logo
ಕನ್ನಡ ಸುದ್ದಿ  /  ಮನರಂಜನೆ  /  ‘ಅಂದಿನ ಪ್ಯಾನ್‌ ಇಂಡಿಯಾ ಶಾಂತಿ ಕ್ರಾಂತಿ ಗೆದ್ದಿದ್ರೆ ಕನ್ನಡ ಚಿತ್ರೋದ್ಯಮದ ಲೆವೆಲ್‌ ಎಲ್ಲಿರ್ತಿತ್ತು, ರವಿಚಂದ್ರನ್‌ ಎಲ್ಲಿರ್ತಿದ್ರು?‘

‘ಅಂದಿನ ಪ್ಯಾನ್‌ ಇಂಡಿಯಾ ಶಾಂತಿ ಕ್ರಾಂತಿ ಗೆದ್ದಿದ್ರೆ ಕನ್ನಡ ಚಿತ್ರೋದ್ಯಮದ ಲೆವೆಲ್‌ ಎಲ್ಲಿರ್ತಿತ್ತು, ರವಿಚಂದ್ರನ್‌ ಎಲ್ಲಿರ್ತಿದ್ರು?‘

Jul 17, 2024 06:30 AM IST

google News

‘ಅಂದಿನ ಪ್ಯಾನ್‌ ಇಂಡಿಯಾ ಶಾಂತಿ ಕ್ರಾಂತಿ ಗೆದ್ದಿದ್ರೆ ಕನ್ನಡ ಚಿತ್ರೋದ್ಯಮದ ಲೆವೆಲ್‌ ಎಲ್ಲಿರ್ತಿತ್ತು, ರವಿಚಂದ್ರನ್‌ ಎಲ್ಲಿರ್ತಿದ್ರು?‘

    • ಶಾಂತಿ ಕ್ರಾಂತಿ (Shanti Kranti) ಗೆಲ್ಲಬೇಕಿತ್ತು. ಗೆದ್ದಿದ್ದರೆ, ನಮ್ಮ ಉದ್ಯಮದ ಗೌರವ ಎಲ್ಲೋ ಹೋಗ್ತಿತ್ತು. ರವಿಚಂದ್ರನ್‌ ಗೆದ್ದರೆ ಉದ್ಯಮ ಗೆದ್ದಂತೆ, ಶಾಂತಿ ಕ್ರಾಂತಿ ಗೆದ್ದಿದ್ದರೆ, ಆ ಟ್ರೆಂಡ್‌ ದೊಡ್ಡದಾಗಿ ಬೆಳೆದಿರೋದು. ಅದು ಕನ್ನಡದಿಂದಲೇ, ಅವರ ಸಿನಿಮಾದಿಂದಲೇ ಶುರುವಾಗ್ತಿತ್ತು ಎಂದು ಹಿರಿಯ ನಿರ್ದೇಶಕ ಎಸ್‌ ನಾರಾಯಣ್‌ ಹೇಳಿಕೊಂಡಿದ್ದಾರೆ. 
‘ಅಂದಿನ ಪ್ಯಾನ್‌ ಇಂಡಿಯಾ ಶಾಂತಿ ಕ್ರಾಂತಿ ಗೆದ್ದಿದ್ರೆ ಕನ್ನಡ ಚಿತ್ರೋದ್ಯಮದ ಲೆವೆಲ್‌ ಎಲ್ಲಿರ್ತಿತ್ತು, ರವಿಚಂದ್ರನ್‌ ಎಲ್ಲಿರ್ತಿದ್ರು?‘
‘ಅಂದಿನ ಪ್ಯಾನ್‌ ಇಂಡಿಯಾ ಶಾಂತಿ ಕ್ರಾಂತಿ ಗೆದ್ದಿದ್ರೆ ಕನ್ನಡ ಚಿತ್ರೋದ್ಯಮದ ಲೆವೆಲ್‌ ಎಲ್ಲಿರ್ತಿತ್ತು, ರವಿಚಂದ್ರನ್‌ ಎಲ್ಲಿರ್ತಿದ್ರು?‘

