ಮಕ್ಕಳಿಗೆ ಸುಲಭವಾಗಿ ಕಲಿಸಬಹುದಾದ ಕನ್ನಡ ದೇಶಭಕ್ತಿ ಗೀತೆಗಳು; ಸ್ವಾತಂತ್ರ್ಯ ದಿನದಂದು ನಿಮ್ಮ ಮಗುವಿನಿಂದ ಈ ಹಾಡು ಹೇಳಿಸಿ-independence day 2024 kannada patriotic songs that can be easily taught to children kannada patriotic songs list ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳಿಗೆ ಸುಲಭವಾಗಿ ಕಲಿಸಬಹುದಾದ ಕನ್ನಡ ದೇಶಭಕ್ತಿ ಗೀತೆಗಳು; ಸ್ವಾತಂತ್ರ್ಯ ದಿನದಂದು ನಿಮ್ಮ ಮಗುವಿನಿಂದ ಈ ಹಾಡು ಹೇಳಿಸಿ

ಮಕ್ಕಳಿಗೆ ಸುಲಭವಾಗಿ ಕಲಿಸಬಹುದಾದ ಕನ್ನಡ ದೇಶಭಕ್ತಿ ಗೀತೆಗಳು; ಸ್ವಾತಂತ್ರ್ಯ ದಿನದಂದು ನಿಮ್ಮ ಮಗುವಿನಿಂದ ಈ ಹಾಡು ಹೇಳಿಸಿ

ಆಗಸ್ಟ್‌ 15 ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ. ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣದ ಜೊತೆಗೆ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನೂ ಏರ್ಪಡಿಸಲಾಗುತ್ತದೆ. ಈ ವರ್ಷದ ಸ್ವಾತಂತ್ರ್ಯೋತ್ಸವಕ್ಕೆ ನಿಮ್ಮ ಮಗುವಿಗೆ ದೇಶಭಕ್ತಿ ಗೀತೆ ಕಲಿಸಬೇಕು ಅಂತಿದ್ದರೆ ಈ ಹಾಡುಗಳನ್ನು ಆಯ್ಕೆ ಮಾಡಿಕೊಳ್ಳಿ. ಇದನ್ನು ಈಗಿನಿಂದಲೇ ಮಗುವಿಗೆ ಕಲಿಸಲು ಆರಂಭಿಸಿ.

ಮಕ್ಕಳಿಗೆ ಸುಲಭವಾಗಿ ಕಲಿಸಬಹುದಾದ ಕನ್ನಡ ದೇಶಭಕ್ತಿ ಗೀತೆಗಳು; ಸ್ವಾತಂತ್ರ್ಯ ದಿನದಂದು ಈ ಹಾಡು ಹೇಳಿಸಿ
ಮಕ್ಕಳಿಗೆ ಸುಲಭವಾಗಿ ಕಲಿಸಬಹುದಾದ ಕನ್ನಡ ದೇಶಭಕ್ತಿ ಗೀತೆಗಳು; ಸ್ವಾತಂತ್ರ್ಯ ದಿನದಂದು ಈ ಹಾಡು ಹೇಳಿಸಿ

ಸ್ವಾತಂತ್ರ್ಯೋತ್ಸವದ ದಿನಗಳು ಹತ್ತಿರ ಬರುತ್ತಿದ್ದಂತೆ ಭಾರತದಲ್ಲಿ ಒಂದು ರೀತಿಯ ಸಂಭ್ರಮ ಮನೆ ಮಾಡಿರುತ್ತದೆ. ಸ್ವಾತಂತ್ರ್ಯ ದಿನಾಚರಣೆ ಎಂದರೆ ದೇಶದ ಹಬ್ಬ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರು ಹಾಗೂ ಹೋರಾಟಗಾರರನ್ನು ನೆನಪಿಸಿಕೊಳ್ಳುವ ಈ ದಿನದಂದು ಧ್ವಜಾರೋಹಣದ ಜೊತೆಗೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮಕ್ಕಳಿಗಾಗಿ ಭಾಷಣ ಸ್ಪರ್ಧೆ, ಚರ್ಚಾಕೂಟಗಳು, ದೇಶಭಕ್ತಿ ಗೀತೆ ಹಾಡುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ನೃತ್ಯ ಮುಂತಾದವನ್ನು ಆಯೋಜಿಸಲಾಗುತ್ತದೆ.

ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ನಿಮ್ಮ ಮಗುವಿಗೆ ದೇಶಭಕ್ತಿ ಗೀತೆಗಳನ್ನು ಕಲಿಸಬೇಕು ಎಂದುಕೊಂಡಿದ್ದರೆ ಈ ಹಾಡುಗಳನ್ನು ಅಭ್ಯಾಸ ಮಾಡಿ. ಇದನ್ನು ಈಗಿನಿಂದಲೇ ನಿಮ್ಮ ಮಗುವಿಗೆ ಕಲಿಸಲು ಆರಂಭಿಸಿ. ಆ ಮೂಲಕ ದೇಶಭಕ್ತಿ ಹರಡುವಂತೆ ಮಾಡಿ. ಅಂತಹ ಕೆಲವು ಹಾಡುಗಳು ಹಾಗೂ ಹಾಡಿನ ಲಿಂಕ್‌ ಇಲ್ಲಿದೆ.

