Salaar Box Office: 3 ದಿನ, 200 ಕೋಟಿ; ಪ್ರಭಾಸ್ ನಟನೆಯ ಸಲಾರ್‌ಗೆ ಯಾರಿದ್ದಾರೆ ಸರಿಸಾಟಿ? ಇಲ್ಲಿದೆ ಬಾಕ್ಸ್ ಆಫೀಸ್ ಕಲೆಕ್ಷನ್ ವರದಿ
Salaar box office collection day 3: ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಟನೆಯ ಸಲಾರ್ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಲಾರ್ ಸಿನಿಮಾವು ಭಾರತದಲ್ಲಿ ಮೂರನೇ ದಿನ ಎಲ್ಲಾ ಭಾಷೆಗಳಲ್ಲಿ ಒಟ್ಟು 62.89 ಕೋಟಿ ರೂಪಾಯಿ ಗಳಿಕೆ ಮಾಡಿದೆ.
Salaar: Part 1- Ceasefire box office collection day 3: ಪ್ರಭಾಸ್ ನಟನೆಯ ಸಲಾರ್ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಈ ಸಿನಿಮಾವು ಡಿಸೆಂಬರ್ 22ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಸಚ್‌ನಿಲ್ಕ್.ಕಾಂ ವರದಿ ಪ್ರಕಾರ ಸಲಾರ್: ಪಾರ್‌ಟ್ 1- ಸೀಸ್ ಫೈರ್ ಸಿನಿಮಾವು ಭಾನುವಾರ ಭಾರತದಲ್ಲಿ 200 ಕೋಟಿ ರೂಪಾಯಿ ಕ್ಲಬ್‌ಗೆ ಸೇರಿದೆ. ಇದು ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ. ಈ ಹಿಂದೆ ಕೆಜಿಎಫ್ ಸಿನಿಮಾದ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ ಪ್ರಶಾಂತ್ ನೀಲ್ ಇದೀಗ ಸಲಾರ್ ಮೂಲಕ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಇದನ್ನು ಓದಿ: Salaar Day 2 Collection: ‘ಸಲಾರ್’ ಕಲೆಕ್ಷನ್‌ನಲ್ಲಿ ಗಣನೀಯ ಇಳಿಕೆ! ಹೀಗಿದ್ದರೂ ಸೃಷ್ಟಿಯಾಯ್ತು ಹೊಸ ಮೈಲಿಗಲ್ಲು
ಸಲಾರ್ ಬಾಕ್ಸ್ ಆಫೀಸ್ ಕಲೆಕ್ಷನ್
ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ, ಕಳೆದ ಮೂರು ದಿನಗಳಲ್ಲಿ ಸಲಾರ್ ಬಾಕ್ಸ್ ಆಫೀಸ್ ಕಲೆಕ್ಷನ್ ಈ ಮುಂದಿನಂತೆ ಇದೆ. ಮೊದಲ ದಿನ ಸಲಾರ್ ಸಿನಿಮಾವು 90.7 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ತೆಲುಗು ಭಾಷೆಯಲ್ಲಿ 66.75 ಕೋಟಿ ರೂಪಾಯಿ, ಮಲಯಾಳಂನಲ್ಲಿ 3.55 ಕೋಟಿ ರೂಪಾಯಿ, ತಮಿಳಿನಲ್ಲಿ 3.75 ಕೋಟಿ ರೂಪಾಯಿ, ಹಿಂದಿಯಲ್ಲಿ 16.35 ಕೋಟಿ ರೂಪಾಯಿ ಮತ್ತು ಕನ್ನಡದಲ್ಲಿ 90 ಲಕ್ಷ ಗಳಿಕೆ ಮಾಡಿತ್ತು.
ಎರಡನೇ ದಿನ ಸಲಾರ್ ಸಿನಿಮಾವು 56.35 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ತೆಲುಗು ಭಾಷೆಯಲ್ಲಿ 34.25 ಕೋಟಿ ರೂಪಾಯಿ, ಮಲಯಾಳಂನಲ್ಲಿ 1.75 ಕೋಟಿ ರೂಪಾಯಿ, ತಮಿಳಿನಲ್ಲಿ 3.05 ಕೋಟಿ ರೂಪಾಯಿ, ಹಿಂದಿಯಲ್ಲಿ 16.35 ಕೋಟಿ ರೂಪಾಯಿ ಮತ್ತು ಕನ್ನಡದಲ್ಲಿ 95 ಲಕ್ಷ ಗಳಿಕೆ ಮಾಡಿತ್ತು. ಮೂರನೇ ದಿನ ಅಂದರೆ ನಿನ್ನೆ ಸಲಾರ್ ಸಿನಿಮಾವು ಭಾರತದಲ್ಲಿ 62.89 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಕಳೆದ ಮೂರು ದಿನಗಳಲ್ಲಿ ಭಾರತದಲ್ಲಿ 209.94 ಕೋಟಿ ಗಳಿಕೆ ಮಾಡಿದೆ.
ಸಲಾರ್ ಸಿನಿಮಾವು ಮೊದಲ ದಿನವೇ (ಅಡ್ವಾನ್ಸಡ್ ಬುಕ್ಕಿಂಗ್ ಸೇರಿದಂತೆ) 178.7 ಹಣ ಗಳಿಕೆ ಮಾಡಿದೆ. ಇದು 2023ರಲ್ಲಿ ಬಿಡುಗಡೆಯಾದ ಸಿನಿಮಾವೊಂದರ ಹೊಸ ದಾಖಲೆಯಾಗಿದೆ. "ಚಿತ್ರವು ಮೊದಲ ದಿನವೇ 178.7 ಕೋಟಿ ರೂ ಸಂಪಾದಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ, ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೊಸ ದಾಖಲೆಯನ್ನು ತನ್ನದಾಗಿಸಿಕೊಂಡಿದೆ" ಎಂದು ಹೊಂಬಾಳೆ ಫಿಲ್ಮ್ಸ್ ಮಾಹಿತಿ ನೀಡಿದೆ.
ಮೊದಲ ದಿನದಂದು ಸಲಾರ್ ಸಿನಿಮಾದ ಗಳಿಕೆಯು ಶಾರೂಖ್ ಖಾನ್ ಅವರ ಎರಡು ಬ್ಲಾಕ್‌ಬಸ್ಟರ್ ಸಿನಿಮಾಗಳಾದ ಪಠಾಣ್ ಮತ್ತು ಜವಾನ್ ಗಳಿಕೆಯನ್ನು ಹಿಂದಿಕ್ಕಿತ್ತು. ಇವೆರಡು ಸಿನಿಮಗಾಳು ಓಪನಿಂಗ್ ಡೇಯಂದು ಜಗತ್ತಿನಾದ್ಯಂತ ಕ್ರಮವಾಗಿ 106 ಕೋಟಿ ರೂ. ಮತ್ತು 129.6 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ರಣಬೀರ್ ಕಪೂರ್ ನಟನೆಯ ಅನಿಮಲ್ ಸಿನಿಮಾವು ಮೊದಲ ದಿನದಂದು 116 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.
ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಅಭಿನಯದ ಸಲಾರ್ ಸಿನಿಮಾವು ಈ ಕ್ರಿಸ್‌ಮಸ್ ರಜೆಯ ಅವಧಿಯಲ್ಲಿ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ. ಹೊಸ ವರ್ಷದ ಸಮಯದಲ್ಲಿಯೂ ಸಲಾರ್ ಗಳಿಕೆ ಉತ್ತಮವಾಗಿರುವ ಸೂಚನೆಯಿದೆ. ಖಾನ್ಸರ್ ಎಂಬ ಕಾಲ್ಪನಿಕ ಊರಲ್ಲಿ ಅಧಿಕಾರಕ್ಕೆ ನಡೆಯುವ ಹೋರಾಟ, ಇಬ್ಬರು ಬಾಲ್ಯ ಸ್ನೇಹಿತರ ಕಥೆಯ ಕುರಿತು ಸೋಷಿಯಲ್ ಮೀಡಿಯಾದಲ್ಲೂ ಸಕಾರಾತ್ಮಕ ಅಭಿಪ್ರಾಯಗಳು ಕೇಳಿಬರುತ್ತಿವೆ. ಹೀಗಾಗಿ, ಇನ್ನು ಕೆಲವು ವಾರ ಸಲಾರ್ ಗಳಿಕೆ ಭರ್ಜರಿಯಾಗಿ ಮುಂದುವರೆಯುವ ಸೂಚನೆಯಿದೆ.