Salaar day 4 collection: ಬಾಕ್ಸ್ ಆಫೀಸ್‌ನಲ್ಲಿ ಒಂಟಿ ಸಲಗದಂತೆ ಮುನ್ನುಗುತ್ತಿದೆ ಸಲಾರ್; 250 ಕೋಟಿ ಕ್ಲಬ್‌ಗೆ ಸೇರಿದ ಪ್ರಭಾಸ್ ಚಿತ್ರ
Salaar: Part 1- Ceasefire box office collection day 4: ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್: ಪಾರ್ಟ್ 1- ಸೀಸ್‌ಫೈರ್ ಸಿನಿಮಾ ಬಿಡುಗಡೆಯಾದ ಬಳಿಕದ ಮೊದಲ ಸೋಮವಾರ ಭಾರತದಲ್ಲಿ 40 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ 250 ಕೋಟಿ ಕ್ಲಬ್‌ಗೆ ಸೇರಿದೆ.
Salaar box office collection day 4: ಸಲಾರ್: ಪಾರ್ಟ್ 1- ಸೀಸ್‌ಫೈರ್ ಸಿನಿಮಾ ಭಾರತದ ಬಾಕ್ಸ್‌ಆಫೀಸ್‌ನಲ್ಲಿ ಒಂಟಿ ಸಲಗದಂತೆ ಮುನ್ನುಗುತ್ತಿದೆ. ಶಾರೂಖ್ ಖಾನ್ ನಟನೆಯ ಡಂಕಿ ಚಿತ್ರದಿಂದ ನಿರೀಕ್ಷೆ ಮಾಡಿದ್ದಷ್ಟು ಸ್ಪರ್ಧೆ ದೊರಕದೆ ಇರುವುದರಿಂದ ಸಲಾರ್ ಈಗ ನಡೆದದ್ದೇ ಹಾದಿ. ಇದೇ ಸಮಯದಲ್ಲಿ ಕ್ರಿಸ್‌ಮಸ್ ರಜೆಯೂ ಬಂದಿರುವುದರಿಂದ ಈ ವಾರ ಸಲಾರ್‌ಗೆ ಗಲ್ಲಾಪೆಟ್ಟಿಗೆಯಲ್ಲಿ ಬಾಚಿಕೊಳ್ಳಲು ಸಾಕಷ್ಟು ಅವಕಾಶವಿದೆ. ಸಲಾರ್ ಗಳಿಕೆಗೆ ಈ ವಾರ ನಿರ್ಣಾಯಕವಾಗಿದೆ.
ಸಲಾರ್ ಸಿನಿಮಾವು ಕನ್ನಡ, ತೆಲುಗು, ತಮಿಲು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಕಳೆದ ಶುಕ್ರವಾರ ಬಿಡುಗಡೆಯಾಗಿದೆ. ಸಚ್‌ನಿಲ್ಕ್.ಕಾಂ ವರದಿ ಪ್ರಕಾರ ಸೋಮವಾರದಂದು ಸಲಾರ್ ಸಿನಿಮಾವು ಭಾರತದಲ್ಲಿ 250 ಕೋಟಿ ಕ್ಲಬ್‌ಗೆ ಸೇರಿದೆ. ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವು ವೀಕ್ಷಕರಿಂದ ಸಕಾರಾತ್ಮಕ ವಿಮರ್ಶೆ ಪಡೆದುಕೊಂಡಿದೆ. ಇದನ್ನು ಓದಿ: ಮಜಾ ಭಾರತದ ಪ್ರಿಯಾಂಕ ಕಾಮತ್‌ಗೆ ಮದುವೆ ಸಂಭ್ರಮ; ಇಲ್ಲಿದೆ ಗಿಚ್ಚಿ ಗಿಲಿಗಿಲಿ ಚೆಲುವೆಯ ಶುಭ ವಿವಾಹ ಸಂಭ್ರಮದ ಚಿತ್ರಗಳು
ಭಾರತದಲ್ಲಿ ಸಲಾರ್ ಗಳಿಕೆ ಎಷ್ಟು?
