Salaar day 5 collection: ಮಂಗಳವಾರ ಸಲಾರ್‌ಗೆ ಮಂಗಳಕರವಾಗಿತ್ತೆ? 5 ದಿನದಲ್ಲಿ 278 ಕೋಟಿ ಗಳಿಕೆ, 5ನೇ ದಿನದ ರಿಪೋರ್ಟ್ ಕಾರ್ಡ್ ನೋಡಿ
Dec 27, 2023 07:26 AM IST
ಸಲಾರ್ ಬಾಕ್ಸ್ ಆಫೀಸ್ ವರದಿ
- Salaar: Part 1 – Ceasefire box office collection day 5: ಪ್ರಭಾಸ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮುಂದುವರೆದಿದೆ. ಕಳೆದ ನಾಲ್ಕು ದಿನಗಳ ಕಲೆಕ್ಷನ್‌ಗೆ ಹೋಲಿಸಿದರೆ 5ನೇ ದಿನ ಸಲಾರ್ ಗಳಿಕೆ ತುಸು ಇಳಿಕೆ ಕಂಡಿದೆ.
Salaar box office collection day 5: ಭಾರತದ ಚಿತ್ರಮಂದಿರಗಳಲ್ಲಿ ಖಾನ್ಸರ್ ಸಾಮ್ರಾಜ್ಯದ ಕಥೆಯಿರುವ ಸಲಾರ್ ಸಿನಿಮಾದ ನಾಗಾಲೋಟ ಮುಂದುವರೆದಿದೆ. ಸಚ್‌ನಿಲ್ಕ್.ಕಾಂ ಬಾಕ್ಸ್ ಆಫೀಸ್ ರಿಪೋರ್ಟ್ ಪ್ರಕಾರ ಕಳೆದ ನಾಲ್ಕು ದಿನಗಳಲ್ಲಿ 250 ಕೋಟಿ ರೂಪಾಯಿವರೆಗೆ ಗಳಿಕೆ ಮಾಡಿದ್ದ, ಪ್ರಭಾಸ್ ನಟನೆಯ ಈ ಸಿನಿಮಾ ಐದನೇ ದಿನದಂದು 23.50 ಕೋಟಿ ರೂಪಾಯಿ ಗಳಿಸಿದೆ. ಇದು ಆರಂಭಿಕ ಹಂತದ ಅಂದಾಜು ಆಗಿದ್ದು, ಗಳಿಕೆಯಲ್ಲಿ ತುಸು ಏರುಪೇರು ಇರಬಹುದು. ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಸಲಾರ್ ಒಟ್ಟು ಗಳಿಕೆ ಮೊದಲ ನಾಲ್ಕು ದಿನದಲ್ಲಿ 450 ಕೋಟಿ ದಾಟಿತ್ತು. ನಿನ್ನೆಯ ವರದಿ ಇನ್ನಷ್ಟೇ ಬರಬೇಕಿದೆ. ಭಾರತದಲ್ಲಿ ಸಲಾರ್ ಗಳಿಕೆ ಎಷ್ಟಿದೆ ಎಂದು ನೋಡೋಣ.
ಸಲಾರ್ ಬಾಕ್ಸ್ ಆಫೀಸ್ ಗಳಿಕೆ ದಿನ 5
ಭಾರತದಲ್ಲಿ ಸಲಾರ್ ಸಿನಿಮಾವು ಒಟ್ಟು 278.90 ಕೋಟಿ ರೂಪಾಯಿ ಗಳಿಕೆ ಮಾಡಿದೆ. ನಿನ್ನೆ ಭಾರತದಲ್ಲಿ 23.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇನ್ನೊಂದೆಡೆ ಡಂಕಿ ಸಿನಿಮಾದ ಜಾಗತಿಕ ಬಾಕ್ಸ್ ಆಫೀಸ್ ಗಳಿಕೆ ನಿರೀಕ್ಷೆಯಷ್ಟು ಇಲ್ಲದೆ ಇದ್ದರೂ, ಉತ್ತಮವಾಗಿಯೇ ಇದೆ.
ಸಲಾರ್ ಬಾಕ್ಸ್ ಆಫೀಸ್ ಗಳಿಕೆ ದಿನ 4
ಭಾರತದಲ್ಲಿ ಸಲಾರ್: ಪಾರ್ಟ್ 1- ಸೀಸ್‌ಫೈರ್ ಸಿನಿಮಾವು ನಾಲ್ಕನೇ ದಿನ, ಅಂದರೆ ಮೊದಲ ಸೋಮವಾರ ಭಾರತದ ಎಲ್ಲಾ ಭಾಷೆಗಳಲ್ಲಿ 46.3 ಕೋಟಿ ರೂಪಾಯಿ ಗಳಿಕೆ ಮಾಡಿದೆ. ತೆಲುಗು ಭಾಷೆಯಲ್ಲಿ 27.1 ಕೋಟಿ ರೂಪಾಯಿ, ಮಲಯಾಳಂನಲ್ಲಿ 1.3 ಕೋಟಿ ರೂಪಾಯಿ, ತಮಿಳಿನಲ್ಲಿ2.05 ಕೋಟಿ ರೂಪಾಯಿ, ಹಿಂದಿಯಲ್ಲಿ 15 ಕೋಟಿ ರೂಪಾಯಿ ಮತ್ತು ಕನ್ನಡದಲ್ಲಿ85 ಲಕ್ಷ ರೂಪಾಯಿ ಆದಾಯ ಗಳಿಸಿತ್ತು.
