ಕನ್ನಡ ಸುದ್ದಿ  /  ಮನರಂಜನೆ  /  Ott Releases: ಟಿಲ್ಲು ಸ್ಕ್ವೇರ್‌ನಿಂದ ರಣನೀತಿವರೆಗೆ; ಒಟಿಟಿಯಲ್ಲಿ ಈ ವಾರ ಬೊಂಬಾಟ್‌ ಸಿನಿಮಾ, ವೆಬ್‌ ಸರಣಿಗಳದ್ದೇ ಹವಾ

OTT releases: ಟಿಲ್ಲು ಸ್ಕ್ವೇರ್‌ನಿಂದ ರಣನೀತಿವರೆಗೆ; ಒಟಿಟಿಯಲ್ಲಿ ಈ ವಾರ ಬೊಂಬಾಟ್‌ ಸಿನಿಮಾ, ವೆಬ್‌ ಸರಣಿಗಳದ್ದೇ ಹವಾ

OTT releases this week: ಈ ವಾರ ಒಟಿಟಿಯಲ್ಲಿ ಹಲವು ಹೊಚ್ಚಹೊಸ ಸಿನಿಮಾಗಳು, ವೆಬ್‌ಸರಣಿಗಳು ಬಿಡುಗಡೆಯಾಗಿವೆ. ಟಿಲ್ಲು ಸ್ಕ್ವೇರ್‌, ರಾಜನೀತಿ: ಬಾಲಕೋಟ್‌ ಆಂಡ್‌ ಬಿಹಾಂಡ್‌ ಸೇರಿದಂತೆ ಹಲವು ಹೊಸ ಸಿನಿಮಾಗಳು, ವೆಬ್‌ ಸರಣಿಗಳನ್ನು ಮನೆಯಲ್ಲಿಯೇ ಅಥವಾ ಆನ್‌ಲೈನ್‌ನಲ್ಲಿಯೇ ನೋಡಬಹುದಾಗಿದೆ.

OTT releases: ಟಿಲ್ಲು ಸ್ಕ್ವೇರ್‌ನಿಂದ ರಾಜ್‌ನೀತಿವರೆಗೆ; ಒಟಿಟಿಯಲ್ಲಿ ಈ ವಾರ ರಿಲೀಸ್‌
OTT releases: ಟಿಲ್ಲು ಸ್ಕ್ವೇರ್‌ನಿಂದ ರಾಜ್‌ನೀತಿವರೆಗೆ; ಒಟಿಟಿಯಲ್ಲಿ ಈ ವಾರ ರಿಲೀಸ್‌

OTT releases this week: ಈ ಬಿಸಿಗಾಳಿಗೆ ಮನೆಯಿಂದ ಹೊರಹೋಗುವುದು ಕಷ್ಟ ಎನ್ನುವುದು ಬಹುತೇಕರ ಅಭಿಪ್ರಾಯ. ಈ ಸಮಯದಲ್ಲಿ ಒಟಿಟಿಯಲ್ಲಿ ಸಿನಿಮಾ, ವೆಬ್‌ ಸರಣಿಗಳನ್ನು ನೋಡಲು ಹೆಚ್ಚಿನವರು ಆಸಕ್ತಿವಹಿಸುತ್ತಾರೆ. ಲಪಟಾ ಲೇಡಿಸ್‌ನಿಂದ ಸ್ಪೈ ಥ್ರಿಲ್ಲರ್ ದಿ ವೇಲ್‌ ಸ್ಟಾರ್ಟಿಂಗ್‌ ಎಲಿಜಬೆತ್‌ ಮೋಸ್‌ವರೆಗೆ ಹಲವು ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್‌ ಆಗುತ್ತಿವೆ. ದಿ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋನಲ್ಲಿ ಅಮಿರ್‌ ಖಾನ್‌ ಗೆಸ್ಟ್‌ ಆಗಿ ಬರುತ್ತಿದ್ದಾರೆ. ಬನ್ನಿ ಈ ವಾರ ಒಟಿಟಿಯಲ್ಲಿ ಯಾವೆಲ್ಲ ಹೊಸ ಸಿನಿಮಾ, ವೆಬ್‌ಸರಣಿಗಳು, ಶೋಗಳು ರಿಲೀಸ್‌ ಆಗಲಿವೆ ಎಂದು ನೋಡೋಣ.

