Weekend OTT Releases: ಮಿ. ಬಚ್ಚನ್‌ ಜತೆಗೆ ಬೆಂಚ್‌ ಲೈಫ್‌ ಸಿರೀಸ್‌; ಈ ವಾರಾಂತ್ಯಕ್ಕೆ ಒಟಿಟಿಯಲ್ಲಿ ಸಾಲು ಸಾಲು ಸಿನಿಮಾ, ವೆಬ್‌ಸರಣಿಗಳು-ott news weekend ott releases ravitejas mr bachchan to committee kurrollu latest ott releases this week mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Weekend Ott Releases: ಮಿ. ಬಚ್ಚನ್‌ ಜತೆಗೆ ಬೆಂಚ್‌ ಲೈಫ್‌ ಸಿರೀಸ್‌; ಈ ವಾರಾಂತ್ಯಕ್ಕೆ ಒಟಿಟಿಯಲ್ಲಿ ಸಾಲು ಸಾಲು ಸಿನಿಮಾ, ವೆಬ್‌ಸರಣಿಗಳು

Weekend OTT Releases: ಮಿ. ಬಚ್ಚನ್‌ ಜತೆಗೆ ಬೆಂಚ್‌ ಲೈಫ್‌ ಸಿರೀಸ್‌; ಈ ವಾರಾಂತ್ಯಕ್ಕೆ ಒಟಿಟಿಯಲ್ಲಿ ಸಾಲು ಸಾಲು ಸಿನಿಮಾ, ವೆಬ್‌ಸರಣಿಗಳು

Weekend OTT Releases: ಈ ವಾರಾಂತ್ಯಕ್ಕೆ ಒಟಿಟಿಯಲ್ಲಿ ಹತ್ತು ಹಲವು ಸಿನಿಮಾಗಳನ್ನು ವೀಕ್ಷಿಸಬಹುದು. ಕ್ರೈಂ ಥ್ರಿಲ್ಲರ್‌ ಸಿನಿಮಾಗಳ ಜತೆಗೆ ವೆಬ್‌ಸಿರೀಸ್‌ಗಳೂ ಕನ್ನಡಕ್ಕೆ ಡಬ್‌ ಆಗಿ ಸ್ಟ್ರೀಮಿಂಗ್‌ ಆರಂಭಿಸಿವೆ.

 ಈ ವಾರಾಂತ್ಯಕ್ಕೆ ಒಟಿಟಿಯಲ್ಲಿ ಸಾಲು ಸಾಲು ಸಿನಿಮಾ, ವೆಬ್‌ಸರಣಿಗಳು
ಈ ವಾರಾಂತ್ಯಕ್ಕೆ ಒಟಿಟಿಯಲ್ಲಿ ಸಾಲು ಸಾಲು ಸಿನಿಮಾ, ವೆಬ್‌ಸರಣಿಗಳು

Weekend OTT Releases: ಒಟಿಟಿ ಪ್ರೇಕ್ಷಕರಿಗೆ ಈ ವಾರಾಂತ್ಯ ಹಬ್ಬದ ಸಂಭ್ರಮ. ಏಕೆಂದರೆ, ಸಾಲು ಸಾಲು ಸಿನಿಮಾಗಳು ಒಟಿಟಿ ಅಂಗಳ ಆಗಮಿಸಿವೆ. ಬರೀ ಸಿನಿಮಾ ಮಾತ್ರವಲ್ಲದೆ ವೆಬ್‌ಸಿರೀಸ್‌ಗಳೂ ಸಾಲಿನಲ್ಲಿವೆ. ಬಹುತೇಕ ಒಟಿಟಿಯಲ್ಲಿ ಈ ವಾರ ಸ್ಟ್ರೀಮಿಂಗ್‌ ಆರಂಭಿಸಿರುವ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಕನ್ನಡಕ್ಕೆ ಡಬ್‌ ಆಗಿವೆ. ನೆಟ್‌ಫ್ಲಿಕ್ಸ್‌, ಪ್ರೈಂ ವಿಡಿಯೋ, ಆಹಾ ಒಟಿಟಿ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌, ಸೋನಿ ಲಿವ್‌ನಂತಹ ಒಟಿಟಿಗಳಲ್ಲಿ ಈ ಕೆಳಗಿನ ಸಿನಿಮಾಗಳನ್ನು ವೀಕ್ಷಿಸಬಹುದು.

ಕಮೀಟಿ ಕುರ್ರೋಳ್ಳು - ಈ ಟಿವಿ ವಿನ್‌ ಒಟಿಟಿ

ತೆಲುಗಿನ ಕಮೀಟಿ ಕುರ್ರೋಳ್ಳು ಸಿನಿಮಾ ಈಟಿವಿ ವಿನ್‌ ಒಟಿಟಿ ವೇದಿಕೆಯಲ್ಲಿ ಸೆಪ್ಟೆಂಬರ್‌ 12ರಿಂದ ಸ್ಟ್ರೀಮಿಂಗ್‌ ಆರಂಭಿಸಿದೆ. ಸಣ್ಣ ಪಟ್ಟಣದ ಯುವಕರ ಕಥೆ ಈ ಚಿತ್ರದ್ದು. ಪಶ್ಚಿಮ ಗೋದಾವರಿ ಭಾಗದ ಹಿನ್ನೆಲೆಯಲ್ಲಿ ಇಡೀ ಕಥೆ ಸಾಗಲಿದೆ. ಸ್ನೇಹಿತರ ನಡುವಿನ ಸಾಮರಸ್ಯಕ್ಕೆ ಅನಿರೀಕ್ಷಿತ ಭಂಗ ಬಂದೊದಗುತ್ತದೆ. ಅದನ್ನು ಆ ಯುವಕರ ಗುಂಪು ಹೇಗೆ ಬಗೆಹರಿಸಿಕೊಳ್ಳುತ್ತೆ ಎಂಬುದೇ ಸಿನಿಮಾ.

ಮಿಸ್ಟರ್‌ ಬಚ್ಚನ್- ನೆಟ್‌ಫ್ಲಿಕ್ಸ್‌ ಒಟಿಟಿ

ಕಪ್ಪುಹಣವನ್ನು ಬಯಲಿಗೆಳೆಯುವ ಪ್ರಾಮಾಣಿಕ ಆದಾಯ ತೆರಿಗೆ ಅಧಿಕಾರಿಯ ಸುತ್ತ ಸುತ್ತುವ ಕಥೆಯೇ ಮಿಸ್ಟರ್‌ ಬಚ್ಚನ್.‌ ಸಂಸದನ ಎದುರು ಹಾಕಿಕೊಳ್ಳುವ ಕಥಾನಾಯಕ ಸಂಕಷ್ಟಕ್ಕೆ ಸಿಲುಕುತ್ತಾನೆ. ಬಳಿಕ ಹೇಗೆ ಪುಟಿದೇಳುತ್ತಾನೆ ಎಂಬುದೇ ಈ ಚಿತ್ರದ ಕಥೆ. ಚಿತ್ರದಲ್ಲಿ ರವಿತೇಜ, ಭಾಗ್ಯಶ್ರೀ ಬೋರ್ಸೆ, ಅಭಿಮನ್ಯು ಸಿಂಗ್ ಮತ್ತು ಸಚಿನ್ ಖೇಡೇಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಸೆ. 12ರಿಂದ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ.

ಆಯ್ - ನೆಟ್‌ಫ್ಲಿಕ್ಸ್ ಒಟಿಟಿ

ತೆಲುಗಿನ ಮತ್ತೊಂದು ಸೂಪರ್ ಹಿಟ್ ಚಿತ್ರ ಐ ಕೂಡ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ನಾರ್ನೆ ನಿತಿನ್ ಅಭಿನಯದ ಈ ಚಿತ್ರವು ಆಗಸ್ಟ್‌ 16ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಪ್ರೇಕ್ಷಕರನ್ನು ರಂಜಿಸಿತ್ತು. ಇದೀಗ ಇದೇ ಸಿನಿಮಾ ಒಟಿಟಿಗೆ ಆಗಮಿಸಿದೆ. ನಯನಾ ಸಾರಿಕಾ, ಕಸಿರೆಡ್ಡಿ ರಾಜ್‌ಕುಮಾರ್‌ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿದ್ದಾರೆ.

ಬೆಂಚ್ ಲೈಫ್ ವೆಬ್ ಸರಣಿ - ಸೋನಿಲೈವ್ ಒಟಿಟಿ

ಸಹಕಾರಿ ಸಂಸ್ಥೆಯ ಉದ್ಯೋಗಿಯ ಜೀವನದ ಸುತ್ತ ಸುತ್ತುತ್ತದೆ ಬೆಂಚ್‌ ಲೈಫ್‌ ವೆಬ್‌ಸಿರೀಸ್‌. ಈ ವೆಬ್‌ಸರಣಿಯಲ್ಲಿ ರಾಜೇಂದ್ರ ಪ್ರಸಾದ್, ವೈಭವ್, ಚರಣ್ ಪೇರಿ, ರಿತಿಕಾ ಸಿಂಗ್, ಆಕಾಂಕ್ಷಾ ಸಿಂಗ್, ನಯನ್ ಸಾರಿಕಾ, ವೆಂಕಟೇಶ್ ಕಾಕುಮನು ಮತ್ತು ತಣಿಕೆಲ್ಲ ಭರಣಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿರೀಸ್‌ ಸೋನಿ ಲೀವ್‌ನಲ್ಲಿ ಸೆಪ್ಟೆಂಬರ್‌ 12ರಿಂದ ಸ್ಟ್ರೀಮಿಂಗ್‌ ಆಗುತ್ತಿದೆ.

ಪರಾಕ್ರಮಂ - ಆಹಾ ವಿಡಿಯೋ ಒಟಿಟಿ

ಆಕ್ಷನ್ ಡ್ರಾಮಾ ಪರಾಕ್ರಮ್ ಕಳೆದ ತಿಂಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ತೆಲುಗು ಸಿನಿಮಾ ಶನಿವಾರದಿಂದ (ಸೆಪ್ಟೆಂಬರ್ 14) ಆಹಾ ವೀಡಿಯೊದಲ್ಲಿ ಸ್ಟ್ರೀಮ್ ಆಗಲಿದೆ. IMDbಯಲ್ಲಿಯೂ ಈ ಸಿನಿಮಾಕ್ಕೆ ಒಳ್ಳೆಯ ರೇಟಿಂಗ್ ಸಿಕ್ಕಿದೆ.

ತಲವನ್ - ಸೋನಿಲಿವ್ ಒಟಿಟಿ

ಮಲಯಾಳಂನ ಥಳವನ್‌ ಸಿನಿಮಾ ಸೆಪ್ಟೆಂಬರ್‌ 10ರಂದು ಸೋನಿ ಲೀವ್‌ ಒಟಿಟಿಗೆ ಆಗಮಿಸಿದೆ. ಆಸಿಫ್‌ ಅಲಿ ಮತ್ತು ಬಿಜು ಮೆನನ್‌ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಕೊಲೆ ಪ್ರಕರಣವೊಂದರ ಹಿನ್ನೆಲೆಯಲ್ಲಿ ಸಾಗಲಿದೆ. ಚಿತ್ರದಲ್ಲಿ ಬಿಜು ಮೆನನ್, ಆಸಿಫ್ ಅಲಿ ಜತೆಗೆ ಮಿಯಾ ಜಾರ್ಜ್, ಅನುಶ್ರೀ, ದಿಲೀಶ್ ಪೋತನ್, ಶಂಕರ್ ರಾಮಕೃಷ್ಣನ್, ರಂಜಿತ್ ಮತ್ತು ಕೊಟ್ಟಾಯಂ ನಜೀರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಗೊಲೊಸೋಡಾ ರೈಸಿಂಗ್ - ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿ

ಗೋಲಿ ಸೋಡಾ ರೈಸಿಂಗ್ ಹೆಸರಿನ ಸಿನಿಮಾ ಎಲ್ಲಿಂದ ಕೊನೆಯಾಯ್ತೋ ಅಲ್ಲಿಂದಲೇ ವೆಬ್‌ಸಿರೀಸ್‌ ಆಗಿ ಬದಲಾಗಿದೆ. ಇದು ಆಚಿ ಮೆಸ್ ಹುಡುಗರ ಜೀವನದ ಕಥೆಯಾಗಿದ್ದು, ಈ ಸಿರೀಸ್‌ನಲ್ಲಿ ಶಾಮ್, ಅಭಿರಾಮಿ, ಪುಗಜ್, ರಮ್ಯಾ ನಂಬೀಸನ್, ಅವಂತಿಕಾ ಮಿಶ್ರಾ, ಚೇರನ್, ಆರ್ ಕೆ ವಿಜಯ್ ಮುರುಗನ್, ಭರತ್ ಶ್ರೀನಿ, ಕಿಶೋರ್, ಪಾಂಡಿ, ಉದಯ ರಾಜ್, ಮುರುಗೇಶ್ ಮತ್ತು ಕುಟ್ಟಿ ಮಣಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದು ತಮಿಳು, ಹಿಂದಿ, ತೆಲುಗು, ಕನ್ನಡ, ಮಲಯಾಳಂ, ಬೆಂಗಾಲಿ ಮತ್ತು ಮರಾಠಿ ಸೇರಿದಂತೆ ಏಳು ಭಾಷೆಗಳಲ್ಲಿ ಸ್ಟ್ರೀಮ್ ಆಗಲಿದೆ.

ಸೆಕ್ಟರ್ 36 - ನೆಟ್‌ಫ್ಲಿಕ್ಸ್ ಒಟಿಟಿ

ವಿಕ್ರಾಂತ್‌ ಮೆಸ್ಸಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸೆಕ್ಟರ್‌ 36 ಸಿನಿಮಾ ಇಂದಿನಿಂದ (ಸೆಪ್ಟೆಂಬರ್‌ 13) ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಭಾರತದಲ್ಲಿ ಅಪರಾಧದ ಕರಾಳತೆ ಕುರಿತು ಈ ಸಿನಿಮಾ ಮಾತನಾಡಲಿದೆ. ಈ ಕ್ರೈಮ್ ಥ್ರಿಲ್ಲರ್ ಸಿನಿಮಾ ಕನ್ನಡದಲ್ಲಿಯೂ ವೀಕ್ಷಣೆಗೆ ಲಭ್ಯವಿದೆ.

mysore-dasara_Entry_Point