logo
ಕನ್ನಡ ಸುದ್ದಿ  /  ಮನರಂಜನೆ  /  Komal Kumar: ‘ಯಲಾ ಕುನ್ನಿ’ ಶೀರ್ಷಿಕೆಯ ಚಿತ್ರದಲ್ಲಿ ವಜ್ರಮುನಿಯಾದ ನಟ ಕೋಮಲ್;‌ 80ರ ಕಾಲಘಟ್ಟದ ಕಥೆಯಲ್ಲಿ ತಿಳಿಹಾಸ್ಯವೇ ಪ್ರಧಾನ

Komal Kumar: ‘ಯಲಾ ಕುನ್ನಿ’ ಶೀರ್ಷಿಕೆಯ ಚಿತ್ರದಲ್ಲಿ ವಜ್ರಮುನಿಯಾದ ನಟ ಕೋಮಲ್;‌ 80ರ ಕಾಲಘಟ್ಟದ ಕಥೆಯಲ್ಲಿ ತಿಳಿಹಾಸ್ಯವೇ ಪ್ರಧಾನ

HT Kannada Desk HT Kannada

Mar 09, 2023 07:38 PM IST

google News

‘ಯಲಾ ಕುನ್ನಿ’ ಶೀರ್ಷಿಕೆಯ ಚಿತ್ರದಲ್ಲಿ ವಜ್ರಮುನಿಯಾದ ನಟ ಕೋಮಲ್;‌ 80ರ ಕಾಲಘಟ್ಟದ ಕಥೆಯಲ್ಲಿ ತಿಳಿಹಾಸ್ಯವೇ ಪ್ರಧಾನ

    • ಸ್ಯಾಂಡಲ್‌ವುಡ್‌ ಹಾಸ್ಯ ನಟ ಕೋಮಲ್‌ ಇದೀಗ ವಜ್ರಮುನಿ ಹಿಂದೆ ಬಿದ್ದಿದ್ದಾರೆ. ಅಂದರೆ ‘ಯಲಾ ಕುನ್ನಿ’ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದು, ವಜ್ರಮುನಿ ಪಾತ್ರ ಮಾಡಲಿದ್ದಾರೆ. 
‘ಯಲಾ ಕುನ್ನಿ’ ಶೀರ್ಷಿಕೆಯ ಚಿತ್ರದಲ್ಲಿ ವಜ್ರಮುನಿಯಾದ ನಟ ಕೋಮಲ್;‌ 80ರ ಕಾಲಘಟ್ಟದ ಕಥೆಯಲ್ಲಿ ತಿಳಿಹಾಸ್ಯವೇ ಪ್ರಧಾನ
‘ಯಲಾ ಕುನ್ನಿ’ ಶೀರ್ಷಿಕೆಯ ಚಿತ್ರದಲ್ಲಿ ವಜ್ರಮುನಿಯಾದ ನಟ ಕೋಮಲ್;‌ 80ರ ಕಾಲಘಟ್ಟದ ಕಥೆಯಲ್ಲಿ ತಿಳಿಹಾಸ್ಯವೇ ಪ್ರಧಾನ

Komal New Movie Yala kunni: ಹಾಸ್ಯದ ರಸಗವಳ ನೀಡುತ್ತ ಬಂದಿರುವ ನಟ ಕೋಮಲ್‌, ಇತ್ತೀಚಿನ ಕೆಲ ವರ್ಷಗಳಿಂದ ಸಿನಿಮಾದಿಂದಲೇ ದೂರ ಉಳಿದಿದ್ದರು. ಅದಕ್ಕೆ ಕಾರಣ ಏನು ಎಂಬುದನ್ನೂ ಕೋಮಲ್‌ ಅವರ ಅಣ್ಣ ನಟ ಜಗ್ಗೇಶ್‌ ಹೇಳಿಕೊಂಡಿದ್ದರು. ಇದೀಗ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಿಗೆ ಕೋಮಲ್‌ ಸಹಿ ಮಾಡುತ್ತಿದ್ದಾರೆ. ಅದರಂತೆ ಇದೀಗ ಮತ್ತೊಂದು ಸಿನಿಮಾ ಘೋಷಣೆ ಆಗಿದೆ. ಅಷ್ಟೇ ಅಲ್ಲ ಚಿತ್ರದ ಶೀರ್ಷಿಕೆಯೂ ರಿವೀಲ್‌ ಆಗಿದೆ.

