Lakshmi Baramma: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಮತ್ತೆ ಕಾಣಿಸಿಕೊಂಡ ಕೀರ್ತಿ; ಅವಳು ಬದುಕಿದ್ದು ನಿಜಾನಾ?
Nov 08, 2024 09:09 PM IST
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಮತ್ತೆ ಕಾಣಿಸಿಕೊಂಡ ಕೀರ್ತಿ
- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಇಷ್ಟು ದಿನ ಇರದ ಕೀರ್ತಿ ಇದೀಗ ಮತ್ತೆ ಕಾಣಿಸಿಕೊಂಡಿದ್ದಾಳೆ. ಧಾರಾವಾಹಿಯಲ್ಲಿ ತಿರುವೊಂದು ಕಾಣಿಸಿದೆ. ಲಕ್ಷ್ಮೀ ಓಡಿ ಹೋಗಿ ನೋಡಿದಾಗ ಕಾರ್‌ನಲ್ಲಿ ಕೀರ್ತಿ ತುಂಬಾ ಅಳುತ್ತಿರುತ್ತಾಳೆ. ಕಾಪಾಡು ಎಂದು ಕೇಳಿಕೊಳ್ಳುತ್ತಾಳೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಪಾತ್ರ ಇಲ್ಲದಂತಾಗಿತ್ತು. ಯಾಕೆಂದರೆ ಕೀರ್ತಿಯನ್ನು ಕಾವೇರಿ ಕೊಲೆ ಮಾಡಿದ್ದಾಳೆ ಎಂದು ತೋರಿಸಲಾಗಿತ್ತು. ಆದರೆ ಈಗ ಮತ್ತೆ ಕೀರ್ತಿ ಬದುಕಿದ್ದಾಳೆ ಎಂಬ ಸುಳಿವು ಸಿಕ್ಕಂತಾಗಿದೆ. ಲಕ್ಷ್ಮೀಯನ್ನು ಕಾವೇರಿ ಬೇಕು ಎಂದೇ ಒಂದು ಹುಚ್ಚಾಸ್ಪತ್ರೆಗೆ ಸೇರಿಸಿರುತ್ತಾಳೆ. ನನಗೆ ಹುಚ್ಚು ಹಿಡಿದಿಲ್ಲ ಅದರೂ ಅತ್ತೆ ಈ ರೀತಿ ಮಾಡ್ತಾ ಇದ್ದಾರೆ. ಯಾಕಿರಬಹುದು ಎಂಬ ಅನುಮಾನ ಯಾವಾಗಲೂ ಲಕ್ಷ್ಮೀಯನ್ನು ಕಾಡುತ್ತಲೇ ಇತ್ತು. ಆದ್ರೆ ಸತ್ಯ ಹೊರಬೀಳಬೇಕು ಎಂದಾದರೆ ನಾನು ಸಾಕ್ಷಿ ಸಮೇತ ಕಾವೇರಿಯನ್ನು ವೈಷ್ಣವ್ ಮುಂದೆ ತರಬೇಕು ಎಂದು ಲಕ್ಷ್ಮೀ ನಾನಾ ರೀತಿಯ ಪ್ರಯತ್ನ ಮಾಡುತ್ತಿದ್ದಳು. ಅದಕ್ಕೆ ತಕ್ಕಂತೆ ಅವಳಿಗೆ ಸಾಕ್ಷಿ ಕೂಡ ಸಿಕ್ಕಿತ್ತು.
ಆಸ್ಪತ್ರೆಯಲ್ಲೇ ಕೆಲಸ ಮಾಡುವ ಒಂದು ಲೇಡಿ ಡಾಕ್ಟರ್‌ಗೆ ಲಂಚ ಕೊಟ್ಟು ಕಾವೇರಿ ಇದನ್ನೆಲ್ಲ ಮಾಡಿಸುತ್ತಾ ಇದ್ದಾಳೆ ಎನ್ನುವ ವಿಚಾರ ಲಕ್ಷ್ಮೀಗೆ ಗೊತ್ತಾಗಿತ್ತು. ಆ ಕಾರಣ ಅವಳು ಹೇಗಾದರೂ ಮಾಡಿ ಲೇಡಿ ಡಾಕ್ಟರ್ ಬಾಯಿಬಿಡಿಸಬೇಕು ಎಂದು ತುಂಬಾ ಪ್ರಯತ್ನಪಟ್ಟಳು. ಆ ಪ್ರಕಾರ ಮಾತನಾಡಿ ಸತ್ಯ ತಿಳಿದುಕೊಂಡಿರುತ್ತಾಳೆ. ಇನ್ನು ಕಾವೇರಿ ಮುಂದೆ ಬಂದು ಧೈರ್ಯವಾಗಿ ಇದನ್ನೆಲ್ಲ ಉದ್ದೇಶ ಪೂರ್ವಕವಾಗಿ ನೀವೇ ಮಾಡಿಸುತ್ತಿದ್ದೀರಾ ಎಂದು ನನಗೆ ಗೊತ್ತಿದೆ ಎಂದು ಹೇಳಿದ್ದಾಳೆ. ಅದಾದ ನಂತರದಲ್ಲಿ ಕಾವೇರಿಗೆ ತಾನು ಮುಂದೆ ಏನು ಮಾಡಬೇಕು ಎಂಬ ಭಯ ಆರಂಭವಾಗಿದೆ.
ಕಾವೇರಿ ಹತ್ತಿರ ಅಷ್ಟೆಲ್ಲ ಮಾತನಾಡಿಕೊಂಡು ಬರುತ್ತಿರುವ ಸಂದರ್ಭದಲ್ಲಿ ಒಂದು ಕಾರು ಕಾಣುತ್ತದೆ. ಆ ಕಾರಿನಲ್ಲಿ ಕೀರ್ತಿ ಕಾಣುತ್ತಾಳೆ. ಅರೇ! ಕೀರ್ತಿ ಏನು ಇಲ್ಲಿದ್ದಾಳೆ ಎಂದು ಅವಳಿಗೆ ತುಂಬಾ ಆಶ್ಚರ್ಯ ಆಗುತ್ತದೆ. ಅದೇ ಸಮಯದಲ್ಲಿ ಅವಳಿಗೆ ಗಾಬರಿಯೂ ಆಗುತ್ತದೆ. ಕಾರಿನಲ್ಲಿ ಕೀರ್ತಿ ಕುಳಿತು ಅಳುತ್ತಿರುತ್ತಾಳೆ. ಕೀರ್ತಿ ಅಳು ಮುಖ ನೋಡಿ ಗಾಬರಿಯಾಗಿ ಕಾರ್ ಡೋರ್ ಓಪನ್ ಮಾಡಲು ನೋಡುತ್ತಾಳೆ. ಆದರೆ ಡೋರ್ ಓಪನ್ ಆಗುವುದಿಲ್ಲ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.