logo
ಕನ್ನಡ ಸುದ್ದಿ  /  ಮನರಂಜನೆ  /  Uttarakaanda Movie: ‘ಉತ್ತರಕಾಂಡ’ ಸಿನಿಮಾ ನಿಲ್ಲುವ ಪ್ರಶ್ನೆಯೇ ಇಲ್ಲ; ನಿರ್ಮಾಪಕ ಕಾರ್ತಿಕ್‍ ಗೌಡ ಸ್ಪಷ್ಟನೆ

Uttarakaanda Movie: ‘ಉತ್ತರಕಾಂಡ’ ಸಿನಿಮಾ ನಿಲ್ಲುವ ಪ್ರಶ್ನೆಯೇ ಇಲ್ಲ; ನಿರ್ಮಾಪಕ ಕಾರ್ತಿಕ್‍ ಗೌಡ ಸ್ಪಷ್ಟನೆ

Suma Gaonkar HT Kannada

Dec 03, 2024 10:16 AM IST

google News

‘ಉತ್ತರಕಾಂಡ’ ಸಿನಿಮಾ ನಿಲ್ಲುವ ಪ್ರಶ್ನೆಯೇ ಇಲ್ಲ

    • ಶಿವರಾಜಕುಮಾರ್ ಹಾಗೂ ಡಾಲಿ ಧನಂಜಯ್ ಅಭಿನಯದ ‘ಉತ್ತರಕಾಂಡ’ ಸಿನಿಮಾ ಬಗ್ಗೆ ಸದ್ಯ ಯಾವುದೇ ಸುದ್ದಿ ಇಲ್ಲ ಪ್ರಚಾರವೂ ಇಲ್ಲ ಎಂಬ ಕಾರಣಕ್ಕೆ ಈ ಸಿನಿಮಾ ತೆರೆಗೆ ಬರುವುದಿಲ್ಲ ಎಂಬ ಅನುಮಾನ ಸೃಷ್ಟಿಯಾಗಿತ್ತು. ಈ ಅನುಮಾನಕ್ಕೆ ನಿರ್ಮಾಪಕ ಕಾರ್ತಿಕ್‍ ಗೌಡ ಸ್ಪಷ್ಟನೆ ನೀಡಿದ್ದಾರೆ.
‘ಉತ್ತರಕಾಂಡ’ ಸಿನಿಮಾ ನಿಲ್ಲುವ ಪ್ರಶ್ನೆಯೇ ಇಲ್ಲ
‘ಉತ್ತರಕಾಂಡ’ ಸಿನಿಮಾ ನಿಲ್ಲುವ ಪ್ರಶ್ನೆಯೇ ಇಲ್ಲ

Uttarakaanda Movie: ಶಿವರಾಜಕುಮಾರ್‍, ಧನಂಜಯ್‍ ಅಭಿನಯದ ‘ಉತ್ತರಕಾಂಡ’ ಚಿತ್ರದ ಚಿತ್ರೀಕರಣ ಈ ವರ್ಷದ ಏಪ್ರಿಲ್ನಲ್ಲೇ ಪ್ರಾರಂಭವಾಗಿತ್ತು. ಚಿತ್ರತಂಡದವರು ದಿನಕ್ಕೊಬ್ಬರಂತೆ ಚಿತ್ರದ ಪಾತ್ರಧಾರಿಗಳನ್ನು ಸೋಷಿಯಲ್‍ ಮೀಡಿಯಾದಲ್ಲಿ ಪರಿಚಯಿಸಿದ್ದೂ ಆಯಿತು. ಆದರೆ, ಒಂದು ಹಂತದಲ್ಲಿ ಚಿತ್ರದ ಸುದ್ದಿಯೇ ಇರಲಿಲ್ಲ. ಹಾಗಾಗಿ, ಚಿತ್ರವನ್ನು ನಿಲ್ಲಿಸಲಾಗಿದೆ ಎಂಬ ಮಾತುಗಳು ಸೋಷಿಯಲ್‍ ಮೀಡಿಯಾದಲ್ಲಿ ಕೇಳಿಬಂತು. ಅದರಲ್ಲೂ, ಯಾವಾಗ KRG ಸ್ಟುಡಿಯೋಸ್‍ ಸಂಸ್ಥೆಯು ‘ಉತ್ತರಕಾಂಡ’ ಚಿತ್ರವನ್ನು ಪಕ್ಕಕ್ಕಿಟ್ಟು, ಯುವ ರಾಜಕುಮಾರ್‍ ಅಭಿನಯದ ‘ಎಕ್ಕ’ ಚಿತ್ರವನ್ನು ಪ್ರಾರಂಭಿಸಿತೋ, ಆಗ ಚಿತ್ರ ನಿಂತಿದೆ ಎಂಬ ಗುಸುಗುಸು ಹೆಚ್ಚಾಯಿತು.ಆದರೆ, ಯಾವುದೇ ಕಾರಣಕ್ಕೂ ಚಿತ್ರ ನಿಂತಿಲ್ಲ ಮತ್ತು ‘ಎಕ್ಕ’ ಚಿತ್ರ ಮುಗಿದ ನಂತರ ‘ಉತ್ತರಕಾಂಡ’ ಶುರುವಾಗಲಿದೆ ಎಂದು ನಿರ್ಮಾಪಕ ಕಾರ್ತಿಕ್‍ ಗೌಡ ಸ್ಪಷ್ಟಪಡಿಸಿದ್ದಾರೆ.

