logo
ಕನ್ನಡ ಸುದ್ದಿ  /  ಮನರಂಜನೆ  /  Raghava Lawrence‌ Touched Child Feet: ಬಾಲಕನಿಗೆ ನಮಸ್ಕರಿಸಿದ ರಾಘವ ಲಾರೆನ್ಸ್‌...ಟ್ವೀಟ್‌ ಮೂಲಕ ಕಾರಣ ಕೂಡಾ ತಿಳಿಸಿದ ನಟ..!

Raghava Lawrence‌ touched child feet: ಬಾಲಕನಿಗೆ ನಮಸ್ಕರಿಸಿದ ರಾಘವ ಲಾರೆನ್ಸ್‌...ಟ್ವೀಟ್‌ ಮೂಲಕ ಕಾರಣ ಕೂಡಾ ತಿಳಿಸಿದ ನಟ..!

HT Kannada Desk HT Kannada

Sep 20, 2022 04:14 PM IST

ಬಾಲಕನ ಕಾಲಿಗೆ ನಮಸ್ಕರಿಸುತ್ತಿರುವ ರಾಘವ ಲಾರೆನ್ಸ್

    • ನನ್ನ ಜೀವನದಲ್ಲಿ ಆದ ಬದಲಾವಣೆ ಇದು. ಇನ್ಮುಂದೆ ನಾನು ಯಾರಿಗೆ ಸಹಾಯ ಮಾಡಿದರೂ ಅವರು ನನ್ನ ಕಾಲಿಗೆ ಬೀಳಬಾರದು ಎಂದು ನಾನು ಬಯಸುತ್ತೇನೆ. ಆದರೆ ನಾನೇ ಅವರ ಕಾಲಿಗೆ ಬಿದ್ದು ಸೇವೆ ಮಾಡುತ್ತೇನೆ'' ಎಂದು ಬರೆದುಕೊಂಡಿದ್ದಾರೆ.
ಬಾಲಕನ ಕಾಲಿಗೆ ನಮಸ್ಕರಿಸುತ್ತಿರುವ ರಾಘವ ಲಾರೆನ್ಸ್
ಬಾಲಕನ ಕಾಲಿಗೆ ನಮಸ್ಕರಿಸುತ್ತಿರುವ ರಾಘವ ಲಾರೆನ್ಸ್ (PC: Raghava Lawrence Twitter)

ತಮಿಳು ನಟ ರಾಘವ ಲಾರೆನ್ಸ್‌, ನಟನಾಗಿ ಮಾತ್ರವಲ್ಲ ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದಾರೆ. ತಾವು ದುಡಿದ ಹಣವನ್ನು ದುಂದು ವೆಚ್ಚ ಮಾಡದೆ, ಅರ್ಧ ಭಾಗವನ್ನು ಜನರ ಸೇವೆಗೆ ತೆಗೆದಿಡುತ್ತಾರೆ. ಚಿತ್ರೀಕರಣದಿಂದ ಸ್ವಲ್ಪ ಬಿಡುವು ದೊರೆತರೆ ಸಾಕು ತಮ್ಮ ಟ್ರಸ್ಟ್‌ ಮಕ್ಕಳೊಂದಿಗೆ ಕಾಲ ಕಳೆಯುತ್ತಾರೆ. ಇತ್ತೀಚೆಗೆ ತಮ್ಮ ಸಿಕ್ಸ್‌ ಪ್ಯಾಕ್‌ ಫೋಟೋ ಹಂಚಿಕೊಂಡು ಗಮನ ಸೆಳೆದಿದ್ದ ರಾಘವ ಲಾರೆನ್ಸ್‌ ಇದೀಗ ಮತ್ತೆ ಸುದ್ದಿಯಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮಲಯಾಳಂನ ಮಂಜುಮ್ಮೆಲ್‌ ಬಾಯ್ಸ್‌ ಸಿನಿಮಾ ನಿಜಕ್ಕೂ ಚೆನ್ನಾಗಿದೆಯಾ? ಅಥವಾ ಬರೀ ಹೈಪಾ? ಹೀಗಿದೆ ಚಿತ್ರ ವಿಮರ್ಶೆ

