ಜಗದೀಶ್‌ ಪರ ವೀಕ್ಷಕರ ಬಹುಪರಾಕ್,‌ ಮಹಿಳಾ ಆಯೋಗದಂತೆ ಗಂಡಸರ ಆಯೋಗಕ್ಕೆ ಪಟ್ಟು; ಬಿಗ್‌ಬಾಸ್‌ನ ಬಗೆಬಗೆ ಮೀಮ್ಸ್‌ ನೋಡಿ ನಕ್ಕು ಬಿಡಿ
ಕನ್ನಡ ಸುದ್ದಿ  /  ಮನರಂಜನೆ  /  ಜಗದೀಶ್‌ ಪರ ವೀಕ್ಷಕರ ಬಹುಪರಾಕ್,‌ ಮಹಿಳಾ ಆಯೋಗದಂತೆ ಗಂಡಸರ ಆಯೋಗಕ್ಕೆ ಪಟ್ಟು; ಬಿಗ್‌ಬಾಸ್‌ನ ಬಗೆಬಗೆ ಮೀಮ್ಸ್‌ ನೋಡಿ ನಕ್ಕು ಬಿಡಿ

ಜಗದೀಶ್‌ ಪರ ವೀಕ್ಷಕರ ಬಹುಪರಾಕ್,‌ ಮಹಿಳಾ ಆಯೋಗದಂತೆ ಗಂಡಸರ ಆಯೋಗಕ್ಕೆ ಪಟ್ಟು; ಬಿಗ್‌ಬಾಸ್‌ನ ಬಗೆಬಗೆ ಮೀಮ್ಸ್‌ ನೋಡಿ ನಕ್ಕು ಬಿಡಿ

Bigg boss Kannada 11 Memes: ಈ ಸಲದ ಬಿಗ್‌ ಬಾಸ್‌ ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಿದೆ. ಮನೆಯಲ್ಲಿನ ಕಿತ್ತಾಟಗಳು ಒಂದೆಡೆಯಾದರೆ, ಹೊರಗಡೆ ಬಿಗ್‌ಬಾಸ್‌ ವಿರುದ್ಧವೂ ಹಲವು ದೂರುಗಳು ದಾಖಲಾಗುತ್ತಿವೆ. ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌, ಮೀಮ್‌ಗಳು ನಗು ಉಕ್ಕಿಸುತ್ತಿವೆ. ಇಲ್ಲಿವೆ ನೋಡಿ ಅಂಥ ಕೆಲವು ಪೋಸ್ಟ್‌ಗಳು.

ಬಿಗ್‌ಬಾಸ್‌ನ ಬಗೆಬಗೆ ಮೀಮ್ಸ್‌ ನೋಡಿ ನಕ್ಕು ಬಿಡಿ
ಬಿಗ್‌ಬಾಸ್‌ನ ಬಗೆಬಗೆ ಮೀಮ್ಸ್‌ ನೋಡಿ ನಕ್ಕು ಬಿಡಿ

Lawyer Jagadish BBK 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಲಾಯರ್‌ ಜಗದೀಶ್‌ ಒಂದು ಕಡೆಯಾದರೆ, ಇಡೀ ಮನೆ ಮಂದಿ ಇನ್ನೊಂದು ಕಡೆ. ಜಗಳ ಮಾಡಲೇಬೇಕು ಎಂದು ಬಿಗ್‌ಬಾಸ್‌ಗೆ ಬಂದಂತಿದೆ ಎಂದೂ ಮನೆಯ ಕೆಲವರು ಜಗದೀಶ್‌ ಬಗ್ಗೆ ಅವರ ಮುಂದೆಯೇ ಹೇಳಿದ್ದಾರೆ. ಒಟ್ಟಿನಲ್ಲಿ ಕ್ಷಣ ಕ್ಷಣಕ್ಕೂ ಕಿತ್ತಾಟ, ಜಗಳದ ಮೂಲಕವೇ ಈ ಸಲದ ಬಿಗ್‌ಬಾಸ್‌ ಸದ್ದು ಮಾಡುತ್ತಿದೆ. ಅದರಂತೆ ಕಳೆದ ಎರಡ್ಮೂರು ದಿನಗಳಲ್ಲಿ ಬಿಗ್‌ಬಾಸ್‌ನಲ್ಲಿ ಒಂದಷ್ಟು ಅಚ್ಚರಿಗಳು ಘಟಿಸಿವೆ. ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ ಜಗದೀಶ್‌ ಮತ್ತು ದೈಹಿಕ ಹಲ್ಲೆ ಮಾಡಿದ ರಂಜಿತ್‌ ಮನೆಯಿಂದ ಹೊರ ಬಂದಿದ್ದಾರೆ. ಅದರಲ್ಲೂ ಜಗದೀಶ್‌ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಬಹುಪರಾಕ್‌ ಹೇಳುವವರೇ ಹೆಚ್ಚಾಗಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ಇತರ ಸ್ಪರ್ಧಿಗಳ ಜತೆಗೆ ಜಗದೀಶ್‌ ಕಿತ್ತಾಡಿಕೊಂಡಿರಬಹುದು, ಮಾತಿಗೆ ಮಾತು ಬೆಳೆಸಿ ಜಗಳ ಆಡಿರಬಹುದು. ಆದರೆ, ಅವರ ಆ ವರ್ತನೆಯೇ ವೀಕ್ಷಕರಿಗೆ ಹಿಡಿಸಿದೆ. ಇದೀಗ ಅವರೇ ಇಲ್ಲದ ಬಿಗ್‌ ಬಾಸ್‌ ನೋಡುವುದಿಲ್ಲ ಎಂದು ವೀಕ್ಷಕರು, ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಜಗದೀಶ್‌ ಅವರು ಇಲ್ಲದಿದ್ದರೆ ಬಿಗ್‌ಬಾಸ್‌ ಶೋ ಕಥೆ ಮುಗೀತು ಎಂದೂ ಹೇಳುತ್ತಿದ್ದಾರೆ. ಸಿಂಗಲ್‌ ಸಿಂಹ ಜಗ್ಗು ಎಂದು ಬಣ್ಣಿಸುತ್ತಿದ್ದಾರೆ. ಮಹಾರಾಜನ್ನು ಎಲ್ಲಿದರೂ ಮಹಾರಾಜಾನೆ ತಾನೇ ಎಂದೂ ಮೀಮ್‌ ಹರಿಬಿಡುತ್ತಿದ್ದಾರೆ. ಮಾನಸಾ ಅವರ ವರ್ತನೆಗೂ ಬೇಸತ್ತಿದ್ದಾರೆ.

