ಸುಧಾರಿಸಿಕೊಂಡ ಕುಸುಮಾ, ಸಮಸ್ಯೆ ಬಗೆಹರಿಸು ಎಂದು ಪಟ್ಟು ಬಿಡದೆ ದೇವರ ಮುಂದೆ ಕುಳಿತ ಭಾಗ್ಯಾ ; ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್ 20ರ ಎಪಿಸೋಡ್‌ನಲ್ಲಿ ಭಾಗ್ಯಾಗೆ ಗಂಡನ ಮೇಲಿದ್ದ ನಂಬಿಕೆ ಚೂರು ಚೂರಾಗಿದೆ. ದೇವಸ್ಥಾನಕ್ಕೆ ಹೋಗುವ ಭಾಗ್ಯಾ, ನನಗೆ ಈ ರೀತಿ ಏಕೆ ನೋವು ಕೊಡುತ್ತಿದ್ದೀಯ? ಅಗ್ನಿಸಾಕ್ಷಿಯಾಗಿ ಬೆಸೆದ ಬಂಧವನ್ನು ಏಕೆ ಅಳಿಸುತ್ತಿದ್ದೀಯ ಎಂದು ಕೇಳುತ್ತಾಳೆ.
Bhagyalakshmi Kannada Serial: ಭಾಗ್ಯಾ ದುಃಖದ ಕಟ್ಟೆ ಒಡೆದಿದೆ. ಗಂಡನ ಮೇಲೆ ಇದ್ದ ನಂಬಿಕೆ ಚೂರಾಗಿದೆ. ಯಾರು ಏನೇ ಹೇಳಿದರೂ ನನ್ನ ಗಂಡ ಶ್ರೀರಾಮನಂಥವನು, ಅವರಿಗೆ ನನ್ನ ಬಗ್ಗೆ ಪ್ರೀತಿ ಇಲ್ಲ ಅಷ್ಟೇ. ಅದರೆ ಅವರು ಬೇರೆ ಹುಡುಗಿಯೊಂದಿಗೆ ಅಫೇರ್ ಇಟ್ಟುಕೊಳ್ಳುವಷ್ಟು ಸಣ್ಣ ವ್ಯಕ್ತಿತ್ವದವರಲ್ಲ ಎಂದು ನಂಬಿದ್ದ ಭಾಗ್ಯಾಗೆ ಈಗ ತಾಂಡವ್ ತನ್ನ ಅಸಲಿ ಮುಖ ತೋರಿಸಿದ್ದಾನೆ.
ಪಟ್ಟು ಬಿಡದೆ ದೇವರ ಮುಂದೆ ಕುಳಿತ ಭಾಗ್ಯಾ
ದೇವಸ್ಥಾನಕ್ಕೆ ಬರುವ ಭಾಗ್ಯಾ, ಮಳೆಯಲ್ಲೇ ನೆನೆಯುತ್ತಾ ದೇವರ ಮುಂದಿರುವ ಕುಂಕುಮ ಹಚ್ಚಿಕೊಳ್ಳುತ್ತಾಳೆ. ಆದರೆ ಕುಂಕುಮ ಹಣೆಯಲ್ಲಿ ನಿಲ್ಲದಿರುವುದನ್ನು ನೋಡಿ ಅಳುತ್ತಾಳೆ. ಭಾಗ್ಯಾ ವರ್ತನೆಗೆ ಅರ್ಚಕರು ಹಾಗೂ ಅವರ ಪತ್ನಿ ಗಾಬರಿ ಆಗುತ್ತಾರೆ. ನಿನಗೆ ಏನು ಸಮಸ್ಯೆ ಇದೆ? ನೀನು ಯಾರು? ಹೆದರಬೇಡ ದೇವರು ನಿನ್ನ ಎಲ್ಲಾ ಸಮಸ್ಯೆಯನ್ನು ಪರಿಹರಿಸುತ್ತಾನೆ ಎಂದು ಧೈರ್ಯ ಹೇಳುತ್ತಾರೆ. ಹೌದಾ, ದೇವರು ನನ್ನ ಎಲ್ಲಾ ಸಮಸ್ಯೆಯನ್ನು ಬಗೆಹರಿಸುತ್ತಾನಾ? ಹಾಗಾದರೆ ಈಗಲೇ ಪರಿಹರಿಸಲಿ ಎಂದು ಕೈಯಲ್ಲಿ ಕರ್ಪೂರ ಹಚ್ಚಿ ದೇವರಿಗೆ ಆರತಿ ಬೆಳಗುತ್ತಾಳೆ.
ನೀನೇ ನನ್ನ ಲೈಫ್ , ನೀನಿಲ್ಲದೆ ನನ್ನ ಜೀವನ ಪರಿಪೂರ್ಣವಲ್ಲ ಎಂದು ಅವರು ಶ್ರೇಷ್ಠಾಗೆ ಹೇಳಿದ್ರು, ಹಾಗಾದರೆ ಇಷ್ಟು ದಿನ ನಾನು ಅವರ ಜೊತೆ ಜೀವನ ಮಾಡಿದ್ದೇ ವ್ಯರ್ಥ ಆಯ್ತಾ? ತಾಳಿ ಕಟ್ಟಿದ ಹೆಂಡತಿ ಬಿಟ್ಟು, ಬೇರೆ ಯಾವುದೇ ಹುಡುಗಿ ಅವರ ಜೀವನ ಪೂರ್ಣಗೊಳಿಸಲು ಬರ್ತಾಳೆ ಎಂದರೆ ಏನು ಅರ್ಥ? ಅಗ್ನಿಸಾಕ್ಷಿಯಾಗಿ ಬೆಸೆದ ಬಂಧವನ್ನು ಈ ರೀತಿ ಏಕೆ ಮಾಡುತ್ತಿದ್ದೀಯ? ನಾನು ನಿನಗೆ ಏನು ಅನ್ಯಾಯ ಮಾಡಿದ್ದೆ ಹೇಳು? ನಿನಗೆ ಎಲ್ಲದಕ್ಕೂ ಉತ್ತರ ಗೊತ್ತು ಅಂತ ಅರ್ಚಕರು ಹೇಳಿದ್ರು, ನೀನು ಏಕೆ ಉತ್ತರ ಕೊಡುತ್ತಿಲ್ಲ? ನನ್ನ ಜೀವನದಲ್ಲಿ ಏಕೆ ಈ ರೀತಿ ಆಗುತ್ತಿದೆ ಎಂದು ನೀನು ಉತ್ತರ ಕೊಡಬೇಕು. ನೀನು ಉತ್ತರ ಕೊಡುವರೆಗೂ ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಭಾಗ್ಯಾ ಅಲ್ಲೇ ಕೂರುತ್ತಾಳೆ.
ಆರೋಗ್ಯ ನೋಡಿಕೊಳ್ಳುವಂತೆ ಕುಸುಮಾಗೆ ವೈದ್ಯರ ಸಲಹೆ
ಮತ್ತೊಂದೆಡೆ ಪ್ರಜ್ಞೆ ತಪ್ಪಿ ಬಿದ್ದ ಕುಸುಮಾಗೆ ಚಿಕಿತ್ಸೆ ನೀಡಲು ಧರ್ಮರಾಜ್ ಡಾಕ್ಟರನ್ನು ಮನೆಗೆ ಕರೆಸುತ್ತಾನೆ. ಕುಸುಮಾಗೆ ಪ್ರಥಮ ಚಿಕಿತ್ಸೆ ನೀಡುವ ಡಾಕ್ಟರ್, ಇವರು ಚೆನ್ನಾಗಿ ರೆಸ್ಟ್ ಮಾಡಬೇಕು ಎಂದು ಸಲಹೆ ನೀಡುತ್ತಾರೆ. ಅಷ್ಟರಲ್ಲಿ ಕುಸುಮಾ ಎಚ್ಚರಗೊಳ್ಳುತ್ತಾಳೆ. ಡಾಕ್ಟರ್ ಹೇಳಿದ್ದನ್ನು ಕೇಳಿ, ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ ಎಂದು ಪೂಜಾ ಕುಸುಮಾಗೆ ಹೇಳಿದರೆ, ಮಗ ಸೊಸೆ ಬಗ್ಗೆ ಏನೂ ಯೋಚನೆ ಮಾಡಬೇಡ, ನೀನು ಅಂದುಕೊಂಡಂತೆ ಏನೂ ಆಗುವುದಿಲ್ಲ, ಎಲ್ಲಾ ಒಳ್ಳೆಯದೇ ಆಗುತ್ತದೆ ಎಂದು ಧೈರ್ಯ ಹೇಳುತ್ತಾನೆ. ಆದರೆ ಕುಸುಮಾಗೆ ಮಾತ್ರ ಸಮಾಧಾನವಾಗುವುದಿಲ್ಲ. ಏನೋ ತೊಂದರೆ ಆಗಬಹುದು ಅಂತ ಮನಸ್ಸಿಗೆ ಅನ್ನಿಸುತ್ತಿದೆ ಎಂದು ಗಾಬರಿಯಾಗುತ್ತಾಳೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