ಕೋಟಿ ಸಿನಿಮಾ ಖಳನಾಯಕ ‘ದಿನೂ ಸಾವ್ಕಾರ್’ ಫಸ್ಟ್‌ ಲುಕ್‌ ರಿಲೀಸ್‌; ಡಾಲಿ ಧನಂಜಯ್ ಎದುರು ರಮೇಶ್‌ ಇಂದಿರಾ ಅಬ್ಬರ

Sathyam: ಸತ್ಯಂ ಚಿತ್ರದಲ್ಲಿ ತುಳುನಾಡ ದೈವದ ಕಥೆ; ಸೆನ್ಸಾರ್‌ ಪಾಸ್‌, ಶೀಘ್ರದಲ್ಲಿ ಚಿತ್ರಮಂದಿರದಲ್ಲಿ ‘ಗಣಪ’ನ ಸಿನಿಮಾ

Kangaroo Review: ಕ್ರೈಂ ಥ್ರಿಲ್ಲರ್‌ನಲ್ಲಿ ಮೇಳೈಸಿದ ಹಾರರ್‌ ಅನುಭವ! ಕಾಂಗರೂ ಚಿತ್ರದಲ್ಲಿ ಕಾಡಲಿದೆ ಕರುಳು ಬಳ್ಳಿಯ ಕಥೆ

ರಾಘವ ಲಾರೆನ್ಸ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಈ ಪೋಸ್ಟ್‌ನಲ್ಲಿ ಅವರು ಬಾಲಕನೊಬ್ಬನ ಕಾಲಿಗೆ ನಮಸ್ಕರಿಸುತ್ತಿದ್ದಾರೆ. ''ನನ್ನ ಜೀವನದಲ್ಲಿ ಆದ ಬದಲಾವಣೆ ಇದು. ಇನ್ಮುಂದೆ ನಾನು ಯಾರಿಗೆ ಸಹಾಯ ಮಾಡಿದರೂ ಅವರು ನನ್ನ ಕಾಲಿಗೆ ಬೀಳಬಾರದು ಎಂದು ನಾನು ಬಯಸುತ್ತೇನೆ. ಆದರೆ ನಾನೇ ಅವರ ಕಾಲಿಗೆ ಬಿದ್ದು ಸೇವೆ ಮಾಡುತ್ತೇನೆ'' ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಪೋಸ್ಟ್‌ ಹಂಚಿಕೊಂಡು ಅದರಲ್ಲಿ ಈ ರೀತಿ ಮಾಡಲು ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ.

''ಈ ಬದಲಾವಣೆಗಾಗಿ ಬಹಳ ದಿನಗಳಿಂದ ಕಾಯುತ್ತಿದ್ದೆ. ಬಡವರು ಶ್ರೀಮಂತರ ಕಾಲಿಗೆ ಬಿದ್ದು ಸಹಾಯ ಕೇಳುತ್ತಾರೆ. ಆದರೆ ನಾನು ಇದನ್ನು ನೋಡಲು ಬಯಸುವುದಿಲ್ಲ. ನನ್ನ ಜೀವನದ ಕೆಲವೊಂದು ಘಟನೆಗಳು ಈ ಬದಲಾವಣೆಗೆ ಕಾರಣ. ಶ್ರೀಮಂತರ ಬಳಿ ಹಣ ಇದೆ ಎಂಬ ಕಾರಣಕ್ಕೆ ಬಡವರು ಅವರ ಕಾಲಿಗೆ ನಮಸ್ಕರಿಸುವುದನ್ನು ನಾನು ಸಹಿಸುವುದಿಲ್ಲ. ಒಮ್ಮೆ ಪೋಷಕರೊಬ್ಬರು ಮಗುವಿನ ಚಿಕಿತ್ಸೆಗೆ ಸಹಾಯ ಕೋರಿ ನನ್ನ ಬಳಿ ಬಂದರು. ಅವರು ನನ್ನ ಕಾಲಿಗೆ ನಮಸ್ಕರಿಸುತ್ತಿದ್ದಾಗ ಮಗು ಅಳುವುದನ್ನು ನೋಡಿದೆ. ಇದು ನನ್ನ ಮನಸ್ಸಿಗೆ ಬಹಳ ನಾಟಿತು. ಹಾಗೇ ಶಸ್ತ್ರಚಿಕಿತ್ಸೆಗೆ ನಾನು ಸಹಾಯ ಮಾಡಿದೆ.''

