logo
ಕನ್ನಡ ಸುದ್ದಿ  /  ಮನರಂಜನೆ  /  ರಾಜ್‍ ಕಪೂರ್ ಜನ್ಮ ಶತಮಾನೋತ್ಸವ: ಪ್ರಧಾನಿ ಮೋದಿ ಭೇಟಿ ಮಾಡಿದ ಭಾರತೀಯ ಚಿತ್ರರಂಗದ ಶೋಮ್ಯಾನ್ ಕುಟುಂಬ

ರಾಜ್‍ ಕಪೂರ್ ಜನ್ಮ ಶತಮಾನೋತ್ಸವ: ಪ್ರಧಾನಿ ಮೋದಿ ಭೇಟಿ ಮಾಡಿದ ಭಾರತೀಯ ಚಿತ್ರರಂಗದ ಶೋಮ್ಯಾನ್ ಕುಟುಂಬ

Suma Gaonkar HT Kannada

Dec 12, 2024 09:04 PM IST

google News

ಪ್ರಧಾನಿ ಮೋದಿ ಭೇಟಿ ಮಾಡಿದ ಭಾರತೀಯ ಚಿತ್ರರಂಗದ ಶೋಮ್ಯಾನ್ ಕುಟುಂಬ

    • ರಾಜ್‍ ಕಪೂರ್ ಅವರ ಸಾಧನೆಗಳನ್ನು ನೆನಪಿಸಿಕೊಂಡಿರುವ ನರೇಂದ್ರ ಮೋದಿ, ‘ಭಾರತೀಯ ಚಿತ್ರರಂಗಕ್ಕೆ ರಾಜ್‍ ಕಪೂರ್ ಅವರ ಕೊಡುಗೆ ಅಪಾರ. ಇಂಡಿಯಾ ಎಂಬ ಪದ ಹುಟ್ಟುವುದಕ್ಕೆ ಮೊದಲೇ, ರಾಜ್‍ ಕಪೂರ್ ಈ ದೇಶದ ಶಕ್ತಿಯನ್ನು ತಮ್ಮ ಚಿತ್ರಗಳ ಮೂಲಕ ತೋರಿಸಿದ್ದರು’ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಭೇಟಿ ಮಾಡಿದ ಭಾರತೀಯ ಚಿತ್ರರಂಗದ ಶೋಮ್ಯಾನ್ ಕುಟುಂಬ
ಪ್ರಧಾನಿ ಮೋದಿ ಭೇಟಿ ಮಾಡಿದ ಭಾರತೀಯ ಚಿತ್ರರಂಗದ ಶೋಮ್ಯಾನ್ ಕುಟುಂಬ

ಭಾರತೀಯ ಚಿತ್ರರಂಗದ ಶೋಮ್ಯಾನ್‍ ಎಂದೇ ಜನಪ್ರಿಯರಾಗಿರುವ ರಾಜ್‍ ಕಪೂರ್ ಜನನವಾಗಿದ್ದು 1924ರ ಡಿಸೆಂಬರ್ 14ರಂದು. ಈ 14ಕ್ಕೆ ಅವರಿಗೆ 100 ವರ್ಷ ಪೂರ್ತಿಯಾಗುತ್ತದೆ. ಈ ನೆನಪಲ್ಲಿ ದೊಡ್ಡ ಮಟ್ಟದಲ್ಲಿ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್‍ ಕಪೂರ್ ಕುಟುಂಬ ಬುಧವಾರ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತನಾಡಿದೆ. ಈ ಸಂದರ್ಭದಲ್ಲಿ ಮಗಳು ರೀಮಾ ಕಪೂರ್, ಮೊಮ್ಮಕ್ಕಳಾದ ರಣಬೀರ್ ಕಪೂರ್, ಕರೀಷ್ಮಾ ಕಪೂರ್, ಕರೀನಾ ಕಪೂರ್, ಸೊಸೆ ನೀತೂ ಕಪೂರ್ ಮುಂತಾದವರು ಭೇಟಿ ಮಾಡಿ ಹಲವು ವಿಷಯಗಳನ್ನು ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಸೈಫ್‍ ಅಲಿ ಖಾನ್‍ ಮತ್ತು ಆಲಿಯಾ ಭಟ್‍ ಇದ್ದರು.

ರಾಜ್‍ ಕಪೂರ್‍ ಕುಟುಂಬದವರನ್ನು ಭೇಟಿ ಮಾಡಿದ ವೀಡಿಯೋವೊಂದನ್ನು ನರೇಂದ್ರ ಮೋದಿ ತಮ್ಮ ಟ್ವಿಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ, ರಣಬೀರ್ ಕಪೂರ್ ಹೇಗೆ ಇಡೀ ಕುಟುಂಬ ಒತ್ತಡಕ್ಕೊಳಗಾಗಿತ್ತು ಎಂದು ಹೇಳಿಕೊಂಡಿದ್ದಾರೆ. ‘ಇದು ನಮ್ಮ ಕಪೂರ್ ‍ಕುಟುಂಬಕ್ಕೆ ವಿಶೇಷವಾದ ದಿನ. ಈ ಭೇಟಿಗೆ ಚಿರಋಣಿ. ಕಳೆದ ಒಂದು ವಾರದಿಂದ ಈ ಭೇಟಿಯಲ್ಲಿ ಏನು ಮಾತನಾಡಬೇಕು ಎಂಬ ವಿಷಯವಾಗಿ ಎಲ್ಲರೂ ಟೆನ್ಶನ್‍ ಆಗಿದ್ದೆವು’ ಎಂದು ಹೇಳಿಕೊಂಡಿದ್ದಾರೆ.

ರಾಜ್‍ ಕಪೂರ್ ಅವರ ಸಾಧನೆಗಳನ್ನು ನೆನಪಿಸಿಕೊಂಡಿರುವ ನರೇಂದ್ರ ಮೋದಿ, ‘ಭಾರತೀಯ ಚಿತ್ರರಂಗಕ್ಕೆ ರಾಜ್‍ ಕಪೂರ್ ಅವರ ಕೊಡುಗೆ ಅಪಾರ. ಇಂಡಿಯಾ ಎಂಬ ಪದ ಹುಟ್ಟುವುದಕ್ಕೆ ಮೊದಲೇ, ರಾಜ್‍ ಕಪೂರ್ ಈ ದೇಶದ ಶಕ್ತಿಯನ್ನು ತಮ್ಮ ಚಿತ್ರಗಳ ಮೂಲಕ ತೋರಿಸಿದ್ದರು’ ಎಂದು ಹೇಳಿದ್ದಾರೆ.

ರಾಜ್ ಕಪೂರ್‍ ನೆನಪಲ್ಲಿ ಆರ್‍.ಕೆ ಫಿಲಂಸ್‍, ಫಿಲ್ಮ್ ಆರ್ಕೈವರ್ಸ್, NFDC ಮತ್ತು ಫಿಲಂ ಹೆರಿಟೇಜ್‍ ಫೌಂಡೇಶನ್‍ ಜೊತೆಯಾಗಿ ‘ರಾಜ್‍ ಕಪೂರ್ 100’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಮೂರು ದಿನಗಳ ಉತ್ಸವ ಡಿ. 13ಕ್ಕೆ ಪ್ರಾರಂಭವಾಗಿ 15ಕ್ಕೆ ಮುಗಿಯಲಿದೆ. ಈ ಕಾರ್ಯಕ್ರಮದಲ್ಲಿ 40 ನಗರಗಳ 135 ಚಿತ್ರಮಂದಿರಗಳಲ್ಲಿ ರಾಜ್‍ ಕಪೂರ್‍ ನಿರ್ದೇಶನದ 10 ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