ಟ್ರೆಂಡಿಂಗ್​ ಸುದ್ದಿ

ಲಪಟಾ ಲೇಡಿಸ್‌- ನೆಟ್‌ಫ್ಲಿಕ್ಸ್‌

ಕಿರಣ್‌ ರಾವ್‌ ನಿರ್ದೇಶನದ ಲಪಟಾ ಲೇಡಿಸ್‌ ಸಿನಿಮಾವು ಒಟಿಟಿಯಲ್ಲಿ ರಿಲೀಸ್‌ ಆಗಿದೆ. ಸಿನಿವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕ ವಿಮರ್ಶೆ ಪಡೆದ ಕಿರಣ್‌ ರಾವ್‌ ನಿರ್ದೇಶನದ ಈ ಸಿನಿಮಾ ಇದೀಗ ಒಟಿಟಿಗೆ ಲಗ್ಗೆಯಿಟ್ಟಿದೆ. ಅಮಿರ್‌ ಖಾನ್‌ ಅವರು ಅಮಿರ್‌ ಖಾನ್‌ ಪ್ರೊಡಕ್ಷನ್‌ನಡಿ ಲಪಟಾ ಲೇಡಿಸ್‌ ನಿರ್ಮಾಣ ಮಾಡಲಾಗಿದೆ. ಈ ಕಾಮಿಡಿ ಡ್ರಾಮಾವು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಈ ಕುರಿತು ನೆಟ್‌ಫ್ಲಿಕ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ನೀಡಿದೆ.

ಟಿಲ್ಲು ಸ್ಕ್ವೇರ್‌- ನೆಟ್‌ಫ್ಲಿಕ್ಸ್‌

ಬಹುನಿರೀಕ್ಷಿತ ಟಿಲ್ಲು ಸ್ಕ್ವೇರ್‌ ಒಟಿಟಿಯಲ್ಲಿ ರಿಲೀಸ್‌ ಆಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಇದೇ ಏಪ್ರಲ್‌ 26ರಂದು ಸಿದ್ದು ಜೊನ್ನಲಗಡ್ಡ ಮತ್ತು ಅನುಪಮಾ ಪರಮೇಶ್ವರನ್ ನಟನೆಯ ಟಿಲ್ಲು ಸ್ಕ್ವೇರ್‌ ಸಿನಿಮಾ ರಿಲೀಸ್‌ ಆಗಿದೆ. ಮಾರ್ಚ್‌ 29ರಂದು ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇತ್ತೀಚಿನ ವರದಿಗಳ ಪ್ರಕಾರ ಟಿಲ್ಲು ಸ್ಕ್ವೇರ್‌ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ 119 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈಗ ಈ ಗಳಿಕೆ 120 ಕೋಟಿ ದಾಟಿದೆ. ಕಳೆದ ಕೆಲವು ದಿನಗಳಿಂದ ಟಿಲ್ಲು ಸ್ಕ್ವೇರ್‌ ಕಲೆಕ್ಷನ್‌ ಕಡಿಮೆಯಾಗಿದೆ. ಹೀಗಾಗಿ, ಒಟಿಟಿಯಲ್ಲಿ ಆಗಿದೆ.

ದಿ ವೇಲ್‌- ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌

ಹೊಸ ಸ್ಪೈ ಥ್ರಿಲ್ಲರ್ ಸರಣಿ ದಿ ವೇಲ್‌ನಲ್ಲಿ ಹ್ಯಾಂಡ್‌ಮೇಯ್ಡ್‌ನ ಟೇಲ್-ಸ್ಟಾರ್ ಎಲಿಜಬೆತ್ ಮಾಸ್ ಅವರು ಎಂಐ6 ಏಜೆಂಟ್ ಆಗಿ ನಟಿಸಿದ್ದಾರೆ. ಇದು ಏಪ್ರಿಲ್ 30 ರಂದು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ. ಇಸ್ತಾಂಬುಲ್‌ನಿಂದ ಪ್ಯಾರಿಸ್ ಮತ್ತು ಲಂಡನ್‌ಗೆ ಹೋಗುವ ರಸ್ತೆಯಲ್ಲಿ ಸತ್ಯ ಮತ್ತು ಸುಳ್ಳುಗಳ ಮಾರಣಾಂತಿಕ ಆಟವನ್ನು ನೋಡಬಹುದು. ಒಬ್ಬಳ ಬಳಿ ರಹಸ್ಯವಿದೆ. ಇನ್ನೊಬ್ಬಳು ಸಾವಿರಾರು ಜೀವಗಳನ್ನು ಕಳೆದುಕೊಳ್ಳುವ ಮೊದಲು ಅದನ್ನು ಬಹಿರಂಗಪಡಿಸುವ ಉದ್ದೇಶವನ್ನು ಹೊಂದಿದ್ದಾಳೆ.