ಪುರುಷ ಆಯೋಗಕ್ಕೆ ನೆಟ್ಟಿಗರ ಪಟ್ಟು

ಬಿಗ್‌ ಬಾಸ್‌ ಮನೆಯಲ್ಲಿ ಮಹಿಳೆಯ ಬಗ್ಗೆ ಕೆಟ್ಟ ಪದ ಪ್ರಯೋಗ ಮಾಡಿದ ಹಿನ್ನೆಲೆಯಲ್ಲಿ ಲಾಯರ್‌ ಜಗದೀಶ್‌ ಅವರನ್ನು ಎಲಿಮಿನೇಟ್‌ ಮಾಡಲಾಗಿದೆ. ಇದೇ ವಿಚಾರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಮೀಮ್ಸ್‌ ಕ್ರಿಯೇಟ್‌ ಆಗಿವೆ. ಹೆಣ್ಮಕ್ಕಳು ಹೇಗೆ ಬೇಕೋ ಹಾಗೆ ಮಾತನಾಡಬಹುದು, ಗಂಡಸರ ಬಗ್ಗೆ ಏನು ಬೇಕಾದರೂ ಮಾತನಾಡಬಹುದೇ ಎಂಬ ಪ್ರಶ್ನೆ ಕೇಳಿ ಬಂದಿವೆ. ಒಂದು ಹಂತ ಮೇಲೆ ಹೋಗಿ ಮಹಿಳಾ ಆಯೋಗದ ರೀತಿಯಲ್ಲಿ ಪುರುಷ ಆಯೋಗವೂ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಬಿಗ್‌ ಬಾಸ್‌ ಮೀಮ್‌ಗಳ ನಗೆ ಚಟಾಕಿ

ಬಿಗ್‌ಬಾಸ್‌ ಸ್ಪರ್ಧಿ ಮಾನಸಾ ಅವರ ವರ್ತನೆಯೂ ವೀಕ್ಷಕರ ಕೆಂಗಣ್ಣಿಗೆ ಕಾರಣವಾಗಿದೆ. ಆದಷ್ಟು ಬೇಗ ಇವರನ್ನೂ ಮನೆಗೆ ಕಳಿಸಿ, ನೋಡೋಕೆ ಆಗ್ತಿಲ್ಲ ಎಂದು ಟ್ರೋಲ್‌ ಮಾಡುತ್ತಿದ್ದಾರೆ. 

ಜಗದೀಶ್‌ ಮನೆಯಿಂದ ಎಲಿಮಿನೇಟ್‌ ಆದಾಗ ಮನೆಯವರೆಲ್ಲ ಖುಷಿಯಿಂದ ಚಪ್ಪಾಳೆ ಹೊಡೆದರು. ರಂಜಿತ್‌ ಮನೆಯಿಂದ ಎಲಿಮಿನೇಟ್‌ ಆದಾಗ ಮನೆಯವರೆಲ್ಲ ಕಣ್ಣೀರು ಹಾಕಿದರು. 

ಮಾನಸ ಮತ್ತು ಇನ್ನುಳಿದ ಸ್ಪರ್ಧಿಗಳ ಓವರ್‌ ಆಕ್ಟಿಂಗ್‌ ನೋಡಿದ ವೀಕ್ಷಕನ ವರ್ತನೆ ಹೇಗಿರಬಹುದು? ಇಲ್ಲಿದೆ ನೋಡಿ ಉದಾಹರಣೆ

ಅಚ್ಚರಿಯ ರೀತಿಯಲ್ಲಿ ಜಗದೀಶ್‌ ಎಂಟ್ರಿ ಕೊಡಬಹುದೇ? 

ಜಗದೀಶ್‌ ಎಲಿಮಿನೇಟ್‌ ಆಗುತ್ತಿದ್ದಂತೆ, ರಾಜನಿಲ್ಲದ ಮನೆ ಬಿಕೋ ಎನ್ನುತ್ತಿದೆ ಎಂದ ನೆಟ್ಟಿಗ

ಜಗದೀಶ್‌ ಪರ ವೀಕ್ಷಕರ ಬ್ಯಾಟಿಂಗ್‌

ಟಿಆರ್‌ಪಿ ವಿಚಾರದಲ್ಲಿಯೂ ಜಗದೀಶ್‌ ಅವರನ್ನು ಮೀರಿಸುವವರು ಯಾರಿದ್ದಾರೆ?

Whats_app_banner