S Narayan about Ravichandran: ಸ್ಯಾಂಡಲ್‌ವುಡ್‌ನಲ್ಲೀಗ ಪ್ಯಾನ್‌ ಇಂಡಿಯಾ ಸಿನಿಮಾಗಳದ್ದೇ ಸದ್ದು. ಆದರೆ, ದಶಕಗಳ ಹಿಂದೆಯೇ ಈ ಪ್ಯಾನ್‌ ಇಂಡಿಯಾ ಪರಿಕಲ್ಪನೆಗೆ ಕನ್ನಡದಲ್ಲಿ ಶರಾ ಹಾಕಿದವರು ಕ್ರೇಜಿಸ್ಟಾರ್‌ ರವಿಚಂದ್ರನ್. ಶಾಂತಿ ಕ್ರಾಂತಿ ಅನ್ನೋ ಬಹುಕೋಟಿ ವೆಚ್ಚದ ಸಿನಿಮಾ ಮಾಡಿ, ಬೇರೆ ಬೇರೆ ಭಾಷೆಯ ಸ್ಟಾರ್‌ಗಳನ್ನು ಕರೆತಂದು, ಹಬ್ಬದಂತೆ ಸಿನಿಮಾ ಮಾಡಿದ್ರು. 1991ರ ಸೆಪ್ಟಂಬರ್‌ 19ರಂದು ಸಿನಿಮಾ ತೆರೆಗೆ ಬಂದಿತ್ತು. ಆದರೆ, ದುರಾದೃಷ್ಟವಶಾತ್‌ ಆ ಸಿನಿಮಾ ಗೆಲುವು ಕಾಣಲಿಲ್ಲ. ಇಂದಿಗೂ ಇಷ್ಟೊಳ್ಳೆಯ ಸಿನಿಮಾ ಹಿಟ್‌ ಆಗಲಿಲ್ವಾ? ಎಂದು ಉದ್ಗರಿಸುವವರೂ ಇದ್ದಾರೆ. ಒಂದು ವೇಳೆ ಇದೇ ಶಾಂತಿ ಕ್ರಾಂತಿ ಸಿನಿಮಾ ಹಿಟ್‌ ಆಗಿದ್ದರೆ, ಸ್ಯಾಂಡಲ್‌ವುಡ್‌ ಎಲ್ಲಿರುತ್ತಿತ್ತು ಗೊತ್ತಾ? ಹಿರಿಯ ನಿರ್ದೇಶಕ ಎಸ್‌ ನಾರಾಯಣ್‌ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ ನೋಡಿ.

ಅಂಥ ಸಿನಿಮಾ ಮಾಡೋಕೆ ದಿಲ್‌ ಬೇಕು..

ಆವತ್ತಿನ ಕಾಲದಲ್ಲಿ 1987-88ರಲ್ಲಿಯೇ ಪ್ಯಾನ್‌ ಇಂಡಿಯಾ ಕಾನ್ಸೆಪ್ಟ್‌ ರವಿಚಂದ್ರನ್‌ ತಲೆಯಲ್ಲಿ ಬಂದಿತ್ತು. ಇವತ್ತು ಒಂದು ಭಾಷೆಯಲ್ಲಿ ಶೂಟ್‌ ಮಾಡಿ, ಉಳಿದ ಭಾಷೆಗಳಿಗೆ ಡಬ್‌ ಮಾಡ್ತಾರೆ. ಆದರೆ ರವಿಚಂದ್ರನ್‌ ಹಾಗಲ್ಲ. ನಾಲ್ಕೂ ಭಾಷೆಗಳಲ್ಲಿ ಅಲ್ಲಿನ ಕಲಾವಿದರನ್ನು ಹಾಕಿಕೊಂಡು, ನೆಗೆಟಿವ್‌ನಲ್ಲಿ ಶೂಟ್‌ ಮಾಡ್ತಿದ್ರು. ನೆಗೆಟಿವ್‌ನಲ್ಲಿ ಶೂಟ್‌ ಮಾಡೋದು ಅಷ್ಟು ಸುಲಭ ಅಲ್ಲ. ಅದಕ್ಕೆ ದಿಲ್‌ ಬೇಕು. ಸಿನಿಮಾ ಅಂದ್ರೆನೇ ರವಿಚಂದ್ರನ್‌ಗೆ ಫ್ಯಾಷನ್.

