logo
ಕನ್ನಡ ಸುದ್ದಿ  /  ಮನರಂಜನೆ  /  Lal Salaam: ಐಶ್ವರ್ಯಾಗೆ ಆಲ್‌ ದಿ ಬೆಸ್ಟ್‌ ಹೇಳಿದ ಸೂಪರ್‌ಸ್ಟಾರ್‌ ರಜನಿಕಾಂತ್‌ ಮತ್ತು ಮಾಜಿ ಪತಿ ಧನುಷ್‌

Lal Salaam: ಐಶ್ವರ್ಯಾಗೆ ಆಲ್‌ ದಿ ಬೆಸ್ಟ್‌ ಹೇಳಿದ ಸೂಪರ್‌ಸ್ಟಾರ್‌ ರಜನಿಕಾಂತ್‌ ಮತ್ತು ಮಾಜಿ ಪತಿ ಧನುಷ್‌

Praveen Chandra B HT Kannada

Feb 09, 2024 11:58 AM IST

Lal Salaam: ಐಶ್ವರ್ಯಾಗೆ ಆಲ್‌ ದಿ ಬೆಸ್ಟ್‌ ಹೇಳಿದ ರಜನಿಕಾಂತ್‌ ಮತ್ತು ಧನುಷ್‌

    • Lal Salaam: ಐಶ್ವರ್ಯಾ ರಜನಿಕಾಂತ್‌ ನಿರ್ದೇಶನದ ಲಾಲ್‌ ಸಲಾಮ್‌ ಸಿನಿಮಾ ಇಂದು ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ರಜನಿಕಾಂತ್‌ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ವಿಷ್ಣು ವಿಷಲ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಗಳ ಸಿನಿಮಾಕ್ಕೆ ರಜನಿಕಾಂತ್‌, ಮಾಜಿ ಪತ್ನಿ ಸಿನಿಮಾಕ್ಕೆ ಧನುಷ್‌ ಆಲ್‌ ದಿ ಬೆಸ್ಟ್‌ ಹೇಳಿದ್ದಾರೆ.
Lal Salaam: ಐಶ್ವರ್ಯಾಗೆ ಆಲ್‌ ದಿ ಬೆಸ್ಟ್‌ ಹೇಳಿದ ರಜನಿಕಾಂತ್‌ ಮತ್ತು ಧನುಷ್‌
Lal Salaam: ಐಶ್ವರ್ಯಾಗೆ ಆಲ್‌ ದಿ ಬೆಸ್ಟ್‌ ಹೇಳಿದ ರಜನಿಕಾಂತ್‌ ಮತ್ತು ಧನುಷ್‌

ಬೆಂಗಳೂರು: ಐಶ್ವರ್ಯಾ ರಜನಿಕಾಂತ್‌ ನಿರ್ದೇಶನದ ಲಾಲ್‌ ಸಲಾಮ್‌ ಸಿನಿಮಾ ಇಂದು ಬಿಡುಗಡೆಯಾಗಿದೆ. ವಿಷ್ಣು ವಿಶಾಲ್‌ ಮತ್ತು ರಜಿನಿಕಾಂತ್‌ ನಟನೆಯ ಈ ಚಿತ್ರದ ಕುರಿತು ನಿರೀಕ್ಷೆ ಹೆಚ್ಚಾಗಿದೆ. ರಜನಿಕಾಂತ್‌ ಮತ್ತು ಧನುಷ್‌ ಇಬ್ಬರೂ ತಮ್ಮ ಎಕ್ಸ್‌ ಹ್ಯಾಂಡಲ್‌ಗಳಲ್ಲಿ ಐಶ್ವರ್ಯಾಗೆ ಶುಭಾಶಯ ಹೇಳಿದ್ದಾರೆ. ರಜನಿಕಾಂತ್‌ ಅವರು ಅನ್‌ಸೀನ್‌ ಚಿತ್ರವನ್ನು ಬಿಡುಗಡೆ ಮಾಡುವ ಮೂಲಕ ಮಗಳಿಗೆ ಶುಭಾಶಯ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

chef ಚಿದಂಬರ ಚಿತ್ರದ ಮೊದಲ ಹಾಡು ರಿಲೀಸ್;‌ ಶೀರ್ಷಿಕೆ ಗೀತೆಗೆ ಧ್ವನಿಯಾದ ನಾಯಕ ಅನಿರುದ್ಧ ಜತ್ಕರ್

Brundavana Serial: ಪುಷ್ಪಾಗೆ ಕಾಲ್‌ ಮಾಡಿ ಚಾಲೆಂಜ್‌ ಮಾಡುವ ಭಾರ್ಗವಿ; ಬೃಂದಾವನಕ್ಕೆ ಕೇಡು ತಪ್ಪಿದಲ್ವಾ?

