Ekam OTT Series review: ರಕ್ಷಿತ್ ಶೆಟ್ಟಿಯ ಏಕಂ ಕನ್ನಡ ವೆಬ್ ಸರಣಿ ಹೇಗಿದೆ? ವೈವಿಧ್ಯಮಯ ಕಥೆಗಳ ಸಂಕಲನ ಏಕಂ ವಿಮರ್ಶೆ
Jul 15, 2024 12:42 PM IST
Ekam OTT Series review: ರಕ್ಷಿತ್ ಶೆಟ್ಟಿಯ ಏಕಂ ಕನ್ನಡ ವೆಬ್ ಸರಣಿ ಹೇಗಿದೆ?
- Ekam Web Series Review: ಪ್ರಕಾಶ್ ರಾಜ್, ರಾಜ್ ಬಿ ಶೆಟ್ಟಿ ಸೇರಿದಂತೆ ಕನ್ನಡದ ಹಲವು ಕಲಾವಿದರು ನಟಿಸಿರುವ ಏಕಂ ವೆಬ್ ಸರಣಿಯು ಹಲವು ವೈವಿಧ್ಯಮಯ ಕಥೆಗಳ ಸಂಕಲನ. ಏಳು ಸಂಚಿಕೆಗಳಲ್ಲಿ ಬಿಡುಗಡೆಯಾಗಿರುವ ಏಕಂ ಹೇಗಿದೆ? ಕಲಾವಿದರ ನಟನೆ ಹೇಗಿದೆ? ಇಷ್ಟವಾಗುವ ಅಂಶಗಳೇನು? ಓದಿ ಏಕಂ ವೆಬ್ ಸರಣಿ ವಿಮರ್ಶೆ.
Ekam Web Series Review: ಕನ್ನಡ ವೆಬ್ ಸರಣಿಗಳಿಗೆ ತನ್ನದೇ ಆದ ಮಾರುಕಟ್ಟೆ ಇಲ್ಲದೆ ಇರುವ ಸಂದರ್ಭದಲ್ಲಿ ಏಕಂ ತಂಡವು ತನ್ನದೇ ವೆಬ್‌ಸೈಟ್ ಮೂಲಕ ಈ ವೆಬ್ ಸರಣಿ ಬಿಡುಗಡೆ ಮಾಡಿದೆ. ರಕ್ಷಿತ್ ಶೆಟ್ಟಿ ಸಹ ನಿರ್ಮಾಣದ ಈ ವೆಬ್ ಸರಣಿಯಲ್ಲಿ ಪ್ರಕಾಶ್ ರಾಜ್, ರಾಜ್ ಬಿ ಶೆಟ್ಟಿ , ಶೈನ್ ಶೆಟ್ಟಿ, ಪಲ್ಲವಿ ಕೊಡಗು, ಪ್ರಕಾಶ್ ತುಮಿನಾಡು ಸೇರಿದಂತೆ ಹಲವು ಪ್ರತಿಭಾನ್ವಿತ ಕಲಾವಿದರ ದಂಡೇ ಇದೆ. ಏಕಂ ಹಲವು ಕಥೆಗಳನ್ನು ಹೊಂದಿರುವ ಒಂದು ಸಂಕಲನ. ಈ ಕುರಿತು ಹಿಂದೂಸ್ತಾನ್ ಟೈಮ್ಸ್‌ನ ಲತಾ ಶ್ರೀನಿವಾಸನ್ ಮಾಡಿರುವ ವಿಮರ್ಶೆಯ ಕನ್ನಡ ಅನುವಾದ ಇಲ್ಲಿದೆ.
