Sandalwood News: ಸಮರ್ಜಿತ್‌ಗೆ ಜೋಡಿಯಾದ ಸಾನ್ಯಾ ಅಯ್ಯರ್; ಮಗನ ಮೊದಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರಾ ಇಂದ್ರಜಿತ್ ಲಂಕೇಶ್?
ಸಾನ್ಯಾ ಅಯ್ಯರ್, ಇತ್ತೀಚೆಗೆ ತಮ್ಮ ಉದ್ದ ಕೂದಲಿಗೆ ಕತ್ತರಿ ಹಾಕಿದ್ದರು. ಆದಷ್ಟು ಬೇಗ ಒಂದು ಗುಡ್ ನ್ಯೂಸ್ ಕೊಡುತ್ತೇನೆ ಎಂದು ಹೇಳಿದ್ದರು. ಹಾಗೇ ಅಮ್ಮನೊಂದಿಗೆ ಬಾಂಬೆಗೆ ಹೋಗಿ ಅಲ್ಲಿ ಫೋಟೋಶೂಟ್ ಮಾಡಿಸಿದ್ದರು.
ಬಾಲನಟಿಯಾಗಿ ಬಣ್ಣದ ಬದುಕು ಆರಂಭಿಸಿದ್ದ ಸಾನ್ಯಾ ಅಯ್ಯರ್ ಈಗ ನಾಯಕಿಯಾಗಿಯೂ ಮಿಂಚಲು ಹೊರಟಿದ್ಧಾರೆ. ಪುಟ್ಟ ಗೌರಿ ಮದುವೆ ಧಾರಾವಾಹಿ ಮೂಲಕ ವೀಕ್ಷಕರಿಗೆ ಪರಿಚಯ ಆದ ಸಾನ್ಯಾ ಅಯ್ಯರ್, ಕೆಲವು ದಿನಗಳ ಗ್ಯಾಪ್ ಬಳಿಕ ಮತ್ತೆ ಸುದ್ದಿಯಲ್ಲಿದ್ಧಾರೆ. ಅಂದು ತಮ್ಮ ಮುಗ್ಧತೆ, ನಟನೆಯಿಂದಲೇ ಸುದ್ದಿಯಾಗಿದ್ದ ಸಾನ್ಯಾ ಈಗ ಗ್ಲಾಮರ್ ಲುಕ್‌ನಿಂದಲೇ ಪ್ರತಿದಿನ ಟಾಕ್ ಆಫ್ ದಿ ಟೌನ್ ಎನಿಸಿದ್ದಾರೆ.
ಸಮರ್ಜಿತ್‌ಗೆ ಜೋಡಿಯಾದ ಸಾನ್ಯಾ ಅಯ್ಯರ್
ಸಾನ್ಯಾ ಅಯ್ಯರ್‌ಗೆ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚಬೇಕೆಂಬ ಆಸೆ ಇರುವುದಾಗಿ ಆಕೆಯ ತಾಯಿ ದೀಪಾ ಅಯ್ಯರ್ ಅನೇಕ ಬಾರಿ ಹೇಳಿದ್ದರು. ಇದೀಗ ಸಾನ್ಯಾ ಹಾಗೂ ದೀಪಾ ಅಯ್ಯರ್ ಕನಸು ನನಸಾಗುವ ದಿನ ಹತ್ತಿರ ಬಂದಿದೆ. ಸಾನ್ಯಾ ಅಯ್ಯರ್ ಸಿನಿಮಾವೊಂದರಲ್ಲಿ ನಾಯಕಿಯಾಗಿ ನಟಿಸಲು ಆಯ್ಕೆ ಆಗಿದ್ದಾರೆ. ಸಾನ್ಯಾ ಅಯ್ಯರ್, ನಾಯಕಿಯಾಗಿ ನಟಿಸುತ್ತಿರುವ ವಿಚಾರ ತಿಳಿದು ಅವರ ಅಭಿಮಾನಿಗಳು ಕೂಡಾ ಖುಷಿ ಆಗಿದ್ದಾರೆ. ಹೀರೋ ಯಾರು, ಡೈರೆಕ್ಷನ್ ಯಾರದ್ದು? ಸಿನಿಮಾ ಹೆಸರೇನು ಎಂದು ನೂರಾರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಅಂದಹಾಗೆ ಸಾನ್ಯಾ ಅಯ್ಯರ್, ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್‌ಗೆ ನಾಯಕಿಯಾಗಿ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಮರ್ಜಿತ್ ಲಂಕೇಶ್ ಚಿತ್ರರಂಗಕ್ಕೆ ಬರುವ ವಿಚಾರವನ್ನು ಈಗಾಗಲೇ ಅಧಿಕೃತವಾಗಿ ಅನೌನ್ಸ್ ಮಾಡಲಾಗಿದೆ. ಇಂದ್ರಜಿತ್ ಲಂಕೇಶ್ ಅವರೇ ಮಗನ ಚೊಚ್ಚಲ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಅಧಿಕೃತವಾಗಿ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಸದ್ಯಕ್ಕೆ ಸಿನಿಮಾ ಪ್ರೀ ಪ್ರೊಡಕ್ಷನ್ ಹಂತದಲ್ಲಿದ್ದು ಶೀಘ್ರದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹೊರ ಬೀಳಲಿದೆ.