ಮಕ್ಕಳಿಗೆ ಕಲಿಸಬಹುದಾದ 5 ದೇಶಭಕ್ತಿಗಳು

1. ಭಾರತ ಮಾತೆಯ ಮಕ್ಕಳು ನಾವು

ಭಾರತ ಮಾತೆಗೆ ನಮಿಸುವೆವು

ಭಾರತ ಮಾತೆಯ ಮಕ್ಕಳು ಮಾತು

ಭಾರತ ಮಾತೆಗೆ ನಮಿಸುವೆವು

ರಾಷ್ಟ್ರ ಭಕ್ತಿಯ ಭಾವನೆ ಬೆಳೆಸುತ

ಭಾರತ ನೆಲದಲಿ ಬೆಳೆಯುವೆವು

ರಾಷ್ಟ್ರ ಭಕ್ತಿಯ ಭಾವನೆ ಬೆಳೆಸುತ

ಭಾರತ ನೆಲದಲಿ ಬೆಳೆಯುವೆವು

ವಂದೇ ಮಾತರಂ

ವಂದೇ ಮಾತರಂ

ವಂದೇ ಮಾತರಂ

2. ಸಾರೆ ಜಹಾನ್‌ ಸೇ ಅಚ್ಛಾ

ಹಿಂದೂಸ್ತಾನ್‌ ಹಮಾರಾ

ಹುಂ ಬುಲ್‌ಬುಲೇ ಹೈ ಇಸ್ಕಿ

ಯೇ ಗುಲ್‌ ಸಿತಾ ಹಮಾರಾ

ಸಾರೆ ಜಹಾನ್‌ ಸೇ ಅಚ್ಛಾ

3. ನನ್ನ ದೇಶ ನನ್ನ ಉಸಿರು

ನನ್ನ ಪ್ರಾಣ ಭಾರತ

ಶಾಂತಿ ಸಹಬಾಳ್ವೆ ವಿಶ್ವಕ್ಕೆಲ್ಲಾ ಸಾರುತ

ನನ್ನ ದೇಶ ನನ್ನ ಉಸಿರು

ನನ್ನ ಪ್ರಾಣ ಭಾರತ

ಇಲ್ಲಿ ಒಮ್ಮೆ ಜನ್ಮ ತಾಳಲು

ಪುಣ್ಯವೋ ಧನ್ಯವೋ

ಭಾರತ ಭಾರತ ಭಾರತ

4. ನನ್ನ ದೇಶದ ಕೀರ್ತಿ ಪತಾಕೆ ಹಾರುತಿರಲಿ ಮೇಲಕೆ

ಮನುಜರೊಳಿತಿಗೆ ತನ್ನ ಕಾಣಿಕೆ ನೀಡುತಿರಲಿ ವಿಶ್ವಕೆ

ಪುಣ್ಯ ಭೂಮಿಯ ಮಣ್ಣು ತೀಡುವೆ ನನ್ನ ಹಣೆಯ ತಿಲಕಕೆ

ಪ್ರೀತಿ ಪ್ರೇಮದಿ ಪ್ರಾಣ ನೀಡುವೆ ಜನುಮ ಕೊಟ್ಟ ದೇಶಕೆ

ನನ್ನ ದೇಶದ ಕೀರ್ತಿ ಪತಾಕೆ ಹಾರುತಿರಲಿ ಮೇಲಕೆ

5. ವೀರಧೀರರಾಳಿದ ಭವ್ಯ ಭಾರತ

ನಮ್ಮ ಭಾರತ

ಶಾಂತಿ ಸ್ನೇಹ ಸೌಹಾರ್ದ

ಇಲ್ಲಿ ಸಂತಸ

ವೀರಧೀರರಾಳಿದ ಭವ್ಯ ಭಾರತ

ನಮ್ಮ ಭಾರತ

ಶಾಂತಿ ಸ್ನೇಹ ಸೌಹಾರ್ದ

ಇಲ್ಲಿ ಸಂತಸ

ಉತ್ತರದಿ ಹಿಮಾಲಯ ನಮಗೆ ಕಾವಲು

ಉಳಿದ ಕಡೆಗಳಲ್ಲಿ ನಮಗೆ ಕಡಲ ಕಾವಲು

6. ಬಂಗಾರದಿ ಬರೆದಿಟ್ಟಿದೆ ಭಾರತ ಇತಿಹಾಸ

ಪುಟಪುಟದಲಿ ಪುಟಿದ್ದೆದ್ದಿದೆ ವೀರರ ಸಂದೇಶ

ಅರಿಮರ್ಧಿನಿ ಈ ಭಾರತ ಬಂಜೆಯು ತಾನಲ್ಲ

ಈ ಮಾತೆಯ ಸಂತಾನದಿ ನಾವ್‌ ಹೇಡಿಗಳಲ್ಲ

ಭ್ರಾತತ್ವವೇ ಸ್ವಧರ್ಮವೇ ಶಾಂತಿಯು ಮೈತಳೆದು

ಜಗಕೀಯುವ ಸಂದೇಶವ ಕೇಳಿರಿ ಕಿವಿ ತೆರೆದು