ಭಾರತವು ತುಂಬಾ ವೈವಿಧ್ಯಮಯ ಪ್ರದೇಶ. ಆಯಾ ಪ್ರದೇಶದ ನೇಟಿವಿಟಿ ಅನ್ವೇಷಣೆಗೆ ಚಲನಚಿತ್ರ ನಿರ್ಮಾಪಕರು ಮತ್ತು ಬರಹಗಾರರಿಗೆ ಸಾಕಷ್ಟು ಅವಕಾಶವಿದೆ. ಸಂದೀಪ್ ಪಿಎಸ್ ಮತ್ತು ಸುಮಂತ್ ಭಟ್ ರಚಿಸಿದ ಕನ್ನಡ ವೆಬ್ ಸರಣಿ ಏಕಂ ಕೂಡ ಇದೇ ಬಗೆಯದ್ದು. ಇದು ಕರ್ನಾಟಕದ ಕರಾವಳಿ ಪ್ರದೇಶದ ಸ್ಥಳೀಯ ಸೊಗಡಿನೊಂದಿಗೆ ಬಂದಿದೆ. ಇದರಲ್ಲಿ ಏಳು ಕಥೆಗಳಿದ್ದು (ಸಂಚಿಕೆಗಳು) ಪ್ರಣಯದಿಂದ ಧರ್ಮ, ಜೀವನದವರೆಗೆ ಎಲ್ಲವೂ ಇದೆ.
ಈ ವೆಬ್ ಸರಣಿಯ ಆರಂಭದಲ್ಲಿ ಕಿಶೋರ್ ಕುಮಾರ್ ಧ್ವನಿ "ನಾನು ಯಾರು?" ಎಂದು ಪ್ರೇಕ್ಷಕರನ್ನು ಪ್ರಶ್ನಿಸುತ್ತದೆ. ಕರಾವಳಿ ಪ್ರದೇಶದ ಜೀವನದ ಕಥೆಗಳ ಮೇಲೆ ಕೇಂದ್ರೀಕರಿಸಿದ್ದರೂ, ಪ್ರೇಕ್ಷಕರು ಭಿನ್ನವಾಗಿದ್ದರೂ ಎಲ್ಲವೂ ಎಲ್ಲರೂ ಒಂದೇ ಅಥವಾ ಏಕಂ ಆಗಿರುತ್ತಾರೆ ಎಂಬ ಮುನ್ನುಡಿಯೊಂದಿಗೆ ಕಥಾ ಸರಣಿ ಆರಂಭವಾಗುತ್ತದೆ.
ಹಲವು ಕಥೆಗಳ ಸಂಕಲನ
ಶೂಲ (ಶೂನ್ಯ) ಕಥೆಯಲ್ಲಿ ಗುರುವ ಎಂಬ ಬೇಟೆಗಾರನ ಕಥೆಯಿದೆ. ಆತನಲ್ಲಿ ರೈಫಲ್ ಕೂಡ ಇದೆ. ಈ ರೈಫಲ್‌ನಿಂದಾಗಿ ಆತ ಯಾರಂಬ ಸಾರವೇ ಕಳೆದುಹೋಗುತ್ತದೆ. ಮೂರನೇ ಕಥೆ ಡೊಂಬರಾಟದಲ್ಲಿ ಸಿಂಪಲ್ ಧನರಾಜ್ (ರಾಜ್ ಬಿ ಶೆಟ್ಟಿ) ಇದ್ದಾನೆ. ದುಬೈನಿಂದ ವಾಪಸ್ ಬಂದ ಈತ ಡೇರಿ ಫಾರ್ಮ್ ನಿರ್ಮಿಸಲು ಪ್ರಯತ್ನದಲ್ಲಿದ್ದಾನೆ. ಅವನ ಕನಸು ಈಡೇರುವುದೇ?
ಭ್ರಾಂತಿ ಎಂಬ ಕಥೆ (ಸಂಚಿಕೆ) ಇನ್ನೊಂದು ರೀತಿಯದ್ದು. ಹದಿಹರೆಯದ ಶಾಲಾ ಬಾಲಕಿಯೊಬ್ಬಳಿಗೆ ತನ್ನನ್ನು ದತ್ತು ಪಡೆದಿರಬಹುದು ಎಂಬ ಶಂಕೆ. ಹಿರಿಯ ನಟನ ಆತ್ಮಚರಿತ್ರೆಯಲ್ಲಿ ಬಹಿರಂಗಪಡಿಸಿದ ಆತನ ಲೈಂಗಿಕ ಜೀವನದ ಕುರಿತು ಕಥೆ ಹೇಳುತ್ತದೆ. ಈ ಕುರಿತು ಆ ಸ್ಟಾರ್ ನಟ ಹೆಮ್ಮೆ ಪಡಬಹುದು. ಆದರೆ, ಇತರರ ಬದುಕಿನ ಮೇಲೆ ಇದರ ಪರಿಣಾಮ ಏನು? ಮೇಲಿನ ಕಥೆಗಳೆಲ್ಲವನ್ನೂ ಬರೆದದ್ದು ಸುಮಂತ್ ಭಟ್.
ಪೂರ್ವಚರ ಕಥೆಯಲ್ಲಿ (ಎಪಿಸೋಡ್ 6) ಖ್ಯಾತ ನಟ ಪ್ರಕಾಶ್ ರಾಜ್ ಆಗಮಿಸುತ್ತಾರೆ. ಇದನ್ನು ಸನಲ್ ಅಮನ್ ಮತ್ತು ಸ್ವರೂಪ್ ಎಲ್ಮೊನ್ ನಿರ್ದೇಶಿಸಿದ್ದಾರೆ. ಇಲ್ಲಿ ಸಮುದಾಯವೊಂದು ಸತ್ತ ವ್ಯಕ್ತಿಯೊಬ್ಬನ ಕೊನೆಯ ಕರ್ಮ/ಕ್ರಿಯೆಗಳನ್ನು ಮಾಡಲು ರೆಡಿಯಾಗುತ್ತದೆ. ಆದರೆ, ಆ ಸತ್ತಿದ್ದಾನೆ ಎಂದುಕೊಂಡ ವ್ಯಕ್ತಿ ಜೀವಂತವಾಗಿ ಬರುತ್ತಾನೆ. ಸ್ಥಳೀಯ ಸಂಪ್ರದಾಯ ನಂಬಿಕೆ ಮೇಲೆ ಇದು ಬೀರುವ ಪರಿಣಾಮ ಏನು? ಕೊನೆಯ ಎಪಿಸೋಡ್ "ಅಸ್ಮಿತೆ"ಯಲ್ಲಿ ವಯಸ್ಸಾದ ಮಲಯಾಳಂ ಬರಹಗಾರ (ಬಾಬು ಅಣ್ಣೂರು)ನನ್ನು ಅನಿರೀಕ್ಷಿತ ಅತಿಥಿ ಭೇಟಿಯಾಗುತ್ತಾರೆ. ಸಾಕಷ್ಟು ಪ್ರಶ್ನೆಗಳು ಉದ್ಭವಿಸುತ್ತವೆ. ಇದನ್ನು ಸ್ವರೂಪ್ ಎಲ್ಮೂನ್ ಮತ್ತು ಸನಲ್ ಅಮನ್ ನಿರ್ದೇಶಿಸಿದ್ದಾರೆ.
ಈ ವೆಬ್ ಸರಣಿಯ ಅನನ್ಯ ಛಾಯಾಗ್ರಹಣ ಗಮನ ಸೆಳೆಯುತ್ತದೆ. ಈ ಸರಣಿಗಳಲ್ಲಿರುವ (ಕಥಾ ಸಂಕಲನದಲ್ಲಿರುವ) ಪ್ರತಿಯೊಂದು ಕಥೆಗಳು ಒಂದಕ್ಕೊಂದು ಸಂಪರ್ಕ ಹೊಂದಿಲ್ಲದೆ ಇದ್ದರೂ ನಿಧಾನವಾಗಿ ಜೀವನದ ಕಟು ವಾಸ್ತವವನ್ನು ಪ್ರದರ್ಶಿಸುತ್ತದೆ. ಒಂದು ಪ್ರದೇಶದ ಸೌಂದರ್ಯ ಮತ್ತು ಸಂಸ್ಕೃತಿ ಮೇಲೆ ನಿರ್ದೇಶಕರು ಗಮನ ಹರಿಸುವ ಸಂದರ್ಭದಲ್ಲಿ ನೀವು ಸ್ವಲ್ಪಮಟ್ಟಿಗೆ ನಿರ್ಲಿಪ್ತವಾಗಿದ್ದರೆ ಪರಿಣಾಮ ಹೆಚ್ಚಿರುತ್ತದೆ.
