Bigg Boss Kannada 11: ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಯಾವೆಲ್ಲ ವಿಷ್ಯಗಳು ಚರ್ಚೆಗೆ ಬರಬಹುದು? ಹೀಗಿವೆ ವೀಕ್ಷಕರ ಬೇಡಿಕೆಗಳು
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada 11: ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಯಾವೆಲ್ಲ ವಿಷ್ಯಗಳು ಚರ್ಚೆಗೆ ಬರಬಹುದು? ಹೀಗಿವೆ ವೀಕ್ಷಕರ ಬೇಡಿಕೆಗಳು

Bigg Boss Kannada 11: ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಯಾವೆಲ್ಲ ವಿಷ್ಯಗಳು ಚರ್ಚೆಗೆ ಬರಬಹುದು? ಹೀಗಿವೆ ವೀಕ್ಷಕರ ಬೇಡಿಕೆಗಳು

Bigg boss Kannada 11: ಈ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಮಾತನಾಡಬೇಕಿರೋ ಗರಮಾ ಗರಂ ವಿಷಯಗಳು ಯಾವವು ಎಂದು ಪೋಸ್ಟ್‌ ಹಂಚಿಕೊಂಡಿದೆ ಕಲರ್ಸ್‌ ಕನ್ನಡ. ಆ ಪೋಸ್ಟ್‌ಗೆ ಸಾವಿರಾರು ಕಾಮೆಂಟ್‌ಗಳು ಹರಿದು ಬಂದಿವೆ. ಆ ಪೈಕಿ ವೀಕ್ಷಕರ ಪ್ರಶ್ನೆಗಳೇನು? ಕಿಚ್ಚನ ಮುಂದೆ ವೀಕ್ಷಕರು ಇಟ್ಟಿರುವ ಬೇಡಿಕೆಗಳೇನು? ಇಲ್ಲಿದೆ ನೋಡಿ

ವಾರದ ಕಥೆ ಕಿಚ್ಚನ ಜೊತೆ; ವೀಕ್ಷಕರ ಪ್ರಶ್ನೆಗಳೇನು, ಬೇಡಿಕೆಗಳೇನು?
ವಾರದ ಕಥೆ ಕಿಚ್ಚನ ಜೊತೆ; ವೀಕ್ಷಕರ ಪ್ರಶ್ನೆಗಳೇನು, ಬೇಡಿಕೆಗಳೇನು? (instagram\ Colors Kannada)

Bigg boss Kannada 11: ಈ ಸಲದ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಶಾಕಿಂಗ್‌ ಎಲಿಮಿನೇಷನ್‌ ನಡೆದಿದೆ. ಮಹಿಳಾ ಸ್ಪರ್ಧಿಗಳ ಬಗ್ಗೆ ಕೆಟ್ಟ ಪದ ಪ್ರಯೋಗ ಬಳಸಿದ್ದಕ್ಕೆ ಜಗದೀಶ್‌ ಎಲಿಮಿನೇಟ್‌ ಆದರೆ, ಒಳ್ಳೆಯ ಉದ್ದೇಶ ಇದ್ದರೂ, ದೈಹಿಕ ಹಲ್ಲೆ ಮಾಡಿದ ಆರೋಪದ ಮೇಲೆ ರಂಜಿತ್‌ ಮನೆಯಿಂದ ಹೊರ ನಡೆದಿದ್ದಾರೆ. ಇತ್ತ ಮನೆಯ ಸ್ಪರ್ಧಿಗಳು ರಂಜಿತ್‌ ತೆರಳಿದ್ದಕ್ಕೆ ಬೇಸರದಲ್ಲಿದ್ದರೆ, ಜಗದೀಶ್‌ ಹೊರ ನಡೆದಿದ್ದಕ್ಕೆ ಕುಣಿದು ಕುಪ್ಪಳಿಸಿದ್ದಾರೆ. ಇದೆಲ್ಲದರ ನಡುವೆಯೇ ವಾರಾಂತ್ಯವೂ ಬಂದಿದೆ. ಕಿಚ್ಚನ ಆಗಮನಕ್ಕೂ ಕ್ಷಣಗಣನೆ ಆರಂಭವಾಗಿದೆ.

ಇಂದು ಶನಿವಾರ. ಕಳೆದ ವಾರ ಯಾವುದೇ ಎಲಿಮಿನೇಷನ್‌ ಇರಲಿಲ್ಲ. ಅಚ್ಚರಿಯ ಬೆಳವಣಿಗೆಯಲ್ಲಿ ಎಲ್ಲರೂ ಸೇವ್‌ ಆಗಿದ್ದರು. ಆದರೆ, ಈ ವಾರ ಹಾಗಾಗಲಿಲ್ಲ. ಯಾರೂ ನಿರೀಕ್ಷಿಸದೇ ಇಬ್ಬರು ಸ್ಪರ್ಧಿಗಳು ನೇರವಾಗಿ ಹೊರ ನಡೆಯಬೇಕಾಯಿತು. ಹೀಗಿರುವಾಗ ಈ ವಾರ ಎಲಿಮಿನೇಷನ್‌ ಇರುತ್ತಾ? ಇದಕ್ಕೆ ಸದ್ಯಕ್ಕೆ ಉತ್ತರ ಇಲ್ಲ. ಆದರೆ, ಒಂದಷ್ಟು ಪ್ರಶ್ನೆಗಳಂತೂ ಎಲ್ಲರಲ್ಲೂ ಇವೆ. ಅದರಲ್ಲೂ ವೀಕ್ಷಕರು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಇದೀಗ ಕಿಚ್ಚನ ಪಂಚಾಯ್ತಿಯಲ್ಲಿ ಆ ಪ್ರಶ್ನೆಗಳಿಗೂ ಉತ್ತರ ಸಿಗಬಹುದಾ?

ಸೋಷಿಯಲ್‌ ಮೀಡಿಯಾದಲ್ಲಿ ಈ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಮಾತನಾಡಬೇಕಿರೋ ಗರಮಾ ಗರಂ ವಿಷಯಗಳು ಯಾವವು" ಎಂದು ಪೋಸ್ಟ್‌ ಹಂಚಿಕೊಂಡಿದೆ ಕಲರ್ಸ್‌ ಕನ್ನಡ. ಆ ಪೋಸ್ಟ್‌ಗೆ ಸಾವಿರಾರು ಕಾಮೆಂಟ್‌ಗಳು ಹರಿದು ಬಂದಿವೆ. ಆ ಪೈಕಿ ವೀಕ್ಷಕರ ಪ್ರಶ್ನೆಗಳೇನು? ಕಿಚ್ಚ ಸುದೀಪ್‌ ಮುಂದೆ ವೀಕ್ಷಕರು ಇಟ್ಟಿರುವ ಬೇಡಿಕೆಗಳೇನು? ಇಲ್ಲಿದೆ ನೋಡಿ ಆಯ್ದ ಕೆಲವು ಪ್ರಶ್ನೆಗಳು ಮತ್ತು ಬೇಡಿಕೆಗಳು.

ಕಿಚ್ಚನಿಗೆ ವೀಕ್ಷಕರ ಪ್ರಶ್ನೆ ಮತ್ತು ಬೇಡಿಕೆ

  • ಜಗದೀಶ ಇಲ್ಲದ ಬಿಗ್‌ ಬಾಸ್ ನಾವು ನೋಡಲ್ಲ.‌ ಲಾಯರ್ ಜಗದೀಶ್‌ಗೆ ನ್ಯಾಯ ಸಿಗಬೇಕು. ಜಗ್ಗು ಮತ್ತೆ ಅಖಾಡಕ್ಕೆ ಇಳಿಬೇಕು
  • ಪುರುಷರಿಗೆ ಆದ ನಿಂದನೆ ಅಪಮಾನದ ಬಗ್ಗೆ ಕರ್ನಾಟಕದ ಜನತೆ ಸಹಿಸುವುದಿಲ್ಲ.
  • ಹೆಣ್ಣಿಗೆ ಮಾತ್ರ ಅವಮಾನ ಆಗಿರಲಿಲ್ಲ ಗಂಡಿಗೂ ಅವಮಾನ ಆಗಿದೆ ಇದರ ಬಗ್ಗೆನೂ ಪ್ರಶ್ನೆ ಆಗಬೇಕು
  • ಮಾನಸ ನಾ ಹೊರಗಡೆ ಕಳ್ಸಿ, ಗಂಡ = ತುಕಾಲಿ, ಹೆಂಡತಿ = ತುಕಾಲಿ ಪ್ರೊ ಮ್ಯಾಕ್ಸ್
  • ಗಂಡಿನ ಮರ್ಯಾದೆ ಧಕ್ಕೆ ಬರ್ತಿದೆ ಈ ಬಿಗ್ ಬಾಸ್ ಮನೆಯ ಹೆಣ್ಣು ಮಕ್ಕಳಿಂದ. ಮುಂದೆ ಪುರುಷ ರಕ್ಷಣಾ ವೇದಿಕೆಯನ್ನು ತೆರೆದರು ತೆರೆಯಬಹುದು.