ಶಾಂತಿ ಕ್ರಾಂತಿ ಸಿನಿಮಾ ಶೂಟಿಂಗ್‌ ವೇಳೆ, ಕನ್ನಡ ವರ್ಷನ್‌ ಕಾರ್‌ಗಳಿಗೆ ಶಾಂತಿ ಕ್ರಾಂತಿ ಕನ್ನಡ, ತೆಲುಗಿನ ಕಾರ್‌ಗಳಿಗೆ ಶಾಂತಿ ಕ್ರಾಂತಿ ತೆಲುಗು, ಶಾಂತಿ ಕ್ರಾಂತಿ ಹಿಂದಿ, ಶಾಂತಿ ಕ್ರಾಂತಿ ತಮಿಳು... ಆ ಕಾರು, ಜೀಪ್‌ಗಳನ್ನು ಆ ಭಾಷೆಯ ಸಿನಿಮಾಗಳಿಗಷ್ಟೇ ಬಳಸಿಕೊಳ್ಳುತ್ತಿದ್ದರು. ಅಸಿಸ್ಟಂಟ್‌ ನಿರ್ದೇಶಕರಿಗೂ ಅದೇ ರೀತಿ. ಎಲ್ಲರಿಗೂ ಎದೆ ಮೇಲೆ ಆಯಾ ಭಾಷೆಯ ಬ್ಯಾಡ್ಜ್‌ ಇರ್ತಿತ್ತು. ಆ ಕಲ್ಪನೆಯೇ ಅದ್ಬುತ. ಇವತ್ತಿನವರೆಗೂ ಆ ರೀತಿ ಯಾರೂ ಮಾಡಿಲ್ಲ. ಆವತ್ತೇ 10 ಕೋಟಿ ಬಜೆಟ್‌ ಅಂದ್ರೆ ಲೆಕ್ಕ ಹಾಕಿ..‌

ರವಿಚಂದ್ರನ್‌ ಸೋಲಲ್ಲ, ಉದ್ಯಮದ ಸೋಲು

ಊಟದ ವ್ಯವಸ್ಥೆ ಹೇಗಿರುತ್ತಿತ್ತು ಅಂದ್ರೆ, ಸ್ಟಾರ್‌ ಹೊಟೇಲ್‌ ಸಿಸ್ಟಮ್‌ ಥರ. ಊಟ ಬಡಿಸುವವರು ಟೋಪಿ, ಕೈಗೆ ಗ್ಲೌಸ್‌ ಹಾಕಿಕೊಂಡಿರ್ತಿದ್ರು. ಎಲ್ಲ ಭಾಷೆಗಳಿಗೂ ಇದೇ ರೀತಿ ಇರುತ್ತಿತ್ತು. ಆ ಸಿನಿಮಾ ಗೆಲ್ಲಬೇಕಿತ್ತು. ಗೆದ್ದಿದ್ದರೆ, ನಮ್ಮ ಉದ್ಯಮದ ಗೌರವ ಎಲ್ಲೋ ಹೋಗ್ತಿತ್ತು. ರವಿಚಂದ್ರನ್‌ ಗೆದ್ದರೆ ಉದ್ಯಮ ಗೆದ್ದಂತೆ, ರವಿಚಂದ್ರನ್‌ ಗೆದ್ದರೆ ಉದ್ಯಮ ಗೆಲ್ಲುತ್ತೆ. ಶಾಂತಿ ಕ್ರಾಂತಿ ಗೆದ್ದಿದ್ದರೆ, ಆ ಟ್ರೆಂಡ್‌ ದೊಡ್ಡದಾಗಿ ಬೆಳೆದಿರೋದು. ಅದು ಕನ್ನಡದಿಂದಲೇ, ಅವರ ಸಿನಿಮಾದಿಂದಲೇ ಶುರುವಾಗ್ತಿತ್ತು. ಸ್ಯಾಂಡಲ್‌ವುಡ್‌ ಬೇರೆ ರೀತಿಯೇ ಬೆಳೀತಿತ್ತು. ನಮ್ಮ ಕನ್ನಡ ಚಿತ್ರೋದ್ಯಮವೇ ಬೇರೆ ರೀತಿ ಇರ್ತಿತ್ತು. ಆವತ್ತಿನ ದಿನಗಳಲ್ಲಿಯೇ ನೂರಾರು ಕೋಟಿ ಸಿನಿಮಾಗಳು ರೆಡಿಯಾಗ್ತಿದ್ವು. ಆ ಸೋಲು ರವಿಚಂದ್ರನ್‌ ಸೋಲಲ್ಲ, ಉದ್ಯಮದ ಸೋಲು. ನಮ್ಮ ಸೋಲದು.

10 ರೂಪಾಯಿ ಲಾಭ ಬಂದ್ರೂ ಅದು ಚಿತ್ರೋದ್ಯಮಕ್ಕೆ..