ಸಲಾರ್ ಬಾಕ್ಸ್ ಆಫೀಸ್ ಗಳಿಕೆ ದಿನ 3
ಮೂರನೇ ದಿನ ಸಲಾರ್ ಸಿನಿಮಾವು ಭಾರತದಲ್ಲಿ 62.89 ಕೋಟಿ ರೂಪಾಯಿ ಗಳಿಕೆ ಮಾಡಿದೆ. ತೆಲುಗು ಭಾಷೆಯಲ್ಲಿ 35 ಕೋಟಿ ರೂಪಾಯಿ, ಮಲಯಾಳಂನಲ್ಲಿ 1.55 ಕೋಟಿ ರೂಪಾಯಿ, ತಮಿಳಿನಲ್ಲಿ3.2 ಕೋಟಿ ರೂಪಾಯಿ, ಹಿಂದಿಯಲ್ಲಿ 21.1 ಕೋಟಿ ರೂಪಾಯಿ ಮತ್ತು ಕನ್ನಡದಲ್ಲಿ 1.2 ಕೋಟಿ ರೂಪಾಯಿ ಆದಾಯ ಗಳಿಸಿತ್ತು.
ಸಲಾರ್ ಬಾಕ್ಸ್ ಆಫೀಸ್ ಗಳಿಕೆ ದಿನ 2
ಮೊದಲ ಶನಿವಾರ ಸಲಾರ್ ಗಳಿಕೆ 56.35 ಕೋಟಿ ರೂಪಾಯಿ. ತೆಲುಗು ಭಾಷೆಯಲ್ಲಿ 34.25 ಕೋಟಿ ರೂಪಾಯಿ, ಮಲಯಾಳಂನಲ್ಲಿ 1.75 ಕೋಟಿ ರೂಪಾಯಿ, ತಮಿಳಿನಲ್ಲಿ 3.05 ಕೋಟಿ ರೂಪಾಯಿ, ಹಿಂದಿಯಲ್ಲಿ 16.35 ಕೋಟಿ ರೂಪಾಯಿ ಮತ್ತು ಕನ್ನಡದಲ್ಲಿ 95 ಲಕ್ಷ ರೂಪಾಯಿ ಬಾಚಿಕೊಂಡಿತ್ತು.
ಸಲಾರ್ ಬಾಕ್ಸ್ ಆಫೀಸ್ ಗಳಿಕೆ ದಿನ 1
ಸಲಾರ್: ಪಾರ್ಟ್ 1- ಸೀಸ್‌ಫೈರ್ ಸಿನಿಮಾ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ 90.7 ಕೋಟಿ ರೂಪಾಯಿ ಬಾಚಿಕೊಂಡಿತ್ತು. ತೆಲುಗು ಭಾಷೆಯಲ್ಲಿ 66.75 ಕೋಟಿ ರೂಪಾಯಿ, ಮಲಯಾಳಂನಲ್ಲಿ 3.55 ಕೋಟಿ ರೂಪಾಯಿ, ತಮಿಳಿನಲ್ಲಿ 3.75 ಕೋಟಿ ರೂಪಾಯಿ, ಹಿಂದಿಯಲ್ಲಿ 16.35 ಕೋಟಿ ರೂಪಾಯಿ ಮತ್ತು ಕನ್ನಡದಲ್ಲಿ 90 ಲಕ್ಷ ಗಳಿಕೆ ಮಾಡಿತ್ತು.
ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಸಲಾರ್ ಗಳಿಕೆ
ಸಲಾರ್ ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಸಲಾರ್ ಗಳಿಕೆ 450 ಕೋಟಿ ರೂಪಾಯಿ ದಾಟಿದೆ. ಮೊದಲ ದಿನ 176.52 ಕೋಟಿ ರೂಪಾಯಿ, ಎರಡನೇ ದಿನ 101.39 ಕೋಟಿ ರೂಪಾಯಿ, ಮೂರನೇ ದಿನ 95.24 ಕೋಟಿ ರೂಪಾಯಿ ಮತ್ತು ನಾಲ್ಕನೇ ದಿನ 76.91 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಐದನೇ ದಿನದ ಗಳಿಕೆ ವಿವರ ಇನ್ನಷ್ಟೇ ಲಭಿಸಬೇಕಿದೆ.
ಸಲಾರ್ ಸಿನಿಮಾದ ಕುರಿತು
ಸಲಾರ್ ಸಿನಿಮಾವು ಡಿಸೆಂಬರ್ 22ರಂದು ಭಾರತದಲ್ಲಿ ಬಿಡುಗಡೆಯಾಗಿದೆ. ಇದು ಆಕ್ಷನ್ ಇರುವ ಡ್ರಾಮಾಗಿದ್ದು, ಈ ಚಿತ್ರದಲ್ಲಿ ಪ್ರಭಾಸ್ ಮಾತ್ರವಲ್ಲದೆ ಮಲಯಾಳಂ ನಟ ಪೃಥ್ವಿರಾಜ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶೃತಿ ಹಾಸನ್, ಜಗಪತಿ ಬಾಬು, ಈಶ್ವರಿ ರಾವ್ ಮತ್ತು ಶ್ರೀಯಾ ರೆಡ್ಡಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಿದೆ. ಕೆಜಿಎಫ್ ಮೂಲಕ ಜನಪ್ರಿಯತೆ ಪಡೆದಿರುವ ಕರ್ನಾಟಕದ ಪ್ರಶಾಂತ್ ನೀಲ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.