ಕನ್ನಡ ಸುದ್ದಿ  /  ಮನರಂಜನೆ  /  Shiva Rajkumar Birthday: ಉತ್ತರಕಾಂಡದ ಮಾಲೀಕ ಬಲು ಖಡಕ್‌; ಶಿವಣ್ಣನ ಬರ್ತ್‌ಡೇಗೂ ಮುನ್ನವೇ ಫಸ್ಟ್‌ ಲುಕ್‌ ರಿಲೀಸ್

Shiva Rajkumar Birthday: ಉತ್ತರಕಾಂಡದ ಮಾಲೀಕ ಬಲು ಖಡಕ್‌; ಶಿವಣ್ಣನ ಬರ್ತ್‌ಡೇಗೂ ಮುನ್ನವೇ ಫಸ್ಟ್‌ ಲುಕ್‌ ರಿಲೀಸ್

ಶಿವರಾಜ್‌ಕುಮಾರ್‌ ಬರ್ತ್‌ಡೇ ಪ್ರಯುಕ್ತ ಉತ್ತರಕಾಂಡ ಚಿತ್ರದಿಂದ ಶಿವಣ್ಣನ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ರೋಹಿತ್‌ ಪದಕಿ ನಿರ್ದೇಶನದ ಈ ಸಿನಿಮಾದಲ್ಲಿ ಮಾಲೀಕ ಎಂಬ ಪಾತ್ರದಲ್ಲಿ ಸೆಂಚೂರಿ ಸ್ಟಾರ್‌ ಖಡಕ್‌ ಆಗಿಯೇ ಕಾಣಿಸಿಕೊಂಡಿದ್ದಾರೆ.

Shiva Rajkumar Birthday: ಉತ್ತರಕಾಂಡದ ಮಾಲೀಕ ಬಲು ಖಡಕ್‌; ಶಿವಣ್ಣನ ಬರ್ತ್‌ಡೇಗೂ ಮುನ್ನವೇ ಫಸ್ಟ್‌ ಲುಕ್‌ ರಿಲೀಸ್
Shiva Rajkumar Birthday: ಉತ್ತರಕಾಂಡದ ಮಾಲೀಕ ಬಲು ಖಡಕ್‌; ಶಿವಣ್ಣನ ಬರ್ತ್‌ಡೇಗೂ ಮುನ್ನವೇ ಫಸ್ಟ್‌ ಲುಕ್‌ ರಿಲೀಸ್

Uttarakaanda: ರೋಹಿತ್‌ ಪದಕಿ ನಿರ್ದೇಶನದಲ್ಲಿ ಉತ್ತರಕಾಂಡ ಸಿನಿಮಾ ಮೂಡಿಬರುತ್ತಿದೆ. ಡಾಲಿ ಧನಂಜಯ್‌ ರಗಡ್‌ ಅವತಾರದಲ್ಲಿಯೇ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಒಂದಷ್ಟು ಭಾಗದ ಚಿತ್ರೀಕರಣವೂ ಮುಗಿದಿದೆ. ಪಾತ್ರಗಳ ವಿಚಾರವಾಗಿಯೂ ಈ ಉತ್ತರಕಾಂಡ ಹೆಚ್ಚು ಕುತೂಹಲದ ಜತೆಗೆ ನಿರೀಕ್ಷೆ ಮೂಡಿಸಿದೆ. ಹೀಗಿರುವಾಗಲೇ ಇದೇ ಬಳಗಕ್ಕೆ ಶಿವರಾಜ್‌ಕುಮಾರ್‌ ಎಂಟ್ರಿಯಾಗ್ತಿದ್ದಂತೆ, ಉತ್ತರಕಾಂಡ ಸಿನಿಮಾದ ಹೈಪ್‌ ಮುಗಿಲು ಮುಟ್ಟಿತ್ತು. ಇದೀಗ ಈ ಚಿತ್ರದಲ್ಲಿ ಶಿವಣ್ಣನ ಲುಕ್ ಹೇಗಿರಲಿದೆ ಎಂಬ ಕೌತುಕಕ್ಕೆ ಬ್ರೇಕ್‌ ಬಿದ್ದಿದೆ.

ಹೌದು, ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಚಿತ್ರ ಉತ್ತರಕಾಂಡ ಇದೀಗ ಬಹು ಬೇಡಿಕೆಯಲ್ಲಿದ್ದ ಲುಕ್ ಒಂದನ್ನು ಬಿಡುಗಡೆ ಮಾಡಿದೆ. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ (ಜುಲೈ 12) ಅಂಗವಾಗಿ ಒಂದು ದಿನ ಮುಂಚಿತವಾಗಿಯೇ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಮಾಲೀಕ ಹೆಸರಿನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಶಿವಣ್ಣ ತಮ್ಮ ಲುಕ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪ್ರತಿ ಒಂದು ಪಾತ್ರದಲ್ಲೂ, ವಿಶಿಷ್ಟವಾಗಿ ಕಾಣುವ ಶಿವಣ್ಣ, ಇದೀಗ ಉತ್ತರಕಾಂಡದಲ್ಲೂ ತಮ್ಮ ಲುಕ್ ಮೂಲಕ ಎಲ್ಲರ ಮನೆ ಮಾತಾಗಿದ್ದಾರೆ‌. ಬಹು ನಿರೀಕ್ಷಿತ ಚಿತ್ರ ಉತ್ತರಕಾಂಡ ಒಂದು ಆಕ್ಷನ್‌ ಡ್ರಾಮಾ ಚಿತ್ರವಾಗಿದ್ದು, ಇದು ರೋಹಿತ್‌ ಪದಕಿಯ ಕೃತಿಯಾಗಿದೆ. ಚಿತ್ರಕ್ಕೆ ಖ್ಯಾತ ಗಾಯಕ, ಸಂಯೋಜಕ ಅಮಿತ್‌ ತ್ರಿವೇದಿ ಸಂಗೀತ ಸಂಯೋಜನೆ ಮಾಡಿದ್ದು, ಅಧ್ವೈತ್ ಗುರುಮೂರ್ತಿ ಛಾಯಾಗ್ರಹಣ ಮಾಡಿದ್ದಾರೆ.

ವಿಶ್ವಾಸ್‌ ಕಶ್ಯಪ್‌ ಪ್ರೊಡಕ್ಷನ್‌ ವಿನ್ಯಾಸ ಮಾಡಿದ್ದು, ಅನಿಲ್ ಅನಿರುದ್ಧ್ ಸಂಕಲನವಿದೆ. ಕಾರ್ತಿಕ್‌ ಗೌಡ ಮತ್ತು ಯೋಗಿ ಜಿ ರಾಜ್‌ ಕೆ.ಆರ್.ಜಿ. ಸ್ಟುಡಿಯೋಸ್‌ ಬ್ಯಾನರ್‌ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಬಹು ಪ್ರಮುಖ ತಾರಾಬಳಗವನ್ನು ಹೊಂದಿರುವ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ ಕುಮಾರ್‌, ನಟ ರಾಕ್ಷಸ ಡಾಲಿ ಧನಂಜಯ, ಭಾವನಾ ಮೆನನ್‌, ಐಶ್ವರ್ಯ ರಾಜೇಶ್‌, ದಿಗಂತ್‌ ಮುಂತಾದವರು ಬಣ್ಣ ಹಚ್ಚಿದ್ದಾರೆ.