Vettaiyan: ರಜನಿಕಾಂತ್‌ 170ನೇ ಸಿನಿಮಾದ ಹೆಸರು ವೆಟ್ಟೈಯನ್‌; ಈ ಟೈಟಲ್‌ ಅರ್ಥ ಗೊತ್ತಾದ್ರೆ ಪ್ರಾಣಿಗಳು ಎದ್ದುಬಿದ್ದು ಓಡ್ತಾವೆ ಗುರು
ಕನ್ನಡ ಸುದ್ದಿ  /  ಮನರಂಜನೆ  /  Vettaiyan: ರಜನಿಕಾಂತ್‌ 170ನೇ ಸಿನಿಮಾದ ಹೆಸರು ವೆಟ್ಟೈಯನ್‌; ಈ ಟೈಟಲ್‌ ಅರ್ಥ ಗೊತ್ತಾದ್ರೆ ಪ್ರಾಣಿಗಳು ಎದ್ದುಬಿದ್ದು ಓಡ್ತಾವೆ ಗುರು

Vettaiyan: ರಜನಿಕಾಂತ್‌ 170ನೇ ಸಿನಿಮಾದ ಹೆಸರು ವೆಟ್ಟೈಯನ್‌; ಈ ಟೈಟಲ್‌ ಅರ್ಥ ಗೊತ್ತಾದ್ರೆ ಪ್ರಾಣಿಗಳು ಎದ್ದುಬಿದ್ದು ಓಡ್ತಾವೆ ಗುರು

Vettaiyan: ಸೂಪರ್‌ಸ್ಟಾರ್‌ ರಜನಿಕಾಂತ್‌ ಅಭಿನಯದ 170ನೇ ಚಿತ್ರದ ಶೀರ್ಷಿಕೆ ಘೋಷಣೆಯಾಗಿದೆ. ರಜನಿಕಾಂತ್‌ ಮುಂದಿನ ಚಿತ್ರದ ಹೆಸರು ವೆಟ್ಟೈಯನ್‌. ವೆಟ್ಟೈಯನ್‌ ಎಂದರೆ ಹಂಟರ್‌ ಎಂದರ್ಥ. ಕನ್ನಡದಲ್ಲಿ ಬೇಟೆಗಾರ ಎಂಬ ಅರ್ಥವಿದೆ.

Vettaiyan: ರಜನಿಕಾಂತ್‌ 170ನೇ ಸಿನಿಮಾದ ಹೆಸರು ವೆಟ್ಟೈಯನ್‌
Vettaiyan: ರಜನಿಕಾಂತ್‌ 170ನೇ ಸಿನಿಮಾದ ಹೆಸರು ವೆಟ್ಟೈಯನ್‌

ಸೂಪರ್‌ಸ್ಟಾರ್‌ ರಜನಿಕಾಂತ್‌ ಹುಟ್ಟುಹಬ್ಬದ ದಿನವಾದ ಡಿಸೆಂಬರ್‌ 12ರಂದು ತಲೈವರ್‌ ಅಭಿಮಾನಿಗಳಿಗೆ ಖುಷಿಯಾಗುವಂತೆ ರಜನಿ ಮುಂದಿನ ಸಿನಿಮಾದ ಟೈಟಲ್‌ ಅನಾವರಣಗೊಂಡಿದೆ. ತಲೈವರ್‌ 170 ಚಿತ್ರತಂಡವು ರಜನಿಕಾಂತ್‌ ಅವರ ಮುಂದಿನ ಸಿನಿಮಾದ ಹೆಸರು ವೆಟ್ಟೈಯನ್‌ ಎಂದು ಘೋಷಿಸಿದೆ. ಇದಕ್ಕೆ ಸಂಬಂಧಪಟ್ಟಂತೆ ಪುಟ್ಟ ಟೀಸರ್‌ ಬಿಡುಗಡೆ ಮಾಡಿದ್ದು, ಲಾಠಿ ಹಿಡಿದು ರಜನಿಕಾಂತ್‌ ಆಗಮಿಸುವ ದೃಶ್ಯವಿದೆ. ಹೀಗಾಗಿ, ವಟ್ಟೈಯನ್‌ ಚಿತ್ರದಲ್ಲಿ ರಜನಿಕಾಂತ್‌ ಪೊಲೀಸ್‌ ಅಧಿಕಾರಿಯಾಗಿ ಮಿಂಚುವುದು ಖಚಿತವಾಗಿದೆ.