ಅಮೋಘ ಅಭಿನಯದ ಮೂಲಕವೇ ನಾಡಿನ ಜನರ ಮನದಲ್ಲಿರುವ ನಟ ಕೋಮಲ್‌ ಕುಮಾರ್‌ ಇದೀಗ ‘ಯಲಾಕುನ್ನಿ; ಮೇರಾ ನಾಮ್‌ ವಜ್ರಮುನಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಪೋಸ್ಟರ್‌ ರಿವೀಲ್‌ ಆಗಿದ್ದು, ಸದ್ಯಕ್ಕೆ ಶೀರ್ಷಿಕೆಯನ್ನಷ್ಟೇ ಚಿತ್ರತಂಡ ರಿವೀಲ್‌ ಮಾಡಿದ್ದು, ಕುತೂಹಲ ಮೂಡಿಸಿದೆ.

ಸೌಭಾಗ್ಯ ಸಿನಿಮಾಸ್ ಬ್ಯಾನರ್‌ ಅಡಿಯಲ್ಲಿ ಮಹೇಶ್ ಗೌಡ್ರು ನಿರ್ಮಿಸುತ್ತಿರುವ ಈ ಚಿತ್ರವನ್ನು ಎನ್. ಆರ್ ಪ್ರದೀಪ್ ನಿರ್ದೇಶಿಸುತ್ತಿದ್ದಾರೆ. ಓಂಪ್ರಕಾಶ್ ರಾವ್, ಮುಸ್ಸಂಜೆ ಮಹೇಶ್ ಗರಡಿಯಲ್ಲಿ ಪಳಗಿರುವ ಪ್ರದೀಪ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.‌ ಮೊದಲ ಸಿನಿಮಾದಲ್ಲಿ ಕಾಮಿಡಿ ಕಥಾಹಂದರದ ಚಿತ್ರದ ಮೂಲಕ ಅವರ ಆಗಮನವಾಗುತ್ತಿದೆ.

1981ರ ಕಾಲಘಟ್ಟದಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿರಲಿದ್ದು. ಶ್ರೀರಂಗಪಟ್ಟಣ ಹಾಗೂ ಮೈಸೂರು ಸುತ್ತಮುತ್ತಲಿನಲ್ಲಿ ಹಳ್ಳಿ ಮತ್ತು ದೇವಸ್ಥಾನದ ಸೆಟ್‌ಗಳನ್ನು ನಿರ್ಮಿಸಿ ಚಿತ್ರೀಕರಣ ಮಾಡಲು ತಂಡ ಪ್ಲಾನ್‌ ರೂಪಿಸಿದೆ.‌ ಇನ್ನೇನು ಶೀಘ್ರದಲ್ಲಿ ಚಿತ್ರೀಕರಣಕ್ಕೂ ಚಾಲನೆ ಸಿಗಲಿದೆ.

ಕನ್ನಡದ ಖ್ಯಾತ ನಟ ವಜ್ರಮುನಿ ತಮ್ಮ ಚಿತ್ರಗಳಲ್ಲಿ ಹೆಚ್ಚು ಬಯ್ಯಲು ಬಳಸುತ್ತಿದ್ಡ ಸಂಭಾಷಣೆ ಯಲಾ ಕುನ್ನಿ. ಈಗ ಈ ಪದವನ್ನೆ ಚಿತ್ರದ ಶೀರ್ಷಿಕೆಯಾಗಿ ನಿರ್ದೇಶಕರು ಬಳಸಿಕೊಂಡಿದ್ದಾರೆ. ಚಿತ್ರದಲ್ಲಿ ವಜ್ರಮುನಿಯಾಗಿ ಕೋಮಲ್ ರೆಟ್ರೋ ಲುಕ್‌ನಲ್ಲಿ ಕಮಾಲ್ ಮಾಡಲಿದ್ದಾರೆ. ಹಿರಿಯ ಕಲಾವಿದ ಮುಸುರಿ ಕೃಷ್ಣ ಮೂರ್ತಿ ಅವರ ಮಗ ಜಯಸಿಂಹ ಮುಸುರಿ, ಜಗ್ಗೇಶ್ ಅವರ ಕಿರಿಯ ಮಗ ಯತಿರಾಜ್ ಹಾಗೂ ಫ್ರೆಂಚ್ ಬಿರಿಯಾನಿ ಖ್ಯಾತಿಯ ಮಹಾಂತೇಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಕುಟುಂಬ ಸಮೇತ ನೋಡಬಹುದಾದ ಪರಿಶುದ್ಧ ಹಾಸ್ಯ ಕಥಾಹಂದರದ ಜೊತೆಗೆ ಎಮೋಶನ್ ಸನ್ನಿವೇಶಗಳನ್ನು ಒಳಗೊಂಡಿರುವ ಈ ಚಿತ್ರಕ್ಕೆ ನಿರ್ದೇಶಕ ಪ್ರದೀಪ ಅವರೆ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಗೀತ ರಚನೆ ಸಹ ಮಾಡಿದ್ದಾರೆ. ಧರ್ಮ ವಿಶ್ ಸಂಗೀತ, ಉದಯ್ ಲೀಲಾ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿರಲಿದೆ.

