ಧ್ರುವ ಸರ್ಜಾ ‘ಮಾರ್ಟಿನ್’ ಚಿತ್ರಕ್ಕೆ ಕಟು ವಿಮರ್ಶೆ; ಚಿತ್ರತಂಡದ ನಡೆಯ ಬಗ್ಗೆ ಚೇತನ್ ಅಹಿಂಸಾ ಸಿಡಿಮಿಡಿ
Oct 19, 2024 11:32 AM IST
ಮಾರ್ಟಿನ್ ಚಿತ್ರತಂಡದ ನಡೆಯ ವಿರುದ್ಧ ಚೇತನ್ ಅಹಿಂಸಾ ಸಿಡಿಮಿಡಿ
- Chetan Ahimsa: ಮೊದಲ ದಿನ 5 ಕೋಟಿ ಪ್ಲಸ್ ಗಳಿಕೆ ಕಂಡಿದ್ದ ಮಾರ್ಟಿನ್ ಚಿತ್ರ ಇದೀಗ 8ನೇ ದಿನದ ಹೊತ್ತಿಗೆ ಒಟ್ಟಾರೆ 19.5 ಕೋಟಿ ಮಾತ್ರ ಗಳಿಕೆ ಕಂಡಿದೆ. ಹೀಗಿರುವಾಗಲೇ ಇದೇ ಸಿನಿಮಾದ ನಿರ್ಮಾಪಕರ ನಡೆಯ ಬಗ್ಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಕೊಂಚ ಪ್ರತಿಕ್ರಿಯೆ ನೀಡಿದ್ದಾರೆ.
Chetan Ahimsa on Martin Movie: ಸ್ಯಾಂಡಲ್‌ವುಡ್‌ನಲ್ಲಿ ಬಹು ನಿರೀಕ್ಷೆಯೊಂದಿಗೆ ಕಳೆದ ವಾರ ತೆರೆಕಂಡಿತ್ತು ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ. ಉದಯ್ ಕೆ ಮೆಹ್ತಾ ನಿರ್ಮಾಣ ಮಾಡಿದ್ದ ಈ ಸಿನಿಮಾವನ್ನು ಎ.ಪಿ ಅರ್ಜುನ್ ನಿರ್ದೇಶನ ಮಾಡಿದ್ದರು. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿ 12 ಭಾಷೆಗಳಲ್ಲಿ ಈ ಸಿನಿಮಾ ತೆರೆಕಂಡಿತ್ತು. ಆದರೆ, ಆ ನಿರೀಕ್ಷೆ ಘಟ್ಟವನ್ನು ಮಾರ್ಟಿನ್ ಸಿನಿಮಾ ತಲುಪಲಿಲ್ಲ. ಸಿನಿಮಾ ನೋಡಿದ ಬಹುತೇಕರು, ಚಿತ್ರಕ್ಕೆ ನೆಗೆಟಿವ್ ಕಾಮೆಂಟ್ ಕೊಟ್ಟಿದ್ದರು. ಸೋಷಿಯಲ್ ಮೀಡಿಯಾದಲ್ಲಿಯೂ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು ಈ ಸಿನಿಮಾ. ಈಗ ಇದೇ ಚಿತ್ರದ ನಿರ್ಮಾಪಕರ ನಡೆಯ ಬಗ್ಗೆ ಚೇತನ್ ಅಹಿಂಸಾ ಪ್ರತಿಕ್ರಿಯಿಸಿದ್ದಾರೆ.
ವೀಕ್ಷಕರಿಂದ ನೆಗೆಟಿವ್ ಟಾಕ್ ಪಡೆದುಕೊಂಡ ಮಾರ್ಟಿನ್ ಸಿನಿಮಾ ಕಲೆಕ್ಷನ್ ವಿಚಾರದಲ್ಲಿಯೂ ಮೋಡಿ ಮಾಡಲಿಲ್ಲ. 20 ಕೋಟಿ ವೆಚ್ಚ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ ಅಕ್ಟೋಬರ್ 11ರಂದು ತೆರೆಕಂಡಿತ್ತು. ಮೊದಲ ದಿನ 5 ಕೋಟಿ ಪ್ಲಸ್ ಗಳಿಕೆ ಕಂಡಿದ್ದ ಈ ಚಿತ್ರ ಇದೀಗ 8ನೇ ದಿನದ ಹೊತ್ತಿಗೆ ಒಟ್ಟಾರೆ 19.5 ಕೋಟಿ ಮಾತ್ರ ಗಳಿಕೆ ಕಂಡಿದೆ. ಹೀಗಿರುವಾಗಲೇ ಇದೇ ಸಿನಿಮಾ ಬಗ್ಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಕೊಂಚ ಪ್ರತಿಕ್ರಿಯೆ ನೀಡಿದ್ದಾರೆ.