ಅಮೃತಧಾರೆ ಧಾರಾವಾಹಿ ಕಥೆ: ಜೀವನ ಸಂಗಾತಿ ಬಿಸ್ನೆಸ್‌ ಆರಂಭಿಸಿದ ಜೀವನ್‌; ಕೆಂಚನ ಅಟ್ಟಹಾಸಕ್ಕೆ ಬೆದರಿದ ದಿವಾನ್‌ ಕುಟುಂಬ

ಬ್ಲಿಂಕ್‌ ಕನ್ನಡ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ; ಅಮೆಜಾನ್‌ ಪ್ರೈಮ್‌ನಲ್ಲಿರುವ ಈ ಸಿನಿಮಾ ನಿಮಗೆ ಕಾಣಿಸುತ್ತಾ ನೋಡಿ

ರಜನಿಕಾಂತ್‌ ಸಂದೇಶ

ತಮಿಳು ಭಾಷೆಯಲ್ಲಿ ರಜನಿಕಾಂತ್‌ ಸಂದೇಶ ಬರೆದಿದ್ದಾರೆ. "ನನ್ನ ಪ್ರೀತಿಯ ಮಗಳು ಐಶ್ವರ್ಯಾಳಿಗೆ ಪ್ರೀತಿ ತುಂಬಿದ ಶುಭ ಹಾರೈಕೆಗಳು. ನಿಮ್ಮ ಲಾಲ್‌ ಸಲಾಮ್‌ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿ ಎಂದು ಹಾರೈಸುವೆ" ಎಂದು ಅವರು ಬರೆದಿದ್ದಾರೆ. ಇದೇ ಸಮಯದಲ್ಲಿ ಅಪ್ಪ ಮಗಳ ಫೋಟೋ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಜನಿಕಾಂತ್‌ ಅವರು ವೀಲ್‌ ಚೇರ್‌ನಲ್ಲಿ ಕಾಲು ಮಡಚಿಕೊಂಡು ಕುಳಿತರೆ, ಮಗಳು ಐಶ್ವರ್ಯಾ ಆತನ ಹಿಂದೆ ನಿಂತಿದ್ದಾರೆ. ಇಬ್ಬರ ಮುಖದಲ್ಲೂ ನಗುವಿದೆ.

