BBK 11: ‘ಮಗಾ ಒಂದೊಳ್ಳೆ ಉದ್ದೇಶಕ್ಕೆ ಎಲಿಮಿನೇಟ್‌ ಆಗಿದ್ದೀಯಾ, ಬಿಗ್‌ ಬಾಸ್‌ ಇರೋವರೆಗೂ ನಿನ್ನ ಹೆಸರು ಶಾಶ್ವತ’; ರಂಜಿತ್‌ಗೆ ಮೆಚ್ಚುಗೆ
ಕನ್ನಡ ಸುದ್ದಿ  /  ಮನರಂಜನೆ  /  Bbk 11: ‘ಮಗಾ ಒಂದೊಳ್ಳೆ ಉದ್ದೇಶಕ್ಕೆ ಎಲಿಮಿನೇಟ್‌ ಆಗಿದ್ದೀಯಾ, ಬಿಗ್‌ ಬಾಸ್‌ ಇರೋವರೆಗೂ ನಿನ್ನ ಹೆಸರು ಶಾಶ್ವತ’; ರಂಜಿತ್‌ಗೆ ಮೆಚ್ಚುಗೆ

BBK 11: ‘ಮಗಾ ಒಂದೊಳ್ಳೆ ಉದ್ದೇಶಕ್ಕೆ ಎಲಿಮಿನೇಟ್‌ ಆಗಿದ್ದೀಯಾ, ಬಿಗ್‌ ಬಾಸ್‌ ಇರೋವರೆಗೂ ನಿನ್ನ ಹೆಸರು ಶಾಶ್ವತ’; ರಂಜಿತ್‌ಗೆ ಮೆಚ್ಚುಗೆ

ಮೊದಲ ಸಲ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಸ್ಪರ್ಧಿಗಳು ನೇರವಾಗಿ ನಿಯಮ ಮೀರಿದ ಹಿನ್ನೆಲೆಯಲ್ಲಿ ಎಲಿಮಿನೇಟ್‌ ಆಗಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಜಗದೀಶ್‌, ದೈಹಿಕ ಹಲ್ಲೆ ಆರೋಪದ ಮೇಲೆ ರಂಜಿತ್‌ ಶುಕ್ರವಾರ ಮನೆ ತೊರೆದಿದ್ದಾರೆ.

ಬಿಗ್‌ ಬಾಸ್‌ ಮನೆಯಿಂದ ರಂಜಿತ್‌, ಜಗದೀಶ್‌ ಹೊರಕ್ಕೆ
ಬಿಗ್‌ ಬಾಸ್‌ ಮನೆಯಿಂದ ರಂಜಿತ್‌, ಜಗದೀಶ್‌ ಹೊರಕ್ಕೆ (Image\ JioCinema)

bigg boss Kannada 11: ಮೊನ್ನೆ ಟಾಸ್ಕ್‌ ಮುಗಿದ ಬಳಿಕ ಗಾರ್ಡನ್‌ ಏರಿಯಾದಲ್ಲಿ ಜಗದೀಶ್‌ ಮತ್ತು ಗೋಲ್ಡ್‌ ಸುರೇಶ್‌ ಮಾತನಾಡುತ್ತ ಕೂತಿದ್ದರು. ಈ ವೇಳೆ ಮಾತಿ ಭರದಲ್ಲಿ ಜಗದೀಶ್‌ ಮನೆಯ ಸ್ಪರ್ಧಿಗಳ ಬಗ್ಗೆ ಇಲ್ಲ ಸಲ್ಲದ ಪದ ಬಳಕೆ ಮಾಡಿ ಮಾತನಾಡಲು ಶುರುಮಾಡಿದರು. ಜಗದೀಶ್‌ ಅವರ ಮಾತುಗಳು ಸುರೇಶ್‌ಗೆ ಅಸಹನೀಯ ಎನಿಸತೊಡಗಿದವು. ಕೂಡಲೇ ಇಂಥ ಪದಗಳ ಪ್ರಯೋಗ ನನ್ನ ಮುಂದೆ ಮಾಡಬೇಡ ಎಂದು ಬೇಡಿಕೊಂಡರು. ಮುಂದುವರಿದು, ಆ ಹಂಸಾ ಮುಂ* ಎಂಬ ಪದ ಪ್ರಯೋಗಿಸಿದರು ಜಗದೀಶ್‌.

ಅಲ್ಲಿಂದ ಶುರುವಾಯ್ತು. ಹಂಸಾಗೆ ಆ ಪದ ಪ್ರಯೋಗಿಸಿದ ವಿಚಾರ ಇಡೀ ಮನೆಗೂ ಗೊತ್ತಾಯ್ತು. ಮುಂದುವರಿದು ದೊಡ್ಡ ಮಟ್ಟದ ಮಾತಿನ ಚಕಮಕಿ ನಡೆಯಿತು. ಮಾತಿಗೆ ಮಾತು ಬೆಳೆಯಿತು. ತಳ್ಳಾಟ ನೂಕಾಟವೂ ನಡೆಯಿತು. ಲಾಯರ್‌ ಜಗದೀಶ್‌ ಅವರ ಮೇಲೆ ಇಡೀ ಮನೆಯ ಮಹಿಳಾ ಸ್ಪರ್ಧಿಗಳು ಮುಗಿಬಿದ್ದರು. ಇದೇ ವೇಳೆ ಮಾತುಕತೆ ಅತಿರೇಕಕ್ಕೆ ಹೋಗುತ್ತಿದ್ದಂತೆ, ಜಗದೀಶ್‌ ಅವರನ್ನು ಅಲ್ಲೇ ಇದ್ದ ರಂಜಿತ್‌ ತಳ್ಳಿದರು. ಇದೆಲ್ಲವನ್ನು ಗಮನಿಸಿದ ಬಿಗ್‌ಬಾಸ್‌ ಸಹ ತಾಳ್ಮೆ ಕಳೆದುಕೊಂಡು, ಮೊದಲ ಸಲ ಜೋರಾಗಿ ಕೂಗಿ ಎಲ್ಲರನ್ನು ಒಂದೆಡೆ ಕೂರಿಸಿದರು.

ದೈಹಿಕ ಹಲ್ಲೆ ಆರೋಪದ ಮೇಲೆ ರಂಜಿತ್‌ ಹೊರಕ್ಕೆ

ಇತ್ತ, ಕೆಲ ಹೊತ್ತಿನ ಬಳಿಕ ಮಹಿಳೆಯರಿಗೆ ನಿಂದನೆ, ಅಪಮಾನ ಸಹಿಸುವುದಿಲ್ಲ ಎಂಬ ಆರೋಪದ ಮೇಲೆ ಜಗದೀಶ್‌ ಅವರನ್ನು ಬಿಗ್‌ಬಾಸ್‌ನಿಂದ ನೇರವಾಗಿ ಎಲಿಮಿನೇಟ್‌ ಮಾಡಿ, ಹೊರಗೆ ಕಳಿಸಲಾಯಿತು. ಇತ್ತ ದೈಹಿಕ ಹಲ್ಲೆ ಅಕ್ಷಮ್ಯ ಅಪರಾಧ ಎಂಬ ನಿಯಮದಡಿ ರಂಜಿತ್‌ ಅವರನ್ನೂ ಹೊರಗೆ ಕಳಿಸಲಾಯಿತು. ಈ ಮೂಲಕ ಶುಕ್ರವಾರ ಅಚ್ಚರಿಯ ಬೆಳವಣಿಗೆಯಲ್ಲಿ ಡಬಲ್‌ ಶಾಕಿಂಗ್‌ ಎಲಿಮಿನೇಷನ್‌ ಆಯ್ತು. ಇತ್ತ ರಂಜಿತ್‌ ಮಾಡಿದ್ದು ಸರಿಯಿದೆ. ಅವರ ಉದ್ದೇಶ ಒಳ್ಳೆಯದು ಎಂದು ಸ್ಪರ್ಧಿಗಳು ಕಣ್ಣೀರಿಟ್ಟರೂ, ನಿಯಮ ಗೌರವಿಸುವ ಸಲುವಾಗಿ ಔಟ್‌ ಮಾಡಲಾಯಿತು.

ರಂಜಿತ್‌ಗೆ ವೀಕ್ಷಕರ ಬೆಂಬಲ

ರಂಜಿತ್‌ ನೇರವಾಗಿ ಮನೆಯಿಂದ ಹೊರಬರುತ್ತಿದ್ದಂತೆ, ಸೋಷಿಯಲ್‌ ಮೀಡಿಯಾದಲ್ಲಿ ರಂಜಿತ್‌ ಪರವಾಗಿ ಮೆಚ್ಚುಗೆಯ ಕಾಮೆಂಟ್‌ಗಳು ಸಂದಾಯವಾಗುತ್ತಿವೆ. "ನಿಮ್ಮ ಹೆಸರು ಬಿಗ್‌ಬಾಸ್‌ನಲ್ಲಿ ಶಾಶ್ವತ. ಒಂದೊಳ್ಳೆಯ ಉದ್ದೇಶಕ್ಕೆ ನೀವು ನಿಯಮ ಮುರಿದಿದ್ದೀರಿ. ಇದನ್ನು ಬೇರೆಯವರೂ ಮಾಡಲು ಅಸಾಧ್ಯ" ಎಂದು ಧ್ರುವ ಎಂಬುವವರು ಟ್ವಿಟ್‌ ಮಾಡಿದ್ದಾರೆ. "ಉದ್ದೇಶ ಸರಿ. ಅಸಲಿ ವಿಚಾರ ಬಿಗ್‌ಬಾಸ್‌ಗೂ ಗೊತ್ತು, ಅಷ್ಟೇ ಸಾಕು.. ಮಿಸ್‌ ಯೂ ರಂಜಿತ್"‌ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಒಳ್ಳೆಯ ಉದ್ದೇಶಕ್ಕೆ ಹೋಗ್ತಿದ್ದೀಯಾ ಮಗ. ಸೂರ್ಯ ರಂಜಿತ್‌ ಬಿಬಿ ಇರೋವರೆಗೂ ಇದು ಒಂದು ಉದಾಹರಣೆಯಾಹಿ ನಿಲ್ಲಲಿದೆ. ಒಂದೊಳ್ಳೆಯ ಕಾರಣಕ್ಕೆ ನೀವು ಆಚೆ ಹೋಗಿದ್ದೀರಿ" ಎಂದೂ ಟ್ವಿಟ್‌ ಮಾಡಿದ್ದಾರೆ ವೀಕ್ಷಕರು.

Whats_app_banner