logo
ಕನ್ನಡ ಸುದ್ದಿ  /  ಮನರಂಜನೆ  /  ಕೂತ್ರೂ ಕಷ್ಟ, ನಿಂತ್ರೂ ಕಷ್ಟ, ಭಾವನಾ ಏನು ಮಾಡಿದ್ರೂ ಸಹಿಸದೆ ತಾಯಿ ಬಳಿ ಚಾಡಿ ಚುಚ್ಚಿದ ಸಿಂಚನಾ; ಲಕ್ಷ್ಮೀ ನಿವಾಸ ಧಾರಾವಾಹಿ

ಕೂತ್ರೂ ಕಷ್ಟ, ನಿಂತ್ರೂ ಕಷ್ಟ, ಭಾವನಾ ಏನು ಮಾಡಿದ್ರೂ ಸಹಿಸದೆ ತಾಯಿ ಬಳಿ ಚಾಡಿ ಚುಚ್ಚಿದ ಸಿಂಚನಾ; ಲಕ್ಷ್ಮೀ ನಿವಾಸ ಧಾರಾವಾಹಿ

Rakshitha Sowmya HT Kannada

Nov 21, 2024 03:19 PM IST

google News

ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್‌ 20ರ ಎಪಿಸೋಡ್‌ನಲ್ಲಿ ಭಾವನಾ ವಿರುದ್ಧ ತಾಯಿ ರೇಣುಕಾಗೆ ಚಾಡಿ ಹೇಳುತ್ತಿರುವ ಸಿಂಚನಾ

  • Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್‌ 20ರ ಎಪಿಸೋಡ್‌ನಲ್ಲಿ ಐಟಿ ಅಧಿಕಾರಿಗಳಿಗೆ ಭಾವನಾಳೇ ಮಾಹಿತಿ ನೀಡಿರಬೇಕೆಂದು ಸಿಂಚನಾ ಅನುಮಾನ ವ್ಯಕ್ತಪಡಿಸುತ್ತಾಳೆ. ಅವಳು ಏನು ಮಾಡಿದರೂ ತಪ್ಪು ಎನ್ನುವಂತೆ ತಾಯಿ ರೇಣುಕಾ ಬಳಿ ಭಾವನಾ ಬಗ್ಗೆ ಇನ್ನಷ್ಟು ಬೇಸರ ಉಂಟಾಗುವಂತೆ ಮಾತನಾಡುತ್ತಾಳೆ. 

ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್‌ 20ರ ಎಪಿಸೋಡ್‌ನಲ್ಲಿ ಭಾವನಾ ವಿರುದ್ಧ ತಾಯಿ ರೇಣುಕಾಗೆ ಚಾಡಿ ಹೇಳುತ್ತಿರುವ ಸಿಂಚನಾ
ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್‌ 20ರ ಎಪಿಸೋಡ್‌ನಲ್ಲಿ ಭಾವನಾ ವಿರುದ್ಧ ತಾಯಿ ರೇಣುಕಾಗೆ ಚಾಡಿ ಹೇಳುತ್ತಿರುವ ಸಿಂಚನಾ (PC: Zee Kannada Facebook)

Lakshmi Nivasa Serial: ಈ ಬಾರಿ ಚುನಾವಣೆಯಲ್ಲಿ ಗೆಲ್ಲಲ್ಲೇಬೇಕು ಎಂಬ ಹಟದಿಂದ ಜವರೇಗೌಡ ಎಲ್ಲರಿಗೂ ಹಣ ಹಂಚಲು ಮುಂದಾಗಿದ್ದಾನೆ. ಜನರಿಗೆ ಹಂಚಲು ಕೋಟಿಗಟ್ಟಲೆ ಹಣವನ್ನು ಮನೆಗೆ ತಂದಿಟ್ಟ ವಿಚಾರ ಐಟಿ ಅಧಿಕಾರಿಗಳಿಗೆ ತಿಳಿಯುತ್ತದೆ. ಮಾಹಿತಿ ಆಧಾರದ ಮೇರೆಗೆ ಐಟಿ ಅಧಿಕಾರಿಗಳು ರೈಡ್‌ ಮಾಡಲು ಜವರೇಗೌಡ ಮನೆಗೆ ಬರುತ್ತಾರೆ. ಆದರೆ ಅಲ್ಲಿ ಏನೂ ಸಿಗದೆ ವಾಪಸ್‌ ಹೋಗುತ್ತಾರೆ.

