ಮೊದಲ ಮಗುವಿನ ನಿರೀಕ್ಷೆಯಲ್ಲಿ ಅವಿವಾ ಬಿದ್ದಪ್ಪ, ಅಪ್ಪ ಆಗೋ ಖುಷಿಯಲ್ಲಿ ಅಭಿಷೇಕ್‌ ಅಂಬರೀಶ್‌; ಸುಮಲತಾ ಮನೆಯಲ್ಲಿ ಈ ವಾರ ಸೀಮಂತ ಸಂಭ್ರಮ-sandalwood news abhishek ambareesh wife aviva bidapa pregnant expecting first child soon baby shower in sumalatha home ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಮೊದಲ ಮಗುವಿನ ನಿರೀಕ್ಷೆಯಲ್ಲಿ ಅವಿವಾ ಬಿದ್ದಪ್ಪ, ಅಪ್ಪ ಆಗೋ ಖುಷಿಯಲ್ಲಿ ಅಭಿಷೇಕ್‌ ಅಂಬರೀಶ್‌; ಸುಮಲತಾ ಮನೆಯಲ್ಲಿ ಈ ವಾರ ಸೀಮಂತ ಸಂಭ್ರಮ

ಮೊದಲ ಮಗುವಿನ ನಿರೀಕ್ಷೆಯಲ್ಲಿ ಅವಿವಾ ಬಿದ್ದಪ್ಪ, ಅಪ್ಪ ಆಗೋ ಖುಷಿಯಲ್ಲಿ ಅಭಿಷೇಕ್‌ ಅಂಬರೀಶ್‌; ಸುಮಲತಾ ಮನೆಯಲ್ಲಿ ಈ ವಾರ ಸೀಮಂತ ಸಂಭ್ರಮ

ರೆಬಲ್‌ ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌ ಅಪ್ಪ ಆಗೋ ಸಂಭ್ರಮದಲ್ಲಿದ್ದಾರೆ. ಅಭಿಷೇಕ್‌ ಅಂಬರೀಶ್‌ ಪತ್ನಿ ಅವಿವಾ ಬಿದ್ದಪ್ಪ ಗರ್ಭಿಣಿಯೆಂಬ ಸುದ್ದಿ ಹೊರಬಿದ್ದಿದೆ. ಇದೇ ವಾರ ಅವಿವಾ ಸೀಮಂತ ಸಮಾರಂಭ ನಡೆಯಲಿದೆಯಂತೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿ ಅವಿವಾ ಬಿದ್ದಪ್ಪ, ಅಪ್ಪ ಆಗೋ ಖುಷಿಯಲ್ಲಿ ಅಭಿಷೇಕ್‌ ಅಂಬರೀಶ್‌
ಮೊದಲ ಮಗುವಿನ ನಿರೀಕ್ಷೆಯಲ್ಲಿ ಅವಿವಾ ಬಿದ್ದಪ್ಪ, ಅಪ್ಪ ಆಗೋ ಖುಷಿಯಲ್ಲಿ ಅಭಿಷೇಕ್‌ ಅಂಬರೀಶ್‌

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಈ ಬಾರಿ ಸಂಭ್ರಮದ ಸುದ್ದಿಗಳು ಸಾಕಷ್ಟು ಇವೆ. ಒಂದೆಡೆ ತರುಣ್‌ ಸುಧೀರ್‌ ಮತ್ತು ಸೋನಾಲ್‌ ಮೊಂಥೆರೊಗೆ ಮದುವೆ ಸಂಭ್ರಮ. ಇದೇ ಆಗಸ್ಟ್‌ 10ರಂದು ಇವರಿಬ್ಬರ ಕಲ್ಯಾಣವಾಗಲಿದೆ. ಇನ್ನೊಂದೆಡೆ ಅಭಿಷೇಕ್‌ ಅಂಬರೀಶ್‌ ಪತ್ನಿ ಅವಿವಾ ಬಿದ್ದಪ್ಪ ಗರ್ಭಿಣಿಯಾಗಿದ್ದಾರೆ. ಮನೆಗೆ ಮಗುವನ್ನು ಸ್ವಾಗತಿಸುವ ಖುಷಿಯಲ್ಲಿ ಮತ್ತು ಅಜ್ಜಿ ಆಗುವ ಸಂದರ್ಭದಲ್ಲಿ ಸುಮಲತಾ ಅಂಬರೀಶ್‌ ಇದ್ದಾರೆ. ಸ್ಯಾಂಡಲ್‌ವುಡ್‌ಗೆ ಖುಷಿ ಕೊಡುವಂತೆ ಈ ತಿಂಗಳು ಹಲವು ಪ್ರಮುಖ ಕನ್ನಡ ಸಿನಿಮಾಗಳೂ ರಿಲೀಸ್‌ ಆಗುತ್ತಿವೆ.