ನಟ ಚೇತನ್ ಅಹಿಂಸಾ ಪ್ರತಿಕ್ರಿಯೆ
‘ಮಾರ್ಟಿನ್' ನಿರ್ಮಾಪಕ ಅವರು 'ಚಲನಚಿತ್ರದ ಆಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವ ವಿಷಯದ ವಿರುದ್ಧ' ಕಾನೂನು ಕ್ರಮ ಕೈಗೊಳ್ಳಲು ಜಾನ್ ಡೋ ಆದೇಶವನ್ನು ಹೊಂದಿದ್ದಾರೆಂದು ಹೇಳುತ್ತಾರೆ. ಜಾನ್ ಡೋ ಆದೇಶವು ಉಲ್ಲಂಘನೆ (ಇನ್ಫರಿಂಜುಮೆಂಟ್)/ಕಾನೂನುಬಾಹಿರ ಎಕ್ಸ್ಪ್ಲಾಯಿಟ್ಯಷನ್ ಪ್ರಕರಣಗಳಲ್ಲಿ ಉದ್ಭವಿಸುತ್ತದೆ. ಚಲನಚಿತ್ರ ವಿಮರ್ಶೆಗಳನ್ನು ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯದ ಅಡಿಯಲ್ಲಿ ರಕ್ಷಿಸಲಾಗಿದೆ. ಇದು ನ್ಯಾಯಾಲಯದ ಬೆಂಬಲದೊಂದಿಗೆ ಚಲನಚಿತ್ರ ತಯಾರಕರಿಂದ ಅಸಂವಿಧಾನಿಕ, ಅಧಿಕಾರದ ದುರುಪಯೋಗದಂತೆ ಕಂಡುಬರುತ್ತದೆ" ಎಂದಿದ್ದಾರೆ.
ವಿಮರ್ಶೆ ಮಾಡುವುದು ಹಕ್ಕು
ಸ್ವಾತಂತ್ರ್ಯವು ನಿರ್ಮಾಪಕರು/ತಯಾರಕರಿಗೆ ಚಲನಚಿತ್ರಗಳಲ್ಲಿ ಹೂಡಿಕೆ ಮಾಡುವ ಹಕ್ಕನ್ನು ಮತ್ತು ಅದಕ್ಕೆ ಅನುಗುಣವಾಗಿ ಹಣವನ್ನು ಗಳಿಸುವ ಹಕ್ಕನ್ನು ನೀಡುತ್ತದೆ. ಇದು ಒಂದು ಆಯ್ಕೆ ಮತ್ತು ವ್ಯವಹಾರವಾಗಿದೆ. (ರಿಸ್ಕಿ ವ್ಯವಹಾರ/ ಜೂಜು ಅಂಥ ಹೇಳ್ಬೋದು) ಅದೇ ಸ್ವತಂತ್ರವು ಚಲನಚಿತ್ರವನ್ನು ವೀಕ್ಷಿಸಲು ಮತ್ತು ಅದರ ಬಗ್ಗೆ ವಿಮರ್ಶೆಯನ್ನು ನೀಡಲು ಬಯಸುವ ವೀಕ್ಷಕರಿಗೆ ಹಕ್ಕನ್ನು ನೀಡಲಾಗುತ್ತದೆ. ಎರಡೂ ಹಕ್ಕುಗಳನ್ನು ಎತ್ತಿಹಿಡಿಯಬೇಕು" ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಮಾರ್ಟಿನ್ ಬಗ್ಗೆ ಕಟು ವಿಮರ್ಶೆ, ಕ್ಷಮಾಪಣೆ
