ಕನ್ನಡ ಸುದ್ದಿ  /  ಮನರಂಜನೆ  /  ದುಡ್ಡಿನ ವಿಚಾರದಲ್ಲಿ ರವಿಚಂದ್ರನ್‌ಗೆ ದೌಲತ್ತು ಜಾಸ್ತಿ! ‘ಚಕ್ರವ್ಯೂಹ’ದ ಅಂದಿನ ದಿನಗಳನ್ನು ನೆನೆದ ಮುಖ್ಯಮಂತ್ರಿ ಚಂದ್ರು

ದುಡ್ಡಿನ ವಿಚಾರದಲ್ಲಿ ರವಿಚಂದ್ರನ್‌ಗೆ ದೌಲತ್ತು ಜಾಸ್ತಿ! ‘ಚಕ್ರವ್ಯೂಹ’ದ ಅಂದಿನ ದಿನಗಳನ್ನು ನೆನೆದ ಮುಖ್ಯಮಂತ್ರಿ ಚಂದ್ರು

"ಅವಾಗೆಲ್ಲ ನನ್ನ ಯಾವ ಸಿನಿಮಾ ಸಹ ಕ್ಲಿಕ್‌ ಆಗಿರಲಿಲ್ಲ. ವೀರಾಸ್ವಾಮಿ ನಿರ್ಮಾಣದ ಚಕ್ರವ್ಯೂಹ ನನ್ನ ಮೊದಲ ಕಮರ್ಷಿಯಲ್‌ ಸಿನಿಮಾ ಆಗಿತ್ತು. ದುಡ್ಡಿನ ವಿಚಾರದಲ್ಲಿ ರವಿಚಂದ್ರನ್‌ ಆವತ್ತು ಸ್ವಲ್ಪ ದೌಲತ್ತಿನಲ್ಲಿಯೇ ಮಾತನಾಡಿದ್ರು. ಆವಾಗ ಹಣಕಾಸಿನ ವಿಚಾರದಲ್ಲಿ ಅವ್ರೆಲ್ಲ ಚೆನ್ನಾಗಿಯೇ ಇದ್ರಲ್ಲ" ಎಂದು ಹಳೇ ದಿನ ನೆನಪಿಸಿಕೊಂಡಿದ್ದಾರೆ ಮುಖ್ಯಮಂತ್ರಿ ಚಂದ್ರು.

ದುಡ್ಡಿನ ವಿಚಾರದಲ್ಲಿ ರವಿಚಂದ್ರನ್‌ಗೆ ದೌಲತ್ತು ಜಾಸ್ತಿ! ಅಂದಿನ ‘ಚಕ್ರವ್ಯೂಹ’ ದಿನಗಳನ್ನು ನೆನೆದ ಮುಖ್ಯಮಂತ್ರಿ ಚಂದ್ರು
ದುಡ್ಡಿನ ವಿಚಾರದಲ್ಲಿ ರವಿಚಂದ್ರನ್‌ಗೆ ದೌಲತ್ತು ಜಾಸ್ತಿ! ಅಂದಿನ ‘ಚಕ್ರವ್ಯೂಹ’ ದಿನಗಳನ್ನು ನೆನೆದ ಮುಖ್ಯಮಂತ್ರಿ ಚಂದ್ರು

Mukhyamantri Chandru: ಸ್ಯಾಂಡಲ್‌ವುಡ್‌ ಕಂಡ ಪ್ರತಿಭಾನ್ವಿಕ ನಟರ ಸಾಲಿನಲ್ಲಿ ನಿಲ್ಲುವ ದೈತ್ಯ ಪ್ರತಿಭೆ ಮುಖ್ಯಮಂತ್ರಿ ಚಂದ್ರು ಅವರದ್ದು. ಇಂದಿಗೂ ಚಿತ್ರೋದ್ಯಮದ ಜತೆಗೆ ಕಿರುತೆರೆಯಲ್ಲಿಯೂ ಸಕ್ರಿಯರಾಗಿದ್ದಾರೆ. ಇದೀಗ ಇದೇ ಮುಖ್ಯಮಂತ್ರಿ ಚಂದ್ರು, ತಮ್ಮ ಆರಂಭದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಆಫ್‌ಬೀಟ್‌ ಸಿನಿಮಾಗಳ ಬಳಿಕ ಮೊದಲ ಕಮರ್ಷಿಯಲ್‌ ಚಕ್ರವ್ಯೂಹ ಸಿನಿಮಾದಲ್ಲಿ ಚಾನ್ಸ್‌ ಸಿಕ್ಕ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ನಟ ರವಿಚಂದ್ರನ್‌ ಅವರ ಬಗ್ಗೆಯೂ ಒಂದಷ್ಟು ಮಾತನಾಡಿದ್ದಾರೆ.