ದಿ ಗ್ರೇಟ್‌ ಇಂಡಿಯನ್‌ ಕಪಿಲ್‌ ಶೋ- ನೆಟ್‌ಫ್ಲಿಕ್ಸ್‌ನಲ್ಲಿ ಅಮಿರ್‌ ಖಾನ್‌

ಅಮೀರ್ ಖಾನ್ ಅವರು ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನ ಇತ್ತೀಚಿನ ಸಂಚಿಕೆಯಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಈ ಸ್ವರೂಪದ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಸಂಚಿಕೆಯ ಪ್ರೋಮೋವನ್ನು ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ತನ್ನ ಮಕ್ಕಳು ತನ್ನ ಮಾತನ್ನು ಕೇಳುವುದಿಲ್ಲ ಎಂದು ಅಮಿರ್‌ ಖಾನ್‌ ಶೋನಲ್ಲಿ ದೂರಿದ್ದಾರೆ. ಕಾರ್ಯಕ್ರಮಕ್ಕೆ ಯಾವ ಬಟ್ಟೆ ತೊಡಬೇಕು ಎಂಬ ಬಗ್ಗೆ ಮನೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ ಎಂದೂ ಅವರು ಹೇಳಿದ್ದಾರೆ.

ಅಡ್ವೋಕೇಟ್‌ ಅಚಿಂತ ಐಚ್ - ಹೋಯ್ಚೋಯ್

ಅಡ್ವೊಕೇಟ್ ಅಚಿಂತ ಐಚ್ ಹೊಸ ಸರಣಿಯಾಗಿದ್ದು, ಏಪ್ರಿಲ್ 26 ರಂದು ಹೋಯ್ಚೋಯ್ ನಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ ರಿತ್ವಿಕ್ ಚಕ್ರವರ್ತಿ, ಶಾಶ್ವತ ಚಟರ್ಜಿ, ಸುರಂಗನಾ ಬಂಡೋಪಾಧ್ಯಾಯ ಮತ್ತು ಖೇಯಾ ಚಟ್ಟೋಪಾಧ್ಯಾಯ ನಟಿಸಿದ್ದಾರೆ.

ಕ್ರಾಕ್ - ಡಿಸ್ನಿ+ ಹಾಟ್‌ಸ್ಟಾರ್

ಪವರ್‌ ಜಮ್ವಾಲ್ ಅವರ ಆಕ್ಷನ್-ಪ್ಯಾಕ್ಡ್ ಥ್ರಿಲ್ಲರ್ ಸಿನಿಮಾವನ್ನು ಆದಿತ್ಯ ದತ್ ಅವರು ನಿರ್ಮಾಣ ಮಾಡಿದ್ದಾರೆ. ಕ್ರಾಕ್ ಎಂಬುದು ಮುಂಬೈನ ಕೊಳೆಗೇರಿಯಿಂದ ಭೂಗತ ಜಗತ್ತಿಗೆ ವ್ಯಕ್ತಿಯ ಪ್ರಯಾಣದ ಪ್ರಯಾಣವಾಗಿದೆ. ಅವನು ತನ್ನ ಸಹೋದರ ಕಣ್ಮರೆಯಾಗಲು ಕಾರಣವನ್ನು ಸಹ ಪತ್ತೆಹಚ್ಚುತ್ತಾನೆ. ಚಿತ್ರದಲ್ಲಿ ಅರ್ಜುನ್ ರಾಂಪಾಲ್, ನೋರಾ ಫತೇಹಿ ಮತ್ತು ಆಮಿ ಜಾಕ್ಸನ್ ಕೂಡ ನಟಿಸಿದ್ದಾರೆ.

ರಣನೀತಿ: ಬಾಲಾಕೋಟ್‌ ಆಂಡ್‌ ಬಿಯಾಂಡ್‌

ಸಂತೋಷ್‌ ಸಿಂಗ್‌ರ ರಣನೀತಿ: ಬಾಲಾಕೋಟ್‌ ಆಂಡ್‌ ಬಿಯಾಂಡ್‌ ವೆಬ್‌ ಸರಣಿಯು ಏಪ್ರಿಲ್‌ 25ರಿಂದ ಜಿಯೋ ಸಿನಿಮಾದಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಈಗಾಗಲೇ ಇದರ ಟ್ರೇಲರ್‌ ಆನ್‌ಲೈನ್‌ನಲ್ಲಿ ರಿಲೀಸ್‌ ಆಗಿದೆ. ಸಾಕಷ್ಟು ಜನರು ಈ ವೆಬ್‌ ಸರಣಿ ನೋಡಿ ಉತ್ತಮವಾಗಿದೆ ಎನ್ನುತ್ತಿದ್ದಾರೆ.

ಹೀಗೆ ಒಟಿಟಿಯಲ್ಲಿ ಈ ವಾರ ಹಲವು ಹೊಸ ಸಿನಿಮಾ, ವೆಬ್‌ಸರಣಿಗಳು, ಶೋಗಳು ಲಭ್ಯವಿದ್ದು, ಮನೆಯಲ್ಲಿಯೇ ಕುಳಿತು ಆರಾಮವಾಗಿ ವೀಕೆಂಡ್‌ ಅನ್ನು ಕಳೆಯಬಹುದಾಗಿದೆ.

IPL_Entry_Point