ಸಚ್‌ನಿಲ್ಕ್.ಕಾಂ ಬಾಕ್ಸ್ ಆಫೀಸ್ ವರದಿ ಪ್ರಕಾರ ಸಲಾರ್ ಸಿನಿಮಾವು ಮೊದಲ ಸೋಮವಾರ 41.24 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇಲ್ಲಿಯವರೆಗೆ ಒಟ್ಟಾರೆ 250.34 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಮೊದಲ ದಿನದ ಗಳಿಕೆ
ಸಲಾರ್: ಪಾರ್ಟ್ 1- ಸೀಸ್‌ಫೈರ್ ಸಿನಿಮಾ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ 90.7 ಕೋಟಿ ರೂಪಾಯಿ ಬಾಚಿಕೊಂಡಿತ್ತು. ತೆಲುಗು ಭಾಷೆಯಲ್ಲಿ 66.75 ಕೋಟಿ ರೂಪಾಯಿ, ಮಲಯಾಳಂನಲ್ಲಿ 3.55 ಕೋಟಿ ರೂಪಾಯಿ, ತಮಿಳಿನಲ್ಲಿ 3.75 ಕೋಟಿ ರೂಪಾಯಿ, ಹಿಂದಿಯಲ್ಲಿ 16.35 ಕೋಟಿ ರೂಪಾಯಿ ಮತ್ತು ಕನ್ನಡದಲ್ಲಿ 90 ಲಕ್ಷ ಗಳಿಕೆ ಮಾಡಿತ್ತು. ಇದನ್ನೂ ಓದಿ: ಕಾಟೇರ ಸಿನಿಮಾದ ಫಸ್ಟ್ ಶೋ ಟಿಕೆಟ್‌ಗಳು ಸೋಲ್ಡೌಟ್; ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಬಿಡುಗಡೆಗೆ ಮುನ್ನವೇ ಹೌಸ್‌ಫುಲ್
ಎರಡನೇ ದಿನದ ಗಳಿಕೆ
ಮೊದಲ ಶನಿವಾರ ಸಲಾರ್ ಗಳಿಕೆ 56.35 ಕೋಟಿ ರೂಪಾಯಿ. ತೆಲುಗು ಭಾಷೆಯಲ್ಲಿ 34.25 ಕೋಟಿ ರೂಪಾಯಿ, ಮಲಯಾಳಂನಲ್ಲಿ 1.75 ಕೋಟಿ ರೂಪಾಯಿ, ತಮಿಳಿನಲ್ಲಿ 3.05 ಕೋಟಿ ರೂಪಾಯಿ, ಹಿಂದಿಯಲ್ಲಿ 16.35 ಕೋಟಿ ರೂಪಾಯಿ ಮತ್ತು ಕನ್ನಡದಲ್ಲಿ 95 ಲಕ್ಷ ರೂಪಾಯಿ ಬಾಚಿಕೊಂಡಿತ್ತು.
ಮೂರನೇ ದಿನದ ಗಳಿಕೆ
ಮೂರನೇ ದಿನ ಸಲಾರ್ ಸಿನಿಮಾವು ಭಾರತದಲ್ಲಿ 62.89 ಕೋಟಿ ರೂಪಾಯಿ ಗಳಿಕೆ ಮಾಡಿದೆ. ತೆಲುಗು ಭಾಷೆಯಲ್ಲಿ 35 ಕೋಟಿ ರೂಪಾಯಿ, ಮಲಯಾಳಂನಲ್ಲಿ 1.55 ಕೋಟಿ ರೂಪಾಯಿ, ತಮಿಳಿನಲ್ಲಿ3.2 ಕೋಟಿ ರೂಪಾಯಿ, ಹಿಂದಿಯಲ್ಲಿ 21.1 ಕೋಟಿ ರೂಪಾಯಿ ಮತ್ತು ಕನ್ನಡದಲ್ಲಿ 1.2 ಕೋಟಿ ರೂಪಾಯಿ ಆದಾಯ ಗಳಿಸಿತ್ತು.
ನಾಲ್ಕನೇ ದಿನದ ಗಳಿಕೆ
ಸಚ್‌ನಿಲ್ಕ್.ಕಾಂ ವರದಿ ಪ್ರಕಾರ ಭಾರತದಲ್ಲಿ ಸಲಾರ್: ಪಾರ್ಟ್ 1- ಸೀಸ್‌ಫೈರ್ ಸಿನಿಮಾವು ನಾಲ್ಕನೇ ದಿನ, ಅಂದರೆ ಮೊದಲ ಸೋಮವಾರ ಭಾರತದ ಎಲ್ಲಾ ಭಾಷೆಗಳಲ್ಲಿ 41.24 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸೋಮವಾರ ಕ್ರಿಸ್‌ಮಸ್ ಹಬ್ಬದ ಸಡಗರ, ಹಬ್ಬದ ರಜೆಯು ಸಲಾರ್‌ಗೆ ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚಿನ ಗಳಿಕೆ ಮಾಡಲು ನೆರವಾಗಿತ್ತು.
ಖಾನ್ಸರ್ ಎಂಬ ಕಾಲ್ಪನಿಕ ಊರಲ್ಲಿ ಅಧಿಕಾರಕ್ಕೆ ನಡೆಯುವ ಹೋರಾಟ, ಇಬ್ಬರು ಬಾಲ್ಯ ಸ್ನೇಹಿತರ ಕಥೆಯ ಈ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ದೇಶಾದ್ಯಂತ ಉತ್ತಮ ರೆಸ್ಪಾನ್ಸ್ ದೊರಕಿದೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ನಡುವೆ ಥಿಯೇಟರ್‌ಗಳಲ್ಲಿ ಸಿನಿಮಾ ನೋಡಲು ಬಯಸುವವರು ಸಲಾರ್ ಬುಕ್ಕಿಂಗ್ ಮಾಡುತ್ತಿದ್ದಾರೆ.
ವಿಭಾಗ