ಪ್ಯಾನ್‌ ಇಂಡಿಯಾ ಅಂದ್ರೆ ಶೋಕಿ, ದಾಡಿಬಾಡಿ ಬೆಳೆಯುತ್ತದೆ ಅಷ್ಟೇ ಎಂದ ಹಂಸಲೇಖ; ಯಶ್‌, ರಿಷಬ್‌ ಶೆಟ್ಟಿಗೆ ಪರೋಕ್ಷವಾಗಿ ತಿವಿದ ನಾದಬ್ರಹ್ಮ
ಕನ್ನಡ ಸುದ್ದಿ  /  ಮನರಂಜನೆ  /  ಪ್ಯಾನ್‌ ಇಂಡಿಯಾ ಅಂದ್ರೆ ಶೋಕಿ, ದಾಡಿಬಾಡಿ ಬೆಳೆಯುತ್ತದೆ ಅಷ್ಟೇ ಎಂದ ಹಂಸಲೇಖ; ಯಶ್‌, ರಿಷಬ್‌ ಶೆಟ್ಟಿಗೆ ಪರೋಕ್ಷವಾಗಿ ತಿವಿದ ನಾದಬ್ರಹ್ಮ

ಪ್ಯಾನ್‌ ಇಂಡಿಯಾ ಅಂದ್ರೆ ಶೋಕಿ, ದಾಡಿಬಾಡಿ ಬೆಳೆಯುತ್ತದೆ ಅಷ್ಟೇ ಎಂದ ಹಂಸಲೇಖ; ಯಶ್‌, ರಿಷಬ್‌ ಶೆಟ್ಟಿಗೆ ಪರೋಕ್ಷವಾಗಿ ತಿವಿದ ನಾದಬ್ರಹ್ಮ

ಪ್ಯಾನ್‌ ಇಂಡಿಯಾ ಎನ್ನುವುದು ಸದ್ಯದ ಶೋಕಿ. ಒಂದು ಹನಿಮೂನ್‌. ಹನಿಮೂನ್‌ ರೀತಿ ಎಲ್ಲಾ ಕಡೆ ಸುತ್ತಾಡಿಕೊಂಡು ಮತ್ತೆ ಇಲ್ಲಿಗೆ ಕನ್ನಡಕ್ಕೆ ವಾಪಸ್‌ ಬರಲೇಬೇಕು ಎಂದು ಜನಪ್ರಿಯ ಸಂಗೀತ ನಿರ್ದೇಶಕ ಹಂಸಲೇಖ ಅಭಿಪ್ರಾಯಪಟ್ಟಿದ್ದಾರೆ. ಪ್ಯಾನ್‌ ಇಂಡಿಯಾ ಸಿನಿಮಾದಿಂದ ಬಾಡಿದಾಡಿ ಬೆಳೆಸಬಹುದು ಎಂದು ಪರೋಕ್ಷವಾಗಿ ಯಶ್‌, ರಿಷಬ್‌ ಶೆಟ್ಟಿ ಮುಂತಾದ ನಟರಿಗೆ ತಿವಿದಿದ್ದಾರೆ.

ಪ್ಯಾನ್‌ ಇಂಡಿಯಾ ಅಂದ್ರೆ ಶೋಕಿ, ದಾಡಿಬಾಡಿ ಬೆಳೆಯುತ್ತದೆ ಅಷ್ಟೇ ಎಂದ ಹಂಸಲೇಖ
ಪ್ಯಾನ್‌ ಇಂಡಿಯಾ ಅಂದ್ರೆ ಶೋಕಿ, ದಾಡಿಬಾಡಿ ಬೆಳೆಯುತ್ತದೆ ಅಷ್ಟೇ ಎಂದ ಹಂಸಲೇಖ

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಹಲವು ಪ್ಯಾನ್‌ ಇಂಡಿಯಾ ಸಿನಿಮಾಗಳು ನಿರ್ಮಾಣವಾಗಿವೆ, ನಿರ್ಮಾಣವಾಗುತ್ತಿವೆ. ಕೆಜಿಎಫ್‌ನಿಂದ ಆರಂಭವಾದ ಈ ಪರಂಪರೆ ಈಗ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಕಾಂತಾರ ಚಾಪ್ಟರ್‌ 1 ಸಿನಿಮಾಕ್ಕೆ ದೇಶ ವಿದೇಶದ ಪ್ರೇಕ್ಷಕರು ಕಾಯುತ್ತಿದ್ದಾರೆ. ಕೆಜಿಎಫ್‌ ಅಧ್ಯಾಯ 1 ಮತ್ತು 2, ವಿಕ್ರಾಂತ್‌ ರೋಣ, ಕಬ್ಜಾ, 777 ಚಾರ್ಲಿ, ಕಾಂತಾರ ಸೇರಿದಂತೆ ಹಲವು ಸಿನಿಮಾಗಳು ರಿಲೀಸ್‌ ಆಗಿವೆ. ಮಾರ್ಟಿನ್‌ ಸೇರಿದಂತೆ ಹಲವು ಪ್ಯಾನ್‌ ಇಂಡಿಯಾ ಕನ್ನಡ ಸಿನಿಮಾಗಳು ರಿಲೀಸ್‌ ಆಗಲು ಕಾಯುತ್ತಿವೆ. ಸ್ಯಾಂಡಲ್‌ವುಡ್‌ನ ಈ ಬೆಳವಣಿಗೆ ಬಗ್ಗೆ ನಾದಬ್ರಹ್ಮ ಹಂಸಲೇಖ ಒಂದಿಷ್ಟು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದ್ರಜಿತ್‌ ಲಂಕೇಶ್‌ ಅವರ ಮಗ ಸಬರ್ಜಿತ್‌ ಲಂಕೇಶ್‌ ನಾಯಕ ನಟನಾಗಿ ನಟಿಸುತ್ತಿರುವ ಗೌರಿ ಸಿನಿಮಾಕ್ಕೆ ಸಂಬಂಧಪಟ್ಟ ಕಾರ್ಯಕ್ರಮದಲ್ಲಿ ಕನ್ನಡ ಸಂಗೀತ ನಿರ್ದೇಶಕ ಹಂಸಲೇಖ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕನ್ನಡ ನಟರಿಗೆ ಪ್ಯಾನ್‌ ಇಂಡಿಯಾ ಈಗಿನ ಶೋಕಿ, ಇದು ಹನಿಮೂನ್‌ ರೀತಿ, ದಾಡಿ ಬಾಡಿ ಬೆಳೆಯಬಹುದು, ಸ್ವಲ್ಪ ವ್ಯಾಪಾರವಾಗಬಹುದು ಬೇರೇ ಏನೂ ಬೆಳೆಯೊಲ್ಲ ಎಂದು ಹಂಸಲೇಖ ಹೇಳಿದ್ದಾರೆ.

ಪ್ಯಾನ್‌ ಇಂಡಿಯಾ ಎಂದರೆ ಶೋಕಿ, ಭ್ರಮೆ

ಈ ಪ್ಯಾನ್‌ ಇಂಡಿಯಾ ಬಂದು ಕನ್ನಡ ಚಿತ್ರರಂಗದ ಬೇರು ಕಟ್‌ ಮಾಡಿಬಿಟ್ಟಿದೆ. ಇವರೆಲ್ಲ ಭಾರತದ್ಯಾಂತ ಖ್ಯಾತ ನಾಯಕರಾಗುತ್ತಾರೆ ಎನ್ನುವುದು ಒಂದು ಭ್ರಮೆ. ಪ್ಯಾನ್‌ ಇಂಡಿಯಾದಲ್ಲಿ ನಾರ್ತ್‌ ಇಂಡಿಯಾದಲ್ಲಿ ಹೋಗಿ ಬದುಕಬಹುದೇ ಹೊರತು ರಜನಿಕಾಂತ್‌ ಆಗಲಿ, ಕಮಲ್‌ ಹಾಸನ್‌ ಆಗಲಿ, ಮಮ್ಮುಟಿಯಾಗಲಿ ಬಾಂಬೆಗೆ ಹೋದ್ರೆ ಎರಡು ವರ್ಷ ಇರುವುದಕ್ಕೆ ಆಗೋಲ್ಲ ವಾಪಸ್‌ ಬರ್ತಾರೆ ಎಂದು ಹಂಸಲೇಖ ಹೇಳಿದ್ದಾರೆ.

ಪ್ಯಾನ್‌ ಇಂಡಿಯಾ ಎನ್ನುವುದು ಸದ್ಯದ ಶೋಕಿ. ಒಂದು ಹನಿಮೂನ್‌. ಹನಿಮೂನ್‌ ರೀತಿ ಎಲ್ಲಾ ಕಡೆ ಸುತ್ತಾಡಿಕೊಂಡು ಮತ್ತೆ ಇಲ್ಲಿಗೆ ಕನ್ನಡಕ್ಕೆ ವಾಪಸ್‌ ಬರಲೇಬೇಕು. ಎಷ್ಟೊಂದು ಪ್ರಾದೇಶಿಕ ಚಿತ್ರರಂಗವಿದೆ. ಅವುಗಳಲ್ಲಿ ಕೇಳಲು ಹಿತವಾದ ಒಂದು ಶೀರ್ಷಿಕೆ ಸ್ಯಾಂಡಲ್‌ವುಡ್‌. ಈ ಸ್ಯಾಂಡಲ್‌ವುಡ್‌ ಅನ್ನು ಬಾಲಿವುಡ್‌ ಜತೆ ಹೋಲಿಕೆ ಮಾಡಲು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ. ಕಾಲಿವುಡ್‌, ಇತರೆ ವುಡ್‌ಗಳ ಜತೆ ಸ್ಯಾಂಡಲ್‌ವುಡ್‌ ಅನ್ನು ಹೋಲಿಸಲು ಸಾಧ್ಯವಿಲ್ಲ. ಸ್ಯಾಂಡಲ್‌ವುಡ್‌ ಎಂದರೆ ಪರಿಮಳ. ಗಂಧದ ಪರಿಮಳ. ಗಂಧದ ಮರದ ಗುಣ ಗೊತ್ತ ನಿಮಗೆ. ಗಂಧದ ಮರ ಒಂಟಿಯಾಗಿ ಬೆಳೆಯೋದಿಲ್ಲ. ಅದರ ಸುತ್ತಲೂ ಇಪ್ಪತ್ತು ಮೂವತ್ತು ಮರಗಳು ಇದ್ದರೆ ಬೆಳೆಯುತ್ತದೆ. ಎಲ್ಲರನ್ನೂ ಒಳಗೊಂಡಿದ್ದರೆ ಮಾತ್ರ ಗಂಧದ ಮರ ಬೆಳೆಯುತ್ತದೆ. ಸ್ಯಾಂಡಲ್‌ವುಡ್‌ಗೆ ದೊಡ್ಡ ಪರಂಪರೆ ಇದೆ. ಕನ್ನಡ ಚಿತ್ರರಂಗದ ಪರಂಪರೆ ತುಂಬಾ ದೊಡ್ಡದಾಗಿದೆ ಎಂದು ಹಂಸಲೇಖ ಅಭಿಪ್ರಾಯಪಟ್ಟಿದ್ದಾರೆ.

"ಇಂತಹ ಪರಂಪರೆಯನ್ನು ಬಿಟ್ಟು ಪ್ಯಾನ್‌ ಇಂಡಿಯಾ ಎಂದು ಇರಬೇಡಿ. ಪ್ಯಾನ್‌ ಇಂಡಿಯಾ ಹೋಗಬೇಡಿ ಎನ್ನುವುದಿಲ್ಲ. ಸ್ವಲ್ಪ ವ್ಯಾಪಾರ ಜಾಸ್ತಿಯಾಗುತ್ತದೆ. ಬಾಡಿ ದಾಡಿ ಬೆಳೆಯುತ್ತದೆ ಮಾತ್ರ. ಬೇರೆ ಏನೂ ಆಗೋದಿಲ್ಲ" ಎಂದು ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ದಾಡಿ ಬೆಳೆಸಿರುವ ಯಶ್‌, ರಿಷಬ್‌ ಶೆಟ್ಟಿ ಮುಂತಾದ ಪ್ಯಾನ್‌ ಇಂಡಿಯಾ ನಟರಿಗೆ ಪರೋಕ್ಷವಾಗಿ ತಿವಿದಿದ್ದಾರೆ.

Whats_app_banner