ಸಿನಿಮಾ ಸಂಬಂಧಿ ಈ ಸುದ್ದಿಗಳನ್ನೂ ಓದಿ

Sai Pallavi on MeToo: ‘ಕೇವಲ ದೈಹಿಕ ಹಿಂಸೆ ಮಾತ್ರವಲ್ಲ, ಆ ವರ್ತನೆಯೂ ಕಿರುಕುಳವೇ!’; ಮೀಟೂ ಬಗ್ಗೆ ಸಾಯಿ ಪಲ್ಲವಿ ನೇರಮಾತು

Sai Pallavi on MeToo: ಸೌತ್‌ ಸಿನಿ ದುನಿಯಾದಲ್ಲಿ ಹೆಸರು ಮಾಡಿರುವ ನಟಿ ಸಾಯಿ ಪಲ್ಲವಿ, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗು, ತಮಿಳು, ಮಲಯಾಳಂ ಪ್ರಾಜೆಕ್ಟ್‌ಗಳಲ್ಲಿ ಬಿಜಿಯಾಗಿದ್ದಾರೆ. ಈ ನಡುವೆ ಸಿನಿಮಾದ ಜತೆಗೆ ಸಂದರ್ಶನಗಳಲ್ಲಿಯೂ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಸಂದರ್ಶನವೊಂದರಲ್ಲಿ ಮೀಟೂ ಅಭಿಯಾನದ ಬಗ್ಗೆಯೂ ನೇರವಾಗಿ ಮಾತನಾಡಿದ್ದಾರೆ. ಪೂರ್ತಿ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

Kabzaa Mumbai Promotion: ಮುಂಬೈನಲ್ಲಿ ‘ಕಬ್ಜ’ ಹವಾ; ಕಿಚ್ಚ, ಉಪ್ಪಿ ಮೇಲೆ ಪುಷ್ಪವೃಷ್ಟಿ

ಇನ್ನೇನು ಬಿಡುಗಡೆಗೆ ಹತ್ತಿರ ಬಂದ ಕಬ್ಜ ಸಿನಿಮಾ ಸದ್ಯ ಪ್ರಚಾರದ ಕೆಲಸದಲ್ಲಿ ಬಿಜಿಯಾಗಿದೆ. ಈ ನಡುವೆ, ಮುಂಬೈನಲ್ಲಿಯೂ ಈ ಸಿನಿಮಾ ಪತ್ರಿಕಾಗೋಷ್ಠಿ ಮುಗಿಸಿದೆ. ಉಪೇಂದ್ರ ಜತೆಗೆ ಕಿಚ್ಚ ಸುದೀಪ್‌ ನಿರ್ದೇಶಕ ಆರ್‌. ಚಂದ್ರು ಸಹ ಮುಂಬೈ ಮಾಧ್ಯಮಗಳ ಮುಂದೆ ಬಂದಿದ್ದರು. ಇದಕ್ಕೂ ಮುನ್ನ ಉಪ್ಪಿ ಮತ್ತು ಕಿಚ್ಚ ಎಂಟ್ರಿಯಾಗುತ್ತಿದ್ದಂತೆ, ಅಲ್ಲಿದ್ದವರು ಸೌತ್‌ ನಟರಿಗೆ ಪುಷ್ಪವೃಷ್ಟಿ ಸುರಿಸಿ ಸ್ವಾಗತಿಸಿದ್ದಾರೆ. ವಿಡಿಯೋ ನೋಡಲು ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