"ಕಮರ್ಷಿಯಲ್‌ ಸಿನಿಮಾಗಳಿಂತಲೂ ಮುಂಚೆ, ಒಂದಷ್ಟು ಆಫ್‌ಬೀಟ್‌ ಸಿನಿಮಾಗಳಲ್ಲಿ ನಟಿಸಿದ್ದೆ. ಹೀಗಿರುವಾಗಲೇ 1982ರಲ್ಲಿ ಚಕ್ರವ್ಯೂಹ ಸಿನಿಮಾ ಸೆಟ್ಟೇರಿತ್ತು. ಅಂಬರೀಶ್‌ ಹೀರೋ, ಅಂಬಿಕಾ ಹೀರೋಯಿನ್.‌ ಅದೊಂದು ಪಾಲಿಟಿಕಲ್‌ ಡ್ರಾಮಾ ಶೈಲಿಯ ಸಿನಿಮಾ. ವೀರಾಸ್ವಾಮಿ ಅವರ ಈಶ್ವರಿ ಪ್ರೊಡಕ್ಷನ್ಸ್‌ನಲ್ಲಿ ಆ ಸಿನಿಮಾ ನಿರ್ಮಾಣವಾತ್ತಿತ್ತು. ಆ ಕಾಲದಲ್ಲಿ ರವಿಚಂದ್ರನ್‌ ಆ ಚಿತ್ರದ ಸಹ ನಿರ್ಮಾಪಕ. ಆ ಚಿತ್ರಕ್ಕೆ ಮೇನ್‌ ವಿಲನ್‌ ಬೇಕಿತ್ತು. ಫೈಟಿಂಗ್‌ ವಿಲನ್‌ ಅಲ್ಲ. ಡೈಲಾಗ್‌ ವಿಲನ್‌ ಬೇಕಿತ್ತು. ಒಂದು ಪಾರ್ಟಿ ಅಧ್ಯಕ್ಷನ ರೋಲ್"

ಟ್ರೆಂಡಿಂಗ್​ ಸುದ್ದಿ

"ಆ ಪಾತ್ರಕ್ಕಾಗಿ ಉದಯ್‌ಕುಮಾರ್‌, ಜಿ.ವಿ ಅಯ್ಯರ್‌ ಅವರನ್ನೂ ಹಾಕಿಕೊಳ್ಳಲು ಪ್ಲಾನ್‌ ಹಾಕಿದ್ದರು. ಪಾಪ್ಯುಲರ್‌ ಬದಲಿ ಹೊಸಬರನ್ನು ಹಾಕಿಕೊಳ್ಳೋಣ್ಣ ಎಂಬ ಪ್ಲಾನ್‌ ಮಾಡಿದ್ರು. ಆಗ ನನ್ನ ಮುಖ್ಯಮಂತ್ರಿ ನಾಟಕ ನೋಡಿದ ಒಬ್ಬರು, ನನ್ನ ಬಗ್ಗೆ ಅವರಿಗೆ ಹೇಳಿದ್ದಾರೆ. ನನ್ನನ್ನು ಹುಡುಕಿಕೊಂಡು ಬಂದು ನಾಟಕ ನೋಡಿದ್ದಾರೆ. ಆಗ ನನಗೆ 30 ವರ್ಷ. ಮಲ್ಲೇಶ್ವರದಲ್ಲಿ ನಡೆದ ಶೋಗೆ, ಚಕ್ರವ್ಯೂಹ ಚಿತ್ರದ ನಿರ್ದೇಶಕರು ಆಗಮಿಸಿ, ಸಿನಿಮಾ ನೋಡಿ ಮೆಚ್ಚಿದ್ದಾರೆ. ನನ್ನನ್ನೇ ಫೈನಲ್‌ ಮಾಡಿದ್ದಾರೆ. ಆವಾಗ ನಾನು ಕ್ಲರ್ಕ್‌ ಕೆಲಸ ಮಾಡ್ತಿದ್ದೆ. 20 ದಿನ ರಜೆ ಹಾಕಿ ಎಂದ್ರು. ನಾನು ಅದೆಲ್ಲ ಆಗಲ್ಲ, ಹರ್ಷದ ಕೂಳಿಗೆ ವರ್ಷದ ಕೂಳು ಅದ್ಹೇಗೆ ಕಳೆದುಕೊಳ್ಳಲಿ ಅಂತ ಬೇಡ ಎಂದಿದ್ದೆ"

ರವಿಚಂದ್ರನ್‌ಗೆ ದೌಲತ್ತು ಜಾಸ್ತಿ..