ಎಕ್ಕ ಚಿತ್ರ ಮಗಿದ ಮೇಲೆ ಉತ್ತರಕಾಂಡ ಮತ್ತೆ ಆರಂಭ

ಇತ್ತೀಚೆಗೆ ‘ಎಕ್ಕ’ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಈ ಕುರಿತು ಮಾತನಾಡಿರುವ ಕಾರ್ತಿಕ್‍, ‘’ಉತ್ತರಕಾಂಡ’ ನಿಂತಿಲ್ಲ. ‘ಎಕ್ಕ’ ಚಿತ್ರವನ್ನು ಮುಗಿಸಿ, ಆ ಚಿತ್ರವನ್ನು ಕೈಗೆತ್ತಿಕೊಳ್ಳುತ್ತೇವೆ. ಆ ಚಿತ್ರ ಸದ್ಯಕ್ಕೆ ನಿಂತಿರುವ ಕಾರಣ, ಶಿವರಾಜಕುಮಾರ್‍ ಅವರ ಆರೋಗಯ ಸರಿ ಇಲ್ಲ. ಅವರು ಸದ್ಯ ರೆಸ್ಟ್ನಲ್ಲಿದ್ದಾರೆ. ಮೇಲಾಗಿ ಇದೊಂದು ಬಹುತಾರಾಗಣದ ಚಿತ್ರ. ಹಲವು ಜನಪ್ರಿಯ ನಟ-ನಟಿಯರು ಈ ಚಿತ್ರದಲ್ಲಿ ನಟಿಸುತತಿದ್ದಾರೆ. ಶಿವರಾಜಕುಮಾರ್, ಧನಂಜಯ್‍ ಅಭಿನಯದ ಹಲವು ದೃಶ್ಯಗಳಿವೆ. ಒಂದೊಂದು ದೃಶ್ಯದಲ್ಲಿ ಹಲವು ನಟ-ನಟಿಯರು ನಟಿಸುತ್ತಿದ್ದಾರೆ. ಅವರ ಡೇಟ್ಸ್ಗಳನ್ನು ಹೊಂದಿಸಿ ಚಿತ್ರೀಕರಣ ಮಾಡಬೇಕಿದೆ. ಎಲ್ಲರ ಡೇಟ್‍ಗಳು ಒಟ್ಟಿಗೆ ಬೇಕಿರುವುದರಿಂಧ ಮತ್ತು ಸದ್ಯ ಶಿವರಾಜಕುಮಾರ್‍ ಅವರ ಆರೋಗ್ಯ ಸರಿ ಇಲ್ಲದ ಕಾರಣ, ಚಿತ್ರವನ್ನು ಸದ್ಯದ ಮಟ್ಟಿಗೆ ನಿಲ್‍ಲಿಸಿದ್ದೇವೆ’ ಎನ್ನುತ್ತಾರೆ.

