PT Sir OTT Release: ಪಿಟಿ ಸರ್ ಒಟಿಟಿಯಲ್ಲಿ ಬಿಡುಗಡೆ; ಸ್ಪೋರ್ಟ್ಸ್ ಸಿನಿಮಾ ಇಷ್ಟಪಡೋರಿಗೆ ಈ ಸಿನಿಮಾ ಖುಷಿಕೊಡಬಹುದು ನೋಡಿ
Jun 21, 2024 05:22 PM IST
PT Sir OTT Release: ಪಿಟಿ ಸರ್ ಒಟಿಟಿಯಲ್ಲಿ ಬಿಡುಗಡೆ
- PT Sir On OTT: ಪಿಟಿ ಸರ್ ಎಂಬ ತಮಿಳು ಸಿನಿಮಾ ಮೇ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇದು ಕಾರ್ತಿಕ್ ವೇಣುಗೋಪಾಲ್ ನಿರ್ದೇಶನದ ಸಿನಿಮಾ. ಹಿಪೂಪ್ ತಾಮಿಝಾ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಬೆಂಗಳೂರು: ಪಿಟಿ ಸರ್ ಎಂಬ ತಮಿಳು ಸಿನಿಮಾ ಮೇ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇದು ಕಾರ್ತಿಕ್ ವೇಣುಗೋಪಾಲ್ ನಿರ್ದೇಶನದ ಸಿನಿಮಾ. ಹಿಪೂಪ್ ತಾಮಿಝಾ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಾಶ್ಮೀರ ಪರದೇಸಿ, ಅನಿಖ್ ಸುರೇಂದ್ರನ್, ಪ್ರಭು, ಇಳವರಸು, ಪಾಂಡಿಜನ್, ತ್ಯಾಗರಾಜನ್ ಮತ್ತು ಮುನಿಷ್ಕಾಂತ್ ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ. ಈ ಸಿನಿಮಾವನ್ನು ಮನೆಯಲ್ಲಿಯೇ ನೋಡಲು ಬಯಸುವವರಿಗೆ ಇಲ್ಲೊಂದಿಷ್ಟು ವಿವರ ನೀಡಲಾಗಿದೆ.
ಪಿಟಿ ಸರ್ ಎಂಬ ತಮಿಳು ಸ್ಪೋರ್ಟ್ಸ್ ಡ್ರಾಮಾದಲ್ಲಿ ಹಿಪೂಪ್ ತಮಿಝಾ ನಟಿಸಿದ್ದಾರೆ. ಇದೀಗ ಒಟಿಟಿಗೆ ಬಂದಿದೆ. ಪಿಟಿ ಸರ್ ಸಿನಿಮಾ ಈಗಾಗಲೇ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಆಧಿ ಹೀಗೆ ಪೋಸ್ಟ್ ಮಾಡಿದ್ದಾರೆ. "ಪಿಟಿ ಟೀಚರ್ ಅಸೋಸಿಯೇಷನ್‌ಗೆ ನನ್ನ ವಿನಮ್ರ ಧನ್ಯವಾದ. ತಮಿಳುನಾಡಿನ ತಂಡವು ರಿಥಿಮಿಕ್ ಯೋಗದಲ್ಲಿ ಖೇಲೋ ಇಂಡಿಯಾ ನ್ಯಾಷನಲ್ ಸ್ಪೋರ್ಟ್ಸ್‌ನಲ್ಲಿ ಅತ್ಯುತ್ತಮವಾಗಿ ಪರ್ಫಾಮೆನ್ಸ್ ಮಾಡಿದ್ದಾರೆ. ಬನ್ನಿ ಪಿಟಿ ಸರ್‌ನ ಭೇಟಿಯಾಗಿ" ಎಂದು ಅವರು ಪೋಸ್ಟ್ ಮಾಡಿದ್ದಾರೆ. ಪಿಟಿ ಸರ್ ಸಿನಿಮಾದಲ್ಲಿ ಆಧಿ ನಟಿಸಿದ್ದಾರೆ. ಜತೆಗೆ ಈ ಸಿನಿಮಾದ ಸಂಗೀತ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಒಟಿಟಿಯಲ್ಲಿರುವ ಹೊಸ ತಮಿಳು ಸಿನಿಮಾಗಳು
ಅರಮನೈ 4: ಇದು ಹಾರರ್ ಮತ್ತು ಕಾಮಿಡಿ ಸಿನಿಮಾ. ತಮನ್ನಾ ಭಾಟಿಯಾ ಮತ್ತು ರಾಶಿ ಖನ್ನಾ ನಟಿಸಿದ್ದಾರೆ. ಜೂನ್ 14ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿದೆ.
ಕುರುಂಗು ಪಡೆಲ್: ಸಂತೋಷ್ ವೆಲ್ಮುರುಗನ್, ವಿಆರ್ ರಾಘವನ್, ಎಂ ಜ್ಞಾನಶೇಖರ್ ನಟನೆಯ ಈ ಸಿನಿಮಾವು ಜೂನ್ 14ರಂದು ಆಹಾ ಒಟಿಟಿಯಲ್ಲಿ ರಿಲೀಸ್ ಆಗಿದೆ.
ಗ್ಯಾಂಗ್ಸ್ ಆಫ್ ಗೋದಾವರಿ: ಈ ತೆಲುಗು ಚಿತ್ರದ ತಮಿಳು ಆವೃತ್ತಿಯು ಈ ತಿಂಗಳು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿದೆ.
ಒಟಿಟಿಯಲ್ಲಿ ಸಿನಿಮಾಗಳ ಹಬ್ಬ
ಇದಕ್ಕೂ ಮೊದಲು ರತ್ನಂ, ವೈಟ್ ರೋಸ್, ಪಾಟ್ನರ್, ಮಂಜುಮ್ಮೇಲ್ ಬಾಯ್ಸ್, ಭೀಮಾ, ಇದು ಮಿನಲ್ ಕಾದಲ್, ಟಿಲ್ಲು ಸ್ಕ್ಯಾರ್, ದಿ ಫ್ಯಾಮಿಲಿ ಸ್ಟಾರ್, ಸಿರೆನ್, ಯವರುಮ್ ವಲ್ಲವರೆ, ಪೊನ್ ಒಂಡ್ರೊ ಕಂಡೆನ್, ಬೈರಿ, ಪ್ರೇಮಲು, ರೆಬಲ್, ಮಿಷನ್ ಚಾಪ್ಟರ್ 1 ಮುಂತಾದ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗಿವೆ.
ಕನ್ನಡದ ಬ್ಯಾಚುಲರ್ ಪಾರ್ಟಿ ಸಿನಿಮಾವು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ. ದಿಗಂತ್, ಲೋಸ್ ಮಾದ ಮುಂತಾದವರು ನಟಿಸಿರುವ ಈ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಮುಂದಿನ ದಿನಗಳಲ್ಲಿ ಆಡುಜೀವಿತಂ: ದಿ ಗೋಟ್ ಲೈಫ್, ಗುರುವಾಯೂರ್ ಅಂಬಲನಡೇಯಿಲ್ ಮುಂತಾದ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗಲಿವೆ. ಇದೇ ಸಮಯದಲ್ಲಿ ಆನಂದ್ ದೇವರಕೊಂಡ ನಟನೆಯ ಗಮ್ ಗಮ್ ಗಣೇಶ ಸಿನಿಮಾ ಕೂಡ ಒಟಿಟಿಯಲ್ಲಿ ಬಿಡುಗಡೆ ಪಡೆದಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಗಮ್ ಗಮ್ ಗಣೇಶ ಟ್ರೆಂಡಿಂಗ್‌ನಲ್ಲಿದೆ.