ತಂದೆ ಬಗ್ಗೆ ಸಿದ್ದೇಗೌಡ ಅಸಮಾಧಾನ

ಐಟಿ ಅಧಿಕಾರಿಗಳಿಗೆ ಹಣ ಸಿಗದೆ ವಾಸಪ್‌ ಹೋಗಿದ್ದು ಜವರೇಗೌಡನಿಗೂ ಆಶ್ಚರ್ಯ ಎನಿಸುತ್ತದೆ. ಅವರು ಹೋದ ನಂತರ ಗಾಬರಿಯಿಂದ ಹೆಂಡತಿ ಬಳಿ ಹಣದ ಬಗ್ಗೆ ವಿಚಾರಿಸುತ್ತಾನೆ. ಬೀರುವಿನಲ್ಲಿ ಇಟ್ಟಿದ್ದ ದುಡ್ಡು ಕಾಣಿಸುತ್ತಿಲ್ಲ ಎಂದು ರೇಣುಕಾ ಗಾಬರಿ ಆಗುತ್ತಾಳೆ. ಅಷ್ಟರಲ್ಲಿ ಸಿದ್ದೇಗೌಡ, ಆ ಹಣವನ್ನು ನಾನು ತೆಗೆದಿಟ್ಟಿದ್ದೆ ಎಂದು ಹಣ ವಾಪಸ್‌ ತಂದುಕೊಡುತ್ತಾನೆ. ತನ್ನ ಕೆಲಸಕ್ಕೆ ಜೊತೆಯಾದ ಹೆಂಡತಿಗೆ ಥ್ಯಾಂಕ್ಸ್‌ ಹೇಳುತ್ತಾನೆ. ಹಣ ತೆಗೆದುಕೊಂಡು ಸಿದ್ದೇಗೌಡ ಮನೆಯಿಂದ ಹೋಗುತ್ತಾನೆ. ಮತ್ತೆ ಎಲ್ಲರಿಗೂ ಹಣ ಹಂಚಿ ನನಗೇ ಓಟು ಹಾಕಬೇಕೆಂದು ಮನವಿ ಮಾಡುತ್ತಾನೆ. ಆದರೆ ಜವರೇಗೌಡ ನ್ಯಾಯವಾಗಿ ಗೆಲ್ಲದೆ, ಅನ್ಯಾಯವಾಗಿ ಹಣ ಹಂಚಿ ಮತದಾರರನ್ನು ಸೆಳೆಯುವುದು ಸಿದ್ದುವಿಗೂ ಬೇಸರ ಎನಿಸುತ್ತದೆ. ಅಪ್ಪ ಹೀಗೇಕೆ ಮಾಡುತ್ತಿರುವುದು ಸರಿಯಲ್ಲ ಎಂದುಕೊಳ್ಳುತ್ತಾನೆ.