‘ಉತ್ತರಕಾಂಡ’ ಖಂಡಿತಾ ಮುಗಿದು, ಬಿಡುಗಡೆಯಾಗುತ್ತದೆ ಎನ್ನುವ ಅವರು, ‘ಚಿತ್ರ ಯಾವುದೇ ಕಾರಣಕ್ಕೂ ನಿಂತಿಲ್ಲ. ಡಾಲಿ ಮದುವೆ ಮತ್ತು ಶಿವಣ್ಣ ಚಿಕಿತ್ಸೆ ನಂತರ ಖಂಡಿತಾ ಚಿತ್ರ ಮುಗಿದು, ಬಿಡುಗಡೆಯಾಗಲಿದೆ. ಇದು ನಮ್ಮ ಸಂಸ್ಥೆಯ ಮಹತ್ವಾಕಾಂಕ್ಷೆಯ ಚಿತ್ರ. ಯಾವುದೇ ಕಾರಣಕ್ಕೂ ನಿಲ್ಲುವ ಪ್ರಶ್ನೆಯೇ ಇಲ್ಲ. ಚಿತ್ರ ನಿಂತಿದೆ ಎಂಬ ಗಾಳಿಸುದ್ದಿಗಳನ್ನು ನಂಬಬೇಡಿ’ ಎನ್ನುತ್ತಾರೆ ಕಾರ್ತಿಕ್‍.

ಒಂದಿಲ್ಲೊಂದು ವಿಘ್ನ

ಉತ್ತರಕಾಂಡ’ ಚಿತ್ರವು ಘೋಷಣೆಯಾದಾಗಿನಿಂದ ಒಂದಲ್ಲ ಒಂದು ವಿಘ್ನಗಳು ಎದುರಾಗುತ್ತಲೇ ಇವೆ. ಚಿತ್ರ ಘೋಷಣೆಯಾಗಿ ಎರಡು ವರ್ಷಗಳ ನಂತರ ಚಿತ್ರೀಕರಣ ಪ್ರಾರಂಭವಾಯ್ತು. ಈ ಮಧ್ಯೆ, ಚಿತ್ರದ ಮುಹೂರ್ತವೂ ಆಗಿತ್ತು. ಚಿತ್ರದ ನಾಯಕಿಯಾಗಿದ್ದ ರಮ್ಯಾ, ಚಿತ್ರತಂಡದಿಂದ ಹೊರನಡೆದು, ಅವರ ಜಾಗಕ್ಕೆ ಐಶ್ವರ್ಯಾ ರಾಜೇಶ್‍ ಬಂದರು. ಬರೀ ನಾಯಕಿ ರಮ್ಯಾ ಮಾತ್ರ ಅಲ್ಲ, ಚಿತ್ರ ತಡವಾದ್ದರಿಂದ ಛಾಯಾಗ್ರಾಹಕ ಅರವಿಂದ್‍ ಕಶ್ಯಪ್‍, ಸಂಗೀತ ನಿರ್ದೇಶಕ ಚರಣ್‍ ರಾಜ್‍ ಸಹ ಬದಲಾಗಿದ್ದಾರೆ. ಅವರ ಜಾಗಕ್ಕೆ ಛಾಯಾಗ್ರಾಹಕ ಅದ್ವೈತ ಗುರುಮೂರ್ತಿ ಮತ್ತು ಬಾಲಿವುಡ್‍ನ ಜನಪ್ರಿಯ ಸಂಗೀತ ನಿರ್ದೇಶಕ ಅಮಿತ್‍ ತ್ರಿವೇದಿ ಬಂದಿದ್ದಾರೆ.

‘ಉತ್ತರಕಾಂಡ’ ಪಾತ್ರವರ್ಗ

‘ಉತ್ತರಕಾಂಡ’ ಚಿತ್ರವನ್ನು KRG ಸ್ಟುಡಿಯೋಸ್‍ ಮೂಲಕ ಕಾರ್ತಿಕ್‍ ಗೌಡ ಮತ್ತು ಯೋಗಿ ಜಿ ರಾಜ್‍ ನಿರ್ಮಾಣ ಮಾಡುತ್ತಿದ್ದು, ರೋಹಿತ್‍ ಪದಕಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಧನಂಜಯ್‍, ಶಿವರಾಜಕುಮಾರ್‍, ದಿಗಂತ್‍, ಭಾವನಾ ಮೆನನ್‍, ಐಶ್ವರ್ಯಾ ರಾಜೇಶ್‍, ಯೋಗರಾಜ್‍ ಭಟ್‍, ಉಮಾಶ್ರೀ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