ಆ ಚಿತ್ರಕ್ಕೆ ನಾನು ಏನೂ ಅಲ್ಲ, ನಿರ್ದೇಶಕ ಅಲ್ಲ, ನಿರ್ಮಾಪಕ ಅಲ್ಲ. ಸಿನಿಮಾ ನೋಡಿದ ಬಳಿಕ, ಈ ಸಿನಿಮಾ ಗೆಲ್ಲಲಿಲ್ವಾ? ಎಂದು ಅಚ್ಚರಿಗೊಳಗಾದೆ. ಯಾವ ಥರ ಸಿನಿಮಾ ಕೊಡಬೇಕು ಎಂದು ನಾನೇ ಅಂದುಕೊಂಡೆ. ಆ ಕಾರಣಕ್ಕಾಗಿಯೇ ರವಿಚಂದ್ರನ್‌ ನಮ್ಮ ಚಿತ್ರರಂಗಕ್ಕೆ ಒಂದು ಆಸ್ತಿ. ಅವರಿಗೆ 10ರೂಪಾಯಿ ಲಾಭ ಬಂದ್ರೆ ಇನ್ನೊಂದು ಸಿನಿಮಾ ಮಾಡ್ತಾರೆ. ಸೈಟ್‌ ತಗೊಳ್ಳಲ್ಲ. ಕೋಟಿ ರೂಪಾಯಿ ಬಂದ್ರೆ, ಒಂದೂವರೆ ಕೋಟಿ ಹಾಕಿ ಸಿನಿಮಾ ಮಾಡ್ತಾರೆ. ನೂರು ಕೋಟಿ ಬಂದ್ರೆ, 150 ಕೋಟಿಯ ಸಿನಿಮಾ ಮಾಡ್ತಾರೆ. ಅದೇ ರವಿಚಂದ್ರನ್. ಅವರಿಗೆ ಹಿನ್ನಡೆ ಆದ್ರೆ, ಅದು ಚಿತ್ರರಂಗದ ಹಿನ್ನೆಡೆ.

ಮುಂಬೈನಲ್ಲೂ ಪ್ರೇಮಲೋಕದ ಗತ್ತು..

ಯಾವುದೋ ಕಾರಣಕ್ಕೆ 1993-94ರಲ್ಲಿ ಮುಂಬೈಗೆ ಹೋಗಿದ್ದೆ. ಆಗ ನಾನು ಕನ್ನಡ ಚಿತ್ರೋದ್ಯಮದಿಂದ ಬಂದಿದ್ದೇನೆ ಎಂದಾಗ, ಅಲ್ಲಿನವರು ಓಹ್..‌ ಪ್ರೇಮಲೋಕ ಎಂದು ಅಲ್ಲಿನವರು ಮೆಚ್ಚಿಕೊಂಡಿದ್ದರು. ಸದ್ದು ಮಾಡೋದು ಅಂದ್ರೆ ಇದೇ ಅಲ್ಲವೇ. ಆ ರೀತಿ ಅವರು ಸದ್ದು ಮಾಡಿದ್ರು. ರವಿಚಂದ್ರನ್‌ ಯಾವತ್ತೂ ಕೈ ಚಾಚಲ್ಲ. ಕೊಡುವ ವ್ಯಕ್ವಿತ್ವ ಅವರದ್ದು. ಅವರ ಬಾಡಿ ಲ್ಯಾಂಗ್ವೆಜ್‌ನಲ್ಲಿಯೇ ಒಂದು ಶ್ರೀಮಂತಿಕೆ ಕಾಣುತ್ತೆ. ಅದ್ಯಾರಿಗೂ ಬರಲ್ಲ. ಆ ಜಾಗದಲ್ಲಿ ಬೇರೆ ಯಾರಿದ್ದರೂ ಸೋತು ಬಿಡ್ತಿದ್ದರು. ರವಿಚಂದ್ರನ್‌ ಸೋತಿಲ್ಲ. ಸದ್ಯ ಅವರು ವಿಶ್ರಾಂತಿಯಲ್ಲಿದ್ದಾರೆ. ಬರ್ತಾರೆ. ಬಂದ್ರೆ ದೊಡ್ಡ ಮಟ್ಟದಲ್ಲಿಯೇ ಬರ್ತಾರೆ" ಎಂಬುದು ಎಸ್‌ ನಾರಾಯಣ್‌ ಮಾತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