‘ಸನಾತನ ಧರ್ಮದ ಮಾತು ಸುಳ್ಳಾಗುತ್ತಿದೆ, ಇನ್ನೆಂಥ ದುರ್ದಿನ ಕಾದಿದೆ ಮುಂದೆ ನೋಡಲು?’ ನವರಸನಾಯಕ ಜಗ್ಗೇಶ್‌ ಬರಹ-sandalwood news actor navarasa nayaka jaggesh emotional social media post about his mother nanjamma mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ‘ಸನಾತನ ಧರ್ಮದ ಮಾತು ಸುಳ್ಳಾಗುತ್ತಿದೆ, ಇನ್ನೆಂಥ ದುರ್ದಿನ ಕಾದಿದೆ ಮುಂದೆ ನೋಡಲು?’ ನವರಸನಾಯಕ ಜಗ್ಗೇಶ್‌ ಬರಹ

‘ಸನಾತನ ಧರ್ಮದ ಮಾತು ಸುಳ್ಳಾಗುತ್ತಿದೆ, ಇನ್ನೆಂಥ ದುರ್ದಿನ ಕಾದಿದೆ ಮುಂದೆ ನೋಡಲು?’ ನವರಸನಾಯಕ ಜಗ್ಗೇಶ್‌ ಬರಹ

Jaggesh: ನಟ ಜಗ್ಗೇಶ್‌ ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ಬರಹಗಳನ್ನು ಶೇರ್‌ ಮಾಡುಕೊಳ್ಳುತ್ತಲೇ ಇರುತ್ತಾರೆ. ಇದೀಗ ಹೆತ್ತ ತಾಯಿಗೆ ಮಗನೊಬ್ಬ ಮಾಡಿದ ಹೀನಕೃತ್ಯದ ಬಗ್ಗೆ ಪತ್ರಿಕೆಯಲ್ಲಿ ಓದಿದ ಜಗ್ಗೇಶ್‌ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸನಾತನ ಧರ್ಮದ ಮಾತು ಸುಳ್ಳಾಗುತ್ತಿದೆ ಎಂದಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಅಮ್ಮನ ಬಗ್ಗೆ ನಟ ನವರಸನಾಯಕ ಜಗ್ಗೇಶ್‌ ಬರಹ ಪ್ರಕಟಿಸಿದ್ದಾರೆ.
ಸೋಷಿಯಲ್‌ ಮೀಡಿಯಾದಲ್ಲಿ ಅಮ್ಮನ ಬಗ್ಗೆ ನಟ ನವರಸನಾಯಕ ಜಗ್ಗೇಶ್‌ ಬರಹ ಪ್ರಕಟಿಸಿದ್ದಾರೆ. (instagram\ Jaggesh)

Navarasanayaka Jaggesh: ನವರಸ ನಾಯಕ ಜಗ್ಗೇಶ್‌ ಬರೀ ಸಿನಿಮಾ ಮಾತ್ರವಲ್ಲದೆ, ಕಿರುತೆರೆ, ರಾಜಕೀಯದ ಜತೆಗೆ ಸೋಷಿಯಲ್‌ ಮೀಡಿಯಾದಲ್ಲಿಯೂ ಸಕ್ರಿಯರು. ನಿತ್ಯ ಒಂದಲ್ಲ ಒಂದು ಜೀವನದ ಅನುಭವದ ಪೋಸ್ಟ್‌ ಹಂಚಿಕೊಂಡು ಅಭಿಮಾನಿಗಳ ಜತೆ ಸಂಪರ್ಕದಲ್ಲಿರುತ್ತಾರೆ. ಅದರಲ್ಲೂ, ರಕ್ತ ಸಂಬಂಧಗಳು, ಅಪ್ಪ ಅಮ್ಮನ ಪ್ರೀತಿ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬರಹಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡುಕೊಳ್ಳುತ್ತಲೇ ಇರುತ್ತಾರೆ. ಇದೀಗ ಹೆತ್ತ ತಾಯಿಗೆ ಮಗನೊಬ್ಬ ಮಾಡಿದ ಹೀನಕೃತ್ಯದ ಬಗ್ಗೆ ಪತ್ರಿಕೆಯಲ್ಲಿ ಓದಿದ ಜಗ್ಗೇಶ್‌ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸನಾತನ ಧರ್ಮದ ಮಾತು ಸುಳ್ಳಾಗುತ್ತಿದೆ ಎಂದಿದ್ದಾರೆ.

ಇತ್ತೀಚೆಗಷ್ಟೇ ದೊಡ್ಡಬಳ್ಳಾಪುರ ಹೊರವಲಯದ ರಾಗರಾಳ್ಳಗುಟ್ಟೆ ಬಳಿ 56 ವರ್ಷದ ತಾಯಿಯನ್ನು ಸ್ವತಃ ಗಂಗರಾಜು ಎಂಬ ಮಗನೇ ಕತ್ತು ಸೀಳಿ ಹತ್ಯೆ ಮಾಡಿದ್ದ. ಈ ಸುದ್ದಿಯಲ್ಲಿ ಪ್ರಕಟವಾಗಿತ್ತು. ಈ ಕೃತ್ಯ ಓದಿದ ಜಗ್ಗೇಶ್‌ ಸೋಷಿಯಲ್‌ ಮೀಡಿಯಾದಲ್ಲಿ ಬೇಸರದಲ್ಲಿಯೇ ಬರಹವೊಂದನ್ನು ಹಂಚಿಕೊಂಡಿದ್ದಾರೆ. ಹೀಗಿದೆ ಆ ಬರಹ.

ಸನಾತನ ಧರ್ಮದ ಮಾತು ಸುಳ್ಳಾಗುತ್ತಿದೆ

"ಇಂದು ಪತ್ರಿಕೆಯಲ್ಲಿ ಮಗ ಅಮ್ಮನ ಕತ್ತು ಸೀಳಿ ಕೊಂದ ಈ ವರದಿಯ ನೋಡಿ ದುಃಖವಾಯಿತು. ಎತ್ತ ಸಾಗುತ್ತಿದೆ ಸಮಾಜ? ಇನ್ನೆಂಥ ದುರ್ದಿನ ಕಾದಿದೆ ಮುಂದೆ ನೋಡಲು? ದೇಹ ಉಸಿರು ನೀಡಿ ಜನ್ಮಕೊಟ್ಟ ತಾಯಿ ದೇವರಿಗೆ ಸಮ ಎನ್ನುತ್ತದೆ ಸನಾತನ ಧರ್ಮ. ಅಂಥ ಮಾತುಗಳೇ ಸುಳ್ಳಾಗುತ್ತಿದೆ!! ಇದಕ್ಕೆಲ್ಲಾ ಕಾರಣ ಯಾಂತ್ರಿಕ ಚಿಂತನೆ. ಸಸಿಯಲ್ಲೆ ಸರಿಮಾಡದ ಮರ ಹೆಮ್ಮರವಾದಾಗ ಸರಿಮಾಡಲಾಗುತ್ತದೆಯೇ?" ಎಂದಿದ್ದಾರೆ ಜಗ್ಗೇಶ್‌.

29ನೇ ವಯಸ್ಸಿಗೆ ಅಮ್ಮನನ್ನು ಕಳೆದುಕೊಂಡ ನತದೃಷ್ಟ ನಾನು

"ಮಕ್ಕಳಿಗೆ ಭಯವಿಲ್ಲದೆ ಮುದ್ದು. ತಿದ್ದಲಾಗದ ವಿದ್ಯಾಲಯ. ನಮಗ್ಯಾಕೆ ಎನ್ನುವ ಸಮಾಜ. ಜಗತ್ತೆ ಮೊಬೈಲ್ ಆದ ದಿನಗಳು. ಆಡುವ ವಯಸಲ್ಲಿ ವ್ಯಸನ. ಹಣದ ಬೆಲೆ ಅರಿಯದವರ ಹಟಕ್ಕೆ ವಾಹನ ಕೊಡುಗೆ. ಅವನಿಗಿದೆ ನನಗಿಲ್ಲಾ ಎಂಬ ದ್ವೇಷಗುಣ. ಬೆವರು ಹರಿಸದೆ ಎಲ್ಲಾ ಸೌಲತ್ತು ಬೇಕೆಂಬ ಆಸೆ. ತಾತ ಅಜ್ಜಿ ಅತ್ತೆಮಾವ ದೊಡ್ಡಪ್ಪ ಚಿಕ್ಕಪ್ಪ ಸಂಬಂಧ ಅರಿವಿರದ ಒಡೆದ ಕುಟುಂಬದ ಕಂದಮ್ಮಗಳು. ದೇವರು ಧರ್ಮದ ಭಯ ಆಚರಣೆ ಇಲ್ಲದ ಜೀವನದಲ್ಲಿ ಎಲ್ಲಿಂದ ಸುಸಂಸ್ಕೃತ ಜೀವಗಳು ಹುಟ್ಟಿ ವಂಶ ಬೆಳಗಬಲ್ಲವು? ತಾಯಿಗಾಗಿ ಅವಳ ಸಂತಸಕ್ಕಾಗಿ ಬಾಳಿದ ನಮಗೆ 29ವರ್ಷಕ್ಕೆ ಅಮ್ಮನ ಕಳೆದುಕೊಂಡ ನತದೃಷ್ಟ ನಾನು" ಎಂದಿದ್ದಾರೆ.

ದೇವರಕೋಣೆಯಲ್ಲಿವೆ ಅಮ್ಮನ ವಸ್ತುಗಳು..

"ಅಮ್ಮ ಹಾಕಿದ ಗೆರೆ ಕಲಿಸಿದ ನೀತಿಪಾಠ ಕೈತೊರಿದ ದೇವರ ಪಾದ, ಕಲಿಸಿದ ನೀತಿ ಗುರುಹಿರಿಯರ ಮೇಲಿನ ಭಕ್ತಿ, ಬದುಕಿನ ಹಾಗು ಸಮಾಜದ ಮೇಲಿನ ಭಯ ನಮ್ಮ ಬದುಕಿನ ನಿತ್ಯ ಪೂಜೆಯಂತೆ ಆಚರಣೆ ನನ್ನ 62ನೆ ವಯಸ್ಸಲ್ಲು ಪಾಲಿಸಿ ಅಮ್ಮನ ವಸ್ತುಗಳು ದೇವರ ಕೋಣೆಯಲ್ಲಿ ದೇವರ ಸಮವಾಗಿ ಪೂಜಿಸುತ್ತೇನೆ..." ಎಂದು ತಮ್ಮ ಅಮ್ಮನನ್ನು ನೆನಪಿಸಿಕೊಂಡಿದ್ದಾರೆ.

"ಅಮ್ಮನನ್ನೆ ಕೊಲೆಮಾಡಿದ ಮಗ ಎಂದು ಓದಿ ಭಾವುಕನಾಗಿ ನನ್ನ ದಿನಚರಿ ಕಾರ್ಯವೆ ಮರೆತು ಸ್ನಾನ ಪೂಜೆ ಇಲ್ಲದೆ ಶವದಂತೆ ಕೂತುಬಿಟ್ಟೆ!! ತಾಯಿ ದೇವರು ಎಂದವರಿಗೆ ತಾಯಿ ಇಲ್ಲಾ ಗೌರವಿಸದಿರುವವರಿಗೆ ತಾಯಿ. ಎಂಥ ವಿಚಿತ್ರ ದೇವರ ಲೀಲೆ.. ಒಂದಂತು ಸತ್ಯ ತಂದೆತಾಯಿ ನೋಯಿಸಿದವರು ನರಕ ಇಲ್ಲೆ ಅನುಭವಿಸುತ್ತಾರೆ.. ಮಾತೃದೇವೋಭವ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಜಗ್ಗೇಶ್.‌

mysore-dasara_Entry_Point