Annayya Serial: ಮನೆಯವರ ಮುಂದೆ ನಾಟಕ ಮಾಡಿದ್ರೂ ಶಿವುಗೆ ಸಿಕ್ಕಿದ್ದು ನಿಜವಾದ ಪ್ರೀತಿ; ಶಿವುನಾ ಕಾಳಜಿ ಮಾಡೋದ್ರಲ್ಲಿ ಪಾರು ಬ್ಯುಸಿ
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಮನೆಯವರ ಮುಂದೆ ನಾಟಕ ಮಾಡಿದ್ರೂ ಶಿವುಗೆ ಸಿಕ್ಕಿದ್ದು ನಿಜವಾದ ಪ್ರೀತಿ; ಶಿವುನಾ ಕಾಳಜಿ ಮಾಡೋದ್ರಲ್ಲಿ ಪಾರು ಬ್ಯುಸಿ

Annayya Serial: ಮನೆಯವರ ಮುಂದೆ ನಾಟಕ ಮಾಡಿದ್ರೂ ಶಿವುಗೆ ಸಿಕ್ಕಿದ್ದು ನಿಜವಾದ ಪ್ರೀತಿ; ಶಿವುನಾ ಕಾಳಜಿ ಮಾಡೋದ್ರಲ್ಲಿ ಪಾರು ಬ್ಯುಸಿ

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಮನೆಯವರ ಮುಂದೆ ಬೇಕು ಎಂದೇ ಶಿವುನಾ ಪ್ರೀತಿ ಮಾಡುವ ನಾಟಕ ಮಾಡುತ್ತಿದ್ದಾಳೆ. ಆದರೆ ಇದ್ಯಾವುದನ್ನೂ ಶಿವು ಹತ್ತಿರ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೀಪಾವಳಿ ಹಬ್ಬಕ್ಕೆಂದು ಪಾರು ತವರಿಗೆ ಬಂದಿದ್ದಾಳೆ.

 ಮನೆಯವರ ಮುಂದೆ ನಾಟಕ ಮಾಡಿದ್ರೂ ಶಿವುಗೆ ಸಿಕ್ಕಿದ್ದು ನಿಜವಾದ ಪ್ರೀತಿ
ಮನೆಯವರ ಮುಂದೆ ನಾಟಕ ಮಾಡಿದ್ರೂ ಶಿವುಗೆ ಸಿಕ್ಕಿದ್ದು ನಿಜವಾದ ಪ್ರೀತಿ (ಜೀ ಕನ್ನಡ)

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಈಗ ತನ್ನ ತಂದೆ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾಳೆ. ಆ ಕಾರಣಕ್ಕಾಗಿ ಬೇಕು ಎಂದೇ ಅಣ್ಣಯ್ಯನಿಗೆ ತುಂಬಾ ಪ್ರೀತಿ ತೋರಿಸುತ್ತಾ ಇದ್ದಾಳೆ. ಆದರೆ ಶಿವುಗೆ ಇದೆಲ್ಲ ಅಷ್ಟಾಗಿ ಇಷ್ಟ ಆಗುತ್ತಾ ಇಲ್ಲ, ಯಾಕೆಂದರೆ ಇಷ್ಟು ದಿನ ಅವನು ಮಾವನ ಎದುರು ಕೈಕಟ್ಟಿ ನಿಲ್ಲುತ್ತಿದ್ದ. ಆದರೆ ಈಗ ಪಾರು ಒತ್ತಾಯಕ್ಕೆ ಮಣಿದು ಅವನು ಮಾವಯ್ಯನ ಸಮಾನಕ್ಕೆ ಕೂರುವಂತಾಗಿದೆ. ಎಂದೂ ರೂಢಿ ಇಲ್ಲದ ಈ ಕೆಲಸವನ್ನು ಮಾಡಲು ಅವನಿಗೆ ನಾಚಿಕೆ ಆಗ್ತಾ ಇದೆ. ಒಂದು ರೀತಿ ಆತಂಕ ಕೂಡ ಮನದ ಒಳಗಡೆ ಇದೆ. ಆದರೆ ಮುಂದೇನಾಗಿದೆ ನೋಡಿ.

ದೀಪಾವಳಿ ಹಬ್ಬಕ್ಕೆಂದು ಹೊಸ ಜೋಡಿ ತವರಿಗೆ ಹೋಗಿರುತ್ತಾರೆ. ತವರಿಗೆ ಹೋದ ಸಂದರ್ಭದಲ್ಲಿ ಪಾರು ತನ್ನ ತಂದೆಯ ಮುಂದೆ ಶಿವುಗೆ ಎಣ್ಣೆ ಸ್ನಾನ ಮಾಡಿಸುವುದು. ಅವನ ಪಕ್ಕವೇ ಊಟಕ್ಕೆ ಕುಳಿತುಕೊಳ್ಳುವುದು. ಅವನಿಗಾಗಿ ಹೊಸ ಬಟ್ಟೆ ಕೊಡಿಸುವುದು ಈ ರೀತಿ ಹತ್ತಾರು ನಾಟಕ ಮಾಡುತ್ತಿದ್ದಾಳೆ. ಇನ್ನು ಅವಳ ಅಣ್ಣನಿಗೂ ಇವಳ ವರ್ತನೆ ನೊಡಿ ಕೋಪ ಬಂದಿದೆ. ಆದರೆ ಶಿವು ಹೆಸರಿನಲ್ಲಿರುವ ಆಸ್ತಿಯನ್ನು ಹೊಡೆಯಲು ಅವರೆಲ್ಲ ಸಂಚು ಮಾಡುತ್ತಿದ್ದಾರೆ. ಈ ವಿಷಯ ಇನ್ನೂ ಯಾರಿಗೂ ಗೊತ್ತಿಲ್ಲ.

ತನ್ನ ತವರಲ್ಲಿ ಪಾರು ಹೆಚ್ಚು ದಿನ ಇಲ್ಲದೇ ಇದ್ದರೂ ಸಹ ಅವಳಿಗೆ ತವರಿನ ಮನೆಯ ಮೇಲೆ ತುಂಬಾ ಪ್ರೀತಿ ಇದೆ. ಅವಳ ಬಾಲ್ಯದ ನೆನಪುಗಳು ಅಲ್ಲಿ ಅಡಗಿದೆ. ಅದನ್ನೆಲ್ಲ ನೆನಪು ಮಾಡಿಕೊಳ್ಳುತ್ತಾ ಅವಳು ಬಾಲ್ಕನಿಯಲ್ಲಿ ನಿಂತಿರುತ್ತಾಳೆ. ಆಗ ಅಲ್ಲಿಗೆ ಶಿವು ಬರ್ತಾನೆ. ನೀನು ಏನು ಬೇಕಾದ್ರೂ ಹೇಳು ನಾನು ಮಾಡ್ತೀನಿ. ಆದರೆ ಮಾವಯ್ಯನ ಸಮಾನವಾಗಿ ನನ್ನ ಕೂರಿಸಬೇಡ ನಂಗೆ ಒಂಥರಾ ಆಗುತ್ತೆ ಎಂದು ಹೇಳುತ್ತಾನೆ. ಪಕ್ಕದಲ್ಲಿ ಅವಳ ಅಣ್ಣ ಬಂದು ನಿಂತಿರುವುದನ್ನು ನೋಡಿ ಅವಳು ಬೇಕು ಎಂದು ಶಿವುಗೆ ಹತ್ತಿರವಾಗುತ್ತಾಳೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner