logo
ಕನ್ನಡ ಸುದ್ದಿ  /  ಮನರಂಜನೆ  /  ‘ಬಿಜೆಪಿಯವ್ರಿಗೆ ಹೆಣದ ರಾಜಕಾರಣ ಬೇಕೇ ಬೇಕು, ಇವರಿಗೆ ಅಂತಃಕರಣ ಎಲ್ಲಿದೆ?’ ನೇಹಾ ಹಿರೇಮಠ ಹತ್ಯೆ ಬಗ್ಗೆ ಪ್ರಕಾಶ್‌ ರಾಜ್‌ ಪ್ರತಿಕ್ರಿಯೆ

‘ಬಿಜೆಪಿಯವ್ರಿಗೆ ಹೆಣದ ರಾಜಕಾರಣ ಬೇಕೇ ಬೇಕು, ಇವರಿಗೆ ಅಂತಃಕರಣ ಎಲ್ಲಿದೆ?’ ನೇಹಾ ಹಿರೇಮಠ ಹತ್ಯೆ ಬಗ್ಗೆ ಪ್ರಕಾಶ್‌ ರಾಜ್‌ ಪ್ರತಿಕ್ರಿಯೆ

Apr 24, 2024 01:15 PM IST

google News

‘ಬಿಜೆಪಿಯವ್ರಿಗೆ ಹೆಣದ ರಾಜಕಾರಣ ಬೇಕೇ ಬೇಕು, ಇವರಿಗೆ ಅಂತಃಕರಣ ಎಲ್ಲಿದೆ?’ ನೇಹಾ ಹಿರೇಮಠ ಹತ್ಯೆ ಬಗ್ಗೆ ಪ್ರಕಾಶ್‌ ರಾಜ್‌ ಪ್ರತಿಕ್ರಿಯೆ

    • ಹುಬ್ಬಳ್ಳಿಯ ಕಾಲೇಜು ಆವರಣದಲ್ಲಿ ನಡೆದ ಕೊಲೆಗೆ ಸಂಬಂಧಿಸಿದಂತೆ ನಟ ಪ್ರಕಾಶ್‌ ರಾಜ್‌ ಪ್ರತಿಕ್ರಿಯೆ ನೀಡಿದ್ದಾರೆ. “ಹೆಣದ ರಾಜಕೀಯ ಬಿಜೆಪಿಯವರಿಗೆ ಬೇಕೇ ಬೇಕು. ಅಂತಃಕರಣವೇ ಇವರಿಗಿಲ್ಲ. ತಪ್ಪು ಮಾಡಿದವನು ಯಾವುದೇ ಜನಾಂಗದವನಾಗಲಿ, ಯಾವುದೇ ಧರ್ಮದವನಾಗಲಿ ಅವನು ಅಮಾನವೀಯ ವ್ಯಕ್ತಿ” ಎಂದಿದ್ದಾರೆ. 
‘ಬಿಜೆಪಿಯವ್ರಿಗೆ ಹೆಣದ ರಾಜಕಾರಣ ಬೇಕೇ ಬೇಕು, ಇವರಿಗೆ ಅಂತಃಕರಣ ಎಲ್ಲಿದೆ?’ ನೇಹಾ ಹಿರೇಮಠ ಹತ್ಯೆ ಬಗ್ಗೆ ಪ್ರಕಾಶ್‌ ರಾಜ್‌ ಪ್ರತಿಕ್ರಿಯೆ
‘ಬಿಜೆಪಿಯವ್ರಿಗೆ ಹೆಣದ ರಾಜಕಾರಣ ಬೇಕೇ ಬೇಕು, ಇವರಿಗೆ ಅಂತಃಕರಣ ಎಲ್ಲಿದೆ?’ ನೇಹಾ ಹಿರೇಮಠ ಹತ್ಯೆ ಬಗ್ಗೆ ಪ್ರಕಾಶ್‌ ರಾಜ್‌ ಪ್ರತಿಕ್ರಿಯೆ

Prakash Raj on Neha Hiremath Case: ವಾಣಿಜ್ಯ ನಗರಿ ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಆವರಣದಲ್ಲಿ ಕಳೆದ ವಾರವಷ್ಟೇ ಯುವತಿ ನೇಹಾ ಹಿರೇಮಠ ಹತ್ಯೆ ನಡೆದಿತ್ತು. ಅನ್ಯ ಕೋಮಿನ ಯುವಕ ಫಯಾಜ್‌ ಹಾಡಹಗಲೇ ಚಾಕುವಿನಿಂದ ಇರಿದು ಆಕೆಯನ್ನು ಕೊಲೆ ಮಾಡಿದ್ದ. ಈ ಹತ್ಯೆ ಪ್ರಕರಣದ ಸಿಸಿಟಿವಿ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲೂ ವೈರಲ್‌ ಆಗಿ, ರಾಜ್ಯ ಅಷ್ಟೇ ಅಲ್ಲ ರಾಷ್ಟ್ರ ಮಟ್ಟದಲ್ಲೂ ಸಂಚಲನ ಸೃಷ್ಟಿಸಿತ್ತು. ಕುಟುಂಬದ ನೋವು ಒಂದೆಡೆಯಾದರೆ, ರಾಜಕೀಯ ಪಕ್ಷಗಳು ಆ ಸಾವಿನ ಮನೆಯಲ್ಲಿಯೇ ರಾಜಕಾರಣ ಮಾಡಿದ್ದವು. ಆರೋಪಿಗೆ ಉಗ್ರ ಶಿಕ್ಷೆಯಾಗಬೇಕು ಎಂದೂ ಪ್ರತಿಭಟನೆಗಳು ಮೊಳಗಿದ್ದವು.

