ಬಾಲ್ಯದ ಗೆಳೆಯನ ಜತೆ ಕೀರ್ತಿ ಸುರೇಶ್ ಶುಭವಿವಾಹ: ಕಿಟ್ಟಿ ಮದುವೆ ಫೋಟೋಗಳು ವೈರಲ್; ಸೆಲೆಬ್ರಿಟಿಗಳು, ಅಭಿಮಾನಿಗಳಿಂದ ಹಾರೈಕೆಗಳ ಸುರಿಮಳೆ
Keerthy Suresh marriage photos: ನಟಿ ಕೀರ್ತಿ ಸುರೇಶ್‌ಮತ್ತು ಅವರ ಬಾಲ್ಯದ ಗೆಳೆಯ ಆಂಟೊನಿ ತಟ್ಟಿಲ್ ಶುಭವಿವಾಹ ಗೋವಾದಲ್ಲಿ ಅದ್ಧೂರಿಯಾಗಿ ನಡೆದಿದೆ. ಈ ವಿವಾಹ ಸಮಾರಂಭ ಮಧುರ ಕ್ಷಣಗಳ ಫೋಟೋಗಳನ್ನು ಕೀರ್ತಿ ಸುರೇಶ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Keerthy Suresh marriage photos: ನಟಿ ಕೀರ್ತಿ ಸುರೇಶ್‌ಮತ್ತು ಅವರ ಬಾಲ್ಯದ ಗೆಳೆಯ ಆಂಟೊನಿ ತಟ್ಟಿಲ್ ಶುಭವಿವಾಹ ಗೋವಾದಲ್ಲಿ ಅದ್ಧೂರಿಯಾಗಿ ನಡೆದಿದೆ. ಈ ವಿವಾಹ ಸಮಾರಂಭ ಮಧುರ ಕ್ಷಣಗಳ ಫೋಟೋಗಳನ್ನು ಕೀರ್ತಿ ಸುರೇಶ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಗೋವಾದಲ್ಲಿ ನಡೆದ ಡೆಸ್ಟಿನೇಷನ್ ವೆಡ್ಡಿಂಗ್‌ನ ಫೋಟೋಗಳು ವೈರಲ್ ಆಗುತ್ತಿದೆ. ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌ನ ಸೆಲೆಬ್ರಿಟಿಗಳು ನವಜೋಡಿಗೆ ಶುಭ ಹಾರೈಸುತ್ತಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಕೀರ್ತಿ ಸುರೇಶ್ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮದುವೆಯ ಶುಭ ಸಮಯದ ಈ ಫೋಟೋಗಳಿಗೆ ಸಾಕಷ್ಟು ಜನರು ಕಂಗ್ರಾಜ್ಯುಲೇಷನ್ ಎಂದಿದ್ದಾರೆ. ನಟಿ ವಾಮಿಕಾ, ಕಿಶಾನ್ ಶರ್ಮಾ, ಹರ್ಷಿಕಾ ಪೂಣಚ್ಚ, ಸೋನುಗೌಡ, ಅನುಪಮ ಪರಮೇಶ್ವರನ್, ಅಹನಾ ಕೃಷ್ಣಾ, ಹನ್ಸಿಕಾ, ಸಂಯುಕ್ತಾ ಹೆಗಡೆ, ನಕ್ಷತ್ರ ನಾಗೇಶ್, ಪ್ರಿಯಾಂಕ ಮೋಹನ್, ಜ್ಯೋತಿಕಾ ರಾಯ್ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ನವಜೋಡಿಗೆ ಶುಭ ಹಾರೈಸಿದ್ದಾರೆ.
ಕೀರ್ತಿ ಸುರೇಶ್ ಮತ್ತು ಆಂಟೋನಿ ತಟ್ಟಿಲ್ ಅವರದ್ದು ಹದಿನೈದು ವರ್ಷದ ಲವ್‌ಸ್ಟೋರಿ. ದುಬೈ ಮೂಲದ ಉದ್ಯಮಿಯಾಗಿರುವ ಆಂಟೋನಿ ತಟ್ಟಿಲ್ ಅವರು ಗೋವಾದಲ್ಲಿ ರೆಸಾರ್ಟ್‌ಗಳನ್ನೂ ಹೊಂದಿದ್ದಾರೆ. ಹೈಸ್ಕೂಲ್‌ನಲ್ಲಿಯೇ ಇವರಿಬ್ಬರು ಪರಿಚಿತರರು. ಒಟ್ಟಿಗೆ ಹೈಸ್ಕೂಲ್ನಲ್ಲಿ ಓದಿದ್ರು. ಇದು ಹಲವು ವರ್ಷಗಳಿಂದ ಈ ಇಬ್ಬರು ಪ್ರೀತಿ ಮಾಡುತ್ತಿದ್ದರು. ಬಹುಕಾಲದ ಇವರ ಪ್ರೇಮಕಥೆ ಇಂದು ಮದುವೆಯ ಹಂತ ತಲುಪಿದೆ.
ಕೀರ್ತಿ ಸುರೇಶ್ ಅವರು ಸಿನಿಮಾ ನಿರ್ಮಾಪಕ ಜಿ ಸುರೇಶ್ ಕುಮಾರ್ ಮತ್ತು ನಟಿ ಮೇನಕಾ ಪುತ್ರಿ. ಕೀರ್ತಿ ಬಾಲಕಲಾವಿದೆಯಾಗಿ ಸಿನಿರಂಗಕ್ಕೆ ಎಂಟ್ರಿ ನೀಡಿದ್ದರು. 2000ರಲ್ಲಿ ಇವರು ಬಾಲ ಕಲಾವಿದೆಯಾಗಿ ಸಿನಿಮಾವೊಂದರಲ್ಲಿ ನಟಿಸಿದ್ದರು. ಈಕೆ ಓದಿದ್ದು ಫ್ಯಾಷನ್ ಡಿಸೈನಿಂಗ್. ಮಲಯಾಳಂ ಸಿನಿಮಾ ಗೀತಾಂಜಲಿ ಮೂಲಕ ಇವರು ಸಿನಿರಂಗಕ್ಕೆ ನಾಯಕಿಯಾಗಿ ಪ್ರವೇಶಿಸಿದ್ದರು. 2013ರಲ್ಲಿ ಬಿಡುಗಡೆಯಾದ ಗೀತಾಂಜಲಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಕೆಯ ಪಾತ್ರಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು. ಮೊದಲ ನಟನೆಯಲ್ಲಿಯೇ ಸೈ ಎನಿಸಿಕೊಂಡಿದ್ದರು.
ಕೀರ್ತಿ ಸುರೇಶ್ ಇತ್ತೀಚೆಗೆ ರಘು ತಾತಾ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾವೀಗ ಒಟಿಟಿಯಲ್ಲಿದೆ. ಪ್ರಭಾಸ್ ಜತೆ ಕಲ್ಕಿ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಗುಡ್ ಲಕ್ ಸಖಿ, ರಂಗ್ ದೇ, ಜಟ್ಟಿ ರತ್ನಲು, ಮಿಸ್ ಇಂಡಿಯಾ, ಸರ್ಕಾರ್, ಮಹಾನಟಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೈರನ್, ಭೋಲಾ ಶಂಕರ್, ಮಾಮನನ್, ದಸರಾ, ವಾಶಿ, ಸರ್ಕಾರು ವಾರಿ ಪಾಟಾ, ಶಣಿ ಕಾಯೀಧಾಮ್ ಇವರು ನಟಿಸಿದ ಇನ್ನಿತರ ಚಿತ್ರಗಳು. ಇವರು ನಟಿಸಿರುವ ಚಿತ್ರಗಳ ದೊಡ್ಡ ಪಟ್ಟಿಯೇ ಇದೆ.