logo
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada 11: ನರಕವಾಸಿಗಳ ಶ್ರಮದಿಂದ ಮೊದಲ ವಾರದ ಕ್ಯಾಪ್ಟನ್‌ ಆದ ಹಂಸ; ಮುಂದುವರಿದ ಉಗ್ರಂ ಮಂಜು Vs ಲಾಯರ್‌ ಜಗದೀಶ್‌

Bigg Boss Kannada 11: ನರಕವಾಸಿಗಳ ಶ್ರಮದಿಂದ ಮೊದಲ ವಾರದ ಕ್ಯಾಪ್ಟನ್‌ ಆದ ಹಂಸ; ಮುಂದುವರಿದ ಉಗ್ರಂ ಮಂಜು Vs ಲಾಯರ್‌ ಜಗದೀಶ್‌

Oct 05, 2024 09:55 AM IST

google News

ನರಕವಾಸಿಗಳ ಶ್ರಮದಿಂದ ಮೊದಲ ವಾರದ ಕ್ಯಾಪ್ಟನ್‌ ಆದ ಹಂಸ

    • ಬಿಗ್‌ ಬಾಸ್‌ ಮನೆಯಲ್ಲಿ ಸ್ವರ್ಗ ನಿವಾಸಿ ಹಂಸ ನಾರಾಯಣಸ್ವಾಮಿ ಮೊದಲ ವಾರದ ಕ್ಯಾಪ್ಟನ್‌ ಆಗಿ ಹೊರಹೊಮ್ಮಿದ್ದಾರೆ. ಇನ್ನೊಂದು ಕಡೆ ಉಗ್ರಂ ಮಂಜು ಮತ್ತು ಲಾಯರ್‌ ಜಗದೀಶ್‌ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ. ಮೊದಲ ವಾರವೂ ಮುಗಿದಿರುವುದರಿಂದ, ಒಬ್ಬ ಸ್ಪರ್ಧಿ ಈ ವಾರ ಮನೆಯಿಂದ ಎಲಿಮಿನೇಟ್‌ ಆಗಲಿದ್ದಾರೆ. 
ನರಕವಾಸಿಗಳ ಶ್ರಮದಿಂದ ಮೊದಲ ವಾರದ ಕ್ಯಾಪ್ಟನ್‌ ಆದ ಹಂಸ
ನರಕವಾಸಿಗಳ ಶ್ರಮದಿಂದ ಮೊದಲ ವಾರದ ಕ್ಯಾಪ್ಟನ್‌ ಆದ ಹಂಸ

Bigg Boss Kannada 11: ಬಿಗ್‌ಬಾಸ್‌ ಕನ್ನಡ 11ರ ಮೊದಲ ವಾರದ ಕ್ಯಾಪ್ಟನ್ಸಿ ಟಾಸ್ಕ್‌ ಶುಕ್ರವಾರ ಮುಗಿದಿದೆ. ಈ ಮೂಲಕ ಮೊದಲ ವಾರದ ಕ್ಯಾಪ್ಟನ್‌ ಯಾರು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಹಂಸ ನಾರಾಯಣಸ್ವಾಮಿ ಸೀಸನ್‌ 11ರ ಮೊದಲ ಕ್ಯಾಪ್ಟನ್‌ ಎಂಬ ಪಟ್ಟ ಅಲಂಕರಿಸಿದ್ದಾರೆ. ಅಷ್ಟಕ್ಕೂ ಈ ವಾರ ಬಿಗ್‌ ಬಾಸ್‌ ಮನೆಯಿಂದ ಹೊರಹೋಗಲು ಹಂಸ ನಾಮಿನೇಟ್‌ ಆಗಿದ್ದರು. ಆದರೆ, ನಾಯಕಿ ಪಟ್ಟ ಸಿಕ್ಕ ಮೇಲೆ ಈ ವಾರ ನಾಮಿನೇಟ್‌ನಿಂದ ಹೊರಗುಳಿದು ಮತ್ತಷ್ಟು ವಿಶೇಷ ಸೌಲಭ್ಯಗಳನ್ನೂ ಪಡೆದುಕೊಂಡಿದ್ದಾರೆ.

ಏನಿತ್ತು ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌?