ಈ ನಡುವೆ ಬಿಜೆಪಿ ಸರ್ಕಾರವನ್ನು ಟೀಕಿಸುತ್ತಲೇ ಬರುವ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಬಗ್ಗೆಯೂ ಸೋಷಿಯಲ್‌ ಮೀಡಿಯಾದಲ್ಲಿ ಟೀಕೆಗಳು ಶುರುವಾಗಿದ್ದವು. ಎಲ್ಲಿದ್ದೀರಿ ಪ್ರಕಾಶ್‌ ರಾಜ್‌? ಈ ಹತ್ಯೆ ಬಗ್ಗೆಯೂ ನೀವು ಮಾತನಾಡಿ, ನಮಗೆ ನಿಮ್ಮ ಅಭಿಪ್ರಾಯವೂ ಈ ಸಮಯದಲ್ಲಿ ಬೇಕು ಎಂದು ಎಷ್ಟೋ ಮಂದಿ ಅವರನ್ನು ಪ್ರಶ್ನೆ ಮಾಡಿದ್ದರು. ಆದರೆ, ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಈ ಹತ್ಯೆಗೆ ಸಂಬಂಧಿಸಿದ ಒಂದೇ ಒಂದು ಪೋಸ್ಟ್‌ ಹಂಚಿಕೊಂಡಿರಲಿಲ್ಲ. ಈಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕಾಶ್‌ ರಾಜ್‌ ಪ್ರತಿಕ್ರಿಯೆ ನೀಡಿದ್ದಾರೆ.

ಇವರದ್ದು ಹೆಣದ ರಾಜಕಾರಣ!

"ಹೆಣದ ರಾಜಕಾರಣ ಇವರು (ಬಿಜೆಪಿ) ಈ ಹಿಂದಿನಿಂದಲೇ ಮಾಡಿಕೊಂಡು ಬಂದವರಲ್ಲವೇ. ಹೆಣದ ರಾಜಕೀಯ ಇವರಿಗೆ ಬೇಕೇ ಬೇಕು. ಅಂತಃಕರಣವೇ ಇವರಿಗಿಲ್ಲ. ತಪ್ಪು ಮಾಡಿದವನು ಯಾವುದೇ ಜನಾಂಗದವನಾಗಲಿ, ಯಾವುದೇ ಧರ್ಮದವನಾಗಲಿ ಅವನು ಅಮಾನವೀಯ ವ್ಯಕ್ತಿ. ಅಮಾನುಷ ವ್ಯಕ್ತಿ. ಶಿಕ್ಷೆ ಕೊಡಲೇಬೇಕು. ಎಲ್ಲದಕ್ಕೂ ಧರ್ಮದ ಲೇಪನ ಕೊಡುವುದು ಇವರಿಗೆ (ಬಿಜೆಪಿ) ಅಭ್ಯಾಸ. ಇವರಿಂದ ಅದಷ್ಟೇ ಸಾಧ್ಯ. ಬರೀ ಎತ್ತಿಕಟ್ಟಬೇಕು. ಇದು ಒಂದು ಧರ್ಮದ ಮೇಲೆ ನಡೆದ ಕೃತ್ಯ ಎಂದು ಬಿಂಬಿಸುತ್ತಾರೆಯೇ ಹೊರತು, ಹೆಣ್ಣಿನ ಮೇಲೆ ನಡೆದಿದೆ ಎಂಬುದು ಅವರಿಗೆ ಬೇಕಾಗಿಲ್ಲ"

"ಆ ತುಡಿತವೂ ಅವರಿಗಿಲ್ಲ. ಏನೇ ಆದ್ರೂ ಅದು ಧರ್ಮವೇ ಆಗಬೇಕು. ಜಾತಿಯನ್ನು ಮುಂದೆ ತರಬೇಕು. ರಾಜಕಾರಣದಲ್ಲಿ ಗೆಲ್ಲಬೇಕು. ಕಳೆದ ಬಾರಿ ಹೇಳಿದ್ರು, ಜೈ ಭಜರಂಗಬಲಿ ಎಂದು ಹೇಳಿಕೊಂಡು ವೋಟ್‌ ಹಾಕಿ ಎಂದಿದ್ದರು. ಅವರ ಪ್ರಕಾರ ಯಾವ ದೇಶ ಇದು? ನಮ್ಮ ರಾಮ ಯಾರು? ಅಯ್ಯೋ ರಾಮ, ಶ್ರೀರಾಮ, ಜೈ ಶ್ರೀರಾಮ. ಇವರ ರಾಮನನ್ನ ನೋಡಿ, ಬಿಲ್ಲು ಹಿಡಿದು ಕೊಲ್ಲೋಕೆ ನಿಂತಿರ್ತಾನೆ. ಹನುಮಂತ ಹೇಗಿದ್ದ ನಮ್ಮವರೊಳಗಬ್ಬನಾಗಿದ್ದ. ಈಗ ರಾಕ್ಷಸನ ರೀತಿ ಮಾಡಿಟ್ಟಿದ್ದಾರೆ. ಕಾವಿ ನೋಡಿದರೆ ಭಯಪಡೋ ರೀತಿ ಮಾಡಿಟ್ಟಿದ್ದಾರೆ" ಎಂದಿದ್ದಾರೆ ಪ್ರಕಾಶ್‌ ರಾಜ್.‌

ಮಹಾಪ್ರಭುವಿಗೆ ಸೋಲಿನ ಭೀತಿ ಎದುರಾಗಿದೆ..

ಲೋಕಸಭೆ ಚುನಾವಣೆ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಪ್ರಕಾಶ್‌ ರಾಜ್‌, “ಮಹಾಪ್ರಭುವಿಗೆ ಸೋಲಿನ ಭಯ ಕಾಡುತ್ತಿದೆ. ಅದಕ್ಕಾಗಿಯೇ ಮಾತಿನ ಧಾಟಿ ಬದಲಾಗಿದೆ. ಕೀಳು ಮಟ್ಟದ ಭಾಷೆಗೆ ಇಳಿದಿದ್ದಾರೆ. ಮೊದಲ ಹಂತದ ಚುನಾವಣೆಯ ಬಳಿಕ ದೇಶದಲ್ಲಿ ಬದಲಾವಣೆಯ ಗಾಳಿ ಕಂಡು ಬಟ್ಟೆಯೊಳಗೆಯೇ ಬೆವರುತ್ತಿದ್ದಾರೆ. ಮೊದಲ ಸುತ್ತಿನ ಮತದಾನೋತ್ತರ ಸಮೀಕ್ಷೆಯಿಂದ ವಿಚಲಿತರಾಗಿದ್ದಾರೆ. ತಮ್ಮ ಬೇಳೆ ಕಾಳು ಬೇಯುತ್ತಿಲ್ಲ ಎಂದು ಗೊತ್ತಾಗುತ್ತಿದ್ದಂತೆ, ಮಹಾಪ್ರಭು ಮಾತನಾಡುವ ಭಾಷೆ ಬದಲಾಗಿದೆ” ಎಂದಿದ್ದಾರೆ.

ತೂತು ಬಿದ್ದ ದೋಣಿಯನ್ನು ಸರಿಪಡಿಸಿಕೊಳ್ಳಬೇಕಿದೆ..

“ದೆವ್ವ ಬರುತ್ತೆ ಅಂತ ಹೆದರಿಸುತ್ತಿದ್ದಾರೆ. ಅದೇ ರೀತಿ ರಾಜ್ಯದ ಯಾವ ಪ್ರತಿನಿಧಿಗಳೂ ಇವರಿಗೆ ಬೇಕಿಲ್ಲ. ಹೊಗಳು ಭಟ್ಟರು, ವಿದೂಷಕರು ಇವರಿಗೆ ಬೇಕಾಗಿದ್ದಾರೆ. ಏನೇ ಆದರೂ ನಾವು ಎಂಡಪಂಥೀಯರೋ, ಬಲಪಂಥೀಯರೋ ನಮ್ಮೆಲ್ಲರದ್ದೂ ಒಂದೇ ದೋಣಿಯ ಪಯಣ. ಆ ದೋಣಿಗೆ ತೂತು ಬಿದ್ದಿದೆ. ಆ ದೋಣಿಯನ್ನು ಸರಿ ಮಾಡಿ ರಕ್ಷಿಸಿಕೊಳ್ಳಬೇಕಾಗಿರುವುದು ನಮ್ಮ ಜವಾಬ್ದಾರಿ. ಹಿಂದೂ ಮುಸ್ಲಿಂ ಎಂಬುದು ಮಹಾಪ್ರಭು ಮತ್ತು ಬಿಜೆಪಿಯವ್ರ ಚುನಾವಣಾ ಪ್ರಚಾರ. ಈ ನಡೆಯನ್ನು ವಿರೋಧಿಸೋಣ” ಎಂದು ಪ್ರಕಾಶ್‌ ರಾಜ್‌ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