ನನಗೆ ಸಿಗಬೇಕಿದ್ದದ್ದನ್ನು ಕಸಿದುಕೊಳ್ಳುವ ವಸುಂಧರ ಮೇಲೆ ಸೇಡು ತೀರಿಸಿಕೊಳ್ಳಲು ಆಕೆಯ ಗಲ್ಲ, ಕೆನ್ನೆಯ ಮೇಲೆ ಕಾಲು ಇಟ್ಟು ದುರಹಂಕಾರಿ ವರ್ತನೆ ದೃಶ್ಯದಲ್ಲಿ ನಟಿಸಬೇಕಿತ್ತು. ಆದರೆ ನನ್ನಿಂದ ಅದು ಸಾಧ್ಯವಾಗುತ್ತಿರಲಿಲ್ಲ. ಸಿನಿಮಾಗಾಗಿ ಆ ದೃಶ್ಯ ಬಹಳ ಅವಶ್ಯಕತೆ ಇತ್ತು. ಕೊನೆಗೆ ಇಷ್ಟವಿಲ್ಲದಿದ್ದರೂ ಆ ಶಾಟ್‌ ಮಾಡಬೇಕಾಯ್ತು. ಎಲ್ಲಾ ದೇವರನ್ನು ಮನಸ್ಸಿನಲ್ಲಿ ನೆನಪಿಸಿಕೊಂಡು ಸೌಂದರ್ಯ ಅವರ ಮೇಲೆ ಕಾಲಿಟ್ಟೆ. ಆ ದೃಶ್ಯದಲ್ಲಿ ನಟಿಸಿದ ಕೆಲವು ದಿನಗಳ ನಂತರ ನಾನು ಅದೇ ಬೇಸರದಲ್ಲಿದ್ದೆ. ಒಂದು ವೇಳೆ ನಿನಗೆ ಯಾವ ಪಾತ್ರ ಬೇಕು ಎಂದು ನಿರ್ದೇಶಕರು ಕೇಳಿದ್ದರೆ, ನಾನು ಥಟ್‌ ಎಂದು ಸೌಂದರ್ಯ ಪಾತ್ರವನ್ನೇ ಆರಿಸಿಕೊಳ್ಳುತ್ತಿದ್ದೆ'' ಎಂದು ಹೇಳಿದ್ದರು.

ಈ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಸೌಂದರ್ಯ ಹಾಗೂ ರಮ್ಯಕೃಷ್ಣ್‌ ನಡುವೆ ಜಗಳ ಆಗಿತ್ತೆಂದೂ ಸುದ್ದಿ ಇದೆ. ಆದರೆ ಈ ವಿಚಾರವನ್ನು ಇಬ್ಬರೂ ನಟಿಯರು ನಿರಾಕರಿಸಿದ್ದರು. ರಮ್ಯಕೃಷ್ಣನ್‌ಗೆ ಶ್ರೀಮಂತ ಯುವತಿಯ ಪಾತ್ರ ನೀಡಿ, ಸೌಂದರ್ಯಗೆ ಮನೆ ಕೆಲಸದವಳ ಪಾತ್ರ ನೀಡಿದ್ದರ ಬಗ್ಗೆ ಅವರ ಅಭಿಮಾನಿಗಳಿಗೂ ಬೇಸರ ಇದ್ದಿದ್ಧಾಗಿ ಆಗ ಗಾಸಿಪ್‌ ಹರಿದಾಡಿತ್ತು. ಆದರೆ ಸೌಂದರ್ಯ ಹಾಗೂ ರಮ್ಯಕೃಷ್ಣನ್‌ ಎಷ್ಟೇ ದೊಡ್ಡ ನಟಿಯರಾಗಿದ್ದರೂ ಇಬ್ಬರ ನಡುವೆ ಒಳ್ಳೆ ಫ್ರೆಂಡ್‌ಶಿಪ್‌ ಇತ್ತು ಅನ್ನೋದು ಸಿನಿಮಂದಿಯ ಮಾತು. ಸೌಂದರ್ಯ ನಿಧನರಾದಾಗ ರಮ್ಯಕೃಷ್ಣನ್‌ ಬಹಳ ದುಃಖ ವ್ಯಕ್ತಪಡಿಸಿದ್ದರು.

ರಮ್ಯಕೃಷ್ಣನ್‌ ಸಿನಿಮಾಗಳ ವಿಚಾರಕ್ಕೆ ಬರುವುದಾರೆ, ಕಳೆದ ವರ್ಷ ಅವರು ನಟಿಸಿದ್ದ 'ರಂಗ ಮಾರ್ತಾಂಡ' ಚಿತ್ರ ರಿಲೀಸ್‌ ಆಗಿತ್ತು. ಮಹೇಶ್‌ ಬಾಬು ಅಭಿನಯದ 28ನೇ ಸಿನಿಮಾ 'ಗುಂಟೂರು ಕಾರಂ'ನಲ್ಲಿ ರಮ್ಯ ಕೃಷ್ಣನ್‌ ನಟಿಸುತ್ತಿದ್ದಾರೆ. ಈ ಸಿನಿಮಾ ಮಂದಿನ ವರ್ಷ ತೆರೆ ಕಾಣಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