Sai Pallavi on MeToo: ‘ಕೇವಲ ದೈಹಿಕ ಹಿಂಸೆ ಮಾತ್ರವಲ್ಲ, ಆ ವರ್ತನೆಯೂ ಕಿರುಕುಳವೇ!’; ಮೀಟೂ ಬಗ್ಗೆ ಸಾಯಿ ಪಲ್ಲವಿ ನೇರಮಾತು
ಮೀಟೂ ಅಭಿಯಾನದ ಬಗ್ಗೆ ನಟಿ ಸಾಯಿ ಪಲ್ಲವಿ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ದೈಹಿಕ ಹಿಂಸೆ ಮಾತ್ರವಲ್ಲ, ಈ ಕೆಲಸವೂ ಮೀಟೂ ಅಡಿಯಲ್ಲಿಯೇ ಬರುತ್ತದೆ ಎಂದಿದ್ದಾರೆ.
Sai Pallavi on MeToo: ಸೌತ್ ಸಿನಿ ದುನಿಯಾದಲ್ಲಿ ಹೆಸರು ಮಾಡಿರುವ ನಟಿ ಸಾಯಿ ಪಲ್ಲವಿ, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗು, ತಮಿಳು, ಮಲಯಾಳಂ ಪ್ರಾಜೆಕ್ಟ್‌ಗಳಲ್ಲಿ ಬಿಜಿಯಾಗಿದ್ದಾರೆ. ಈ ನಡುವೆ ಸಿನಿಮಾದ ಜತೆಗೆ ಸಂದರ್ಶನಗಳಲ್ಲಿಯೂ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಸಂದರ್ಶನವೊಂದರಲ್ಲಿ ಮೀಟೂ ಅಭಿಯಾನದ ಬಗ್ಗೆಯೂ ನೇರವಾಗಿ ಮಾತನಾಡಿದ್ದಾರೆ.
ಮೀಟೂ ಪ್ರಕರಣ ಭಾರತೀಯ ಚಿತ್ರೋದ್ಯಮದಲ್ಲಿ ಹೊಸದೇನಲ್ಲ. ಆಗಾಗ ತಮಗಾದ ಅನ್ಯಾಯವನ್ನು ಸಾಕಷ್ಟು ನಟಿಯರು ನೇರವಾಗಿ ಹೇಳಿಕೊಂಡಿದ್ದಾರೆ. ಸಿನಿಮಾ ಅವಕಾಶಕ್ಕಾಗಿ ನಿರ್ಮಾಪಕರು, ನಿರ್ದೇಶಕರು, ಹೀರೋಗಳ ಜತೆಗೆ ಕಾಂಪ್ರಮೈಸ್ ಆಗದೇ, ಅದರಿಂದ ಸಿಡಿದೆದ್ದ ಅದೆಷ್ಟೋ ಮಹಿಳೆಯರು ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ. ಇದೀಗ ಈ ಮೀಟೂ ಬಗ್ಗೆಯೇ ನಟಿ ಸಾಯಿ ಪಲ್ಲವಿ ಮಾತನಾಡಿದ್ದಾರೆ.
ಸೋನಿಲಿವ್ ಒಟಿಟಿಯಲ್ಲಿ ಗಾಯಕಿ ಸ್ಮಿತಾ ನಡೆಸಿಕೊಡುತ್ತಿದ್ದ ನಿಜಂ ಎಂಬ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಸಾಯಿ ಪಲ್ಲವಿ ಈ ಮೀಟೂ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ದೈಹಿಕ ಹಿಂಸೆ ಮಾತ್ರವಲ್ಲದೆ ಮಾತಿನ ಹಿಂಸೆಯನ್ನೂ ಲಘುವಾಗಿ ಪರಿಗಣಿಸಬಾರದು ಎಂದಿದ್ದಾರೆ.
ಈ ಟಾಕ್ ಶೋನ ಸಂಪೂರ್ಣ ಸಂಚಿಕೆ ಶೀಘ್ರದಲ್ಲೇ ಸೋನಿಲಿವ್‌ನಲ್ಲಿ ಸ್ಟ್ರೀಮಿಂಗ್ ಆಗಲಿದ್ದು, ಅದರ ಪ್ರಮೋಷನಲ್ ವಿಡಿಯೋದಲ್ಲಿ MeToo ಚಳುವಳಿಯ ಬಗ್ಗೆ ಸಾಯಿ ಹೀಗೆ ಹೇಳಿದ್ದಾರೆ. "ದೈಹಿಕ ಚಿತ್ರಹಿಂಸೆ ಮಾತ್ರವಲ್ಲ. ಮಾತಿನ ಚಿತ್ರಹಿಂಸೆಯೂ ಈ ವರ್ಗಕ್ಕೆ ಸೇರುತ್ತದೆ" ಎಂದು ಸಾಯಿ ಪಲ್ಲವಿ ಹೇಳಿದ್ದಾರೆ. ಇದೇ ಶೋದಲ್ಲಿ ಸಾಯಿ ಪಲ್ಲವಿ, ವೈದ್ಯಕೀಯ ವಿದ್ಯಾರ್ಥಿನಿಯಿಂದ ನಟಿಯಾಗುವವರೆಗಿನ ತಮ್ಮ ಪಯಣದ ಬಗ್ಗೆಯೂ ಮಾತನಾಡಿದ್ದಾರೆ.
ಸಿನಿಮಾ ಸಂಬಂಧಿ ಈ ಸುದ್ದಿಗಳನ್ನೂ ಓದಿ
Bombe Helutaite Movie: ‘ಬೊಂಬೆ ಹೇಳುತೈತೆ’ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ ನಟ ಯತಿರಾಜ್
ಸಿನಿಮಾ ಪತ್ರಕರ್ತನಾಗಿ ಪರಿಚಿತರಾಗಿದ್ದ ಯತಿರಾಜ್ ನಂತರ ಕಲಾವಿದನಾಗಿ ಚಿರಪರಿಚಿತರಾದರು. ಈಗ ಯತಿರಾಜ್ ನಿರ್ದೇಶಕನಾಗೂ ಪ್ರಸಿದ್ದರಾಗುತ್ತಿದ್ದಾರೆ. ಪ್ರಸ್ತುತ ಅವರು ನಿರ್ದೇಶಿಸಿ, ಏಕಪಾತ್ರದಲ್ಲಿ ನಟಿಸಿರುವ ‘ಬೊಂಬೆ ಹೇಳುತೈತೆ’ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಈ ಚಿತ್ರದ ಮೂಲಕ ಯತಿರಾಜ್ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ
Vinay Rajkumar Movie: ಸಿಂಪಲ್ ಸುನಿ-ವಿನಯ್ ರಾಜ್‌ಕುಮಾರ್ ಕಾಂಬಿನೇಶನ್‌ನ 'ಒಂದು ಸರಳ ಪ್ರೇಮಕಥೆ' ಪೋಸ್ಟರ್ ರಿಲೀಸ್
ಸಿಂಪಲ್ ಸುನಿ ನಿರ್ದೇಶನದಲ್ಲಿ ವಿನಯ್ ರಾಜ್‌ಕುಮಾರ್ ನಟಿಸುತ್ತಿರುವ ರೊಮ್ಯಾಂಟಿಕ್ ಕಾಮಿಡಿ 'ಒಂದು ಸರಳ ಪ್ರೇಮಕಥೆ' ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಆಗಿದೆ. ಪೋಸ್ಟರ್ ರಿಲೀಸ್ ಮಾಡುವ ಮೂಲಕ ಚಿತ್ರತಂಡ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿದೆ. ಮೊದಲ ಹಂತದ ಶೂಟಿಂಗ್ ಮುಗಿಸಿರುವ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣದಲ್ಲಿ ಬ್ಯುಸಿ ಇದೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