ಹೇಗಿದೆ ವೆಟ್ಟೈಯನ್‌ ಟೀಸರ್?‌

ರಜನಿಕಾಂತ್‌ ಅವರ ಜನಪ್ರಿಯ ಶೈಲಿಗಳ ಕೆಲವು ಝಲಕ್‌ಗಳನ್ನು ಟೀಸರ್‌ನಲ್ಲಿ ತೋರಿಸಲಾಗಿದೆ. ತಮ್ಮದೇ ಶೈಲಿಯಲ್ಲಿ ಕನ್ನಡಕ ಹಾಕಿಕೊಳ್ಳುತ್ತ ಡೈಲಾಗ್‌ ಹೇಳುವ ದೃಶ್ಯವಿದೆ. ಜತೆಗೆ, ಕೈ ಹಿಂಬದಿಯಲ್ಲಿಟ್ಟುಕೊಂಡು ಚಿಟಿಕೆ ಹೊಡೆಯುವ ದೃಶ್ಯಕ್ಕೂ ಸಿಳ್ಳೆ ಗ್ಯಾರಂಟಿ. ಯಾವುದೋ ಅಪರಾಧ, ಕೊಲೆ ಪ್ರಕರಣದ ಕಥಾ ಹಂದರ ಹೊಂದಿರುವ ಸೂಚನೆಯನ್ನು ಈ ಟೈಟಲ್‌ ನೀಡಿದೆ.

ವೆಟ್ಟೈಯನ್‌ ಪದದ ಅರ್ಥವೇನು?

ತಮಿಳು ಬಲ್ಲವರಿಗೆ ವೆಟ್ಟೈಯನ್‌ ಪದದ ಅರ್ಥ ತಿಳಿದಿರಬಹುದು. ವೆಟ್ಟೈಯನ್‌ಗೆ ಇಂಗ್ಲಿಷ್‌ನಲ್ಲಿ ಹಂಟರ್‌ ಎಂಬ ಅರ್ಥವಿದೆ. ಕನ್ನಡದಲ್ಲಿ ಇದನ್ನು ಬೇಟೆಗಾರ ಎಂದು ಅರ್ಥೈಸಬಹುದು. ಈ ಸಿನಿಮಾದಲ್ಲಿ ರಜನಿಕಾಂತ್‌ ಅವರು ಅಪರಾಧಿಗಳ ಹಂಟರ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಹಂಟರ್‌ ಎಂಬ ಪದ ಕೇಳಿದರೆ ಪ್ರಾಣಿಗಳಿಗೆ ಹೇಗೆ ನಡುಕ ಉಂಟಾಗಬಲ್ಲದೋ ಅದೇ ರೀತಿ ಅಪರಾಧಿಗಳಿಗೆ ಖಾಕಿ ಧರಿಸಿರುವ ರಜನಿಕಾಂತ್‌ ಕೂಡ ಭೀತಿ ಹುಟ್ಟಿಸುವ ಸೂಚನೆ ಇದೆ.

ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರ ಮುಂಬರುವ ಚಿತ್ರ ವೆಟ್ಟೈಯನ್‌ನಲ್ಲಿ ಭಾರತದ ಸಿನಿಜಗತ್ತಿನ ಪ್ರಮುಖ ಪ್ರತಿಭೆಗಳು ನಟಿಸಲಿದ್ದಾರೆ. ಈಗಾಗಲೇ ದಕ್ಷಿಣ ಭಾರತದ ಕೆಲವರು ನಟರು ಈ ಟೀಮ್‌ಗೆ ಸೇರಿದ್ದಾರೆ. ಇದೀಗ ಬಾಲಿವುಡ್‌ನ ಬಿಗ್‌ಬಿ ಎಂದೇ ಖ್ಯಾತಿಪಡೆದಿರುವ ಅಮಿತಾಬ್‌ ಬಚ್ಚನ್‌ ಅವರು ತಲೈವರ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇವರಿಬ್ಬರು ಜತೆಯಾಗಿ ಸಿನಿಮಾ ಮಾಡಿ ಬರೋಬ್ಬರಿ 32 ವರ್ಷಗಳು ಕಳೆದಿವೆ. ಇವರು 1991ರಲ್ಲಿ ಕೊನೆಯ ಬಾರಿ ಫ್ಯಾಮಿಲಿ ಡ್ರಾಮಾ ಹಮ್‌ನಲ್ಲಿ ಜತೆಯಾಗಿ ನಟಿಸಿದ್ದರು. ತಲೈವರ್‌ ಚಿತ್ರದಲ್ಲಿ ಮತ್ತೆ ಇವರು ಒಂದಾಗಿದ್ದಾರೆ. ಈಗಾಗಲೇ ಶೂಟಿಂಗ್‌ನಲ್ಲಿ ಅಮಿತಾಬ್‌ ಬಚ್ಚನ್‌ ಭಾಗಿಯಾಗಿದ್ದಾರೆ.

