ಈ ಬಾರಿ ಎಷ್ಟನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ? 78 ಅಥವಾ 79 ಎಂಬ ಗೊಂದಲ ಬೇಡ, ಸರಿಯಾದ ಇಸವಿ ಇಲ್ಲಿ ತಿಳಿದುಕೊಳ್ಳಿ
ಕನ್ನಡ ಸುದ್ದಿ  /  ಜೀವನಶೈಲಿ  /  ಈ ಬಾರಿ ಎಷ್ಟನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ? 78 ಅಥವಾ 79 ಎಂಬ ಗೊಂದಲ ಬೇಡ, ಸರಿಯಾದ ಇಸವಿ ಇಲ್ಲಿ ತಿಳಿದುಕೊಳ್ಳಿ

ಈ ಬಾರಿ ಎಷ್ಟನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ? 78 ಅಥವಾ 79 ಎಂಬ ಗೊಂದಲ ಬೇಡ, ಸರಿಯಾದ ಇಸವಿ ಇಲ್ಲಿ ತಿಳಿದುಕೊಳ್ಳಿ

ಆಗಸ್ಟ್ 15, 1947 ಬ್ರಿಟೀಷರ ದಾಸ್ಯದಿಂದ ಭಾರತ ಮುಕ್ತವಾದ ದಿನ. ಈ ದಿನಕ್ಕಾಗಿ ಅಸಂಖ್ಯಾತ ವೀರರು ಬಲಿದಾನಗೈದಿದ್ದಾರೆ. ಪ್ರತಿ ವರ್ಷ ಆಗಸ್ಟ್‌ 15 ರಂದು ಸ್ವಾತಂತ್ರ್ಯ ದಿನ ಆಚರಿಸಲಾಗುತ್ತದೆ. ಈ ಬಾರಿ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆಯೋ ಅಥವಾ 78ನೇ ಯದ್ದೋ ಎಂಬ ಗೊಂದಲ ಹಲವರಿಗಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ. (ಬರಹ:ಪ್ರಿಯಾಂಕ)

ಈ ವರ್ಷ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆಯೋ ಅಥವಾ 78ನೇ ಯದ್ದೋ ಎಂಬುದು ಹಲವರಿಗಿರುವ ಗೊಂದಲ.
ಈ ವರ್ಷ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆಯೋ ಅಥವಾ 78ನೇ ಯದ್ದೋ ಎಂಬುದು ಹಲವರಿಗಿರುವ ಗೊಂದಲ.

1947ರ ಆಗಸ್ಟ್ 15 ಭಾರತೀಯರ ಐತಿಹಾಸಿಕ ದಿನವಾಗಿದ್ದು, ಬ್ರಿಟೀಷರ ಕಪಿ ಮುಷ್ಠಿಯಿಂದ ನಮಗೆ ಸ್ವಾತಂತ್ರ್ಯ ದೊರೆತ ದಿನ. ಭಾರತದ ಸ್ವಾತಂತ್ರ್ಯಕ್ಕಾಗಿ ಅಸಂಖ್ಯಾತ ಹೋರಾಟಗಾರರು ಬಲಿದಾನಗೈದಿದ್ದಾರೆ. ಅವರ ನೆತ್ತರ ಹನಿಗಳಿಂದಾಗಿ ನಾವಿಂದು ನೆಮ್ಮದಿಯಾಗಿ ಉಸಿರಾಡುವಂತಾಗಿದೆ. ಪ್ರತಿ ವರ್ಷ ಆಗಸ್ಟ್ 15ರಂದು ದೇಶದ ನಾಗರಿಕರು ಸ್ವಾತಂತ್ರ್ಯಕ್ಕೆ ಹೋರಾಡಿದ ವೀರರನ್ನು ನೆನಪಿಸಿಕೊಳ್ಳುತ್ತೇವೆ. 200 ವರ್ಷಗಳ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತವಾದ ಭಾರತ ಪ್ರಜಾಸತ್ತಾತ್ಮಕ ಸಾರ್ವಭೌಮ ರಾಷ್ಟ್ರವಾಯಿತು.

ಭಾರತ ಸ್ವಾತಂತ್ರ್ಯ ದಿನದ ಹಿಂದಿನ ರಾತ್ರಿ ಆಗಸ್ಟ್ 14, 1947 ರಂದು, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಐತಿಹಾಸಿಕ ಭಾಷಣ ಮಾಡಿದ್ದರು. ಈ ಭಾಷಣವು ಟ್ರಿಸ್ಟ್ ವಿತ್ ಡೆಸ್ಟಿನಿ ಎಂಬುದಾಗಿ ಕರೆಯಲ್ಪಟ್ಟಿದೆ. ‘ಬಹಳ ವರ್ಷಗಳಿಂದ ಮಾಡಿದ ಪ್ರತಿಜ್ಞೆಯು ಪೂರ್ಣ ಪ್ರಮಾಣದಲ್ಲಿ ಪಡೆದುಕೊಳ್ಳುವ ಸಮಯ ಬಂದಿದೆ. ಮಧ್ಯರಾತ್ರಿ ಗಂಟೆ ಹೊಡೆಯುವಾಗ ಜಗತ್ತು ನಿದ್ರಿಸುತ್ತಿರುತ್ತ, ಭಾರತವು ಎಚ್ಚರಗೊಳ್ಳುತ್ತದೆ’ ಎಂದು ಭಾಷಣ ಮಾಡಿದ್ದರು.

ಆಗಸ್ಟ್ 15ರಂದು ದೊರಕಿದ ಸ್ವಾತಂತ್ರ್ಯ ದಿನವನ್ನು ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. ಈ ದಿನದಂದು ನಮಗಾಗಿ ಹೋರಾಡಿದ ವೀರರ ನೆನಪು ಮಾಡಿಕೊಳ್ಳುವುದು ಕೂಡ ನಮ್ಮ ಕರ್ತವ್ಯ. ಈ ದಿನದಂದು, ತ್ರಿವರ್ಣ ಧ್ವಜವನ್ನು ದೇಶದಾದ್ಯಂತ, ಮನೆಗಳು ಮತ್ತು ವಾಣಿಜ್ಯ ಸ್ಥಳಗಳಲ್ಲಿ ಹಾರಿಸಲಾಗುತ್ತದೆ. ರಾಷ್ಟ್ರಗೀತೆಯನ್ನು ಮೊಳಗಿಸಲಾಗುತ್ತದೆ.

ಭಾರತ ಸ್ವಾತಂತ್ರ್ಯೋತ್ಸವದ ಪ್ರಧಾನ ಸಮಾರಂಭವು ದೆಹಲಿಯ ಕೆಂಪು ಕೋಟೆಯಲ್ಲಿ ನೆರವೇರುತ್ತದೆ. ಪ್ರಧಾನಿ ಧ್ವಜಾರೋಹಣ ನೆರವೇರಿಸಿ, ದೇಶದ ನಾಗರಿಕರನ್ನುದ್ದೇಶಿಸಿ ಭಾಷಣ ಮಾಡುತ್ತಾರೆ. ದೇಶದ ಪ್ರಗತಿ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡುತ್ತಾರೆ. ಅಲ್ಲದೆ, ದೇಶಾದ್ಯಂತ ಜನರು ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ತೇಲುತ್ತಾರೆ.