ಸಿಂಚನಾಗೆ ಭಾವನಾ ಮೇಲೆ ಅನುಮಾನ

ನಮ್ಮ ಮನೆಯಲ್ಲಿ ಹಣ ಇರುವ ವಿಚಾರ ಐಟಿ ಅಧಿಕಾರಿಗಳಿಗೆ ಹೇಗೆ ಗೊತ್ತಾಯ್ತು ಎಂದು ಸಿಂಚನಾ, ತಾಯಿ ರೇಣುಕಾ ಬಳಿ ಕೇಳುತ್ತಾಳೆ. ಭಾವನಾ ಹೇಳಿದ್ದರೂ ಹೇಳಿರಬಹುದು ಎಂದು ತಾಯಿಗೆ ಚಾಡಿ ಹೇಳುತ್ತಾಳೆ. ಅವಳು ಮನೆಗೆ ಬಂದು ಇಷ್ಟು ದಿನ ಆದರೂ ಅಡುಗೆ ಮನೆ ಕಡೆ ಏಕೆ ಬರ್ತಿಲ್ಲ ಎಂದು ಕೇಳುತ್ತಾಳೆ. ಅವಳು ಅಡುಗೆ ಮನೆಗೆ ಬರುವುದು ನನಗೆ ಇಷ್ಟವಿಲ್ಲ, ನಾನೇ ಬರಬೇಡ ಎಂದು ಹೇಳಿದ್ದಾಗಿ ರೇಣುಕಾ ಹೇಳುತ್ತಾಳೆ. ಹಾಗಾದರೆ ಅವಳು ಊಟಕ್ಕೆ ಏನು ಮಾಡುತ್ತಿದ್ದಾಳೆ? ಹೊರಗಡೆಯಿಂದ ಆರ್ಡರ್‌ ಮಾಡುತ್ತಿರಬಹುದು, ನಾನು ಒಂದೇ ಒಂದು ದಿನ ಹೊರಗಿನಿಂದ ಆರ್ಡರ್‌ ಮಾಡಿದ್ದಕ್ಕೆ ನನ್ನ ಅತ್ತೆ ನನಗೆ ಬಾಯಿಗೆ ಬಂದಂತೆ ಬೈದರು. ಈಗ ಅವರ ಮಗಳು ಮಾಡುತ್ತಿರುವುದು ಸರೀನಾ ಎಂದು ಸಿಂಚನಾ ಪ್ರಶ್ನಿಸುತ್ತಾಳೆ. ಒಟ್ಟಿನಲ್ಲಿ ಭಾವನಾ ನಿಂತ್ರೂ ತಪ್ಪು, ಕುಂತ್ರೂ ತಪ್ಪು ಎನ್ನುವಂತೆ ಅವಳ ಬಗ್ಗೆ ಸಿಂಚನಾ ಕತ್ತಿ ಮಸೆಯುತ್ತಿದ್ದಾಳೆ.

ಜಾಹ್ನವಿಯನ್ನು ಇನ್ನಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ಜಯಂತ್‌

ಇತ್ತ ಜಯಂತ್‌, ಜಾಹ್ನವಿ ಸೇವೆಯಲ್ಲೇ ಮುಳುಗಿ ಹೋಗುತ್ತಾನೆ. ಗರ್ಭಿಣಿ ಆಗಿರುವ ಹೆಂಡತಿ ಏನೂ ಕೆಲಸ ಮಾಡಬಾರದು , ಎಲ್ಲವನ್ನೂ ನಾನೇ ಮಾಡುತ್ತೇನೆ ಎಂದು ಅವಳಿಗೆ ಕಂಡಿಷನ್‌ ಮಾಡುತ್ತಾನೆ. ಅಡುಗೆ ಮಾಡಿ ತನ್ನ ಕೈಯ್ಯಾರೆ ತಿನ್ನಿಸುತ್ತಾನೆ. ಗಂಡನಲ್ಲಾಗಿರುವ ಬದಲಾವಣೆ ನೋಡಿ ಜಾಹ್ನವಿ ಕೂಡಾ ಖುಷಿಯಾಗುತ್ತಾಳೆ. ಮತ್ತೊಂದೆಡೆ ಅಪ್ಪನ ಬಳಿ ಇರುವ ಹಣ ಪಡೆಯಲು ಮಂಗಳಾ ನಾಟಕ ಶುರು ಮಾಡುತ್ತಾಳೆ. ನಿನ್ನ ಕೈಲಿ ಹಣ ಕೊಡುವುದಿಲ್ಲ, ನಿನ್ನ ಗಂಡನ ಕೈಗೆ ಕೊಡುತ್ತೇನೆ ಎಂದು ಶ್ರೀನಿವಾಸ್‌ ಕಂಡಿಷನ್‌ ಮಾಡುತ್ತಾನೆ.

ಜಯಂತ್‌ ನಿಜಕ್ಕೂ ಬದಲಾಗಿದ್ದಾನಾ? ತನ್ನ ವಿರುದ್ಧ ಕತ್ತಿ ಮಸೆಯುತ್ತಿರುವ ಸಿಂಚನಾಗೆ ಭಾವನಾ ಏನು ಉತ್ತರ ಕೊಡುತ್ತಾಳೆ? ಶ್ರೀನಿವಾಸ್‌ ಉಳಿತಾಯ ಮಾಡಿದ್ದ ಹಣವೆಲ್ಲಾ ಖಾಲಿ ಆಗಿಬಿಡ್ತಾ? ಮುಂದಿನ ಎಪಿಸೋಡ್‌ನಲ್ಲಿ ಉತ್ತರ ತಿಳಿಯಲಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