UI Twitter Review: ಯುಐ ಸಿನಿಮಾ ಮೂಲಕ ಪ್ರೇಕ್ಷಕನ ತಲೆಗೆ ಹುಳ ಬಿಟ್ರಾ, ಹುಳ ತೆಗೆದ್ರಾ? ಟಿಪಿಕಲ್ ಉಪೇಂದ್ರ ಸಿನಿಮಾ ನೋಡಿದವ್ರು ಏನಂದ್ರು?
Dec 20, 2024 09:08 AM IST
ಯುಐ ಸಿನಿಮಾ ಟ್ವಿಟ್ಟರ್ ವಿಮರ್ಶೆ
- UI Movie twitter Review: ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸುವುದರ ಜತೆಗೆ ನಿರ್ದೇಶನ ಮಾಡಿರುವ ಯುಐ ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆ ಆಗಿದೆ. ನಿರೀಕ್ಷೆಗಳನ್ನು ಆಕಾಶದೆತ್ತರಕ್ಕೆ ಕೊಂಡೊಯ್ದ ಈ ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳು ವ್ಯಕ್ತವಾಗುತ್ತಿವೆ. ಸಿನಿಮಾ ನೋಡಿದವರೂ ಬಹುಪರಾಕ್ ಹೇಳುತ್ತಿದ್ದಾರೆ. ಹೀಗಿದೆ ಟ್ವಿಟ್ಟರ್ ವಿಮರ್ಶೆ.
UI Twitter Review: ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸಿ, ನಿರ್ದೇಶಿಸಿದ UI ಸಿನಿಮಾ ಇಂದು (ಡಿ. 5) ಬಿಡುಗಡೆ ಆಗಿದೆ. ಬಹುನಿರೀಕ್ಷೆ ಮೂಡಿಸಿದ್ದ ಈ ಸಿನಿಮಾಕ್ಕೆ ಪ್ರೇಕ್ಷಕನಿಂದಲೂ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಕೆಲವೆಡೆ ಮೊದಲ ಶೋ ಮುಕ್ತಾಯವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಬಗೆಗಿನ ಅನಿಸಿಕೆ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಾದರೆ, ಟಿಪಿಕಲ್ ಉಪೇಂದ್ರ ಅವರ ನಿರ್ದೇಶನದ ಸಿನಿಮಾ ನೋಡಿ ಪ್ರೇಕ್ಷಕ ಏನಂದ? ಸಿನಿಮಾ ಓಕೆನಾ? ಅಥವಾ ಓಕೆ ಓಕೆನಾ? ಹೀಗಿದೆ ಟ್ವಿಟ್ಟರ್ ವಿಮರ್ಶೆ.
ಚಿತ್ರ ಶುರುವಾಗುವುದಕ್ಕೂ ಮುನ್ನವೇ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದಾರೆ ಉಪೇಂದ್ರ. ಸಿನಿಮಾ ಆರಂಭದಲ್ಲಿಯೇ ಈ ಸಿನಿಮಾ ದಡ್ಡರಿಗೆ ಮಾತ್ರ ಎಂಬ ಬರಹದ ಮೂಲಕ ಕುತೂಹಲ ಕೆರಳಿಸಿದ್ದಾರೆ. ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದೋಗಿ, ದಡ್ಡರಾಗಿದ್ದರೆ ಪೂರ್ತಿ ಸಿನಿಮಾ ನೋಡಿ ಎನ್ನುವ ಮೂಲಕ ಇದು ಪಕ್ಕಾ ಉಪ್ಪಿ ಸಿನಿಮಾ ಅನ್ನೋದನ್ನ ಮತ್ತೆ ಸಾಬೀತುಪಡಿಸಲು ಹೊರಟಂತಿದೆ ಉಪೇಂದ್ರ.
ಸತ್ಯ ಮತ್ತು ಮಿಥ್ಯದ ನಡುವಿನ ಎಳೆಯನ್ನು ಉಪೇಂದ್ರ ಯುಐ ಸಿನಿಮಾ ಮೂಲಕ ಡಿಕೋಡ್ ಮಾಡಲು ಹೊರಟಿದ್ದಾರೆ. ಸತ್ಯ ಮತ್ತು ಕಲ್ಕಿ ಎಂಬ ಎರಡು ಅವತಾರಗಳಲ್ಲಿ ಎದುರಾಗಿ ನೋಡುಗರನ್ನು ಮತ್ತಷ್ಟು ಮಗದಷ್ಟು ಕಾಡಿದ್ದಾರೆ ಉಪೇಂದ್ರ. ಸ್ವತಃ ಈ ಸಿನಿಮಾ ಬಗ್ಗೆ ಅವರೇ ಹೀಗೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. “ಕಾತುರದಿಂದ ಕಾಯುತ್ತಿದ್ದೇನೆ.. UI ಚಿತ್ರದ ಎಷ್ಟು ಸೀನ್‌ಗಳನ್ನು ಡೀಕೋಡ್ ಮಾಡುತ್ತೀರಾ ಮತ್ತು ಕೊನೆಯ ಶಾಟ್ ಡಿಕೋಡ್ ಮಾಡಲು ಎಷ್ಟು ಸಮಯ ತೆಗೆದು ಕೊಳ್ಳುತ್ತೀರಾ ಎಂದು” ಎಂದಿದ್ದಾರೆ.
ಅಂದಹಾಗೆ, ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ಜಿ. ಮನೋಹರನ್ ಹಾಗೂ ಕೆ.ಪಿ. ಶ್ರೀಕಾಂತ್ ಯುಐ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಕೆ.ವಿ.ಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ.
ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ…
ಸೋಷಿಯಲ್ ಮೀಡಿಯಾದಲ್ಲಿ ಉಪೇಂದ್ರ ಅವರ ಯುಐ ಸಿನಿಮಾ ವೀಕ್ಷಿಸಿದ ಪ್ರೇಕ್ಷಕನೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾನೆ. ನೆಕ್ಟ್ಸ್ ಲೆವೆಲ್ ಎಂದೆಲ್ಲ ಕಾಮೆಂಟ್ ಹಾಕಿದರೆ, ಇನ್ನು ಕೆಲವರು 4.5\5 ರೇಟಿಂಗ್ ನೀಡುತ್ತಿದ್ದಾರೆ. ನಿರ್ದೇಶನ ಸಿಂಪಲ್ ಸುನಿ ಸಹ ಪೋಸ್ಟ್ ಹಂಚಿಕೊಂಡು, ನಾನು , ನೀನು ಅರ್ಥ ಮಾಡಿಕೊಂಡು ನೋಡಲೇಬೇಕಾದ ಸಿನಿಮಾ ಎಂದು ಬರೆದುಕೊಂಡಿದ್ದಾರೆ. ಚಿತ್ರದ ಮೊದಲಾರ್ಥ ನೋಡಿದವರು ಮೈಂಡ್ ಬ್ಲೋಯಿಂಗ್ ಎಂದು ಉದ್ಗರಿಸುತ್ತಿದ್ದಾರೆ. ಒಟ್ಟಾರೆ, ಸೋಷಿಯಲ್ ಮೀಡಿಯಾದಲ್ಲಿ ಯುಐ ಸಿನಿಮಾಕ್ಕೆ ಪಾಸಿಟಿವ್ ಪ್ರತಿಕ್ರಿಯೆ ಸಿಗುತ್ತಿದೆ.
ವಿಭಾಗ