Bigg Boss 11: ಗೋಲ್ಡ್ ಸುರೇಶ್ಗೆ ಸಿಕ್ಕಿದೆ ಈ ವಾರದ ಕಳಪೆ ಪಟ್ಟ; ಬಿಗ್ ಬಾಸ್ ಮನೆಯಲ್ಲಿ ಯಾವುದೂ ಅಂದುಕೊಂಡಂತೆ ನಡೆಯಲ್ಲ
ಬಿಗ್ ಬಾಸ್ ಮನೆಯಲ್ಲಿ ಈ ವಾರದ ಕಳಪೆ ಸ್ಥಾನ ಗೋಲ್ಡ್ ಸುರೇಶ್ ಅವರಿಗೆ ಸಿಕ್ಕಿದೆ. ಮನೆಯ ಎಲ್ಲಾ ಮಹಿಳಾ ಸ್ಪರ್ಧಿಗಳು ಗೋಲ್ಡ್ ಸುರೇಶ್ ಅವರ ಹೆಸರನ್ನೇ ಸೂಚಿಸಿದ್ದಾರೆ. ಆದರೆ ಅವರಿಗೆ ಮಾತ್ರ ಯಾವ ಕಾರಣಗಳೂ ಸಮಂಜಸ ಎನಿಸಲಿಲ್ಲ.
ಬಿಗ್ ಬಾಸ್ ಮನೆಯಲ್ಲಿ ವಾರಾಂತ್ಯ ಹತ್ತಿರ ಬರುತ್ತಿದ್ದಂತೆ ಮನೆಯವರ ಮಧ್ಯ ಮನಸ್ತಾಪ ಹೆಚ್ಚಾಗುತ್ತದೆ. ಅದರಲ್ಲೂ ಇಡೀ ವಾರದ ಆಟವನ್ನು ತುಲನೆ ಮಾಡಿ ನಂತರ ಮನೆಯವರೆಲ್ಲ ಸೇರಿ ಯಾರು ಕಳಪೆ ಎಂದು ಘೋಷಣೆ ಮಾಡಬೇಕಾಗುತ್ತದೆ. ಅದೇ ಸಂದರ್ಭ ಇಂದು ಬಿಗ್ ಬಾಸ್ ಮನೆಯಲ್ಲಿತ್ತು. ಎಲ್ಲರೂ ಸೇರಿ ಗೋಲ್ಡ್ ಸುರೇಶ್ ಅವರಿಗೆ ಕಳಪೆ ಪಟ್ಟಕಟ್ಟಿದ್ಧಾರೆ. ಆದರೆ ಈ ಬಾರಿ ಗೋಲ್ಡ್ ಸುರೇಶ್ ಕಳಪೆ ಪಟ್ಟವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಎಲ್ಲರೂ ಒಂದೇ ಕಾರಣ ನೀಡಿದ್ದಾರೆ. ಆದರೆ ಮನೆಯ ಇತರ ಸ್ಪರ್ಧಿಗಳು ನೀಡಿದ ಕಾರಣ ಮಾತ್ರ ಅವರಿಗೆ ಇಷ್ಟ ಆಗಲಿಲ್ಲ.
ಮನೆಯ ಎಲ್ಲಾ ಮಹಿಳಾ ಸ್ಪರ್ಧಿಗಳು ಗೋಲ್ಡ್ ಸುರೇಶ್ ಅವರಿಗೇ ಕಳಪೆ ಸ್ಥಾನ ನೀಡಿದ್ದಾರೆ. ಅನುಷಾ ಅವರು ಟಾಸ್ಕ್ನ ಟಾಸ್ಕ್ ತರ ಆಡಬೇಕು. ಆದರೆ ಗೋಲ್ಡ್ ಸುರೇಶ್ ಆರೀತಿ ಆಡಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರಿಗೆ ಹರ್ಟ್ ಮಾಡಿ ನೀನು ಗೆಲ್ತೀಯಾ ಅಂದ್ರೆ ಅದು ತಪ್ಪು ಎಂದು ಹೇಳಿದ್ದಾರೆ. ಇನ್ನು ಚೈತ್ರಾ ಕುಂದಾಪುರ ಅವರು ಅನವಶ್ಯಕ ಅಗ್ರೆಷನ್ ಸುರೇಶ್ ಅವರ ಆಟದಲ್ಲಿ ಇತ್ತು ಎನ್ನುವ ಕಾರಣಕ್ಕಾಗಿ ಅವರಿಗೆ ಕಳಪೆ ಪಟ್ಟನೀಡಿದ್ದಾರೆ.
ನೀರಿನ ಟ್ಯಾಂಕ್ನಲ್ಲಿ ನನ್ನ ಬೆರಳುಗಳಿದೆ ಯಾರೂ ಎಳಿಬೇಡಿ ಎಂದು ನಾನು ಕೇಳಿಕೊಂಡೆ ಆದರೂ ಯಾರೂ ಕರುಣೆ ಇಲ್ಲದೆ ಎಳೆದ್ರೂ ಅದು ಸರಿನಾ? ಎಂದು ಗೋಲ್ಡ್ ಸುರೇಶ್ ಪ್ರಶ್ನೆ ಮಾಡಿದ್ದಾರೆ. ಎದುರುಗಡೆ ಒಂದು ಹುಡುಗಿ ಇದಾಳೆ ಒದ್ ಬಿಡ್ತೀನಿ ಈ ರೀತಿ ಮಾತುಗಳನ್ನೆಲ್ಲ ಬಳಕೆ ಮಾಡಿದ್ದಾರೆ ಎಂದು ಗೌತಮಿ ಹಾಗೂ ಮೋಕ್ಷಿತಾ ಹೇಳಿ ಅವರೂ ಸಹ ಸುರೇಶ್ ಅವರಿಗೆ ಕಳಪೆ ಸ್ಥಾನ ನೀಡುತ್ತಾರೆ. ಎಲ್ಲರೂ ಅದೇ ಹೇಳ್ತೀರಾ. ಹೆಣ್ಣು ಮಕ್ಕಳಿಗೆ ಸಮಸ್ಯೆ ಆದಾಗ ನಾನು ಧ್ವನಿ ಎತ್ತಿದಿನಿ ಆದರೆ ನನಗೆ ಸಮಸ್ಯೆ ಆದಾಗ ಯಾರೂ ಧ್ವನಿ ಎತ್ತಿಲ್ಲ ಎಂದು ಹೇಳುತ್ತಾರೆ. ಇಷ್ಟೆಲ್ಲ ಆದ ನಂತರದಲ್ಲಿ ಸುರೇಶ್ ಅವರನ್ನೇ ಹೆಚ್ಚಿನ ಜನ ಕಳಪೆ ಎಂದು ಸೂಚಿಸಿದ ಕಾರಣ ಅವರು ಜೈಲಿಗೆ ಹೋಗಬೇಕಾಗಿದೆ.
ಇನ್ನು ಸುರೇಶ್ ಅವರಿಗೆ ಕಳಪೆ ಕೊಟ್ಟ ಬಗ್ಗೆ ಜನಾಭಿಪ್ರಾಯ ಹೀಗಿದೆ.
ಮೋಕ್ಷಿತಾ ಕಳಪೆ ಆಗ್ಬೇಕಿತ್ತು
ಇನ್ನು ಗೌತಮಿ ಬಗ್ಗೆ ನಾಳೆ ಸುದೀಪ್ ಸರ್ ಮಾತಾಡ್ಲೆ ಬೇಕು
1. ಗೌತಮಿ ಧನರಾಜ್ ಜೊತೆ ಆ ಒಂದು ಸಣ್ಣ ವಿಷ್ಯಕ್ಕೆ ಜಗಳ ಆಡಿದ್ದು
2. ಗೌತಮಿ ನೆನ್ನೆ ಮಂಜನ್ನ ಜೊತೆ ತ್ರಿವಿಕ್ರಮ್ ಬಗ್ಗೆ ಹೇಳಿದ್ದು (ತ್ರಿವಿಕ್ರಮ್ ಗೆ ಶಕ್ತಿ ಇದೆ ಅಷ್ಟೆ ಅವರು ಪಿಸಿಕಲ್ ಗೇಮ್ ಆಡೋದು ಬಿಟ್ಟು ಬೇರೆ ಏನು ಆಗಲ್ಲ ಅವರ ಕೈಯಲ್ಲಿ ಅಂತ)
3. ಮೋಕ್ಷಿತಾ ಅವರು ನೆನ್ನೆ ಧನರಾಜ್ ಜೊತೆ ವಾದ ಮಾಡ್ಬೇಕಾದ್ರೆ ಗೌತಮಿಗೆ ದಿಂಬಲ್ಲಿ ಹೊಡೆದ ವಿಚಾರವನ್ನೇ ಮಧ್ಯ ತಂದಿರುವುದು ಈ ಎಲ್ಲ ವಿಷಯದ ಬಗ್ಗೆ ಸುದೀಪ್ ಅವರು ಮಾತನಾಡಬೇಕು ಎಂದು ನೇತ್ರಾ ಅವರು ಕಾಮೆಂಟ್ ಮಾಡಿದ್ದಾರೆ.
ಇನ್ನೂ ಸಾಕಷ್ಟು ಜನ ಇದೇ ವಿಚಾರವಾಗಿ ಕಾಮೆಂಟ್ ಮಾಡಿ ಗೌತಮಿ ವಿರುದ್ಧ ಮಾತನಾಡಿದ್ದಾರೆ. ಗೌತಮಿ ಈ ಮನೆಯಲ್ಲಿ ಪಾಸಿಟ್ ಆಗಿ ಆಟ ಆಡ್ತಾ ಇಲ್ಲ ಎಂದು ಹೇಳಿದ್ದಾರೆ.