''ಅದಾದ ಬಳಿಕ ಅವರು ಮತ್ತೆ ವಾಪಸ್‌ ಬಂದು ಮಗುವನ್ನು ನನ್ನ ಕಾಲ ಬಳಿ ಇಟ್ಟರು. ಮಕ್ಕಳು ದೇವರ ರೂಪ ಎನ್ನುತ್ತಾರೆ. ದೇವರು ನನ್ನ ಕಾಲಿಗೆ ನಮಸ್ಕರಿಸುವುದು ಎಷ್ಟು ಸರಿ..? ಕೆಲವೊಮ್ಮೆ ವೃದ್ಧೆಯರು ನನ್ನ ಕಾಲಿಗೆ ನಮಸ್ಕರಿಸುತ್ತಾರೆ. ಇದು ನನಗೆ ಶ್ರೇಯಸ್ಸಲ್ಲ. ನನ್ನಿಂದ ಸಹಾಯ ಪಡೆದವರ ಆಶಿರ್ವಾದ ನನಗೆ ದೊರೆತರೆ ಸಾಕು. ಅವರು ನನ್ನ ಕಾಲಿಗೆ ನಮಸ್ಕರಿಸುವುದು ಬೇಡ''. ಎಂದು ರಾಘವ ಲಾರೆನ್ಸ್‌ ಬರೆದುಕೊಂಡಿದ್ದಾರೆ. ರಾಘವ ಅವರ ಈ ಪೋಸ್ಟ್‌ ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ದೊಡ್ಡ ನಟ ಆದರೂ ನಿಮ್ಮ ಈ ಸರಳತೆ, ನೀವು ಯೋಚನೆ ಮಾಡುವ ರೀತಿ ಬಹಳ ಚೆನ್ನಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ರಾಘವ ಲಾರೆನ್ಸ್‌, 'ಚಂದ್ರಮುಖಿ 2' ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ರಾಘವ ಲಾರೆನ್ಸ್ ಜೊತೆಗೆ ವಡಿವೇಲು ಜೊತೆಯಾಗಲಿದ್ದಾರೆ. ಲೈಕಾ ಪ್ರೊಡಕ್ಷನ್ಸ್‌ ಸಂಸ್ಥೆಯ ಸುಭಾಸ್ಕರನ್ ಈ ಯೋಜನೆಗೆ ಬಂಡವಾಳ ಹೂಡುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಸಂಗೀತ ನೀಡುತ್ತಿದ್ದಾರೆ. ಆರ್.ಡಿ. ರಾಜಶೇಖರ್ ಕ್ಯಾಮರಾ ವರ್ಕ್ ಮಾಡುತ್ತಿದ್ದಾರೆ. 'ಚಂದ್ರಮುಖಿ 2' ಚಿತ್ರದಲ್ಲಿ ನಾಯಕಿಯಾಗಿ ರಾಶಿ ಖನ್ನಾ, ಆಂಡ್ರಿಯಾ ಅಥವಾ ತ್ರಿಶಾ ನಾಯಕಿಯಾಗಬಹುದು ಎನ್ನಲಾಗಿತ್ತು. ಆದರೆ ಚಿತ್ರತಂಡ ಲಕ್ಷ್ಮಿ ಮೆನನ್​​ ಅವರನ್ನು ನಾಯಕಿಯಾಗಿ ಫೈನಲ್ ಮಾಡಿದೆ. ಜುಲೈ 15 ರಿಂದ ಮೈಸೂರಿನಲ್ಲಿ ಮೊದಲ ಶೆಡ್ಯೂಲ್‌ ಚಿತ್ರೀಕರಣ ಆರಂಭವಾಗಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು