logo
ಕನ್ನಡ ಸುದ್ದಿ  /  ಮನರಂಜನೆ  /  ಸಿಬಿಐ ಅಧಿಕಾರಿ ಯಶವಂತ್‌ ಪಾತ್ರದಲ್ಲಿ ಅಂಬರೀಶ್‌ ನಟಿಸಿದ ಸಿನಿಮಾ ಯಾವುದು? ಸ್ವಾತಂತ್ರ್ರ್ಯ ದಿನಾಚರಣೆಗೆ ಒಟಿಟಿಯಲ್ಲಿ ಕನ್ನಡ ಸಿನಿಮಾ ನೋಡಿ

ಸಿಬಿಐ ಅಧಿಕಾರಿ ಯಶವಂತ್‌ ಪಾತ್ರದಲ್ಲಿ ಅಂಬರೀಶ್‌ ನಟಿಸಿದ ಸಿನಿಮಾ ಯಾವುದು? ಸ್ವಾತಂತ್ರ್ರ್ಯ ದಿನಾಚರಣೆಗೆ ಒಟಿಟಿಯಲ್ಲಿ ಕನ್ನಡ ಸಿನಿಮಾ ನೋಡಿ

Praveen Chandra B HT Kannada

Aug 12, 2024 10:49 AM IST

google News

OTT Movie: ಸಿಬಿಐ ಅಧಿಕಾರಿ ಯಶವಂತ್‌ ಪಾತ್ರದಲ್ಲಿ ಅಂಬರೀಶ್‌ ನಟಿಸಿದ ಸಿನಿಮಾ ಯಾವುದು?

    • Independence Day Movies in Ott: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಎಲ್ಲರ ಮನಸ್ಸಲ್ಲೂ "ವಂದೇ ಮಾತರಂ" ಘೋಷ ಮೊಳಗುತ್ತಿರುತ್ತದೆ. ಈ ಸಮಯದಲ್ಲಿ ದೇಶಭಕ್ತಿ ಉಕ್ಕಿಸುವಂತಹ ಕನ್ನಡ ಸಿನಿಮಾ ನೋಡಲು ಬಯಸಿದರೆ ದಿವಂಗತ ಅಂಬರೀಶ್‌ ಮತ್ತು ವಿಜಯ್‌ ಶಾಂತಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾವೊಂದನ್ನು ಒಟಿಟಿಯಲ್ಲಿ ವೀಕ್ಷಿಸಬಹುದು.
OTT Movie: ಸಿಬಿಐ ಅಧಿಕಾರಿ ಯಶವಂತ್‌ ಪಾತ್ರದಲ್ಲಿ ಅಂಬರೀಶ್‌ ನಟಿಸಿದ ಸಿನಿಮಾ ಯಾವುದು?
OTT Movie: ಸಿಬಿಐ ಅಧಿಕಾರಿ ಯಶವಂತ್‌ ಪಾತ್ರದಲ್ಲಿ ಅಂಬರೀಶ್‌ ನಟಿಸಿದ ಸಿನಿಮಾ ಯಾವುದು?

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಭಾರತದ ಸ್ವಾತಂತ್ರ್ಯ, ದೇಶಭಕ್ತಿ, ಉಗ್ರರ ವಿರುದ್ಧ ಹೋರಾಟ, ಶತ್ರು ದೇಶಗಳ ವಿರುದ್ಧ ಹೋರಾಟದ ಹಲವು ಸಿನಿಮಾಗಳು ತೆರೆಕಂಡಿವೆ. ಸ್ವಾತಂತ್ರ್ರ್ಯ ದಿನಾಚರಣೆ ಸಂದರ್ಭದಲ್ಲಿ ದೇಶಭಕ್ತಿ ಉಕ್ಕಿಸುವಂತಹ ಸಿನಿಮಾಗಳನ್ನು ನೋಡಲು ಬಯಸುವವರಿಗೆ ಹಲವು ಆಯ್ಕೆಗಳು ಇವೆ. ದೇಶಭಕ್ತಿ ಉಕ್ಕಿಸುವಂತಹ ಹಲವು ಕನ್ನಡ ಸಿನಿಮಾಗಳು ಒಟಿಟಿಯಲ್ಲಿ ಇವೆ. ಇಂದು ನಾವು ಸಿಬಿಐ ಅಧಿಕಾರಿ ಯಶವಂತ್‌ ಪಾತ್ರದಲ್ಲಿ ಅಂಬರೀಶ್‌ ನಟಿಸಿದ ಸಿನಿಮಾವೊಂದರ ಕುರಿತು ತಿಳಿದುಕೊಳ್ಳೋಣ.

ಸ್ವಾತಂತ್ರ್ರ್ಯ ದಿನಾಚರಣೆಗೆ ಒಟಿಟಿಯಲ್ಲಿ ಕನ್ನಡ ಸಿನಿಮಾ

ಸಿಬಿಐ ಅಧಿಕಾರಿ ಯಶವಂತ್‌ ಪಾತ್ರದಲ್ಲಿ ಅಂಬರೀಶ್‌ ನಟಿಸಿದ ಸಿನಿಮಾ ಯಾವುದು? ಈ ಪ್ರಶ್ನೆಗೆ ಅಂಬಿ ಅಭಿಮಾನಿಗಳಿಗೆ ಉತ್ತರ ಗೊತ್ತಾಗಿರಬಹುದು. "ಹಿಂದೂಸ್ಥಾನ ಗೊತ್ತೇನೋ ಧರ್ಮ ಕಾಯೋ ಹಿಮಾಲಯ, ಹಿಂದೂ ಶಕ್ತಿ ಗೊತ್ತೇನೋ, ದುಷ್ಟ ನಿಷ್ಟ ವಧಾಲಯ, ಈ ಮಣ್ಣೇ ಋಷಿಗಳ ತೋಟ, ಈ ಕಡಲು ಪರ್ಣ ಕುಟೀರ... ಈ ಹಾಡು ಕೇಳಿದಾಗ ನಿಮಗೆ ಇದು ಯಾವ ಸಿನಿಮಾ ಎಂದು ಗೊತ್ತಾಗಿರಬಹುದು.