- ಒಬ್ಬ ಅಪ್ಪನಿಗೆ ಹುಟ್ಟಿದರೆ : ಚೈತ್ರ

- ಸೀರೆ ಕೊಡ್ತೀನಿ ಉಟ್ಕೋ, ತಾಯಿ ಹತ್ರ ಮಾತಾಡು ಇದೆಲ್ಲ: ಮಾನಸ

- ಹೋರ್ಗಡೆ ಎನ್ ತಗೊಂಡು ಹೊಡೀತಾರೆ ನಿಂಗೆ ಎನ್ನುತ್ತ ತಳ್ಳಿದ್ದು: ಭವ್ಯ

- ಗಂಡಿನ ಘನತೆಗೆ ಧಕ್ಕೆ ಆದಾಗ ತಿರುಗೇಟು ಕೊಟ್ಟರೆ ಅದು ಮಹಿಳೆಗೆ ಅಗೌರವವೇ? ಕಿಚ್ಚ ಸುದೀಪ್ ಇದಕ್ಕೆ ನ್ಯಾಯ ಒದಗಿಸುವ ಮೂಲಕ ಪುರುಷರ ಘನತೆ ಕಾಪಾಡಬೇಕು.

  • ಜಗ್ಗುನ ಪ್ರವೋಕ್ ಮಾಡಿದ ಎಲ್ಲರಿಗೂ ಅವರ ತಪ್ಪಿನ ಅರಿವು ಮಾಡಿಸಬೇಕು
  • ಹೆಣ್ಣಿನ ಬಗ್ಗೆ ಕೆಟ್ಟದಾಗಿ ಮಾತಾಡುವುದು ತಪ್ಪು. ಜಗದೀಶ್‌ಗೆ ಶಿಕ್ಷೆ ಸರಿ. ಆದರೆ ಚೈತ್ರ ಹೇಳ್ತಾರೆ ಅಪ್ಪನಿಗೆ ಹುಟ್ಟಿದರೆ ಬಾ, ಒಬ್ಬ ಅಪ್ಪನಿಗೆ ಹುಟ್ಟಿದ್ದರೆ ಬಾ ಅಂತ ಇದರಲ್ಲಿ ಆಗಿರುವುದು ಒಂದು ಹೆಣ್ಣಿಗೆ ಅವಮಾನ (ಜಗದೀಶ್ ತಾಯಿ ) ಇದರ ಬಗ್ಗೆನೂ ಚರ್ಚೆ ಆಗಬೇಕು.
  • ಜಗ್ಗು ಮಾತಾಡಿದ್ದು ತಪ್ಪು ಅದರಲ್ಲಿ 2 ಮಾತಿಲ್ಲ.. ಆದ್ರೆ ಸತತ 3 ದಿನಗಳಿಂದ ರಂಜಿತ್, ಮಂಜು, ತ್ರಿವಿಕ್ರಮ ಜಗಳ ಆಡೋ ತರ ಪ್ರಚೋದನೆ ಮಾಡಿದ್ದು ತಪ್ಪು.. ಮಾನಸ ಮಾತು ಅಸಹ್ಯವಾಗಿ ಇರುತ್ತೆ ಅವಳನ್ನು ಯಾಕೆ ಹೊರಗೆ ಹಾಕಿಲ್ಲ. ಅವಳು ಕೈ ಮಾಡಿದ್ಲು.. ಚೈತ್ರ ಭವ್ಯ ಮಾನಸ 3 ಜನ ಅಮ್ಮ ಅಪ್ಪ ಹೆಂಡ್ತಿ ಅನ್ನೋ ಶಬ್ದ ಬಳಸಿ ಮಾತಾಡಿದ್ರು. ಹೆಣ್ಣಿಗೆ ಮರ್ಯಾದೆ ಇದೆ ಆದ್ರೆ ಗಂಡಿಗೂ ಮರ್ಯಾದೆ ಇದೆ ಅನ್ನೋದನ್ನ ಅವರಿಗೂ ತಿಳಿಸಬೇಕು.

Whats_app_banner