ವಸಾಹತುಶಾಹಿ ಆಳ್ವಿಕೆಯಿಂದ ಮುಕ್ತವಾದ ಭಾರತ ಸ್ವತಂತ್ರ ರಾಷ್ಟ್ರವಾಗಿ ಪ್ರಯಾಣಿಸುತ್ತಿದ್ದು, 75 ವರ್ಷಗಳನ್ನು ಕಳೆದಿವೆ. ಆದರೆ, ಇದು ಸಾಕಷ್ಟು ಜನರಿಗೆ ಗೊಂದಲಗಳಿವೆ. ಭಾರತವು ಈ ಬಾರಿ ಅಂದರೆ 2024ರಂದು 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆಯೇ ಅಥವಾ 78ನೇ ಯದ್ದೋ ಎಂಬುದು ಹಲವರಿಗಿರುವ ಪ್ರಶ್ನೆ. ಈ ಗೊಂದಲ ಅಥವಾ ಪ್ರಶ್ನೆಗೆ ಇಲ್ಲಿದೆ ಉತ್ತರ:

ಈ ವರ್ಷ ಆಚರಿಸುವುದು 77ನೇ ಸ್ವಾತಂತ್ರ್ಯವೋ, 78ನೇ ಯದ್ದೋ?

2024ರ ಈ ವರ್ಷವನ್ನು ಭಾರತೀಯ ಸ್ವಾತಂತ್ರ್ಯದ 77ನೇ ವಾರ್ಷಿಕೋತ್ಸವವೆಂದು ಪರಿಗಣಿಸಬಹುದು. ಏಕೆಂದರೆ ಸ್ವಾತಂತ್ರ್ಯೋತ್ಸವದ ಮೊದಲ ವಾರ್ಷಿಕೋತ್ಸವವನ್ನು ನಿಜವಾದ ದಿನಾಂಕದಿಂದ ಒಂದು ವರ್ಷ, ಅಂದರೆ 1948 ರಿಂದ ಗುರುತಿಸಲಾಗಿದೆ. ಆದ್ದರಿಂದ, ಭಾರತವು 2024ರಲ್ಲಿ ತನ್ನ 78ನೇ ಸ್ವಾತಂತ್ರ್ಯ ದಿನ ಮತ್ತು 77ನೇ ಸ್ವಾತಂತ್ರ್ಯ ದಿನದ ವಾರ್ಷಿಕೋತ್ಸವವನ್ನು ಆಚರಿಸುತ್ತದೆ.

ಒಟ್ಟಿನಲ್ಲಿ ಪ್ರತಿ ವರ್ಷವೂ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ಈ ದಿನ ನಮಗಾಗಿ ಹಾಗು ಮುಂದಿನ ಪೀಳಿಗೆಯವರಿಗಾಗಿ ನೆತ್ತರು ಹರಿಸಿದ ವೀರರನ್ನು ಸ್ಮರಿಸಲೇಬೇಕು. ಮಕ್ಕಳಿಗೂ ಸ್ವಾತಂತ್ರ್ಯದ ಮಹತ್ವವನ್ನು ತಿಳಿಸಬೇಕು. ಭಾರತದ ಸ್ವಾತಂತ್ರ್ಯದ ಇತಿಹಾಸದ ಪುಟವನ್ನು ತೆರೆದರೆ ಇದು ಹತ್ತಿಪ್ಪತ್ತು ವರುಷದ ಹೋರಾಟವಲ್ಲ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ 1947ರ ವರೆಗೆ ಅದೆಷ್ಟೋ ವೀರರು ಹೋರಾಡಿ, ಬ್ರಿಟೀಷರ ಬಂದೂಕಿಗೆ ಬಲಿಯಾಗಿದ್ದಾರೆ. ಸ್ವಾತಂತ್ರ್ಯ ದೊರೆತು ಅದೆಷ್ಟೇ ಯುಗಗಳು ಕಳೆದರೂ ನಮಗಾಗಿ ಹೋರಾಡಿದ ವೀರರನ್ನು ಎಂದಿಗೂ ಮರೆಯದಿರೋಣ. ಮುಂದಿನ ಪೀಳಿಗೆಗೂ ನಾವು ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನಗೈದ ವೀರರ ಬಗ್ಗೆ, ಸ್ವಾತಂತ್ರ್ಯದ ಮಹತ್ವದ ಬಗ್ಗೆ ತಿಳಿಸಬೇಕಿದೆ.

Whats_app_banner