ಅಮಿತಾಬ್‌ ಬಚ್ಚನ್‌ ಅವರು ರಜನಿಕಾಂತ್‌ ಸಿನಿಮಾ, ಕೆಲಸಗಳನ್ನು ಮೊದಲಿನಿಂದಲೂ ಪ್ರೋತ್ಸಾಹಿಸುತ್ತ ಬಂದವರು. ರೋಬೊ ಚಿತ್ರದ ಪ್ರೆಸ್‌ ಕಾನ್ಫರೆನ್ಸ್‌ನಲ್ಲೂ ಅಮಿತಾಬ್‌ ಬಚ್ಚನ್‌ ಇದ್ದರು. ರೋಬೊ ಚಿತ್ರದಲ್ಲಿ ಅಮಿತಾಬ್‌ ಬಚ್ಚನ್‌ ಸೊಸೆ ಐಶ್ವರ್ಯ ರೈ ನಟಿಸಿದ್ದರು.

ಮಲಯಾಳದ ಪ್ರಮುಖ ನಟ ಫಹಾದ್‌ ಫಾಸಿಲ್‌ ತಲೈವಾರ್‌ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಈಗಾಗಲೇ ಲೈಕಾ ಘೋಷಿಸಿದೆ. ಈ ಹಿಂದೆ ಬಾಹುಬಲಿ ನಟ ರಾಣಾ ದಗ್ಗುಬಟ್ಟಿ, ಮಂಜು ವಾರಿಯರ್, ರಿತಿಕಾ ಸಿಂಗ್ ಮತ್ತು ದುಶಾರಾ ವಿಜಯನ್ ಈ ಸಿನಿಮಾ ತಂಡಕ್ಕೆ ಸೇರ್ಪಡೆಯಾಗಿದ್ದರು.

ಜೈಲರ್ ಚಿತ್ರದಲ್ಲಿ ರಜನಿಕಾಂತ್ ಜೊತೆ, ಲಿಯೋದಲ್ಲಿ ವಿಜಯ್ ಜೊತೆ ಮತ್ತು ಇತ್ತೀಚೆಗಷ್ಟೇ ಶಾರುಖ್ ಖಾನ್ ಜೊತೆ ಜವಾನ್ ಚಿತ್ರದಲ್ಲಿ ಕೆಲಸ ಮಾಡಿದ್ದ ಅನಿರುದ್ಧ್ ರವಿಚಂದರ್ ಅವರು ಚಿತ್ರದ ಸಂಗೀತ ನಿರ್ದೇಶಕರಾಗಿ ಸೇರ್ಪಡೆಯಾಗಿದ್ದಾರೆ. ಟಿಜೆ ಜ್ಞಾನವೇಲು ಅವರು ಈ ಚಿತ್ರದ ನಿರ್ದೇಶಕರಾಗಿದ್ದಾರೆ. ಈ ಹಿಂದೆ ಸೂರ್ಯ ಅಭಿನಯದ ಜೈಭೀಮ್‌ನಂತಹ ಸಿನಿಮಾಗಳನ್ನು ಮಾಡಿದ್ದಾರೆ. ಒಟ್ಟಾರೆ, ರಜನಿಕಾಂತ್‌ ಮುಂದಿನ ಚಿತ್ರವು ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

Whats_app_banner