"ಅವಾಗೆಲ್ಲ ನನ್ನ ಯಾವ ಸಿನಿಮಾ ಸಹ ಕ್ಲಿಕ್‌ ಆಗಿರಲಿಲ್ಲ. ಚಕ್ರವ್ಯೂಹ ನನ್ನ ಮೊದಲ ಕಮರ್ಷಿಯಲ್‌ ಸಿನಿಮಾ ಆಗಿತ್ತು. ದುಡ್ಡಿನ ವಿಚಾರದಲ್ಲಿ ರವಿಚಂದ್ರನ್‌ ಆವತ್ತು ಸ್ವಲ್ಪ ದೌಲತ್ತಿನಲ್ಲಿಯೇ ಮಾತನಾಡಿದ್ರು. ಆವಾಗ ಹಣಕಾಸಿನ ವಿಚಾರದಲ್ಲಿ ಅವ್ರೆಲ್ಲ ಚೆನ್ನಾಗಿಯೇ ಇದ್ರಲ್ಲ ಹಾಗಾಗಿ. ಪ್ರೀತಿನೂ ಹಾಗೇ ಇದೆ ನನ್ನ ಮೇಲೆ ಆ ಮನುಷ್ಯನಿಗೆ. ಆ ಸಿನಿಮಾ ಬಳಿಕ ಸಾಕಷ್ಟು ಸಿನಿಮಾ ಮಾಡಿಸಿದ್ರು. "ದುಡ್ಡಿಂದೆಲ್ಲ ಮಾತನಾಡಬೇಡ, ನಾವು ಅಷ್ಟು ಕೊಡ್ತಿವಿ.." ಎಂದೆಲ್ಲ ಮಾತನಾಡಿದ್ರು. ಅದಕ್ಕೆ ನಾನು, "ಹೋಗ್ರಿರೀ ನನಗೆ ದುಡ್ಡು ಬರ್ತಿದೆ, ಬೇರೆ ಯಾರಕಡೆನಾದ್ರೂ ಮಾಡಿಸಿಕೊಳ್ಳಿ" ಎಂದಿದ್ದೆ"

ಮೊದಲ ಸಂಭಾವನೆ 4000 ರೂ!

"ನಾನು ಹಾಗೇ ಹೇಳಿದ್ದಕ್ಕೆ, ರವಿಚಂದ್ರನ್‌ ಮತ್ತು ವೀರಾಸ್ವಾಮಿ ಇಬ್ಬರೂ ಚರ್ಚೆ ಮಾಡಿ, ಎಷ್ಟು ದುಡ್ಡು ಬರುತ್ತೆ ನಿನಗೆ ಎಂದು ಕೇಳಿದ್ರು. ಆಗ ನನಗೆ ತಿಂಗಳಿಗೆ 400 ರೂಪಾಯಿ ಬರ್ತಿತ್ತು. ಅದರ ಹತ್ತರಷ್ಟು ಕೊಡ್ತೀನಿ ಬರ್ತಿಯಾ ಎಂದ್ರು. 4000 ಕೊಡ್ತಾರಾ? ಅದಾದ ಮೇಲೆ ನನ್ನ ಕಥೆ ಹೇಗೆ ಎಂದೆಲ್ಲ ವಿಚಾರ ಮಾಡಿದೆ. ಈ ಸಿನಿಮಾ ಆದಮೇಲೆ ನಿಮ್ಮ ಲಕ್‌ ಬದಲಾಗುತ್ತೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿ, ಪ್ರೀತಿಯಿಂದ ಮಾಡಿಸಿದ್ರು"

ಒಂದೇ ಟೇಕ್‌ನಲ್ಲಿ ನನ್ನ ಮೊದಲ ಶಾಟ್‌ಗೆ ಎಲ್ರೂ ಫಿದಾ..

"ಅಂಬರೀಶ್‌, ತೂಗುದೀಪ ಶ್ರೀನಿವಾಸ್‌, ವಜ್ರಮುನಿ, ಅಂಬಿಕಾ, ಬ್ರಹ್ಮಾವರಂ, ಕೃಷ್ಣಗೌಡ್ರು ಇನ್ನೂ ಸಾಕಷ್ಟು ಮಂದಿ ಘಟನಾಘಟಿಗಳು. ಪಾರ್ಟಿ ಪ್ರಸೆಡೆಂಟ್‌ ನಾನು. ಆ ಒಂದು ಶಾಟ್‌ ಮಾಡ್ತಿದ್ದಂತೆ, ಓಕೆ ಆಗೋಯ್ತು. ಚಪ್ಪಾಳೆ ಹೊಡೆದ್ರು. ಚೇರ್‌ ಕೊಡದಿದ್ದವರು ಚೇರ್‌ ಕೊಟ್ರು. ಸಿಗರೇಟ್‌ ಕೊಡದಿದ್ದವರು ಸಿಗರೇಟ್‌ ಕೊಟ್ಟರು. ಮುಂದಿನ ನಾಲ್ಕೈದು ಸಿನಿಮಾ ಅಲ್ಲೇ ಬುಕ್‌ ಆಯ್ತು. ವೀರಾಸ್ವಾಮಿ ಅವರೇ ಬುಕ್‌ ಮಾಡಿದ್ರು. ಆ ಕಾಲದಲ್ಲಿ ಒಂದೇ ದಿನದಲ್ಲಿ 20 ಸಾವಿರದ ಆರ್ಟಿಸ್ಟ್‌ ಆಗೋದೆ" ಎಂದು ಕಲಾಮಾಧ್ಯಮ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.