ನಟನೆಯ ವಿಷಯದಲ್ಲಿ ಇಬ್ಬರು ಜನಪ್ರಿಯ ನಟರಾದ ಪ್ರಕಾಶ್ ರಾಜ್, ರಾಜ್ ಬಿ ಶೆಟ್ಟಿ ಸೇರಿದಂತೆ ಎಲ್ಲಾ ಕಲಾವಿದರು ಶ್ಲಾಘನೀಯ ಎನ್ನುವಂತೆ ನಟಿಸಿದ್ದಾರೆ.
ಈ ವೆಬ್ ಸರಣಿಯಲ್ಲಿರುವ ಏಳು ಸಂಚಿಕೆಗಳು ಹಾಸ್ಯ ವಿಡಂಬನೆಯವರೆಗಿನ ಎಲ್ಲಾ ಪ್ರಾಕಾರಗಳನ್ನು ಒಳಗೊಂಡಿವೆ. ಆದರೆ, ಏಕಂಗೆ ಖಂಡಿತವಾಗಿಯೂ ವೈವಿಧ್ಯಮಯ ಬರಹಗಾರರು ಮತ್ತು ನಿರ್ದೇಶಕರ ಅಗತ್ಯವಿದೆ. ಇದರಿಂದ ದೃಷ್ಟಿಕೋನ ಇನ್ನಷ್ಟು ವಿಸ್ತಾರವಾಗುತ್ತದೆ. ಮಹಿಳಾ ಧ್ವನಿಗಳನ್ನೂ ಸೇರಿಸಬಹುದಿತ್ತು. ಕೊನೆಯದಾಗಿ ಹೇಳುವುದಾದರೆ ಏಕಂ ಎನ್ನುವುದು ಭಿನ್ನವಾದ ವೆಬ್ ಸರಣಿ. ನೋಡಲು ಮೌಲ್ಯಯುತವಾಗಿದೆ. ರಕ್ಷಿತ್ ಶೆಟ್ಟಿಯ ಪರಂವಃ ಸ್ಟುಡಿಯೋಸ್‌ನ ಸಹ ನಿರ್ಮಾಣದ ಈ ವೆಬ್ ಸರಣಿಯು ekamtheseries.com ತಾಣದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ವೆಬ್ ಸರಣಿ ಮೂಲ ವಿಮರ್ಶೆ: ಲತಾ ಶ್ರೀನಿವಾಸನ್ (ಹಿಂದೂಸ್ತಾನ್ ಟೈಮ್ಸ್)
ಕನ್ನಡಕ್ಕೆ: ಎಚ್‌ಟಿ ಕನ್ನಡ
ಇವುಗಳನ್ನೂ ಓದಿ
- Maharaja OTT Movie Review: ವಿಜಯ ಸೇತುಪತಿ ರಾಜ, ಚಿತ್ರಕಥೆ ಮಹಾರಾಜ; ಭಾವನಾತ್ಮಕ ಥ್ರಿಲ್ಲರ್ ಮಹಾರಾಜ ಸಿನಿಮಾದ ವಿಮರ್ಶೆ
- Indian 2 Movie Review: ಕಮಲ್ ಹಾಸನ್ ಮರ್ಮಕಲೆಯ ಬೆರಳಿನಾಟದ ಬೆರಗಿನಾಟ, ಸೇನಾಪತಿಯ ವಿಫಲ ಕಥೆ- ಓದಿ ಇಂಡಿಯನ್ 2 ಸಿನಿಮಾ ವಿಮರ್ಶೆ
- Mirzapur 3 review: ಅಧಿಕಾರದ ಮದ, ಸಂಘರ್ಷ, ಲೈಂಗಿಕತೆ, ಮಾದಕ ಮೋಜಿನಲ್ಲಿ ಫಿನಾಲೆ ಮುಕ್ತಾಯ, ಇಲ್ಲಿದೆ ಮಿರ್ಜಾಪುರ 3 ವೆಬ್ ಸರಣಿ ವಿಮರ್ಶೆ