ಧನುಷ್‌ ಕಡೆಯಿದಲೂ ಸಂದೇಶ

ಐಶ್ವರ್ಯಾ ರಜನಿಕಾಂತ್‌ ಅವರ ಮಾಜಿ ಪತಿ ಚಿತ್ರ ನಟ ಧನುಷ್‌ ಕೂಡ ಶುಭಾಶಯ ಹೇಳಿದ್ದಾರೆ. "ಇಂದಿನಿಂದ ಲಾಲ್‌ ಸಲಾಮ್‌" ಎಂದು ಧನುಷ್‌ ಸಂದೇಶ ಹಾಕಿದ್ದಾರೆ. ಟ್ರೈಲರ್‌ ಬಿಡುಗಡೆಯಾದ ಸಮಯದಲ್ಲೂ ಧನುಷ್‌ ಪೋಸ್ಟ್‌ ಮಾಡಿದ್ದರು. "ಲಾಲ್‌ ಸಲಾಮ್‌ ಟ್ರೈಲರ್‌ ಬಿಡುಗಡೆಯಾಗಿದೆ. ತಂಡಕ್ಕೆ ಶುಭಾಶಯ. ದೇವರು ಒಳ್ಳೆಯದು ಮಾಡಲಿ" ಎಂದು ಧನುಷ್‌ ಪೋಸ್ಟ್‌ ಹಾಕಿದ್ದಾರೆ. ಕಳೆದ ವರ್ಷ ಧನುಷ್‌ ಮತ್ತು ಐಶ್ವರ್ಯಾ ಬೇರೆಬೇರೆಯಾಗಿದ್ದರು. ಹೀಗಿದ್ದರೂ, ಒಬ್ಬರಿಗೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ಈ ರೀತಿಯ ಪ್ರೋತ್ಸಾಹದ ಮಾತುಗಳನ್ನಾಡುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಲೈಕಾ ಪ್ರೊಡಕ್ಷನ್‌ ನಿರ್ಮಾಣದ ಮತ್ತು ರಜನಿಕಾಂತ್‌ ನಟನೆಯ ಲಾಲ್‌ ಸಲಾಮ್‌ ಈ ವಾರದ ಬಹುನಿರೀಕ್ಷಿತ ಸಿನಿಮಾ. ಈಗಾಗಲೇ ಲಾಲ್‌ ಸಲಾಮ್‌ ಸಿನಿಮಾದ ಗ್ಲಿಂಪ್ಸ್‌ ಅನ್ನು ಕಳೆದ ತಿಂಗಳು ಅಂದರೆ ಡಿಸೆಂಬರ್‌ 12ರಂದು ಬಿಡುಗಡೆ ಮಾಡಲಾಗಿತ್ತು. ರಜನಿಕಾಂತ್‌ ಹುಟ್ಟುಹಬ್ಬದಂದು ಲಾಲ್‌ ಸಲಾಮ್‌ ಸಿನಿಮಾದಲ್ಲಿ ತಲೈವಾನ ಪಾತ್ರದ ಕುರಿತು ಮಾಹಿತಿ ನೀಡಲಾಗಿತ್ತು. ಲಾಲ್‌ ಸಲಾಮ್‌ನಲ್ಲಿ ರಜನಿಕಾಂತ್‌ ಅವರರು ಮೊಯ್ದೀನ್‌ ಭಾಯ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ತನ್ನ ವಿನೂತನ ಶೈಲಿಯ ಮೂಲಕ ರಜನಿಕಾಂತ್‌ ಎಂಟ್ರಿ ನೀಡಿ, ಸ್ಲೋ ಮೋಷನ್‌ನಲ್ಲಿ ರೌಡಿಗಳನ್ನು ಅಟ್ಟಾಡಿಸೋ ಸೀನ್‌ ಈ ಟೀಸರ್‌ನಲ್ಲಿತ್ತು. ಈ ಟೀಸರ್‌ನಲ್ಲಿ ಜಲಾಲಿ ಜಲಾಲ್‌ ಟ್ರ್ಯಾಕ್‌ ಹಾಡಿನ ಝಲಕ್‌ ಕೂಡ ಇತ್ತು. ಇದು ಎಆರ್‌ ರೆಹಮಾನ್‌ ಸಂಗೀತ ನಿರ್ದೇಶದನ ಟ್ರ್ಯಾಕ್‌ ಆಗಿದೆ.

ತಲೈವಾ ರಜನಿಕಾಂತ್‌ ಬಗ್ಗೆ ನಿಮಗೆಷ್ಟು ಗೊತ್ತು?

ತಲೈವಾ ಅಭಿಮಾನಿಗಳು ತಿಳಿದಿರಬೇಕಾದ ರಜನಿಕಾಂತ್‌ ಕುರಿತಾದ ಪ್ರಮುಖ 10 ಫ್ಯಾಕ್ಟ್‌ಗಳ ವಿವರ ಇಲ್ಲಿ ನೀಡಲಾಗಿದೆ. ಬೆಂಗಳೂರಿನಲ್ಲಿ ಮರಾಠ ಕುಟುಂಬದಲ್ಲಿ ಜನಿಸಿದ ರಜನಿಕಾಂತ್‌ ಅವರ ನಿಜವಾದ ಹೆಸರು ಶಿವಾಜಿ ರಾವ್‌ ಗಾಯಕ್‌ವಾಡ್‌. ರಜನಿಕಾಂತ್‌ ಅವರಿಗೆ ಪದ್ಮವಿಭೂಷಣ ಮತ್ತು ದಾದಾ ಸಾಹೇಬ್‌ ಫಾಲ್ಕೆ ಅವಾರ್ಡ್‌ ದೊರಕಿದೆ. ಇವರ ಕುರಿತ ಅಚ್ಚರಿಯ 10 ವಿಚಾರಗಳನ್ನು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