logo
ಕನ್ನಡ ಸುದ್ದಿ  /  ಮನರಂಜನೆ  /  ತಮಿಳಲ್ಲಿ ಭಾಷಣ ಮಾಡಿದ ಶಿವಣ್ಣನಿಗೆ ‘ನೀವು ಕರುನಾಡ ದೊರೆಯಲ್ಲ, ಕರುನಾಡಿಗೇ ದೊಡ್ಡ ಹೊರೆ’ ಎಂದು ಟೀಕೆ Video

ತಮಿಳಲ್ಲಿ ಭಾಷಣ ಮಾಡಿದ ಶಿವಣ್ಣನಿಗೆ ‘ನೀವು ಕರುನಾಡ ದೊರೆಯಲ್ಲ, ಕರುನಾಡಿಗೇ ದೊಡ್ಡ ಹೊರೆ’ ಎಂದು ಟೀಕೆ VIDEO

Apr 27, 2024 09:00 AM IST

ತಮಿಳಲ್ಲಿ ಭಾಷಣ ಮಾಡಿದ ಶಿವಣ್ಣನಿಗೆ ‘ನೀವು ಕರುನಾಡ ದೊರೆಯಲ್ಲ, ಕರುನಾಡಿಗೇ ದೊಡ್ಡ ಹೊರೆ’ ಎಂದು ಟೀಕೆ VIDEO

    • ಶಿವಮೊಗ್ಗದಲ್ಲಿ ಪತ್ನಿ ಗೀತಾ ಪರವಾಗಿ ಶಿವರಾಜ್‌ಕುಮಾರ್‌ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಈ ನಡುವೆ, ಅಲ್ಲಿನ ತಮಿಳು ಏರಿಯಾದಲ್ಲಿ ತಮಿಳಿನಲ್ಲಿಯೇ ಭಾಷಣ ಮಾಡಿದ ವಿಡಿಯೋಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. 
ತಮಿಳಲ್ಲಿ ಭಾಷಣ ಮಾಡಿದ ಶಿವಣ್ಣನಿಗೆ ‘ನೀವು ಕರುನಾಡ ದೊರೆಯಲ್ಲ, ಕರುನಾಡಿಗೇ ದೊಡ್ಡ ಹೊರೆ’ ಎಂದು ಟೀಕೆ VIDEO
ತಮಿಳಲ್ಲಿ ಭಾಷಣ ಮಾಡಿದ ಶಿವಣ್ಣನಿಗೆ ‘ನೀವು ಕರುನಾಡ ದೊರೆಯಲ್ಲ, ಕರುನಾಡಿಗೇ ದೊಡ್ಡ ಹೊರೆ’ ಎಂದು ಟೀಕೆ VIDEO

Shivarajkumar: ಹ್ಯಾಟ್ರಿಕ್‌ ಹೀರೋ, ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಸದ್ಯ ಚುನಾವಣಾ ಪ್ರಚಾರದ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಪತ್ನಿ ಗೀತಾ ಶಿವರಾಜ್‌ಕುಮಾರ್‌ ಶಿವಮೊಗ್ಗ ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ಹಾಗಾಗಿ ಸಿನಿಮಾ ಕೆಲಸಗಳಿಗೆ ಕೊಂಚ ಬ್ರೇಕ್‌ ಹಾಕಿ ಕಳೆದ ಕೆಲ ದಿನಗಳಿಂದ ಕ್ಯಾಂಪೇನ್‌ನಲ್ಲಿಯೇ ಮುಳುಗಿದ್ದಾರೆ ಶಿವಣ್ಣ. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರದಲ್ಲಿ ಓಡಾಡಿ ಬಿರುಸಿನ ಪ್ರಚಾರವನ್ನೂ ಮಾಡುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆವೇಶಂ ಒಟಿಟಿ ಬಿಡುಗಡೆ ದಿನಾಂಕ: ಮನೆಯಲ್ಲೇ ನೋಡಿ ಫಹಾದ್‌ ಫಾಸಿಲ್‌ ನಟನೆಯ ಬ್ಲಾಕ್‌ಬಸ್ಟರ್‌ ಮಲಯಾಳ ಸಿನಿಮಾ