ಸಾನ್ಯಾ ಸಿನಿಮಾಗಾಗಿ ಕಾಯುತ್ತಿರುವ ಫ್ಯಾನ್ಸ್
ಸಾನ್ಯಾ ಅಯ್ಯರ್, ಇತ್ತೀಚೆಗೆ ತಮ್ಮ ಉದ್ದ ಕೂದಲಿಗೆ ಕತ್ತರಿ ಹಾಕಿದ್ದರು. ಆದಷ್ಟು ಬೇಗ ಒಂದು ಗುಡ್ ನ್ಯೂಸ್ ಕೊಡುತ್ತೇನೆ ಎಂದು ಹೇಳಿದ್ದರು. ಹಾಗೇ ಅಮ್ಮನೊಂದಿಗೆ ಬಾಂಬೆಗೆ ಹೋಗಿ ಅಲ್ಲಿ ಫೋಟೋಶೂಟ್ ಮಾಡಿಸಿದ್ದರು. ಫೋಟೋಶೂಟ್, ರೀಲ್ಸ್, ವರ್ಕೌಟ್‌ನ ಅನೇಕ ವಿಡಿಯೋಗಳನ್ನು ಸಾನ್ಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕ್ಯೂಟ್ ಡಾಲ್ ಸಾನ್ಯಾಳನ್ನು ತೆರೆ ಮೇಲೆ ನೋಡಲು ಸಿನಿಪ್ರಿಯರು ಕಾಯುತ್ತಿದ್ದಾರೆ.
ಸಮರ್ಜಿತ್ ಹಾಗೂ ಸಾನ್ಯಾ ಅಯ್ಯರ್ ಜೊತೆಯಾಗಿ ನಟಿಸುತ್ತಿರುವ ಸಿನಿಮಾವನ್ನು ಸೆಪ್ಟೆಂಬರ್ 4 ರಂದು ಲಾಂಚ್ ಮಾಡಲಾಗುವುದು ಎಂದು ಮಾಹಿತಿ ತಿಳಿದು ಬಂದಿದೆ. ಇದೊಂದು ನೈಜ ಘಟನೆ ಆಧರಿಸಿದ ಚಿತ್ರವಾಗಿದ್ದು ಸಿನಿಮಾಗಾಗಿ ಸಮರ್ಜಿತ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರಂತೆ. ಸಾಹಸ , ಡ್ಯಾನ್ಸ್ ತರಬೇತಿಗಾಗಿ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಕಲಿತು ಬಂದಿದ್ದಾರೆ. ಸಾನ್ಯಾ ಅಯ್ಯರ್ ಹಾಗೂ ಸಮರ್ಜಿತ್ ಲಂಕೇಶ್ ಕೆಮಿಸ್ಟ್ರಿ ತೆರೆ ಮೇಲೆ ಹೇಗೆ ವರ್ಕೌಟ್ ಆಗಲಿದೆ ಕಾದು ನೋಡಬೇಕು.