ಸ್ವರ್ಗ ನಿವಾಸಿಗಳು ಮಾತ್ರ ಈ ವಾರದ ಕ್ಯಾಪ್ಟನ್‌ ಆಗಲು ಅರ್ಹರು. ಅವರು ಕ್ಯಾಪ್ಟನ್‌ ಆಗಲು, ನರಕನಿವಾಸಿಗಳು ಸ್ವರ್ಗ ನಿವಾಸಿಗಳ ಪರವಾಗಿ ಆಟ ಆಡಬೇಕಿತ್ತು. ಬಿಡ್ಡಿಂಗ್‌ ಮೂಲಕ ನಡೆದ ಆಯ್ಕೆಯಲ್ಲಿ ಹಂಸ, ತ್ರಿವಿಕ್ರಮ್, ಭವ್ಯಾ ಗೌಡ, ಉಗ್ರಂ ಮಂಜು, ಐಶ್ವರ್ಯಾ ಸಿಂಧೋಗಿ ಮತ್ತು ಯಮುನಾ ಕ್ಯಾಪ್ಟನ್‌ ರೇಸ್‌ಗೆ ಇಳಿದರು. ಈ ಕ್ಯಾಪ್ಟನ್ ಆಕಾಂಕ್ಷಿಗಳ ಪರವಾಗಿ ನರಕನಿವಾಸಿಗಳಾದ ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ಅನುಷಾ ರೈ, ರಂಜಿತ್, ಗೋಲ್ಡ್ ಸುರೇಶ್, ಶಿಶಿರ್ ಶಾಸ್ತ್ರಿ ಟಾಸ್ಕ್‌ ಪರ್ಫಾಮ್ ಮಾಡಿದರು.

ಕ್ಯಾಪ್ಟನ್‌ಗೆ ಸಿಕ್ಕ ವಿಶೇಷ ಸೌಲಭ್ಯ ಏನು?

ಇನ್ನು ಈ ವಾರದ ಕ್ಯಾಪ್ಟನ್‌ ಯಾರಾಗಲಿದ್ದಾರೆ ಅವರಿಗೆ ವಿಶೇಷ ಅಧಿಕಾರವೊಂದನ್ನು ಬಿಗ್‌ಬಾಸ್‌ ನೀಡಿದ್ದಾರೆ. ಟಾಸ್ಕ್‌ ಶುರುವಾಗುವುದಕ್ಕೂ ಮುನ್ನ, ಈ ಮಾತನ್ನು ಎಲ್ಲ ಸ್ಪರ್ಧಿಗಳಿಗೂ ಹೇಳಿದ್ದಾರೆ ಬಿಗ್‌ ಬಾಸ್‌. "ಈ ವಾರ ಕ್ಯಾಪ್ಟನ್ ಆದವರು ಮುಂದಿನ ವಾರದ ನಾಮಿನೇಷನ್‌ನಿಂದ ಇಮ್ಯೂನಿಟಿ ಪಡೆಯಲಿದ್ದಾರೆ. ಇಲ್ಲಿಯವರೆಗೂ ಯಾರಿಗೂ ಸಿಗದ ಒಂದು ವಿಶೇಷ ಅಧಿಕಾರವನ್ನು ಕ್ಯಾಪ್ಟನ್ ಆದವರು ಪಡೆದುಕೊಳ್ಳಲಿದ್ದಾರೆ. ಕ್ಯಾಪ್ಟನ್ ಮನಸ್ಸು ಮಾಡಿದರೆ ಸ್ವರ್ಗ ಅಥವಾ ನರಕ ನಿವಾಸಿಗಳನ್ನು ಅದಲು ಬದಲು ಮಾಡಬಹುದು ಎಂದಿದ್ದಾರೆ.

ಗೂಟದ ಮೇಲೆ ಕೊನೇ ತನ ನಿಂತವ್ರೇ ವಿನ್ನರ್..‌

ಬೃಹತ್‌ ಹಲಗೆ ಮೇಲೆ ಅಲ್ಲಲ್ಲಿ ತೂತುಗಳನ್ನು ಮಾಡಿ, ಅದರೊಳಗೆ ಚಿಕ್ಕ ಚಿಕ್ಕಗೂಟಗಳನ್ನು ಸಿಕ್ಕಿಸಲಾಗಿತ್ತು. ಆ ಗೂಟಗಳ ಮೇಲೆ ನರಕನಿವಾಸಿಗಳೆಲ್ಲರೂ ಕೈ ಮತ್ತು ಕಾಲುಗಳ ಸಹಾಯದಿಂದ ನಿಲ್ಲಬೇಕಿತ್ತು. ಬಹುತೇಕ ಎಲ್ಲರೂ ಒಳ್ಳೆಯ ಪ್ರಯತ್ನವನ್ನೇ ಮಾಡಿದ್ದಾರೆ. ಆದರೆ, ಕೊನೆಯ ವರೆಗೂ ನಿಂತವರೇ ಟಾಸ್ಕ್‌ನ ವಿನ್ನರ್.‌ ಆ ಪಟ್ಟವನ್ನು ಹಂಸ ನಾರಾಯಣಸ್ವಾಮಿ ಪರವಾಗಿ ಆಡಿದ ರಂಜಿತ್‌ ಗೆದ್ದಿದ್ದಾರೆ. ಈ ಮೂಲಕ ರಂಜಿತ್‌ ಸಹಾಯದಿಂದ ಮೊದಲ ವಾರದ ಕ್ಯಾಪ್ಟನ್‌ ಆಗಿ ಹಂಸ ಆಯ್ಕೆಯಾಗಿ ವಿಶೇಷ ಅಧಿಕಾರ ಪಡೆದುಕೊಂಡಿದ್ದಾರೆ.

ಉಗ್ರಂ ಮಂಜು Vs ಲಾಯರ್‌ ಜಗದೀಶ್‌

ಇನ್ನು ಬಿಗ್‌ ಬಾಸ್‌ ನನಗೆ ಸಾಕು, ನಾನು ಈ ಮನೆಯಲ್ಲಿ ಇರಲ್ಲ ಎಂದು ಹೊರಡಲು ಸಜ್ಜಾಗಿದ್ದ ಲಾಯರ್‌ ಜಗದೀಶ್‌ಗೆ, ಕನ್ಫೆಷನ್‌ ರೂಮ್‌ಗೆ ಕರೆದು, ಮನವೊಲಿಸಿದರು. ನೀವಿನ್ನು ನಿಮ್ಮ ಆಟ ಆಡಿ ಎಂದಿದ್ದರು. ಬಿಗ್‌ ಬಾಸ್‌ ಅಷ್ಟು ಹೇಳಿದ್ದೇ ತಡ, ಹೊರಬಂದ ಲಾಯರ್‌ ಜಗದೀಶ್‌ ಉಗ್ರಂ ಮಂಜು ಅವರನ್ನೇ ಟಾರ್ಗೆಟ್‌ ಮಾಡಿ ಅವರ ವಿರುದ್ಧ ಮುಗಿಬಿದ್ದರು. ಈ ಮನೆಯಲ್ಲಿ ನಾನೂ ಕೂಡ ಆಟಗಾರನೇ. ನೀನು ಗ್ಯಾಂಗ್‌ ಕಟ್ಟಿಕೊಂಡು ಆಡ್ತಿದ್ದೀಯಾ. ಇಲ್ಲಿ ನಾನೊಬ್ಬನೇ. ನನ್ನ ಚತೆ ಚಲ್ಲಾಟ ಆಡಬೇಡ. ಈ ನಿನ್ನ ಪ್ರಾಂಕ್‌ಗಳನ್ನ ಅವರ ಹತ್ರ ಇಟ್ಕೋ, ನನ್ನ ಹತ್ರ ಬೇಡ. ಚಿಲ್ಲರೆ ಪಲ್ಲರೆ ಗೇಮ್ ನನ್ನತ್ರ ಇಟ್ಕೋಬೇಡ. ನಾನು ನಿಂಗೆ ಚೆಕ್ ಮೇಟ್‌ ಕೊಡದಿದ್ದರೆ ನಾನು ನನ್ನ ಅಪ್ಪನ ಮಗನೇ... ಅಲ್ಲ" ಎಂದು ಉಗ್ರಂ ಮಂಜು ವಿರುದ್ಧ ಹರಿಹಾಯ್ದಿದ್ದಾರೆ. ಲಾಯರ್‌ ಮಾತಿಗೆ ತುಟಿ ಬಿಚ್ಚದ ಮಂಜು, ಮೌನದಲ್ಲಿಯೇ ಎಲ್ಲದಕ್ಕೂ ಉತ್ತರ ನೀಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