ಹೀರಾಮಂಡಿ ವೆಬ್‌ಸರಣಿಯಲ್ಲಿ ಸಲಿಂಗರತಿ ದೃಶ್ಯ; ಡೈಮಂಡ್‌ ಬಜಾರ್‌ನ ಆಕೆಗೆ ಪುರುಷರೆಂದರೆ ಆಗೋದೇ ಇಲ್ಲ ಅಂದ್ರು ಸೋನಾಕ್ಷಿ ಸಿನ್ಹಾ

ಜಾರಾಂದಾಯ, ಪರಿವಾರ ದೈವಗಳ ನೇಮೋತ್ಸವದಲ್ಲಿ ಶ್ರೀನಿಧಿ ಶೆಟ್ಟಿ ಭಾಗಿ; ಕಿಚ್ಚ ಸುದೀಪ್‌ ಜತೆ ಕೆಜಿಎಫ್‌ ನಟಿಯ ಮುಂದಿನ ಸಿನಿಮಾ

ದಿ ಬ್ರೋಕನ್‌ ನ್ಯೂಸ್‌ ವೆಬ್ ಸರಣಿ: ಸುದ್ದಿಮನೆ ಜೀವಿಗಳನ್ನು ಕಾಡುವ, ಜನರ ಕಣ್ಣು ತೆರೆಸುವ ಕಥಾನಕ, ನಿಜ-ಸುಳ್ಳಿನ ತಾಕಲಾಟ, ಸುದ್ದಿಯ ಹಲವು ಮುಖ

ಹೀಗೆ ಪ್ರಚಾರದ ವೇಳೆ ಶಿವಣ್ಣನ ಭಾಷಣದ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ. ಆ ವಿಡಿಯೋ ನೋಡಿದವರು ಕೊಂಚ ಗರಂ ಆಗಿಯೇ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಹಾಗಾದರೆ ಅಷ್ಟಕ್ಕೂ ಶಿವಣ್ಣ ಭಾಷಣದಲ್ಲಿ ಮಾತನಾಡಿದ್ದೇನು? ಶಿವಮೊಗ್ಗದಲ್ಲಿ ಪ್ರಚಾರದ ಸಂದರ್ಭದಲ್ಲಿ ನಟ ಶಿವರಾಜ್‌ಕುಮಾರ್‌, ಮೈಕ್‌ ಹಿಡಿದು ಕನ್ನಡದ ಬದಲು ತಮಿಳಿನಲ್ಲಿಯೇ ಮಾತನಾಡಿದ್ದಾರೆ. ಇದು ಕೆಲ ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ತಮಿಳು ಭಾಷಣದಲ್ಲಿ ಶಿವಣ್ಣ ಹೇಳಿದ್ದೇನು?

ಶಿವಮೊಗ್ಗದಲ್ಲಿ ತಮಿಳು ಮಾತನಾಡುವವರು ಪ್ರಮಾಣವೂ ದೊಡ್ಡದಿದೆ. ಹಾಗಾಗಿಯೇ ಪ್ರಚಾರದ ವೇಳೆ ಆ ತಮಿಳು ಭಾಷಿಕರ ಏರಿಯಾಕ್ಕೆ ಹೋದಾಗ, ತಮಿಳಿನಲ್ಲಿಯೇ ಅವರೆಲ್ಲರ ಜತೆಗೆ ವೇದಿಕೆ ಮೇಲೆಯೇ ಮಾತನಾಡಿದ್ದಾರೆ ಶಿವಣ್ಣ. "ಎಲ್ಲರೂ ಚೆನ್ನಾಗಿದ್ದೀರಾ? ಜೈಲರ್‌ ಸಿನಿಮಾ ನೋಡಿದ್ರಾ? ಕ್ಯಾಪ್ಟನ್‌ ಮಿಲ್ಲರ್‌ ಸಿನಿಮಾ ನೋಡಿದ್ರಾ? ಚೆನ್ನಾಗನಿಸ್ತಾ? ನಾನೂ ಕೂಡ ಚೆನ್ನೈನಲ್ಲಿ ಹುಟ್ಟಿದ್ದು. ಅಲ್ಲೇ ಬೆಳೆದು, ಅಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದು. ನಾನು, ನನ್ನಿಬ್ಬರು ತಮ್ಮಂದಿರಾದ ರಾಘು, ಪುನೀತ್‌, ಲಕ್ಷ್ಮೀ, ಪೂರ್ಣಿಮಾ ಎಲ್ಲರೂ ಚೆನ್ನೈನಲ್ಲಿಯೇ ಹುಟ್ಟಿದ್ದು. ಅಲ್ಲಿಯೇ ನಮ್ದೇ ಆದ ಮನೆ ಇತ್ತು" ಎಂದು ತಮಿಳಿನಲ್ಲಿಯೇ ಮಾತನಾಡಿದ ವಿಡಿಯೋ ಕ್ಲಿಪ್‌ ವೈರಲ್‌ ಆಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಿದ ಟೀಕೆ

ಈ ವಿಡಿಯೋ ಕ್ಲಿಪ್‌ ಹೊರಬಿದ್ದಿದ್ದೇ ತಡ ಕೆಲವು ಕನ್ನಡ ಪರ ಹೋರಾಟಗಾರರು ಶಿವಣ್ಣನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್‌ ಹಾಕಿ ನಿಂದಿಸುವ ಕೆಲಸಗಳಾಗುತ್ತಿವೆ. ನೆಟ್ಟಿಗರೊಬ್ಬರು ಈ ವಿಡಿಯೋ ಹಂಚಿಕೊಂಡು ಕಟುವಾಗಿಯೇ ಪೋಸ್ಟ್‌ ಹಂಚಿಕೊಂಡಿದ್ದಾರೆ. "ಈತ ಕನ್ನಡದ ಮುತ್ತುರಾಜನಿಗೆ ಹುಟ್ಟಿದ್ದಾ ಅಂತ ಅನುಮಾನ! ಹೆಂಡತಿ ಪರ ಪ್ರಚಾರಕ್ಕೆ ಕನ್ನಡನಾಡನ್ನು ತಮಿಳುನಾಡನ್ನಾಗಿ ಮಾರ್ಪಡಿಸಲು ನಿಂತ ಶಿವಣ್ಣನಿಗೆ ಧಿಕ್ಕಾರ. ಈತ ಕರುನಾಡ ದೊರೆಯಲ್ಲ. ಕರುನಾಡಿಗೆ ದೊಡ್ಡ ಹೊರೆ. ಶಾಶ್ವತವಾಗಿ ತಮಿಳುನಾಡಿಗೆ ಹೋಗಿ ಬಿಡಲಿ. ತಮಿಳಲ್ಲಿ ಸೈಡ್ ಆಕ್ಟಿಂಗ್ ಮಾಡ್ಕೊಂಡ್ ಬಿದ್ದಿರಲಿ" ಎಂದು ಪೋಸ್ಟ್‌ ಮಾಡಿದ್ದಾರೆ.

"ಅಣ್ಣಾವ್ರು ಗೋಕಾಕ್ ಚಳುವಳಿ ಮಾಡಿ ಕನ್ನಡ ಉಳಿಸಿದ್ರು, ಅಪ್ಪು ಕನ್ನಡ ಬಳಸಿ ಭಾಷೆ ಉಳಿಸಿದ್ರು, ಇವನು ಅವರಿಬ್ಬರ ಹೆಸರನ್ನು ಹಾಳು ಮಾಡೋಕೆ ಹುಟ್ಟಿದ್ದಾನೆ..", "ಅಕಟಕಟಾ..... ಎಲ್ ಹೋದ ನಾರಾಯಣಗೌಡ. ಬಾರೋ ಕನ್ನಡ ರಕ್ಷಣೆ ಮಾಡು ಸಾಯ್ತಾ ಇದೆ ಕನ್ನಡ ಇಲ್ಲಿ", ಹೀಗೇ ಬಗೆಬಗೆ ರೀತಿಯಲ್ಲಿ ಕೆಟ್ಟ ದಾಗಿಯೇ ಕಾಮೆಂಟ್‌ ಮಾಡುತ್ತಿದ್ದಾರೆ. ಆದರೆ, ಪೂರ್ತಿ ವಿಡಿಯೋ ತುಣುಕು ಹಾಕದೇ, ಬರೀ ತಮಿಳು ಮಾತನಾಡಿದ್ದನ್ನಷ್ಟೇ ಶೇರ್‌ ಮಾಡಿದ್ದಾರೆ. ಪೂರ್ತಿ ವಿಡಿಯೋ ಶಿವಣ್ಣನ ಫ್ಯಾನ್ಸ್‌ಗೆ ಸಿಗುತ್ತಿದ್ದಂತೆ, ಅದನ್ನು ಶೇರ್ ಮಾಡಿ ಕೆಟ್ಟದಾಗಿ ಪೋಸ್ಟ್‌ ಮಾಡಿದವರಿಗೆ ಚಳಿ ಬಿಡಿಸಿದ್ದಾರೆ.