ಅಭಿಷೇಕ್‌ ಅಂಬರೀಶ್‌ ಪತ್ನಿ ಗರ್ಭಿಣಿ

ಅವಿವಾ ಬಿದ್ದಪ್ಪ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಲು ರೆಬಲ್‌ ಸ್ಟಾರ್‌ ಕುಟುಂಬ ಕಾತರಗೊಂಡಿದ್ದಾರೆ. ಇದೇ ವಾರ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಕುರಿತು ಅಭಿಷೇಕ್‌ ಅಂಬರೀಶ್‌ ಕುಟುಂಬದ ಕಡೆಯಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಅಭಿಷೇಕ್‌ ಸದ್ಯ ಊರಲ್ಲಿ ಇಲ್ಲ. ಕಿಕ್‌ ಬಾಕ್ಸಿಂಗ್‌ ಕಲಿಯಲು ಫಾರಿನ್‌ಗೆ ಹೋಗಿದ್ದಾರಂತೆ. ನಾಳೆ ಬೆಂಗಳೂರಿಗೆ ವಾಪಸ್‌ ಬರುತ್ತಿದ್ದಾರೆ. ಈ ವಾರ ಸೀಮಂತ ಕಾರ್ಯಕ್ರಮ ನಡೆಯಲಿದೆ ಎಂದು ವರದಿಗಳು ತಿಳಿಸಿವೆ.

ಇದೇ ಜೂನ್‌ ತಿಂಗಳಲ್ಲಿ ಕನ್ನಡ ನಟ ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿದ್ದಪ್ಪ ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ತಮ್ಮ ಮಗ ಅಭಿಷೇಕ್‌ ಮತ್ತು ಸೊಸೆ ಅವಿವಾಗೆ ಸುಮಲತಾ ಅಂಬರೀಶ್‌ ಪ್ರೀತಿಯ ಶುಭಾಶಯ ತಿಳಿಸಿದ್ದರು. "ನನ್ನ ಪ್ರೀತಿಯ ಅಬಿದೊ ಮತ್ತು ಅವಿವಾಗೆ ಮೊದಲ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ನಿಮ್ಮ ಪ್ರೀತಿ ಇನ್ನಷ್ಟು ಉತ್ತಮವಾಗಲಿ. ಇನ್ನಷ್ಟು ಒಬ್ಬರನ್ನೊಬ್ಬರನ್ನು ಅರ್ಥ ಮಾಡಿಕೊಳ್ಳಿ. ನಿಮಗೆ ಪ್ರೀತಿಯ ಅಪ್ಪುಗೆ ಮತ್ತು ಆಶೀರ್ವಾದ" ತಿಳಿಸಿದ್ದರು. ಇದೀಗ ಎರಡೇ ತಿಂಗಳಲ್ಲಿ ಅಭಿಷೇಕ್‌ ಮನೆಯಲ್ಲಿ ಸೀಮಂತ ಸಂಭ್ರಮದ ಕಲೆ ತುಂಬಿದೆ.

ಕನ್ನಡ ನಟ ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿದ್ದಪ್ಪ ಅವರು ಜೂನ್‌ 5, 2023ರಂದು ಶುಭವಿವಾಹವಾಗಿದ್ದರು. ಜೂನ್‌ 7ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಅತಿಥಿ ಸತ್ಕಾರ ಕಾರ್ಯಕ್ರಮ ನಡೆಸಿದ್ದರು. ಅಂದಹಾಗೆ, ಇವರಿಬ್ಬರದ್ದು ಲವ್‌ ಮ್ಯಾರೇಜ್‌. ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿದ್ದಪ್ಪ ಹಲವು ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಅಭಿಷೇಕ್‌ ಅವರು ವಿದೇಶದಲ್ಲಿ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಅವಿವಾರನ್ನು ಇಷ್ಟಪಟ್ಟಿದ್ದರು. ಇವರ ಪ್ರೀತಿಗೆ ಮನೆಯವರ ಒಪ್ಪಿಗೆಯ ಮುದ್ರೆ ಸಿಕ್ಕಿತ್ತು. ಇವರ ಲವ್‌ ವಿಷಯ ಎಂಗೇಂಜ್‌ಮೆಂಟ್‌ವರೆಗೆ ಬಹಿರಂಗವಾಗಿರಲಿಲ್ಲ.

ದಿವಂಗತ ಅಂಬರೀಶ್‌ ಅವರ ಪುತ್ರ ಅಭಿಷೇಕ್‌ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಅಭಿಷೇಕ್‌ ಅಂಬರೀಶ್‌ ನಟನೆಯ ಬ್ಯಾಡ್‌ ಮ್ಯಾನರ್ಸ್‌ ಸಿನಿಮಾ ಬಿಡುಗಡೆಯಾಗಿತ್ತು. ಜನಪ್ರಿಯ ನಿರ್ದೇಶಕ ಸೂರಿ ಅವರು ಅಭಿಷೇಕ್‌ ಅಂಬರೀಶ್‌ಗಾಗಿ ಈ ಬ್ಯಾಡ್‌ ಮ್ಯಾನರ್ಸ್‌ ಚಿತ್ರ ನಿರ್ಮಿಸಿದ್ದರು.