ಕನ್ನಡ ಸುದ್ದಿ  /  ಮನರಂಜನೆ  /  Mirzapur 3 Review: ಅಧಿಕಾರದ ಮದ, ಸಂಘರ್ಷ, ಲೈಂಗಿಕತೆ, ಮಾದಕ ಮೋಜಿನಲ್ಲಿ ಫಿನಾಲೆ ಮುಕ್ತಾಯ, ಇಲ್ಲಿದೆ ಮಿರ್ಜಾಪುರ 3 ವೆಬ್‌ ಸರಣಿ ವಿಮರ್ಶೆ

Mirzapur 3 review: ಅಧಿಕಾರದ ಮದ, ಸಂಘರ್ಷ, ಲೈಂಗಿಕತೆ, ಮಾದಕ ಮೋಜಿನಲ್ಲಿ ಫಿನಾಲೆ ಮುಕ್ತಾಯ, ಇಲ್ಲಿದೆ ಮಿರ್ಜಾಪುರ 3 ವೆಬ್‌ ಸರಣಿ ವಿಮರ್ಶೆ

Mirzapur 3 review: ಈ ಸರಣಿಯಲ್ಲಿ ಪಂಕಜ್‌ ತ್ರಿಪಾಠಿ ಬದಲು ಅಲಿ ಫಜಲ್‌ ನಾಯಕ ನಟನಾಗಿ ನಟಿಸಿದ್ದಾರೆ. ಹಲವು ತಪ್ಪುಗಳ ನಡುವೆಯೂ ಈ ಸರಣಿ ಅದ್ಭುತವಾಗಿದೆ. ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಪ್ರಸಾರವಾಗುತ್ತಿರುವ ಮಿರ್ಜಾಪುರ್‌ 3 ವೆಬ್‌ ಸರಣಿ ಹೇಗಿದೆ? ಇಲ್ಲಿದೆ ಮಿರ್ಜಾಪುರ 3 ವೆಬ್‌ಸರಣಿ ವಿಮರ್ಶೆ.

ಮಿರ್ಜಾಪುರ 3 ವೆಬ್‌ ಸರಣಿ ವಿಮರ್ಶೆ
ಮಿರ್ಜಾಪುರ 3 ವೆಬ್‌ ಸರಣಿ ವಿಮರ್ಶೆ

Mirzapur 3 review: ಮಿರ್ಜಾಪುರ್‌ 3 ವೆಬ್‌ಸರಣಿಯು ಮಿರ್ಜಾಪುರ್‌ 2 ಬಿಡುಗಡೆಯಾದ ನಾಲ್ಕು ವರ್ಷಗಳ ಬಳಿಕ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಈ ಸರಣಿಯಲ್ಲಿ ಅಲಿ ಫಜಲ್ ಮತ್ತು ಪಂಕಜ್ ತ್ರಿಪಾಠಿ ಕ್ರಮವಾಗಿ ಗುಡ್ಡು ಭೈಯಾ ಮತ್ತು ಕಲೀನ್ ಭೈಯಾ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಂದರೆ, ಈ ಬಾರಿ ಅಲಿ ಫಜಲ್‌ ನಾಯಕ ನಟನಾಗಿ ನಟಿಸಿದ್ದಾರೆ. ಪವರ್‌ ಕಾರ್ಡ್‌ಗಳನ್ನು ಈ ಬಾರಿ ಮರುರಚನೆ ಮಾಡಲಾಗಿದೆ. ರಕ್ತಪಾತ ಮತ್ತು ಅನ್ಯಾಯ ಪ್ರಮುಖ ಪಾತ್ರ ವಹಿಸಿದೆ. ಕೆಲವು ರೋಚಕ ಕ್ಷಣಗಳನ್ನು ಹೊರತುಪಡಿಸಿದರೆ ಮಿರ್ಜಾಪುರ 3ನಲ್ಲಿ ತುಂಬಾ ಅದ್ಭುತವಾಗಿರುವುದೇನು ಇಲ್ಲ.

ವೆಬ್‌ ಸರಣಿಯನ್ನು ಸೌಂದರ್ಯದ ಕ್ಷಣಗಳು, ಒಳಾಂಗಣ ರೋಮಾಂಚನಗಳನ್ನು ಒಳಗೊಂಡಿರುವ ಸೇಡಿನ ಹಿಂಸಾತ್ಮಕ ಕಥೆ ಎಂದು ವ್ಯಾಖ್ಯಾನಿಸಬಹುದು. ಆದರೆ, ಮಿರ್ಜಾಪುರ 2 ಸರಣಿಯ ಬಳಿಕ ಮುಂದಿನ ಸರಣಿಗಾಗಿ ಕಾತರದಿಂದ ಕಾದಿರುವ ವೀಕ್ಷಕರ ಕಾಯುವಿಕೆಗೆ ತಕ್ಕಂತೆ ಈ ಸರಣಿ ಉತ್ತಮವಾಗಿದೆಯೇ?

ಖಂಡಿತಾ ಇಲ್ಲ. ದುರ್ಬಲವಾದ ಕಥಾಹಂದರ ಈ ವೆಬ್‌ ಸರಣಿಯಲ್ಲಿದೆ. ಅನೇಕ ಮುಖ್ಯ ಪಾತ್ರಗಳಿಂದ ಹಿಡಿದು ಹಲವು ಪಾತ್ರಗಳ ಕಥೆಯು ಮುಂದೇನಾಗುತ್ತದೆ ಎಂದು ಊಹಿಸುವಂತೆ ಇದೆ. ಅಲ್ಲಲ್ಲಿ ಕಥೆ ಎಡವುತ್ತದೆ. ಅದೇ ಸಮಯದಲ್ಲಿ ಕೆಲವೊಂದು ಕಡೆ ಅಸಾಧಾರಣ ದೃಶ್ಯಗಳು, ಆಕರ್ಷಕ ವಿಷಯಗಳೊಂದಿಗೆ ಮೋಡಿ ಮಾಡುವಲ್ಲಿ ಯಶಸ್ವಿಯಾಗುತ್ತದೆ. ಈ ಸರಣಿ ಅರ್ಧ ಚೆನ್ನಾಗಿದೆ, ಅರ್ಧ ಚೆನ್ನಾಗಿಲ್ಲ ಎನ್ನಬಹುದು.

ಟ್ರೆಂಡಿಂಗ್​ ಸುದ್ದಿ

ಭಾರತೀಯ ಒಟಿಟಿ ಸರಣಿಗಳಲ್ಲಿ ಹಿಂಸಾಚಾರ, ರಕ್ತಪಾತ ಮತ್ತು ಗೋರ್ ಅನ್ನು ಪರಿಚಯಿಸಿದ ಕೀರ್ತಿ ಮಿರ್ಜಾಪುರ ವೆಬ್‌ ಸರಣಿಗೆ ಸಲ್ಲುತ್ತದೆ. ಮೂರನೇ ಸೀಸನ್ ಖಂಡಿತವಾಗಿಯೂ ಇದನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುತ್ತದೆ.

ಮಿರ್ಜಾಪುರವು ಭಾರತೀಯ ರಾಜಕೀಯ ಮತ್ತು ಕಾನೂನು ಸಮಸ್ಯೆಗಳನ್ನು ಒಳಗೊಂಡ ಹಿಂದಿ  ನಾಡಿನ ಹೃದಯಭಾಗದ ಹಿಂಸಾಚಾರದ ಕಥೆಯನ್ನು ಒಳಗೊಂಡಿದೆ. ಇಲ್ಲಿನ ಅಧಿಕಾರದ ಆಟಗಳು, ಲೈಂಗಿಕತೆ, ಮಾದಕ ವಸ್ತುಗಳು, ಸಾವು, ಸಂಘರ್ಷದ ಸಂಬಂಧಗಳ ಕಥಾನಕವನ್ನು ಮಿರ್ಜಾಪುರ ಸರಣಿ ಬಿಚ್ಚಿಡುತ್ತದೆ.

ಮಿರ್ಜಾಪುರ ವೆಬ್‌ ಸರಣಿ
ಮಿರ್ಜಾಪುರ ವೆಬ್‌ ಸರಣಿ

ಮಿರ್ಜಾಪುರ ವೆಬ್‌ ಸರಣಿಯಲ್ಲಿ ಯಾವುದು ವರ್ಕ್‌ ಆಗಿದೆ?

ಎರಡನೇ ಸೀಸನ್‌ನಲ್ಲಿ ಕೊನೆಗೊಂಡ ಕಥೆಯಿಂದ ಮೂರನೇ ಸೀಸನ್‌ ಆರಂಭವಾಗಿದೆ. ಗುಡ್ಡು ಭೈಯಾ (ಅಲಿ ಫಜಲ್) ಮತ್ತು ಗೋಲು (ಶ್ವೇತಾ ತ್ರಿಪಾಠಿ ಶರ್ಮಾ) ಮಿರ್ಜಾಪುರದ ಅಧಿಕಾರವನ್ನು ಪಡೆದ ಬಳಿಕ ಅಧಿಕಾರದ ಅಮಲಿನಲ್ಲಿ ಸಂತೋಷ ಪಡುವುದನ್ನು ಕಾಣಬಹುದು. ಕಲೀನ್ ಭೈಯಾ (ಪಂಕಜ್ ತ್ರಿಪಾಠಿ) ತನ್ನ ಮಗನ (ದಿವ್ಯೇಂದು ನಿರ್ವಹಿಸಿದ ಮುನ್ನಾ) ಸಾವಿನ ನಂತರ ತಾನು ಸಾವು ತಪ್ಪಿಸಿಕೊಂಡ ನಂತರ ದುಃಖಿಸುವುದನ್ನು ಈ ಸರಣಿಯಲ್ಲಿ ನೋಡಬಹುದು.

ಮಿರ್ಜಾಪುರ ವೆಬ್‌ ಸರಣಿ
ಮಿರ್ಜಾಪುರ ವೆಬ್‌ ಸರಣಿ

ನಿರ್ದೇಶಕರಾದ ಗುರ್ಮೀತ್ ಸಿಂಗ್ ಮತ್ತು ಆನಂದ್ ಅಯ್ಯರ್ ಅವರು ಲೊಕೆಷನ್‌ಗಳನ್ನು ಕಥೆಗೆ ತಕ್ಕಂತೆ ಹೆಚ್ಚು ವಾಸ್ತವವಾಗಿ ತೋರಿಸಲು ಯತ್ನಿಸಿದ್ದಾರೆ. ಉದಾಹರಣೆಗೆ ಮಿರ್ಜಾಪುರದ ನಿಯಂತ್ರಣವನ್ನು ತೆಗೆದುಕೊಳ್ಳುವ ಕಲೀನ್ ಭೈಯಾ ಅವರ ಪ್ರತಿಮೆಯನ್ನು ಒಡೆಯುವುದು ಮತ್ತು ಮಾಧುರಿ (ಇಶಾ ತಲ್ವಾರ್) ತನ್ನ ಪತಿ ಮುನ್ನಾ ಅವರ ಚಿತೆಗೆ ಬೆಂಕಿ ಹಚ್ಚುವುದು ಇವೆಲ್ಲ ವಾಸ್ತವದ ಘಟನೆಗಳು.

ಮಿರ್ಜಾಪುರ ವೆಬ್‌ ಸರಣಿ ವಿಮರ್ಶೆ
ಮಿರ್ಜಾಪುರ ವೆಬ್‌ ಸರಣಿ ವಿಮರ್ಶೆ

ಈ ಬಾರಿಯೂ ಅಂಜುಮ್ ಮತ್ತು ವಿಜಯ್ ವರ್ಮಾ ಅವರು ತಮ್ಮ ಕರಾಳ ಮಹತ್ವಾಕಾಂಕ್ಷೆಗಳು, ಭಾವನಾತ್ಮಕವಾಗಿ ದುರ್ಬಲವಾಗಿರುವ ಅಂಶಗಳನ್ನು ಅದ್ಭುತವಾಗಿ ಪ್ರದರ್ಶಿಸುವ ಮೂಲಕ ತಮ್ಮ ಬಹುಮುಖ ಪ್ರತಿಭೆಯನ್ನು ಅನಾವರಣ ಮಾಡಿದ್ದಾರೆ. ಹರ್ಷಿತಾ ಗೌರ್, ರಾಜೇಶ್ ಟೈಲಿಂಗ್ ಮತ್ತು ಶೀಬಾ ಚಡ್ಡಾ ನಟನೆಯೂ ಮನೋಜ್ಞವಾಗಿದೆ. ಇವರು ತಮ್ಮ ಭಾವುಕ ಅಭಿನಯದ ಮೂಲಕ ಚಿತ್ರಕಥೆಯನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಈ ಮೂರನೇ ಸೀಸನ್‌ನಲ್ಲಿ ಕಾಣಿಸುವ ತಿರುವುಗಳು ಆಕರ್ಷಕವಾಗಿವೆ.

ಯಾವುದು ವರ್ಕ್‌ ಆಗಿಲ್ಲ?

ಈ ಹಿಂದಿನ ಋತುಗಳಿಗೆ ಹೋಲಿಸಿದರೆ ಈ ಸರಣಿಯಲ್ಲಿ ಸಾಕಷ್ಟು ಹೊಸ ಪಾತ್ರಗಳನ್ನು ಪರಿಚಯಿಸಲಾಗಿದೆ. ಆದರೆ, ಈ ಪಾತ್ರಗಳನ್ನು ಒಟ್ಟಿಗೆ ಕನೆಕ್ಟ್‌ ಮಾಡುವ ಹಂತದಲ್ಲಿ ಕಥೆ ನಿಧಾನಗತಿಯಲ್ಲಿ ಸಾಗುತ್ತದೆ.

ಮುಖ್ಯಮಂತ್ರಿ ಮಾಧುರಿ ಪಾತ್ರದ ಮೇಲೆ ಹಿಡಿತ ಸಾಧಿಸುವ ಮೂಲಕ ಇಶಾ ತಲ್ವಾರ್ ಎಲ್ಲರನ್ನೂ ಮೆಚ್ಚಿಸುತ್ತಾರೆ. ಆದರೆ, ಈ ಶಕ್ತಿಯುತ ಪಾತ್ರಕ್ಕೆ ಇವರ ನಟನೆ ದುರ್ಬಲವಾಗಿದ ಎನಿಸುತ್ತದೆ. ಗೇಮ್ ಆಫ್ ಥ್ರೋನ್ಸ್ ಜಗತ್ತನ್ನು ನೆನಪಿಸುವ ಕೆಲವು ದೃಶ್ಯಗಳಿವೆ. ಈ ವೆಬ್‌ ಸರಣಿಯ ಆಘಾತದ ಮೌಲ್ಯವು ಹಾಗೇ ಇದೆ. ಇದು ನಿಮ್ಮನ್ನು ನಡುಗಿಸಬಹುದು.

ಮಿರ್ಜಾಪುರ 3 ವೆಬ್‌ ಸರಣಿಯ ಸ್ಟಿಲ್‌ ಫೋಟೋ
ಮಿರ್ಜಾಪುರ 3 ವೆಬ್‌ ಸರಣಿಯ ಸ್ಟಿಲ್‌ ಫೋಟೋ

ಮಿರ್ಜಾಪುರ ವೆಬ್‌ ಸರಣಿಯ ಅನೇಕ ಅಭಿಮಾನಿಗಳು ಕಳೆದ ನಾಲ್ಕು ವರ್ಷಗಳಿಂದ ಕಲೀನ್ ಭೈಯಾ ಮತ್ತು ಗುಡ್ಡು ಭೈಯಾ ನಡುವಿನ ಮುಖಾಮುಖಿಗಾಗಿ ಕಾಯುತ್ತಿದ್ದರು. ಆದರೆ, ಮುಖಾಮುಖಿಯೇ ಇಲ್ಲಿಲ್ಲ. ಇಡೀ ಸೀಸನ್‌ನಲ್ಲಿ ಕೊನೆಯ 15 ನಿಮಿಷಗಳನ್ನು ಹೊರತುಪಡಿಸಿ, ನಟ ಪಂಕಜ್ ತ್ರಿಪಾಠಿ ಗ್ಯಾಂಗ್‌ಸ್ಟಾರ್‌ ಪ್ರಪಂಚದಿಂದ ಹೊರಗಿದ್ದಾರೆ. ಯುವ ಪೀಳಿಗೆ ಮತ್ತು ಹೊಸ ಪ್ರತಿಸ್ಪರ್ಧಿಗಳಿಗೆ ಮುನ್ನಡೆ ಸಾಧಿಸಲು ಇವರು ಅವಕಾಶ ನೀಡುತ್ತಿರುವ ಭಾವನೆಯನ್ನು ಈ ಸರಣಿ ನೀಡಿದೆ.

ಮಿರ್ಜಾಪುರ 3 ವೆಬ್‌ ಸರಣಿಯ ಸ್ಟಿಲ್‌ ಫೋಟೋ
ಮಿರ್ಜಾಪುರ 3 ವೆಬ್‌ ಸರಣಿಯ ಸ್ಟಿಲ್‌ ಫೋಟೋ

ರಸಿಕಾ ದುಗಲ್ ಮತ್ತೆ ಬೀನಾ ತ್ರಿಪಾಠಿಯಾಗಿ ಗಮನ ಸೆಳೆಯುತ್ತಾರೆ. ಅವರ ಪಾತ್ರವು ಅಂಡರ್ ರೈಟ್ ಎನ್ನಬಹುದು. ಸೀಸನ್ 2 ರಲ್ಲಿ ಭರವಸೆ ಮೂಡಿಸಿದ್ದ ಪ್ರಿಯಾಂಶು ಪೈನ್ಯುಲಿ ಅಲಿಯಾಸ್ ರಾಬಿನ್ ಅವರನ್ನು ಈ ಬಾರಿ ಕಡಿಮೆ ಬಳಕೆ ಮಾಡಲಾಗಿದೆ.

ಮಿರ್ಜಾಪುರ 3 ವೆಬ್‌ ಸರಣಿಯ ಸ್ಟಿಲ್‌ ಫೋಟೋ
ಮಿರ್ಜಾಪುರ 3 ವೆಬ್‌ ಸರಣಿಯ ಸ್ಟಿಲ್‌ ಫೋಟೋ

ಒಟ್ಟಾರೆ ಮಿರ್ಜಾಪುರ್‌ 3 ಎಂಬ ಈ ಫಿನಾಲೆ ಸರಣಿ ಯಾವುದೇ ಪಟಾಕಿ ಇಲ್ಲದೆ ಕಳಪೆಯಾಗಿ ಕಾಣಿಸುತ್ತದೆ. ಈ ಸರಣಿ ನಿರ್ಮಿಸಿದ ತಂಡವು ತನ್ನ ಲಯವನ್ನು ಸಮರ್ಪಕವಾಗಿ ಬದಲಾಯಿಸಿಕೊಂಡಿಲ್ಲ. ಅವರೇ ಸೃಷ್ಟಿಸಿದ ಈ ಹಿಂದಿನ ಪ್ರಪಂಚದ ಭರವಸೆಯನ್ನು ಸರಿಯಾಗಿ ಬಳಕೆ ಮಾಡಿಲ್ಲ. ಅಲ್ಲಲ್ಲಿ ಸಡಿಲ ಕಥಹಂದರವನ್ನು ಹೊಂದಿದೆ. ಹೀಗಿದ್ದರೂ, ನೀವು ಸರಣಿಯ ಈ ತಪ್ಪುಗಳನ್ನು ಕ್ಷಮಿಸುವಿರಿ. ಏಕೆಂದರೆ, ಈ ಸರಣಿಯು ಮೋಜಿನ ಮಜವನ್ನು ನೋಡುತ್ತದೆ.

ಒಟ್ಟಾರೆ ಈ ಸರಣಿಯಲ್ಲಿ ಅಪಾಯಗಳು ಹೆಚ್ಚಿವೆ. ನಾಟಕ ಹೆಚ್ಚಾಗಿದೆ, ಆದರೆ, ಜ್ವಾಲೆ ಕಡಿಮೆಯಾಗಿದೆ. ಭಯಾನಕ ಕ್ಷಣಗಳು, ಊಹಿಸಬಹುದಾದ ಕಥಾಹಂದರದ ನಡುವೆಯೂ ಮೂರನೇಯ ಸೀಸನ್‌ ಒಂದು ಬಾರಿ ನೋಡಲು ಅರ್ಹವಾಗಿದೆ. ಆಸಕ್ತರು ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಇರುವ ಈ ಸರಣಿಯನ್ನು ನೋಡಬಹುದು.

(ಹಿಂದೂಸ್ತಾನ್‌ ಟೈಮ್ಸ್‌ನ ವಿಮರ್ಶಕರಾದ ಸುಗಂಧ ರಾವಲ್‌ ವಿಮರ್ಶೆಯ ಕನ್ನಡ ಅನುವಾದ)

ವಿಭಾಗ