ಶಿವಣ್ಣನ ಪೂರ್ತಿ ವಿಡಿಯೋದಲ್ಲೇನಿದೆ?

"ಎಲ್ಲರಿಗೂ ಕನ್ನಡ ಬರುತ್ತೆ ಅಲ್ವಾ? ನಾವು ಅಲ್ಲಿರಬೇಕಾದರೆ ತಮಿಳು ಮಾತನಾಡುತ್ತಿದ್ದೆವು. ನೀವು ಇಲ್ಲಿರಬೇಕಾದರೆ ಕನ್ನಡ ಮಾತನಾಡ್ತೀರಲ್ಲ ಅದೂ ಮುಖ್ಯ. ಕೊಡು ತೆಗೆದುಕೊಳ್ಳುವ ಸಂಬಂಧ ಹೀಗಿರಬೇಕು. ನಾವು ಎಲ್ಲಿ ಹೋಗ್ತಿವೋ ಅಲ್ಲಿನ ಭಾಷೆಯನ್ನು ನಾವು ಕಲಿಯಬೇಕು. ಅದು ಆ ಭಾಷೆಗೆ ನಾವು ಕೊಡುವ ಮರ್ಯಾದೆ" ಎಂದಿದ್ದಾರೆ. ಶಿವಣ್ಣ ಮಾತನಾಡಿದ ಪೂರ್ತಿ ವಿಡಿಯೋ ಶೇರ್‌ ಮಾಡಿದ ಫ್ಯಾನ್ಸ್‌, ಟೀಕೆ ಮಾಡಿದವರ ಬಾಯಿ ಮುಚ್ಚಿಸಿದ್ದಾರೆ.

"ಭಾಷೆ ಇರುವುದು ಇನ್ನೊಬ್ಬ ಮನುಷ್ಯನಿಗೆ ಅರ್ಥ ಆಗಲಿಕ್ಕೆ. ಬೇರೆ ಭಾಷೆ ನಟರು ನಮ್ಮ ಭಾಷೆ ಮಾತಾಡಿದ್ರೆ ಸಂತೋಷ. ಆದ್ರೆ ನಮ್ಮವರು ಬೇರೆ ಭಾಷೆ ಮಾತಾಗಿದ್ರೆ ದುಃಖ. ಭಾಷಾ ದ್ವೇಷ ನಿಲ್ಲಲಿ. ಎಲ್ಲರೂ ಮನುಷ್ಯರೇ" ಎಂದು ಕೆಲವರು ಹೇಳಿದರೆ, ಇನ್ನು ಕೆಲವರು, "ರಿ ಸ್ವಾಮಿ ಭಾಷೆ ಅನ್ನೋದು ಜನರೊಡನೆ ಸಂವಹನ ಮಾಡೋದಕ್ಕೆ ಇರೋದು, ಅಲ್ಲಿ ಅತಿ ಹೆಚ್ಚಿನ ಭಾಷಿಕರು ಯಾರಿದ್ದರು ಆವರ ಭಾಷೆಯಲ್ಲಿ ಶಿವಣ್ಣ ಮಾತನಾಡಿದ್ದಾರೆ ಅಷ್ಟೇ, ಭಾಷೆಯೂ ಆತ್ಮೀಯತೆ ಹೆಚ್ಚಿಸೋ ವಿಧಾನ ಕೂಡ. ಬಾವಿ ಕಪ್ಪೆ ಆಗಬೇಡಿ ಭಾಷಾ ಅಭಿಮಾನ ಇರಲಿ ದುರಾಭಿಮಾನಿ ಆಗಬೇಡಿ ಅಷ್ಟೇ" ಎಂದು ಶಿವಣ್ಣನ ಬಗ್ಗೆ ಟೀಕೆ ಮಾಡಿದವರಿಗೆ ಟಾಂಗ್‌ ಕೊಟ್ಟಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು