logo
ಕನ್ನಡ ಸುದ್ದಿ  /  ಮನರಂಜನೆ  /  Roopanthara Ott: ಸದ್ದಿಲ್ಲದೆ ಒಟಿಟಿಗೆ ಬಂತು ರಾಜ್‌ ಬಿ ಶೆಟ್ಟಿಯ ರೂಪಾಂತರ ಸಿನಿಮಾ; ಎಲ್ಲಿ ನೋಡಬಹುದು ಈ ಆಂಥಾಲಜಿ ಥ್ರಿಲ್ಲರ್‌ ಸಿನಿಮಾ?

Roopanthara OTT: ಸದ್ದಿಲ್ಲದೆ ಒಟಿಟಿಗೆ ಬಂತು ರಾಜ್‌ ಬಿ ಶೆಟ್ಟಿಯ ರೂಪಾಂತರ ಸಿನಿಮಾ; ಎಲ್ಲಿ ನೋಡಬಹುದು ಈ ಆಂಥಾಲಜಿ ಥ್ರಿಲ್ಲರ್‌ ಸಿನಿಮಾ?

Sep 13, 2024 11:38 AM IST

google News

ಸದ್ದಿಲ್ಲದೆ ಒಟಿಟಿಗೆ ಬಂತು ರಾಜ್‌ ಬಿ ಶೆಟ್ಟಿಯ ರೂಪಾಂತರ ಸಿನಿಮಾ

    • Raj b Shetty Roopanthara OTT: ರಾಜ್‌ ಬಿ ಶೆಟ್ಟಿ ನಟನೆಯ ಆಂಥಾಲಜಿ ಸಿನಿಮಾ ರೂಪಾಂತರ ದಿಢೀರ್‌ ಒಟಿಟಿ ಅಂಗಳ ಪ್ರವೇಶಿಸಿದೆ. ಯಾವುದೇ ಪೂರ್ವ ಮಾಹಿತಿಯಿಲ್ಲದೆ, ಒಟಿಟಿ ಬಿಡುಗಡೆಯ ಬಗ್ಗೆ ಸುಳಿವು ನೀಡದೆ ಶುಕ್ರವಾರದಿಂದಲೇ ಸ್ಟ್ರೀಮಿಂಗ್‌ ಆರಂಭಿಸಿದೆ. ಯಾವ ಒಟಿಟಿಯಲ್ಲಿ ಈ ಸಿನಿಮಾ ನೋಡಬಹುದು? ಇಲ್ಲಿದೆ ಮಾಹಿತಿ. 
ಸದ್ದಿಲ್ಲದೆ ಒಟಿಟಿಗೆ ಬಂತು ರಾಜ್‌ ಬಿ ಶೆಟ್ಟಿಯ ರೂಪಾಂತರ ಸಿನಿಮಾ
ಸದ್ದಿಲ್ಲದೆ ಒಟಿಟಿಗೆ ಬಂತು ರಾಜ್‌ ಬಿ ಶೆಟ್ಟಿಯ ರೂಪಾಂತರ ಸಿನಿಮಾ (YouTube\ Lighter Buddha Films)

Roopanthara OTT: ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ರಾಜ್‌ ಬಿ ಶೆಟ್ಟಿ ನಟನೆಯ ಆಂಥಾಲಜಿ ಸಿನಿಮಾ ರೂಪಾಂತರ ದಿಢೀರ್‌ ಒಟಿಟಿ ಅಂಗಳ ಪ್ರವೇಶಿಸಿದೆ. ಯಾವುದೇ ಪೂರ್ವ ಮಾಹಿತಿಯಿಲ್ಲದೆ, ಒಟಿಟಿ ಬಿಡುಗಡೆಯ ಬಗ್ಗೆ ಸುಳಿವು ನೀಡದೆ ಶುಕ್ರವಾರದಿಂದಲೇ ಸ್ಟ್ರೀಮಿಂಗ್‌ ಆರಂಭಿಸಿದೆ. ಜುಲೈ 26ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ, ವೀಕ್ಷಕರಿಂದ ಪಾಸಿಟಿವ್‌ ಟಾಕ್‌ ಪಡೆದುಕೊಂಡಿತ್ತು. ವಿಮರ್ಶೆ ದೃಷ್ಟಿಯಿಂದಲೂ ಮೆಚ್ಚುಗೆ ಸಿಕ್ಕಿತ್ತು. ಇದೀಗ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಒಂದೂವರೆ ತಿಂಗಳ ನಂತರ ಒಟಿಟಿಗೆ ಆಗಮಿಸಿದೆ ರೂಪಾಂತರ. ಹಾಗಾದರೆ, ಈ ಸಿನಿಮಾ ವೀಕ್ಷಣೆ ಎಲ್ಲಿ? ಇಲ್ಲಿದೆ ಮಾಹಿತಿ.

ರಾಜ್ ಬಿ ಶೆಟ್ಟಿ ನಟಸಿ, ನಿರ್ದೇಶನದ ಒಂದು ಮೊಟ್ಟೆಯ ಕಥೆ ಸಿನಿಮಾದ ಜತೆ ನಿಂತಿದ್ದ ಸುಹಾನ್ ಪ್ರಸಾದ್ ಅವರ ಎರಡನೇ ನಿರ್ಮಾಣದ ಚಿತ್ರ ಈ ರೂಪಾಂತರ. ಮ್ಯಾಂಗೋ ಪಿಕಲ್‌ ಎಂಟರ್‌ಟೈನ್‌ಮೆಂಟ್‌ ಪ್ರೊಡಕ್ಷನ್ಸ್‌ ಮತ್ತು ಜಾನಿ ಎಂಟರ್‌ಟೈನ್‌ಮೆಂಟ್‌ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿವೆ. ರೂಪಾಂತರದಲ್ಲಿ ಲೇಖಾ ನಾಯ್ಡು, ಹನುಮಕ್ಕ, ಭರತ್ ಜಿಬಿ, ಸೋಮಶೇಖರ್ ಬೋಳೆಗಾಂವ್, ಅಂಜನ್ ಭಾರದ್ವಾಜ್ ಮುಂತಾದವರು ನಟಿಸಿದ್ದಾರೆ. ಪ್ರವೀಣ್ ಶ್ರೀಯಾನ್ ಅವರ ಛಾಯಾಗ್ರಹಣ ಮತ್ತು ಮಿಧುನ್ ಮುಕುಂದನ್ ಸಂಗೀತ ಈ ಚಿತ್ರಕ್ಕಿದೆ.

ನಾಲ್ಕು ಕಥೆಯ ತಿರುಳೇನು?

ನಿರ್ದೇಶಕ ಮಿಥಿಲೇಶ್ ಎಡವಳತ್‌ ನಾಲ್ಕು ಕಥೆಗಳ ಗುಚ್ಛವನ್ನು ರೂಪಾಂತರದ ಮೂಲಕ ಕಟ್ಟಿಕೊಟ್ಟಿದ್ದಾರೆ. ಸಮಕಾಲೀನ ಸಮಾಜದ ಸಮಸ್ಯೆಗಳಿಗೆ ಥ್ರಿಲ್ಲರ್ ಅಂಶಗಳನ್ನು ಸೇರಿಸಿ ರೂಪಾಂತರ ಚಿತ್ರದಲ್ಲಿ ನಿರ್ದೇಶಕರು ನಾಲ್ಕು ಕಥೆಗಳನ್ನು ಪ್ರಸ್ತುತಪಡಿಸಿದ್ದಾರೆ. ಮೊದಲ ಕಥೆಯಲ್ಲಿ ಆಕಸ್ಮಿಕವಾಗಿ ನಗರಕ್ಕೆ ವಲಸೆ ಬರುವ ಹಳ್ಳಿಯ ಹಿರಿಯ ರೈತ ದಂಪತಿಗಳು ಎದುರಿಸುವ ಕಷ್ಟಗಳನ್ನು ನಿರ್ದೇಶಕರು ತೋರಿಸಿದ್ದಾರೆ.

ಭಿಕ್ಷುಕನ ಬಳಿ ಸಾಕಷ್ಟು ಹಣವನ್ನು ನೋಡಿದ ಪೊಲೀಸ್ ಅಧಿಕಾರಿ ಮತ್ತು ಕಾನ್‌ಸ್ಟೆಬಲ್ ಆತನ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೆ. ಆ ಭಿಕ್ಷುಕನ ಹುಡುಕಾಟದಲ್ಲಿ ಕಲಿತ ಸತ್ಯಗಳನ್ನು ರೋಚಕ ಮತ್ತು ಭಾವುಕ ಮಿಶ್ರಣದೊಂದಿಗೆ ಕಟ್ಟಿಕೊಟ್ಟಿದ್ದಾರೆ. ಇದರ ಜತೆಗೆ ಆನ್‌ಲೈನ್ ಗೇಮ್‌ಗಳಿಗೆ ಅಡಿಕ್ಟ್ ಆಗಿರುವ ಯುವಕ ಜೀವನದಲ್ಲಿ ಏನನ್ನು ಕಳೆದುಕೊಂಡಿದ್ದಾನೆ? ಆ ಕತ್ತಲ ಲೋಕದಿಂದ ಅವನು ಹೇಗೆ ಹೊರಬಂದನು ಎಂಬುದು ಮೂರನೇ ಕಥೆಯಲ್ಲಿ ಹೇಳಿದ್ದಾರೆ.

ಐಟಿ ಉದ್ಯೋಗಿಯೊಬ್ಬ ಸ್ಥಳೀಯ ರೌಡಿಯ ಜತೆಗೆ ಜಗಳಕ್ಕಿಳಿಯುತ್ತಾನೆ. ಈ ಸಂಘರ್ಷದ ಪರಿಣಾಮಗಳೇನು? ವೈರಿಗಳಾಗಿದ್ದ ಇಬ್ಬರೂ ಹೇಗೆ ಸ್ನೇಹಿತರಾದರು ಎಂಬುದನ್ನು ನಾಲ್ಕನೇ ಕಥೆಯಲ್ಲಿ ತೋರಿಸಿದ್ದಾರೆ ನಿರ್ದೇಶಕರು. ಈ ನಾಲ್ಕು ಕಥೆಗಳನ್ನು ಲಿಂಕ್ ಮಾಡಿ, ಕ್ಲೈಮ್ಯಾಕ್ಸ್‌ನಲ್ಲಿ ಪ್ರೇಕ್ಷಕರಿಗೆ ಟ್ವಿಸ್ಟ್‌ ಕೊಟ್ಟಿದ್ದಾರೆ.

ಯಾವ ಒಟಿಟಿಯಲ್ಲಿ ರೂಪಾಂತರ ನೋಡಬಹುದು?

ಯಾವುದೇ ಸುಳಿವು ನೀಡದೆ, ನೇರವಾಗಿ ಅಮೆಜಾನ್‌ ಪ್ರೈಂ ವಿಡಿಯೋ ಒಟಿಟಿಗೆ ರೂಪಾಂತರ ಸಿನಿಮಾ ಆಗಮಿಸಿದೆ. ಇಂದಿನಿಂದ (ಸೆ. 13) ಈ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಿದೆ. ಈ ಸಿನಿಮಾ ಇಂಗ್ಲಿಷ್‌ ಸಬ್‌ಟೈಟಲ್‌ ಜತೆಗೆ ಕನ್ನಡದಲ್ಲಿ ಮಾತ್ರ ಸ್ಟ್ರೀಮಿಂಗ್‌ ಆರಂಭಿಸಿದೆ.

ಚಿತ್ರಕ್ಕೆ ಒಳ್ಳೆಯ IMDb ರೇಟಿಂಗ್

ನಾಲ್ಕು ವಿಭಿನ್ನ ಹಿನ್ನಲೆಯಲ್ಲಿ ನಾನ್ ಲೀನಿಯರ್ ಚಿತ್ರಕಥೆಯೊಂದಿಗೆ ನಿರ್ದೇಶಕ ಮಿಥಿಲೇಶ್ ರೂಪಾಂತರ ಚಿತ್ರವನ್ನು ತೆರೆಗೆ ತಂದಿದ್ದಾರೆ. ಈ ಚಿತ್ರವು IMDbಯಲ್ಲಿ 8.5 ರೇಟಿಂಗ್ ಪಡೆದುಕೊಂಡಿದೆ. ಇದು ಈ ವರ್ಷ ಕನ್ನಡದಲ್ಲಿ ಅತಿ ಹೆಚ್ಚು IMDb ರೇಟಿಂಗ್‌ ಪಡೆದ ಚಿತ್ರ ಎಂದೂ ಕರೆಸಿಕೊಂಡಿದೆ. ಇನ್ನು ಈ ನಡುವೆ ಇತ್ತೀಚೆಗಷ್ಟೇ ಮಲಯಾಳಂನ ಟರ್ಬೋ ಸಿನಿಮಾದಲ್ಲಿಯೂ ಖಳನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿದರು. ಇನ್ನೆರಡು ಮಾಲಿವುಡ್‌ ಸಿನಿಮಾಗಳಲ್ಲಿ ರಾಜ್‌ ಬಿ ಶೆಟ್ಟಿ ನಟಿಸುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