ಇನ್ನೂ ಕ್ಲೂ ಬೇಕಾ? ತಯ್ಯ ಥಕ್ಕ ತಾ ಎಂಬ ಹಾಡು ನೆನಪಿಸಿಕೊಳ್ಳಿ. ನೋ ಪ್ರಾಬ್ಲಂ, ಸ್ಯಾಂಡಲ್‌ ವುಡ್‌ ಹುಡುಗ ಹಾಡುಗಳು ನೆನಪಿವೆಯೇ? ಸಿಬಿಐ ಅಧಿಕಾರಿ ಯಶವಂತ್‌ ಪಾತ್ರದಲ್ಲಿ ಅಂಬರೀಶ್‌ ನಟಿಸಿದ ಸಿನಿಮಾ ವಂದೇ ಮಾತರಂ ಎನ್ನುವುದು ಬಹುತೇಕರಿಗೆ ಗೊತ್ತಾಗಿರಬಹುದು. ಈ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ವಂದೇ ಮಾತರಂ ಸಿನಿಮಾವನ್ನು ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಹುಡುಕಿ ಉಚಿತವಾಗಿ ನೋಡಬಹುದು.

ವಂದೇ ಮಾತರಂ ಕನ್ನಡ ಸಿನಿಮಾದ ಬಗ್ಗೆ

ಇದು 2001ರ ಸಿನಿಮಾ. ಓಂ ಪ್ರಕಾಶ್‌ ನಿರ್ದೇಶಣದ ಈ ಸಿನಿಮಾದಲ್ಲಿ ಅಂಬರೀಶ್‌ ಮತ್ತು ವಿಜಯಶಾಂತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ದೇವ ಸಂಗೀತ ಸಂಯೋಜನೆಯಿದೆ. ಈ ಸಿನಿಮಾದಲ್ಲಿ ಸಿಬಿಐ ಅಧಿಕಾರಿ ಯಶವಂತ್‌ ಆಗಿ ಅಂಬರೀಶ್‌, ಡಿಸಿಪಿ ಗಾಯತ್ರಿ ಬ್ರಹ್ಮಾವರ್‌ ಪಾತ್ರದಲ್ಲಿ ವಿಜಯಶಾಂತಿ ನಟಿಸಿದ್ದರು. ಗಾಯತ್ರಿ ತಂದೆಯಾಗಿ ಗಿರೀಶ್‌ ಕಾರ್ನಡ್‌, ಮೇಜರ್‌ ಸುಜನ್‌ ಆಗಿ ಆಶಿಶ್‌ ವಿದ್ಯಾರ್ಥಿ ನಟಿಸಿದ್ದಾರೆ. ನಿಮಗೆ ಗೊತ್ತೆ? 2001ರಲ್ಲಿ ಬಿಡುಗಡೆಯಾದ ಸಿನಿಮಾವನ್ನು ಆ ಕಾಲದಲ್ಲಿಯೇ ಪ್ಯಾನ್‌ ಇಂಡಿಯಾ ಸಿನಿಮಾವಾಗಿ (ಹಿಂದಿ ಹೊರತುಪಡಿಸಿ) ಹೊರತರುವ ಯೋಚನೆ ಮಾಡಲಾಗಿತ್ತು. ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಲಾಯಿತು. ಆದರೆ, ಕೊನೆಗೆ ಕನ್ನಡದಲ್ಲಿ ನಿರ್ಮಿಸಿ ತೆಲುಗು ಡಬ್ಬಿಂಗ್‌ ಆವೃತ್ತಿಯಲ್ಲಿ ಬಿಡುಗಡೆ ಮಾಡಲಾಯಿತು.

ಇಲ್ಲೇ ನೋಡಿ ವಂದೇ ಮಾತರಂ ಫುಲ್‌ ಮೂವಿ

ವಂದೇಮಾತರಂ ಸಿನಿಮಾ ಯಾವ ಒಟಿಟಿಯಲ್ಲಿ ಲಭ್ಯ?

ಅಂಬರೀಶ್‌ ಮತ್ತು ವಿಜಯಶಾಂತಿ ನಟನೆಯ ವಂದೇಮಾತರಂ ಸಿನಿಮಾ ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಅಂಬರೀಶ್‌ ಅಭಿಮಾನಿಗಳು ಈ ಸ್ವಾತಂತ್ರ್ರ್ಯ ದಿನಾಚರಣೆ ಸಂದರ್ಭದಲ್ಲಿ ಕನ್ನಡದ ಹಳೆಯ ಸಿನಿಮಾವನ್ನು ಮತ್ತೊಮ್ಮೆ ನೋಡಬಹುದು.

ವಂದೇ ಮಾತರಂ ಕನ್ನಡ ಸಿನಿಮಾವು ಜಿಯೋ ಸಿನಿಮಾ ಒಟಿಟಿ, ಸನ್‌ ನೆಕ್ಸ್ಟ್‌ ಒಟಿಟಿ, ಏರ್‌ಟೇಲ್‌ ಎಕ್ಸ್‌ಟ್ರೀಮ್‌ ಒಟಿಟಿ ಒಟಿಟಿಗಳಲ್ಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