ಮಾರ್ಟಿನ್ ಸಿನಿಮಾ ಬಗ್ಗೆ ಸೋಷಿಯಲ್ ಮೀಡಿಯಾ ಇನ್‌ಪ್ಲುಯೆನ್ಸರ್ ಸುಧಾಕರ್ ಗೌಡ ವಿಡಿಯೋ ಹಂಚಿಕೊಂಡಿದ್ದರು. "ಧ್ರುವ ಸರ್ಜಾ ಅವರ ನಟನೆ ನೋಡಿ ಕೆಲವು ಆಡಿಯೆನ್ಸ್ ನಗ್ತಾಯಿದ್ದಾರೆ. ಇಂಥ ಸಿನಿಮಾನೂ ಮಾಡ್ತಾರಾ ಅಂತ ತಲೆ ನೋವು ಬಂದು ಬಿಡುತ್ತದೆ. ಜನಗಳಿಗೆ ಮೋಸ ಮಾಡುವುದನ್ನು ಮೊದಲು ನಿಲ್ಲಿಸಿ. ಟಿಕೆಟ್ ಬುಕ್ ಆಗದಿದ್ದರೂ, ಟೀಮ್‌ನವವರೇ 200 ಶೋಗಳನ್ನು ಬುಕ್ ಮಾಡಿಸ್ತಿದ್ದಾರೆ ಎಂದು ಥಿಯೇಟರ್‌ನವ್ರು ಹೇಳಿದ್ರು. ಹೊರ ರಾಜ್ಯಗಳಲ್ಲಿ ಕನ್ನಡದ ಮಾನ ಮರ್ಯಾದೆ ಕಳೀತಿದ್ದೀರಿ. ಅವರೇನೋ ಕೆಜಿಎಫ್, ಕಾಂತಾರ ಸಿನಿಮಾ ಮಾಡಿದ್ದಾರೆ. ನೀವು ಈ ಥರ ಪಾತ್ರ ಮಾಡಿದ್ರೆ ಯಾರು ನೋಡ್ತಾರೆ?" ಎಂದು ಬೇಸರ ಹೊರಹಾಕಿದ್ದರು. ಬಳಿಕ ಈ ರೀತಿ ಹೇಳಬಾರದಿತ್ತು ಎಂದು ಕ್ಷಮೆ ಕೇಳಿದ್ದರು ಸುಧಾಕರ್.
ಏನಿದೆ ಸಿನಿಮಾದಲ್ಲಿ?
ಮಾರ್ಟಿನ್ ಸಿನಿಮಾದಲ್ಲಿ ನಟ ಧ್ರುವ ಸರ್ಜಾ ಡಬಲ್ ರೋಲ್ ಪ್ಲೇ ಮಾಡಿದ್ದಾರೆ. ಕಸ್ಟಮ್ಸ್ ಆಫೀಸರ್ ಆಗಿರುವ ಅರ್ಜುನ್ ಸಕ್ಸೇನಾ (ಧ್ರುವ ಸರ್ಜಾ), ಪಾಕಿಸ್ತಾನಿಯರಿಗೆ ಸೆರೆಸಿಕ್ಕ ಭಾರತೀಯನಾಗಿರುತ್ತಾನೆ. ತನ್ನ ನೆನಪಿನಶಕ್ತಿಯನ್ನೂ ಕಳೆದುಕೊಂಡು, ನಿಜವಾದ ಐಡೆಂಟಿಟಿ ಕಂಡುಕೊಳ್ಳುವ ಸಲುವಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿಳಿಯುತ್ತಾನೆ. ಆತನ ಈ ಸಮಸ್ಯೆಗೆ ಮಾರ್ಟಿನ್ ಕಾರಣ ಎಂಬ ಸತ್ಯವೂ ತಿಳಿಯುತ್ತದೆ. ಆ ಮಾರ್ಟಿನ್ ಯಾರು? ಅವನ ಹಿನ್ನೆಲೆ ಏನು? ಅರ್ಜುನ್‌ಗೂ ಮಾರ್ಟಿನ್‌ಗೂ ಏನು ಸಂಬಂಧ? ಈ ಹಾದಿಯಲ್ಲಿ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ.